ನಮ್ಮ ದೇಶದ ಜೀವವೈವಿಧ್ಯತೆ ಇಡೀ ಮಾನವ ಜನಾಂಗಕ್ಕೆ ಮೌಲ್ಯವಾದ ಸಂಪತ್ತಾಗಿದೆ. ಅವುಗಳನ್ನು ಸಂರಕ್ಷಿಸಿ ಹೊರಜಗತ್ತಿಗೆ ತೋರಿಸಬೇಕು ಎಂದು ಪ್ರಧಾನಿ ನರೇಮದ್ರ ಮೋದಿ ತಮ್ಮ ಮನ್ ಕಿ ಬಾತ್ ಮೂಲಕ ತಿಳಿಸಿದ್ದಾರೆ.
62 ನೇ ಅವತರಣಿಕೆಯಲ್ಲಿ ಮನ್ ಕಿ ಬಾತ್ ಮೂಲಕ ದೇಶವನ್ನುದ್ದೇಶಿ ಮಾತನಾಡಿದ ಪ್ರಧಾನಿ ಮೋದಿ, ಮುಂದಿನ ತಿಂಗಳು ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಶುಭಹಾರೈಸಿದ್ರು. ಹಾಗೇ ಯುವಜನತೆಯಲ್ಲಿ ವೈಜ್ಞಾನಿಕ ಮನೋಭಾವ ಉತ್ತೇಜಿಸುವ ಸಲುವಾಗಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿರುವ ಬಗ್ಗೆ ಮಾತನಾಡಿದ ಅವರು, ಇನ್ನು ಮುಂದೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿ ಉಡಾವಣೆಯಾಗಲಿರುವ ರಾಕೆಟ್ ಉಡಾವಣೆಯನ್ನು ನಿಮ್ಮ ಕಣ್ಣ ಮುಂದೆಯೇ ವೀಕ್ಷಿಸಬಹುದು, ಇದಕ್ಕಾಗಿ ಗ್ಯಾಲರಿ ಸೃಷ್ಟಿ ಮಾಡಲಾಗಿದ್ದು ಒಂದು ಸಲಕ್ಕೆ ಸುಮಾರು 10 ಸಾವಿರ ಜನರು ಕುಳಿತುಕೊಳ್ಳಬಹುದಾದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ರು. ಚಂದ್ರಯಾನ-2 ಉಡಾವಣೆ ವೇಳೆ ಇಸ್ರೊ ಕೇಂದ್ರಕ್ಕೆ ವೀಕ್ಷಣೆಗೆ ಬಂದಿದ್ದ ವಿದ್ಯಾರ್ಥಿಗಳ ಉತ್ಸಾಹ ಕಂಡು ಬೆರಗಾದೆ ಹೀಗಾಗಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ರು.
ಇದೇ ವೇಳೆ ಕೇರಳದ ಕೊಲ್ಲಂ ಜಿಲ್ಲೆಯ ಹಿರಿಯ ಮಹಿಳಾ ವಿದ್ಯಾರ್ಥಿ 105 ವರ್ಷದ ಭಾಗೀರಥಿ ಅಮ್ಮನವರನ್ನು ನೆನಪು ಮಾಡಿಕೊಂಡ ಮೋದಿ, 10 ವರ್ಷದ ಬಾಲಕಿಯಾಗಿದ್ದಾಗ ವಿದ್ಯಾಭ್ಯಾಸವನ್ನು ಮೊಟಕುಗೊಳಿದ ಭಾಗೀರಥಿ ಅಮ್ಮ, ಓದುವ ಅದಮ್ಯ ಬಯಕೆಯಿಂದ 105ನೇ ವಯಸ್ಸಿನಲ್ಲಿ ಓದು ಆರಂಭಿಸಿ ತಮ್ಮ 4ನೇ ತರಗತಿ ಪರೀಕ್ಷೆಯನ್ನು ಶೇ.75ರಷ್ಟು ಅಂಕ ಗಳಿಸುವ ಮೂಲಕ ತೇರ್ಗಡೆ ಹೊಂದಿದರು. ಇದು ಇಂದಿನ ಜನತೆಗೆ ದೊಡ್ಡ ಸ್ಪೂರ್ತಿ. ಅವರಿಗೆ ನನ್ನ ದೊಡ್ಡ ಪ್ರಣಾಮಗಳು ಎಂದು ತಲೆಬಾಗಿದ್ರು.
ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದ ಮೊರದಾಬಾದ್ ಜಿಲ್ಲೆಯ ಹಮಿರ್ಪುರ್ ಗ್ರಾಮದಲ್ಲಿನ ಮತ್ತೊಬ್ಬ ಚಂಬಾತನ ಸ್ವಾಭಿಮಾನ ಜೀವನವನ್ನ ಪ್ರಸ್ತಾಪಿಸಿದ ಮೋದಿ, ಸಲ್ಮಾನ್ ದಿವ್ಯಾಂಗನಾಗಿದ್ದು ಚಪ್ಪಲಿಗಳನ್ನು ಹೊಲಿದು, ಡಿಟಜೆರ್ಂಟ್ ತಯಾರಿಸಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಈತ ಸುಮಾರು 30 ದಿವ್ಯಾಂಗರಿಗೆ ತರಬೇತಿ ನೀಡಿ ಉದ್ಯೋಗ ಒದಗಿಸಿದ್ದಾರೆ. ಇಂತಹ ಉದ್ಯಮಶೀಲರನ್ನು ಪ್ರೋತ್ಸಾಹಿಸಬೇಕು ಎಂದು ಸಲ್ಮಾನ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.








