ಜನ ದಿಕ್ಕು ದೆಸೆ ಇಲ್ಲದೆ ಪಕ್ಷ ಸಾಗುತ್ತಿದೆ ಎಂದು ಭಾವಿಸುವ ಮೊದಲು ಕಾಂಗ್ರೆಸ್ ತನ್ನ ನಾಯಕತ್ವ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ನಾಯಕ ಶಶಿ ತರೂರ್ ಸಲಹೆ ನೀಡಿದ್ದಾರೆ.
ರಾಹುಲ್ ಗಾಂಧಿ ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯುವ ಬಗ್ಗೆ ಅವರಾಗಿ ನಿರ್ಧರಿಸಬೇಕು, ಒಂದು ವೇಳೆ ಅವರು ಮುಂದುವರಿಯಲು ಇಚ್ಛೆ ಪಡದಿದ್ದರೆ, ಒಬ್ಬ ಕ್ರಿಯಾಶೀಲ ಹಾಗೂ ಪೂರ್ಣಾವಧಿಯ ನಾಯಕನನ್ನು ನೇಮಿಸಿ ಪಕ್ಷ ಕಟ್ಟುವ ಅಗತ್ಯವಿದೆ ಎಂದು ತರೂರ್ ಹೇಳಿದರು. ಪಕ್ಷದ ನಾಯಕತ್ವಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಪರಿಹರಿಸಿಕೊಂಡರೆ ಒಡೆದಾಳುವ ನೀತಿ ಅನುಸರಿಸುತ್ತಿರುವ ಬಿಜೆಪಿಗೆ ಕಾಂಗ್ರೆಸ್ ಒಂದೇ ಪರ್ಯಾಯ ಎಂದು ತರೂರ್ ಅಭಿಪ್ರಾಯಪಟ್ಟರು.








