ADVERTISEMENT
Thursday, May 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸನ್ಯಾಸಿಯ ಬದುಕು

admin by admin
July 4, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಸನ್ಯಾಸಿಯ ಬದುಕು

ಪ್ರಶಾಂತ್ ಪೈ ಹೆಬ್ರಿ

Related posts

ಕೋಮುವಾದಿಗಳಿಗೆ ನೋ ಎಂಟ್ರಿ: ಕಠಿಣ ಷರತ್ತಿನೊಂದಿಗೆ ಟಿವಿಕೆ ಜೊತೆ ಕೈಜೋಡಿಸಿದ ಕಾಂಗ್ರೆಸ್

ಕೋಮುವಾದಿಗಳಿಗೆ ನೋ ಎಂಟ್ರಿ: ಕಠಿಣ ಷರತ್ತಿನೊಂದಿಗೆ ಟಿವಿಕೆ ಜೊತೆ ಕೈಜೋಡಿಸಿದ ಕಾಂಗ್ರೆಸ್

May 7, 2026
ಬಂಗಾಳದಲ್ಲಿ ಮಮತಾ ಆಡಳಿತದ ಅಂತ್ಯ ದೀದಿ ಕೃಪೆಯಲ್ಲಿದ್ದ ಅಧಿಕಾರಿಗಳಿಗೆ ಶಾಶ್ವತ ಗೇಟ್ ಪಾಸ್

ಬಂಗಾಳದಲ್ಲಿ ಮಮತಾ ಆಡಳಿತದ ಅಂತ್ಯ ದೀದಿ ಕೃಪೆಯಲ್ಲಿದ್ದ ಅಧಿಕಾರಿಗಳಿಗೆ ಶಾಶ್ವತ ಗೇಟ್ ಪಾಸ್

May 7, 2026

ನಾನೊಬ್ಬ ಸುಸಂಸ್ಕೃತ ಮನೆತನದಿಂದ ಬಂದ ಕೂಸಾಗಿದ್ದೆ. ನಾನವಳುವಾಗ ನನ್ನ ಹೆತ್ತಬ್ಬೆ ಅಂದ್ಕೊಂಡಿದ್ದಳೇನೋ ಹುಟ್ಟಿದ ಈ ಮುದ್ದುಮಗ ನಾಳೆ ನಮ್ಮ ಮನೆಯ ನಂದಾದೀಪವಾಗಿಯೋ ಆಶಾದೀಪವಾಗಿಯೋ ಮೂಡಿ ಬರಬಲ್ಲ,ಮದುವೆಯ ಬಂಧನಕ್ಕೆ ಒಳಗಾಗಿ ಸುಖದಿಂದ ಬಾಳಿ ಬದುಕಿ ಕುಲ ವಂಶೋದರಕನಾಗಬಲ್ಲ ಅಂತ!
ಅಳುವ, ನಾ ಶಾಲೆಗೆ ಹೋಗಲಮ್ಮ ಅಂತ ಗೋಗರೆದು ಅಮ್ಮನ ಸೆರಗು ಹಿಡಿದು ಸೆರಗಿನ ನಡುವೆ ಮುಖ ಹುದುಗಿಸಿ ಸಿಂಬಳ ಸಹಿತ ಅಳುವನ್ನು ಒರೆಸಿ ತಾಯಿಯನ್ನು ಬಿಟ್ಟು ನಾ ಎಲ್ಲಿಗೂ ಹೋಗಲಾರೆ ಅಂತ ಮುಂದಿನ ಬದುಕಿನ ಭಯ ಇರದೇ ತನ್ನದೇ ಮುಗ್ದ ಹಸುಳೆಯ ಮನದ,ತಪ್ಪು-ಸರಿ,ಮುಖವಾಡ ಹೊಂದಿದ ಜನರ ಪರಿಚವೇ ಗೊತ್ತಾಗದ ಕಪಟವಿಲ್ಲದ ಮನಸಿನಂತಹ ಹರೆಯದಲ್ಲಿ……

