ಕರ್ನಾಟಕಕ್ಕೆ ಮತ್ತೆ ಮಳೆಯ ಆರ್ಭಟ ನಾಳೆಯಿಂದ ಶುರುವಾಗುತ್ತಿದೆ.
ಬಂಗಾಳಕೊಲ್ಲಿಯಲ್ಲಿ ನಿರಂತರವಾಗಿ ಚಂಡಮಾರುತಗಳು ಸೃಷ್ಟಿಯಾಗುತ್ತಿರುವುದರಿಂದ ಕರ್ನಾಟಕಕ್ಕೆ ಮಳೆಯಿಂದ ಬಿಡುವಿಲ್ಲ. ತಮಿಳುನಾಡಿಗೆ ಅಪ್ಪಳಿಸಲಿರುವ ಸೈಕ್ಲೋನ್ನ ಪ್ರಭಾವದಿಂದಾಗಿ ನಾಳೆಯಿಂದ ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.ಡಿ. 17 ರಿಂದ ದಕ್ಷಿಣ ಒಳನಾಡು ಮತ್ತು ಡಿ. 19 ರಿಂದ ಕರಾವಳಿಯಲ್ಲಿ ಜೋರು ಮಳೆಯಾಗುವ ನಿರೀಕ್ಷೆ ಇದೆ.
ಹವಾಮಾನ ಇಲಾಖೆ ಈ ಕುರಿತು ಎಚ್ಚರಿಕೆ ನೀಡಿದೆ.ಜನರು ಎಚ್ಚರಿಕೆಯಿಂದ ಇರಬೇಕು ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು.








