ADVERTISEMENT
Thursday, October 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಆತ್ಮ ನಿರ್ಭರವೇ ನಾವು ಸೈನಿಕರಿಗೆ ಕೊಡುವ ಗೌರವ – ಮನ್ ಕಿ ಬಾತ್‌ ನಲ್ಲಿ ಮೋದಿ ಕರೆ

admin by admin
June 28, 2020
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಆತ್ಮ ನಿರ್ಭರವೇ ನಾವು ಸೈನಿಕರಿಗೆ ಕೊಡುವ ಗೌರವ – ಮನ್ ಕಿ ಬಾತ್‌ ನಲ್ಲಿ ಮೋದಿ ಕರೆ

ಹೊಸದಿಲ್ಲಿ, ಜೂನ್ 28: ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಮನುಕುಲ ಸಂಕಷ್ಟದಲ್ಲಿದೆ. ಈ ವೈರಾಣುವಿನ ನಿರ್ಮೂಲನೆಗೆ ಸರ್ಕಾರ ಮತ್ತು ಸಮಾಜ ಒಂದಾಗಿ ಸಂಘಟಿತ ಹೋರಾಟ ನಡೆಸಬೇಕು ಎಂದು ಪ್ರಧಾನಿ ಮೋದಿ ಇಂದಿನ ಮನ್ ಕಿ ಬಾತ್ ನಲ್ಲಿ ಹೇಳಿದ್ದಾರೆ.
ಇಂದು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಹಲವಾರು ಜನ ಈ ವರ್ಷ ಶುಭವಲ್ಲ, ಯಾವಾಗ ಮುಗಿಯುತ್ತದೆ ಎನ್ನುತ್ತಿದ್ದಾರೆ. ಆದರೆ ಕಳೆದ ಆರು ತಿಂಗಳು ನಾವು ಯಾವುದೇ ಕಷ್ಟವಿಲ್ಲದೇ ಕಳೆದಿದ್ದೇವೆ. ಹೀಗಾಗಿ ಈ ವರ್ಷವನ್ನು ಕಷ್ಟದ ವರ್ಷ ಎಂದು ಪರಿಗಣಿಸದೇ ಅನ್ ಲಾಕ್ ಸಮಯದಲ್ಲಿ ಕೊರೊನಾವನ್ನು ಸೋಲಿಸಬೇಕಿದೆ ಎಂದು ಪ್ರಧಾನಿ ಮೋದಿ ಕರೆನೀಡಿದ್ದಾರೆ.
ಕೊರೊನಾ ಹಾವಳಿಯ ಜೊತೆಗೆ ದೇಶ ಭೂಕಂಪ, ಚಂಡಮಾರುತ ಮತ್ತು ಗಡಿ ಪ್ರದೇಶದಲ್ಲಿ ನೆರೆ ದೇಶಗಳ ದಾಳಿಯನ್ನು ಎದುರಿಸಬೇಕಾಗಿದೆ. ಆದರೆ ನಾವು ಹಲವಾರು ಸವಾಲುಗಳನ್ನು ಎದುರಿಸಿ ಗೆದ್ದು ಬಂದವರು ಎಂದು ನಮ್ಮ ಇತಿಹಾಸ ಹೇಳುತ್ತದೆ. ಹಾಗಾಗಿ ಈ ಎಲ್ಲಾ ಸಂಕಷ್ಟಗಳನ್ನು ಎದುರಿಸಿ ಭಾರತ ಜಯಭೇರಿ ಗಳಿಸುವುದು ಖಂಡಿತ ಎಂದು ಪ್ರಧಾನಿ ಹೇಳಿದರು.

Related posts

ಬೆಂಗಳೂರು ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಬಿಎಂಟಿಸಿ ದರ ಏರಿಕೆ ಬಗ್ಗೆ ಸಚಿವ ಬೈರತಿ ಸುರೇಶ್ ನೀಡಿದ್ರು ಶಾಕಿಂಗ್ ಸುದ್ದಿ

ಬೆಂಗಳೂರು ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಬಿಎಂಟಿಸಿ ದರ ಏರಿಕೆ ಬಗ್ಗೆ ಸಚಿವ ಬೈರತಿ ಸುರೇಶ್ ನೀಡಿದ್ರು ಶಾಕಿಂಗ್ ಸುದ್ದಿ

