ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಮಾದಕ ವಸ್ತು ಬಳಕೆ ನಿಯಂತ್ರಿಸಲು ‘ಡ್ರಗ್ ಫ್ರೀ ಕರ್ನಾಟಕ’ ಹೆಸರಿನ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಈ ಆ್ಯಪ್ ಮೂಲಕ ಸಾರ್ವಜನಿಕರು ಗಾಂಜಾ ಬೆಳೆಯುತ್ತಿರುವವರು, ಮಾರಾಟಗಾರರು, ಗ್ರಾಹಕರು, ಸಿಂಥೆಟಿಕ್ ಡ್ರಗ್ಸ್ಗಳನ್ನು ತಯಾರಿಸುತ್ತಿರುವ ಲ್ಯಾಬ್ಗಳು, ಸಂಗ್ರಹಣೆ ಗೋದಾಮು, ಸಾರಿಗೆ ವ್ಯವಸ್ಥೆ ಸೇರಿದಂತೆ ಯಾವುದೇ ರೀತಿಯ ಮಾಹಿತಿಯನ್ನು ಹಂಚಿಕೊಳ್ಳಬಹುದು.
ಆ್ಯಪ್ನ ವೈಶಿಷ್ಟ್ಯಗಳು:
ಮಾಹಿತಿ ಸಂಗ್ರಹಣೆ: ಡ್ರಗ್ಸ್ ಮಾರಾಟ ಜಾಲದ ಕುರಿತು ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಲು
ಗೌಪ್ಯತೆ: ಮಾಹಿತಿ ಕೊಟ್ಟವರ ಹೆಸರು, ವಿಳಾಸವನ್ನು ಗೌಪ್ಯವಾಗಿಡಲಾಗುತ್ತದೆ.
ಭಾಷಾ ಆಯ್ಕೆ: ಇಂಗ್ಲೀಷ್ ಅಥವಾ ಕನ್ನಡದಲ್ಲಿ ವರದಿ ಮಾಡಲು ಅವಕಾಶ.
ಕಾನೂನು ಕ್ರಮ: ಸಂಗ್ರಹಿಸಿದ ಮಾಹಿತಿಯನ್ನು ಸ್ಥಳೀಯ ಪೊಲೀಸರು, ಡಿಸಿಪಿ, ಎಸ್ಪಿ ಹಾಗೂ ಹಿರಿಯ ಅಧಿಕಾರಿಗಳಿಗೆ ರವಾನಿಸಲಾಗುತ್ತದೆ. ಬಳಿಕ ಮಾಹಿತಿ ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆ.
ಈ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ನಲ್ಲಿ ಡೌನ್ಲೋಡ್ ಮಾಡಬಹುದು.