ಹಿರಿಯರೊಬ್ಬರು ನನ್ನ ಅಪ್ಪ-ಅಮ್ಮನ ಬಳಿ ಬಂದು ಒಂದು ವಿಷಯದ ಬಗ್ಗೆ ಚರ್ಚೆ ಮಾಡುವುದನ್ನ ಕಂಡೆ. ಅರೆ ಇದ್ಯಾಕಪ್ಪ ನನ್ನಮ್ಮ ಅಳ್ತಾ ಇದ್ದಾರೆ, ಅಪ್ಪನ ಮೊಗದಲ್ಲಿ ದುಗುಡ ಆದರೂ ಮನೆಯ ಯಜಮಾನನಾಗಿ ಕಣ್ಣೀರು ತರವಲ್ಲ ಎಂಬಂತೆ ಮನದ ಮೂಲೆಯಲ್ಲಿ ಬೇಡವೆನ್ದರೂ ಬಿಕ್ಕಳಿಸುವ ನೋವಿನ ಅಳು!

ಅರಿವಾಗಲಿಲ್ಲ ನನಗೆ ಅವರ ಮನಸಿನ ನೋವು.. ಒತ್ತಾಯದಿಂದ ಮನಸ್ಸೇ ಇಲ್ಲದ ಮನಸ್ಸಿನಿಂದ ಒಪ್ಪಿಕೊಂಡ ಎರಡು ಮನಸುಗಳು ಆಲೋಚನೆಯೇ ಮಾಡ್ಲಿಲ್ಲ ಈ ಮಗುವಿನ ಮನಸ್ಸನ್ನು, ನನ್ನ ಮನಸ್ಸಿನ ಮಾತನ್ನು….

ಮಣೆಯ ಮೇಲೆ ಕೂರಿಸಿ ಜನಿವಾರದಾರಿಯನ್ನಾಗಿ ಮಾಡಿ ಅದೇ ಜನಿವಾರವನ್ನು ಕಡಿದು ಹಾಕಿರುವ ನನ್ನ ಅಂಗಿ ಮತ್ತು ಚಡ್ಡಿಯನ್ನು ತೆಗೆದು ಕೇಸರಿ ವಸ್ತ್ರವನ್ನು ಹಾಕಿದಾಗಲೂ ಅನ್ನಿಸಲಿಲ್ಲ ನನಗೆ ಇಲ್ಲಿ ಏನಾಗ್ತಾ ಇದೆ ಅಂತ ಯಾಕೆಂದರೆ ನಾನಗಾಗ 8ರ ಹರೆಯ!

ನಮ್ಮ ಮನೆಯ ತೋಟದಲ್ಲಿ ಹರಿಯುವ ತೋಡಿನಲ್ಲಿ ದೋಣಿ ಬಿಡುವ, ಸೈಕಲನ ಟೈಯರನ್ನು ಕೋಲಿನಲ್ಲಿ ಹೊಡೆದುಕೊಂಡು ಹೋಗುವ, ಅಟ್ಟಾ-ಮುಟ್ಟ ಆಡುವ, ಕಣ್ಣಾ ಮುಚ್ಚಾಲೆ ಆಡುವ ಹರೆಯದಲ್ಲಿ ನನ್ನ ಮೈಮೇಲೆ ಸ್ವಾಮಿಗಳ ಹೊದಿಕೆ ಹಾಕಿ ಆಗಿತ್ತು. ನನಗನಿಸಲೇ ಇಲ್ಲ ಮುಂದೊಂದು ದಿನ ಈ ಹೊದಿಕೆಯೇ ಬದುಕಿಗಾಗಲಿದೆ ಅಂತ!
ಹೊಸ ಬಟ್ಟೆ ಉಡಿಸಿದ ಕ್ಷಣದಲ್ಲೇ ಜೈಕಾರ ಕೇಳಲಾರಂಭಿಸಿತು.

ವಿಚಿತ್ರ ಅನಿಸಿತು ಹಿರಿಯ ಜೀವಗಳು, ಮಹಿಳೆಯರು ಎಲ್ಲಾ ನನ್ನ ಕಾಲು ಹಿಡಿಯುವ ಕ್ಷಣಗಳು..ನನ್ನನ್ನ ಅವರಿಂದ ಪ್ರತ್ಯೇಕವಾಗಿ ಕಾಣುವ ಕ್ಷಣಗಳು.. ನನಗಾಗೇ ಪ್ರತ್ಯೇಕವಾಗಿ ತಯಾರಿಸಿದ ಊಟ ಉಪಚಾರಗಳು.. ಒಂದಾ ಎರಡೇ..