October 1, 2026
ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಾವಿನ ಬಳಿಕ ನಡೆದ ಬೆಳವಣಿಗೆ, ಶರಣಾಗತಿ ಸಿದ್ಧತೆ ಕುರಿತು ಮಾಫಿ ಸಾಕ್ಷಿ ಪ್ರದೂಷ್ ಹೇಳಿಕೆ

ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಾವಿನ ಬಳಿಕ ನಡೆದ ಬೆಳವಣಿಗೆ, ಶರಣಾಗತಿ ಸಿದ್ಧತೆ ಕುರಿತು ಮಾಫಿ ಸಾಕ್ಷಿ ಪ್ರದೂಷ್ ಹೇಳಿಕೆ

October 1, 2026

ಗಡಿಯಲ್ಲಿ ಸೈನಿಕರು ನಮ್ಮ ರಕ್ಷಣೆ ಮಾಡುತ್ತಿದ್ದಾರೆ. ಲಡಾಖ್‌ನಲ್ಲಿ ಭಾರತದ ಭೂಮಿ ಅತಿಕ್ರಮಿಸಲು ನೋಡಿದವರಿಗೆ ತಕ್ಕ ಉತ್ತರ ನೀಡಲಾಗಿದೆ. ದೇಶ ರಕ್ಷಣೆಗಾಗಿ ತಮ್ಮ ಪ್ರಾಣ ಸಮರ್ಪಿಸಿದ ವೀರ ಸೈನಿಕರ ಮೇಲೆ ಭಾರತಕ್ಕೆ ಅಪಾರ ಗೌರವವಿದೆ.
ಭಾರತಕ್ಕೆ ಸ್ನೇಹವನ್ನು ಕಾಪಾಡಿಕೊಳ್ಳುವುದು ಗೊತ್ತು ಹಾಗೇ ವಿನಾಕಾರಣ ಮೇಲೆರಗಿ ಬಂದವರಿಗೆ ತಕ್ಕ ಪ್ರತ್ಯುತ್ತರ ನೀಡುವುದೂ ಗೊತ್ತು.
ಆತ್ಮ ನಿರ್ಭರ ಭಾರತಕ್ಕಾಗಿ ಎಲ್ಲರೂ ಒಂದಾಗಿರುವುದು ನಿಜಕ್ಕೂ ಸಂತಸದ ಸಂಗತಿ. ಆತ್ಮ ನಿರ್ಭರವೇ ನಾವು ಸೈನಿಕರಿಗೆ ಕೊಡುವ ಗೌರವ. ಸ್ವದೇಶಿ ಉತ್ಪನ್ನಗಳನ್ನೇ ಖರೀದಿಸಿ, ಅದನ್ನೇ ಉಪಯೋಗಿಸೋಣ. ಜನರ ಸಹಕಾರವಿಲ್ಲದೇ ಯಾವುದು ಸಾಧ್ಯವಿಲ್ಲ. ‌ದೇಶದ 130 ಕೋಟಿ ಜನರ ಮೇಲೆ ನನಗೆ ಅಚಲ ನಂಬಿಕೆಯಿದೆ ಎಂದರು.
ದೇಶ ಈಗ ಲಾಕ್‌ಡೌನ್‌ನಿಂದ ಅನ್‌ಲಾಕ್ ಸ್ಥಿತಿಯತ್ತ ಸಾಗುತ್ತಿದ್ದು, ನಾವು ಕೊರೊನಾ ಜೊತೆಗೆ ದೇಶದ ಅರ್ಥಿಕತೆಯ ಕಡೆಯೂ ಗಮನ ಹರಿಸಬೇಕಾಗಿದೆ.
ಅನ್‌ಲಾಕ್ ಸಮಯದಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ‌ಅಂತರ ಕಾಪಾಡಿಕೊಳ್ಳಿ. ಕೊರೊನಾದ ಬಗ್ಗೆ ನಿರ್ಲಕ್ಷ್ಯ ಮಾಡದೇ ಸರ್ಕಾರದ ನಿಯಮಾವಳಿಗಳನ್ನು ಪಾಲಿಸುವುದು ಅವಶ್ಯ ಎಂದು ಪ್ರಧಾನಿ ಮೋದಿ ಹೇಳಿದರು.

