ಪಾಕಿಸ್ತಾನದ ಖೈಬರ್ ಪಖ್ತೂನ್ವಾ ಪ್ರಾಂತ್ಯದಲ್ಲಿ ಬಂದೂಕುಧಾರಿಗಳು ಪ್ರಯಾಣಿಕ ವಾಹನಗಳ ಮೇಲೆ ಗುಂಡು ಹಾರಿಸಿದ ಘಟನೆ ಸಂಭವಿಸಿದೆ. ಬಂದೂಕುಧಾರಿಗಳ ಗುಂಡಿನ ದಾಳಿಯಲ್ಲಿ 50 ಮಂದಿ ಮೃತಪಟ್ಟಿದ್ದು, 29 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮೃತರ ಪೈಕಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಮೃತರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಪರಾಚಿನಾರ್‌ನಿಂದ ಪೇಶಾವರಕ್ಕೆ ತೆರಳುತ್ತಿದ್ದ ಎರಡು ವ್ಯಾನ್‌ಗಳನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ ಎಂದು ಖೈಬರ್ ಪಖ್ತೂನ್ವಾ ಪ್ರಾಂತ್ಯದ ಮುಖ್ಯ ಕಾರ್ಯದರ್ಶಿ ನದೀಮ್ ಅಸ್ಲಂ ಚೌಧರಿ ತಿಳಿಸಿದ್ದಾರೆ. ಸುಮಾರು 10 ಮಂದಿ, ಬಂದೂಕುಧಾರಿಗಳು ರಸ್ತೆಯ ಎರಡೂ ಬದಿಯಿಂದ ಗುಂಡಿನ ದಾಳಿ ನಡೆಸಿದ್ದಾರೆಂದು ಹಾರಿಸಿದರು ಎಂದು ಹಿರಿಯ ಆಡಳಿತಾಧಿಕಾರಿ ಜಾವೇದ್ ಉಲ್ಲಾ ಮೆಹ್ಸೂದ್ ಹೇಳಿದ್ದಾರೆ.