ಕಾಲ ಕಳೆದಂತೆ ನಾನು ಯವ್ವನದ ಕಾಲಘಟ್ಟಕ್ಕೆ ಇಳಿದೆ. ಮೈ ಮನಸ್ಸಿನ ಬದಲಾವಣೆ ಆಗುವ ಸಂದರ್ಭದಲ್ಲಿ ನಾನು ಅದೇ ಬಂಧನದ ಹಕ್ಕಿಯಾಗಿದ್ದೆ. ಮನದಾಳದ ವಯೋ ಸಹಜ ಬಯಕೆಯನ್ನು ಯಾರ ಜತೆ ಹಂಚಿಕೊಳ್ಳಲಿ? ನನ್ನ ಇಚ್ಛೆಯನ್ನ ಪೂರೈಸುವುದು ತಪ್ಪು ಅಂತ ಕಟ್ಟಪ್ಪಣೆ ವಿಧಿಸಿದ್ದು ಆಲೋಚಿಸುವಾಗ ತಿಳಿಯಿತು ನಾನೇನಾಗಿದ್ದೆ ನಾನೇನಾಗಿದ್ದೇನೆ ಅಂತ. ಆದ್ರೆ ಕಾಲ ಮಿಂಚಿ ಹೋಗಿತ್ತು. ಕೈಗೆ ಸಿಕ್ಕ ಮಠದ ಜವಾಬ್ದಾರಿ, ನೂರಾರು ಕೋಟಿ ಆಸ್ತಿಯ ಹಕ್ಕು, ನೂರಾರು ಕೋಟಿಗಳ ವ್ಯವಹಾರ, ತಿರುಗಲು ವೈಭವದ ವಿದೇಶಿ ಕಾರು.. ಬಿಟ್ಟು ವೈವಾಹಿಕ ಬಂಧನಕ್ಕೆ ಹೇಗೆ ಮರಳಲಿ? ಹೋದರೆ ನನ್ನನ್ನ ಹೇಗೆ ಸ್ವೀಕರಿಸಬಲ್ಲುದು ಈ ಸಮಾಜ? ಮಠದ ಸಮಸ್ಸೆಯನ್ನ ಪರಿಹರಿಸಲು ಯತ್ನಿಸುವುದು ಹುತ್ತಕ್ಕೆ ಕೈ ಹಾಕಿದಂತೆ ಅಂತ ದಿನ ಹೋದಂತೆ ಅನ್ನಿಸತೊಡಗಿತು. ಆದ್ರೂ…. ಹರೆಯ ಮೀರತೊಡಗಿತು.. ಮನಸ್ಸಿನ ಬಯಕೆಯ ಕೂಗು ನಿತ್ರಾಣಗೊಂಡು ತನ್ನ ಚೈತನ್ಯ ಕಳೆಯತೊಡಗಿತು.. ಎಲ್ಲರೂ ಇದ್ದು ನಾನು ಒಂಟಿಯಾಗ ತೊಡಗಿದೆ. ಮಧ್ಯರಾತ್ರಿಯಲ್ಲಿ ಒಂದು ಕರೆ ಬಂತು ಅಪ್ಪ ತಿರ್ಕೊಂಡ್ಲು ಅಂತ! ಅಪ್ಪ ಅಂತ ಓಡೋಡಿ ಹೋಗೋಣ ಅಂತ ಅನ್ನಿಸ್ತು ಮನಸಿಗೆ ಆದ್ರೆ ಆದೇ ಮಠದ ಕಟ್ಟಳೆ.. ಸತ್ತ ಅಪ್ಪನ ಹೆಣ ನೋಡುವುದು ನಿಷಿದ್ಧ! ನಾನ್ಯಾವ ಜನ್ಮದಲ್ಲಿ ಮಾಡಿದ ತಪ್ಪೋ ಹುಟ್ಟಿಸಿದ ಅಪ್ಪ ತೀರಿದಾಗ ಮುಟ್ಟಲು ನಿಷಿದ್ದವಂತೆ! ಅಯ್ಯೋ ವಿಧಿಯೇ.