MODI

ನನ್ನ ಪ್ರೀತಿಯ ಯುವಕರೇ, ಮಕ್ಕಳೆ, ನಿಮ್ಮಲ್ಲಿ ಒಂದು ಮನವಿ ಮಾಡುತ್ತೇನೆ ಎಂದು ಹೇಳಿದ ಪ್ರಧಾನಿ ನಿಮ್ಮ ಮನೆಯಲ್ಲಿರುವ ಹಿರಿಯರ ಸಂದರ್ಶನ ಮಾಡಿ. ಅವರ ಬಾಲ್ಯದ ನೆನಪನ್ನು ಮೆಲುಕು ಹಾಕಿಸಿ ಯಾವ ಆಟ ಆಡುತ್ತಿದ್ದರು, ಹೇಗೆ ಇದ್ದರು ಎಂಬ ಮಾಹಿತಿ ಪಡೆಯಿರಿ. ಪ್ರಧಾನಿ ಹೇಳಿದರು.
ದೇಶಕ್ಕೆ ಮಾನ್ಸೂನ್ ಆಗಮನವಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ ಮತ್ತು ಅವರು ತಮ್ಮ ಕಾರ್ಯ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ‌ಮಳೆ ನೀರನ್ನು ಸಂಗ್ರಹಿಸಿ. ಕರ್ನಾಟಕದ ಸುಮಾರು 80 ವರ್ಷದ ವೃದ್ಧ ಕಾಳೆ ಗೌಡ ಎಂಬ ರೈತ 17 ಸಣ್ಣ ಸಣ್ಣ ಕೆರೆಗಳನ್ನು ನಿರ್ಮಾಣ ಮಾಡಿ ತಮ್ಮ ಗ್ರಾಮದಲ್ಲಿ ನೀರಿನ ಸಮಸ್ಯೆ ಇಲ್ಲವಾಗಿಸಿದ್ದಾರೆ. ಅವರ ಶ್ರಮ ಶ್ಲಾಘನೀಯ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.

Tags: armyathma nirbharacentral governmentcoronavirusIndia-China borderLockdownMan Ki BaatPrime Minister Narendra ModiUnlockdown
ShareTweetSendShare
Join us on:

Related Posts

ಬೆಂಗಳೂರು ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಬಿಎಂಟಿಸಿ ದರ ಏರಿಕೆ ಬಗ್ಗೆ ಸಚಿವ ಬೈರತಿ ಸುರೇಶ್ ನೀಡಿದ್ರು ಶಾಕಿಂಗ್ ಸುದ್ದಿ

ಬೆಂಗಳೂರು ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಬಿಎಂಟಿಸಿ ದರ ಏರಿಕೆ ಬಗ್ಗೆ ಸಚಿವ ಬೈರತಿ ಸುರೇಶ್ ನೀಡಿದ್ರು ಶಾಕಿಂಗ್ ಸುದ್ದಿ

by Shwetha
October 1, 2026
0

ಬೆಂಗಳೂರು: ರಾಜಧಾನಿಯ ಜನಸಾಮಾನ್ಯರ ಸಾರಿಗೆಯಾದ ಬಿಎಂಟಿಸಿ ಬಸ್ ಪ್ರಯಾಣ ಇನ್ನು ಮುಂದೆ ದುಬಾರಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ಹಲವು ದಿನಗಳಿಂದ ಕೇಳಿಬರುತ್ತಿದ್ದ ಬಸ್ ಟಿಕೆಟ್ ದರ...

ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಾವಿನ ಬಳಿಕ ನಡೆದ ಬೆಳವಣಿಗೆ, ಶರಣಾಗತಿ ಸಿದ್ಧತೆ ಕುರಿತು ಮಾಫಿ ಸಾಕ್ಷಿ ಪ್ರದೂಷ್ ಹೇಳಿಕೆ

ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಾವಿನ ಬಳಿಕ ನಡೆದ ಬೆಳವಣಿಗೆ, ಶರಣಾಗತಿ ಸಿದ್ಧತೆ ಕುರಿತು ಮಾಫಿ ಸಾಕ್ಷಿ ಪ್ರದೂಷ್ ಹೇಳಿಕೆ

by Shwetha
October 1, 2026
0

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೂಷ್ ಅವರ ಹೇಳಿಕೆ ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಲ್ಲಿ ಮುಂದುವರಿದಿದ್ದು, ಕೊಲೆಯ ಬಳಿಕ ನಡೆದ ಬೆಳವಣಿಗೆಗಳ ಕುರಿತು ಹಲವು ಮಹತ್ವದ ವಿಚಾರಗಳನ್ನು...

