ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ (Jammu Kashmir) ಬಿಜೆಪಿ (BJP) ಗೆ ಬೆಂಬಲ ಸಿಕ್ಕರೆ ಈದ್ (Eid) ಮತ್ತು ಮೊಹರಂ (Muharram) ಹಬ್ಬದ ವೇಳೆ ಉಚಿತವಾಗಿ ಎರಡು ಗ್ಯಾಸ್ ಸಿಲಿಂಡರ್ ವಿತರಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭರವಸೆ ನೀಡಿದ್ದಾರೆ.
ಮೆಂಧಾರ್ ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಅಬ್ದುಲ್ಲಾ, ಮುಫ್ತಿ , ಮತ್ತು ನೆಹರು-ಗಾಂಧಿ ಕುಟುಂಬ ಕುಟುಂಬಗಳು ಇಡೀ ಜಮ್ಮು ಕಾಶ್ಮೀರ ನಾಶ ಮಾಡಿವೆ. ಈ ಪಕ್ಷಗಳು ಇದ್ದಾಗ ಭಯೋತ್ಪಾದಕತೆ ಹೆಚ್ಚಾಗಿದೆ. ಆದರೆ ಮೋದಿ ಸರ್ಕಾರ ಬರುತ್ತಿದ್ದಂತೆ ಭಯೋತ್ಪಾದನೆ ನಿರ್ಣಾಮವಾಗಿದೆ. ನಿಮ್ಮ ಮಕ್ಕಳ ಕೈಯಲ್ಲಿ ಈಗ ಕಲ್ಲಿನ ಬದಲು ಲ್ಯಾಪ್ ಟಾಪ್ ಬಂದಿವೆ ಎಂದು ಹೇಳಿದ್ದಾರೆ.
2014 ರಲ್ಲಿ ಮೋದಿ ಸರ್ಕಾರ ಬರದಿದ್ದರೆ ಇಲ್ಲಿ ಬ್ಲಾಕ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ನಡೆಯುತ್ತಿರಲಿಲ್ಲ. ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಇಲ್ಲಿ 35 ವರ್ಷ ಆಳಿತು. ಭಯೋತ್ಪಾದನೆ ಹೆಚ್ಚಾಯಿತು. 40 ಸಾವಿರ ಜನರು ಹತ್ಯೆಯಾದರು. ಮೂರು ಸಾವಿರ ದಿನ ಜಮ್ಮು ಮತ್ತು ಕಾಶ್ಮೀರ ಮುಚ್ಚಿತ್ತು. ಎಂಟು ವರ್ಷಗಳ ಕಾಲ ಕತ್ತಲೆಯಲ್ಲಿ ಮುಳುಗಿತ್ತು ಎಂದು ಆರೋಪಿಸಿದ್ದಾರೆ.