ನಾನು ನಾನಾಗಿರಲಿಲ್ಲ ಅವಾಗ ಯಾಕಂದ್ರೆ ಮಠದ ಹಿರಿಯ ತಲೆಗಳು ನನ್ನ ಅನುಮತಿ ಇಲ್ಲದೆಯೇ, ನನ್ನ ತಂದೆ ತಾಯಿಗೆ ಬಲವಂತವಾಗಿ ಒಪ್ಪಿಸಿ ನನ್ನನ್ನ ನನ್ನ ತಂದೆತಾಯಿಯಿಂದ ಕಿತ್ತುಕೊಂಡು,ನನ್ನ ಬಾಲ್ಯವನ್ನು ಕೊಂದು ಹಾಕಿದ ಮನಸ್ಥಿತಿಗೆ ಏನು ಹೇಳಲಿ, ಬೇರೆಯವರ ಹೆಗಲ ಮೇಲೆ ಬಂದೂಕು ಇತ್ತು ಗುರಿ ಇಡುವ ಕ್ರೂರ ಮನಸ್ಸಿನ ಕೈಗೊಂಬೆಯಾಗಿದ್ದೆ ನಾನು..
ನನ್ನನ್ನು ನನ್ನವರಿಂದ ಕಸಿದ ಮಠದ ಬದುಕು ನನ್ನ ಜೀವನದ ಅಂತಿಮ ಗಳಿಗೆಯಲ್ಲಿ ನನ್ನನ್ನೇ ನನ್ನಿಂದ ದೂರವಾಗಿಸಿತು. ಬದುಕಿನ ಮೂರು ಮೆಟ್ಟಿಲುಗಳನ್ನು ಹತ್ತಿ ಮೋಕ್ಷದ ಬಯಕೆ ಬಯಸಿದ ಮನಕ್ಕೆ ಬಾಲ್ಯದಲ್ಲೇ ಶವ ಪೆಟ್ಟಿಗೆಯ ಕೊನೆಯ ಮೊಳೆ ಹೊಡೆಯಲಾಯಿತು.

ನನ್ನ ಮನಸ್ಸಿನ ನೋವು ಕೇಳಲು ಯಾರೂ ಇರಲಿಲ್ಲ ಯಾಕಂದ್ರೆ ನಾನು ನಾನಾಗಿರಲಿಲ್ಲ. ನಾನು ಸ್ವಾಮಿಯಾಗಿದ್ದೆ……

Tags: indiaMangaloremonksanyasi lifespecial articleUdupiಅಂತರಾಳಸನ್ಯಾಸಿ
ShareTweetSendShare
Join us on:

Related Posts

ಕೋಮುವಾದಿಗಳಿಗೆ ನೋ ಎಂಟ್ರಿ: ಕಠಿಣ ಷರತ್ತಿನೊಂದಿಗೆ ಟಿವಿಕೆ ಜೊತೆ ಕೈಜೋಡಿಸಿದ ಕಾಂಗ್ರೆಸ್

ಕೋಮುವಾದಿಗಳಿಗೆ ನೋ ಎಂಟ್ರಿ: ಕಠಿಣ ಷರತ್ತಿನೊಂದಿಗೆ ಟಿವಿಕೆ ಜೊತೆ ಕೈಜೋಡಿಸಿದ ಕಾಂಗ್ರೆಸ್

by Shwetha
May 7, 2026
0

ಚೆನ್ನೈ: ತಮಿಳುನಾಡಿನ ರಾಜಕೀಯ ಚಿತ್ರಣ ಈಗ ಸಂಪೂರ್ಣವಾಗಿ ಬದಲಾಗಿದೆ. ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ನೇತೃತ್ವದ ತಮಿಳುಗ ವೆಟ್ರಿ ಕಳಗಂ ಅಂದರೆ ಟಿವಿಕೆ ಪಕ್ಷಕ್ಕೆ ಸರ್ಕಾರ...