CWC ಸಭೆಯಲ್ಲಿ ಶಶಿ ತರೂರ್ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ: ಕಾರ್ಯಕ್ರಮಕ್ಕೆ ಬರ್ತೀರಾ ಅಥವಾ ಬರೀ ಎಕ್ಸ್ ನಲ್ಲೇ ಕಾಣಿಸಿಕೊಳ್ಳುತ್ತೀರಾ ಎಂದು ಲೇವಡಿ

CWC ಸಭೆಯಲ್ಲಿ ಶಶಿ ತರೂರ್ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ: ಕಾರ್ಯಕ್ರಮಕ್ಕೆ ಬರ್ತೀರಾ ಅಥವಾ ಬರೀ ಎಕ್ಸ್ ನಲ್ಲೇ ಕಾಣಿಸಿಕೊಳ್ಳುತ್ತೀರಾ ಎಂದು ಲೇವಡಿ

by Shwetha
October 1, 2026
0

ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯು ಕೇವಲ ಗಂಭೀರ ರಾಜಕೀಯ ಚರ್ಚೆಗಳಿಗಷ್ಟೇ ಅಲ್ಲದೆ, ಪಕ್ಷದ ಹಿರಿಯ ನಾಯಕರ ನಡುವಿನ ಹಸನ್ಮುಖಿ ವಾಕ್ಸಮರಕ್ಕೂ ಸಾಕ್ಷಿಯಾಯಿತು. ಚುನಾವಣಾ ಆಯೋಗದ...

ಶಕ್ತಿ ಯೋಜನೆ: ಉಚಿತ ಬಸ್ ಪ್ರಯಾಣಕ್ಕೆ ಇನ್ಮುಂದೆ ಆಧಾರ್ ಅಗತ್ಯವಿಲ್ಲ; 1 ಕೋಟಿ ಮಹಿಳೆಯರಿಗೆ ಸ್ಮಾರ್ಟ್‌ ಕಾರ್ಡ್ ವಿತರಿಸಲು ಸಿದ್ಧತೆ

ಶಕ್ತಿ ಯೋಜನೆ: ಉಚಿತ ಬಸ್ ಪ್ರಯಾಣಕ್ಕೆ ಇನ್ಮುಂದೆ ಆಧಾರ್ ಅಗತ್ಯವಿಲ್ಲ; 1 ಕೋಟಿ ಮಹಿಳೆಯರಿಗೆ ಸ್ಮಾರ್ಟ್‌ ಕಾರ್ಡ್ ವಿತರಿಸಲು ಸಿದ್ಧತೆ

by Shwetha
October 1, 2026
0

ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತ ಬಸ್ ಪ್ರಯಾಣ ಪಡೆಯಲು ಪ್ರತಿ ಬಾರಿ ಆಧಾರ್ ಕಾರ್ಡ್ ತೋರಿಸುವ ಅಗತ್ಯವನ್ನು ತೆಗೆದುಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಯೋಜನೆಯ ದುರ್ಬಳಕೆಯನ್ನು ತಡೆಯುವ...

ಬಿಜೆಪಿಗಿಂತ ಕಾಂಗ್ರೆಸ್ ಆಡಳಿತದಲ್ಲೇ ಕಮಿಷನ್ ದಂಧೆ ಮಿತಿಮೀರಿದೆ ಎಂದ ಗುತ್ತಿಗೆದಾರರ ಸಂಘ:ಗ್ಯಾರಂಟಿಗಳಿಗೆ ಹಣವಿದೆ ಗುತ್ತಿಗೆದಾರರಿಗೆ ಇಲ್ಲವೇ? 40 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿಕೊಂಡ ಸರ್ಕಾರದ ವಿರುದ್ಧ ಆಕ್ರೋಶ

ಬಿಜೆಪಿಗಿಂತ ಕಾಂಗ್ರೆಸ್ ಆಡಳಿತದಲ್ಲೇ ಕಮಿಷನ್ ದಂಧೆ ಮಿತಿಮೀರಿದೆ ಎಂದ ಗುತ್ತಿಗೆದಾರರ ಸಂಘ:ಗ್ಯಾರಂಟಿಗಳಿಗೆ ಹಣವಿದೆ ಗುತ್ತಿಗೆದಾರರಿಗೆ ಇಲ್ಲವೇ? 40 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿಕೊಂಡ ಸರ್ಕಾರದ ವಿರುದ್ಧ ಆಕ್ರೋಶ

by Shwetha
October 1, 2026
0

ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಡಿಕೆ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಈಗ ಗುತ್ತಿಗೆದಾರರ ಸಂಘದಿಂದ ಅತಿ ದೊಡ್ಡ ಸಂಕಷ್ಟ ಎದುರಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಬಾಕಿ ಇರುವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram