ಹಾವೇರಿ: ಬಿಜೆಪಿಯ ಕಾರ್ಯಕರ್ತರು ಗ್ಯಾರಂಟಿಯ ಲಾಭ ಪಡೆಯುತ್ತಿಲ್ಲವೇ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸವಣೂರು ಪಟ್ಟಣದಲ್ಲಿ ನಡೆದ ಮತದಾರರಿಗೆ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಗ್ಯಾರಂಟಿ ಯೋಜನೆ (Guarantee Scheme) ಜಾರಿ ಮಾಡಿದರೆ ಅಭಿವೃದ್ಧಿ ಯೋಜನೆಗೆ ಹಣ ಇರಲ್ಲ ಎಂದು ಲೇವಡಿ ಮಾಡಿದ್ದಾರೆ. ಹಾಗಾದರೆ, ಅವರದೇ ಪಕ್ಷದ ಬಡ ಕಾರ್ಯಕರ್ತರು ಗ್ಯಾರಂಟಿ ಯೋಜನೆಗಳನ್ನು ಪಡೆಯುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ನಾಲ್ಕವರೆ ಕೋಟಿ ಜನರು ಗ್ಯಾರಂಟಿ ಲಾಭ ಪಡೆಯುತ್ತಿದ್ದಾರೆ. 7 ಕೆಜಿಯಿಂದ 5 ಕೆಜಿಗೆ ಅಕ್ಕಿ ಇಳಿಸಿದ್ದು ಯಾರಪ್ಪ ಬೊಮ್ಮಾಯಿ? ನಿಮಗೆ ನಾಚಿಕೆಯಾಗಲ್ವಾ? ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಬಿಜೆಪಿಯವರು 10 ಕೆಜಿ ಅಕ್ಕಿ ಕೊಟ್ಟಿದ್ದ ಉದಾಹರಣೆ ಇದ್ದರೆ ಹೇಳಿ. ನಾನು ಇಂದೇ ರಾಜೀನಾಮೆ ಕೊಡುತ್ತೇನೆ. ಅರ್ಹ ಬಿಪಿಎಲ್ ಕಾರ್ಡ್‌ದಾರರಿಗೆ ಯಾವುದೇ ಕಾರಣಕ್ಕೂ 10 ಕೆಜಿ ಅಕ್ಕಿ ನಿಲ್ಲಿಸಲ್ಲ ಎಂದು ಭರವಸೆ ನೀಡಿದರು. ನ್ಯಾಯಯುತವಾಗಿ ಬರಬೇಕಾದ ಹಣ ನಮಗೆ ಕೊಡುತ್ತಿಲ್ಲ. ನಮ್ಮ ತೆರಿಗೆ ಪಾಲು ಸರಿಯಾಗಿ ಕೊಡುತ್ತಿಲ್ಲ. ನಾಲ್ಕೂವರೆ ಲಕ್ಷ ಕೋಟಿ ತೆರಿಗೆ ಕಟ್ಟುತ್ತೇವೆ. ಆದರೆ ನಮಗೆ ಬರುತ್ತಿರೋದು 60,000 ಕೋಟಿ ಮಾತ್ರ. ನರೇಂದ್ರ ಮೋದಿ ಜೀ ಇದು ನ್ಯಾಯಾನಾ? ಎಂದು ಗುಡುಗಿದ್ದಾರೆ.