ಬಂಗಾಳದಲ್ಲಿ ಮಮತಾ ಆಡಳಿತದ ಅಂತ್ಯ ದೀದಿ ಕೃಪೆಯಲ್ಲಿದ್ದ ಅಧಿಕಾರಿಗಳಿಗೆ ಶಾಶ್ವತ ಗೇಟ್ ಪಾಸ್

ಬಂಗಾಳದಲ್ಲಿ ಮಮತಾ ಆಡಳಿತದ ಅಂತ್ಯ ದೀದಿ ಕೃಪೆಯಲ್ಲಿದ್ದ ಅಧಿಕಾರಿಗಳಿಗೆ ಶಾಶ್ವತ ಗೇಟ್ ಪಾಸ್

by Shwetha
May 7, 2026
0

ಪಶ್ಚಿಮ ಬಂಗಾಳದ ರಾಜಕೀಯ ಕಣದಲ್ಲಿ ಈಗ ಬಿರುಗಾಳಿ ಎದ್ದಿದೆ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸುತ್ತಿದ್ದಂತೆಯೇ ಮಮತಾ ಬ್ಯಾನರ್ಜಿ ಸರ್ಕಾರದ ಪ್ರಭಾವಿ ಅಧಿಕಾರಿಗಳ ಆಟಕ್ಕೆ ಬ್ರೇಕ್ ಬಿದ್ದಿದೆ ಮಮತಾ...

ಅಜ್ಜನಂತೆಯೇ ಅಜಾತಶತ್ರು ಆಗುವುದೇ ನನ್ನ ಗುರಿ, ದಾವಣಗೆರೆ ದಕ್ಷಿಣದ ಸಮಗ್ರ ಅಭಿವೃದ್ಧಿಗೆ ನಾನು ಬದ್ಧ:  ಸಮರ್ಥ್ ಶಾಮನೂರು

ಅಜ್ಜನಂತೆಯೇ ಅಜಾತಶತ್ರು ಆಗುವುದೇ ನನ್ನ ಗುರಿ, ದಾವಣಗೆರೆ ದಕ್ಷಿಣದ ಸಮಗ್ರ ಅಭಿವೃದ್ಧಿಗೆ ನಾನು ಬದ್ಧ: ಸಮರ್ಥ್ ಶಾಮನೂರು

by Shwetha
May 7, 2026
0

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರು ನನ್ನ ಮೇಲೆ ಅಪಾರ ನಂಬಿಕೆ ಇಟ್ಟು ಈ ಬಾರಿ ಐತಿಹಾಸಿಕ ಜಯ ತಂದುಕೊಟ್ಟಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡುವ ಸಾಮರ್ಥ್ಯ ನನ್ನಲ್ಲಿದೆ...

ಬಂಗಾಳದ ಮಣ್ಣಲ್ಲಿ ಅರಳಿದ ಕೇಸರಿ ಕಮಲ: ಪ್ರಧಾನಿ ಮೋದಿ ವಿಶ್ವನಾಯಕ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಬಂಗಾಳದ ಮಣ್ಣಲ್ಲಿ ಅರಳಿದ ಕೇಸರಿ ಕಮಲ: ಪ್ರಧಾನಿ ಮೋದಿ ವಿಶ್ವನಾಯಕ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

by Shwetha
May 7, 2026
0

ಭಾರತದ ರಾಜಕೀಯ ನಕಾಶೆಯಲ್ಲಿ ಪಶ್ಚಿಮ ಬಂಗಾಳದ ಗೆಲುವು ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಭಾರತೀಯ ಜನತಾ ಪಕ್ಷವು ಬಂಗಾಳದ ನೆಲದಲ್ಲಿ ಸಾಧಿಸಿದ ಈ ಅಸಾಧಾರಣ ವಿಜಯವು ಕೇವಲ ಭಾರತಕ್ಕೆ...

ಡಿಕೆಶಿಗೆ ಸಿಗುತ್ತಾ ಮುಖ್ಯಮಂತ್ರಿ ಪಟ್ಟದ ಗಿಫ್ಟ್? ಡಿಕೆ ಸುರೇಶ್ ಹೇಳಿಕೆಯ ಹಿಂದಿನ ನಿಗೂಢತೆ ಏನು?

ಡಿಕೆಶಿಗೆ ಸಿಗುತ್ತಾ ಮುಖ್ಯಮಂತ್ರಿ ಪಟ್ಟದ ಗಿಫ್ಟ್? ಡಿಕೆ ಸುರೇಶ್ ಹೇಳಿಕೆಯ ಹಿಂದಿನ ನಿಗೂಢತೆ ಏನು?

by Shwetha
May 7, 2026
0

ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ 64ನೇ ಜನ್ಮದಿನದ ಸಂಭ್ರಮಕ್ಕೆ ಈ ಬಾರಿ ದೆಹಲಿ ಹೈಕಮಾಂಡ್‌ನಿಂದ ವಿಶೇಷ ಕೊಡುಗೆ ಸಿಗುವ ಸಾಧ್ಯತೆ ಇದೆ ಎಂಬ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram