ಬೆಂಗಳೂರು: ವುಡ್ ಫ್ಯಾಕ್ಟರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕೋಟ್ಯಾಂತರ ರೂ. ನಷ್ಟವಾಗಿರುವ ಘಟನೆ ನಡೆದಿದೆ.
ಅತ್ತಿಬೆಲೆ ಹತ್ತಿರದ ಯಡವನಹಳ್ಳಿಯ ಸಮೀಪ ಇರುವ ಶ್ರೀರಾಮ್ ವುಡ್ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಕೋಟ್ಯಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿ ಆಕಸ್ಮಿಕವಾಗಿ ಹೊತ್ತಿಕೊಂಡಿದೆ ಎನ್ನಲಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಖಾನೆ ಸುಮಾರು ಎಕರೆ ಪ್ರದೇಶದಲ್ಲಿದೆ. ಹೆದ್ದಾರಿಗೆ ಹೊಂದಿಕೊಂಡಿರುವ ಹಿನ್ನೆಲೆಯಲ್ಲಿ ಆತಂಕ ಹೆಚ್ಚಾಗಿತ್ತು. ಆದರೆ, ಮೂರು ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಪಕ್ಕದ ಆಶೀರ್ವಾದ ಕಂಪನಿಯ ಸಿಬ್ಬಂದಿ ಕೂಡ ಬೆಂಕಿ ನಂದಿಸಲು ಸಹಕರಿಸಿದ್ದರಿಂದಾಗಿ ಬೇಗನೆ ಬೆಂಕಿ ಆರಿಸಲಾಯಿತು. ಹರ್ಷದ್ ಪಟೇಲ್ ಎಂವವರಿಗೆ ಸೇರಿದ ಕಾರ್ಖಾನೆ ಇದ್ದಾಗಿದ್ದು, ಸುಮಾರು ಐದು ಕೋಟಿಗೂ ಹೆಚ್ಚು ಬೆಲೆ ಬಾಳುವ ವುಡ್ ಬೆಂಕಿಗೆ ಆಹುತಿಯಾಗಿದೆ.








