ಉಡುಪಿ: ಕಾರ್ಕಳ(Karkala) ದ ಅಲ್ತಾಫ್ ಎಂಬ ಮುಸ್ಲಿಂ ಯುವಕ ಯುವತಿಯನ್ನು ಫುಸಲಾಯಿಸಿ ಕರೆದೊಯ್ದು ಮಾದಕ ವಸ್ತು ಮಿಶ್ರಣ ಮಾಡಿ ಅತ್ಯಾಚಾರ ಎಸಗಿರುವ ಘಟನೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯ ಬ್ಲಡ್ ರಿಪೋರ್ಟ್ ಪೊಲೀಸರ ಕೈ ಸೇರಿದ್ದು, ಈ ಕುರಿತು ಮಾತನಾಡಿದ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್, ‘ರಕ್ತದಲ್ಲಿ ಮಾದಕ ವಸ್ತುಗಳಿರುವ ವರದಿ ಪಾಸಿಟಿವ್ ಬಂದಿದೆ. ಅಲ್ಲದೇ, ಆರೋಪಿಗಳ ರಿಪೋರ್ಟ್ ನೆಗೆಟಿವ್ ಬಂದಿದೆ ಎಂದು ಹೇಳಿದ್ದಾರೆ.
ಕಾರಿನಲ್ಲಿ ಪತ್ತೆಯಾದ ಡ್ರಗ್ಸ್ ಬಗ್ಗೆ ಪೊಲೀಸರು ಅಲ್ತಾಫ್ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈಗಾಗಲೇ ಯುವತಿಗೆ ಡ್ರಗ್ಸ್ ನೀಡಿದ್ದ ಕುರಿತು ಆತ ತಪ್ಪೊಪ್ಪಿಕೊಂಡಿದ್ದಾನೆ. ಹೀಗಾಗಿ ಕಾರಿನಲ್ಲಿ ಆತ ಪುಡಿಯನ್ನು ಎಫ್ ಎಸ್ ಎಲ್ ಗೆ ಕಳುಹಿಸಲಾಗಿದೆ. ಡ್ರಗ್ಸ್ ನ ಮೂಲ ಕಂಡು ಹಿಡಿಯಲು ಕೂಡ ಪೊಲೀಸರು ಮುಂದಾಗಿದ್ದಾರೆ.
ಇನ್ ಸ್ಟಾಗ್ರಾಮ್ ನಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡು ಆಕೆಯನ್ನು ಫುಸಲಾಯಿಸಿ, ಬಿಯರ್ ನಲ್ಲಿ ಮಾದಕ ವಸ್ತು ಸೇರಿಸಿ ಅತ್ಯಾಚಾರ ನಡೆಸಿದ್ದಾನೆ ಎಂದು ಸಂತ್ರಸ್ಥ ಯುವತಿ ತಾಯಿ ದೂರು ದಾಖಲಿಸಿದ್ದಾರೆ. ಅಲ್ತಾಫ್ ಯುವತಿಯನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದು, ಅಲ್ಲಿ ಯುವತಿಗೆ ಮಾದಕ ವಸ್ತು ನೀಡಿ, ಸಂಜೆಯವರೆಗೆ ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ.