ನೈರೋಬಿ: ಶಾಲೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 17 ಜನ ಸಾವನ್ನಪ್ಪಿ, ಕೀನ್ಯಾ (Kenya) ಶಾಲೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 17 ಮಕ್ಕಳು ಸಾವನ್ನಪ್ಪಿ, 70 ಜನ ಕಾಣೆಯಾಗಿದ್ದಾರೆ.
ಕೀನ್ಯಾದ ಪ್ರಾಥಮಿಕ ವಸತಿ ಶಾಲೆಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಘಟನಾ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಉಪಾಧ್ಯಕ್ಷೆ ರಿಗತಿ ಗಚಾಗುವಾ (Deputy President Rigathi Gachagua) ಮಾತನಾಡಿ, ನೈರಿ ಕೌಂಟಿಯಲ್ಲಿರುವ (Nyeri county) ಹಿಲ್ ಸೈಡ್ ಎಂಡರಾಶಾ (Endarasha Academy) ಅಕಾಡೆಮಿಯಲ್ಲಿ ಮಧ್ಯರಾತ್ರಿ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಕೊಠಡಿಯಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಲಗಿದ್ದರು ಎನ್ನಲಾಗಿದೆ. ಆದರೆ, ಇನ್ನೂ 70 ವಿದ್ಯಾರ್ಥಿಗಳ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ. 17 ಜನ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ರಾಷ್ಟ್ರೀಯ ಪೊಲೀಸ್ ವಕ್ತಾರ ರೆಸಿಲಿಯಾ ( Resila) ಮಾತನಾಡಿ, ಈಗಾಗಲೇ 17 ಮೃತದೇಹಗಳು ಪತ್ತೆಯಾಗಿದ್ದು, ಗುರುತಿಸಲಾಗದಷ್ಟು ಸುಟ್ಟು ಹೋಗಿವೆ.








