ADVERTISEMENT
Sunday, July 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮನರಂಜನೆ

ಪೃಥ್ವಿ-ಧನ್ಯ ‘ಚೌಕಿದಾರ್’ ಸಿನಿಮಾದ ಚಿತ್ರೀಕರಣ ಮುಕ್ತಾಯ..Release ಯಾವಾಗ ಅಂತೆ..?

Prithvi-Dhanya's 'Chowkidar' movie shooting completes..when will it be released..?

Shwetha by Shwetha
December 24, 2024
in ಮನರಂಜನೆ, Cinema, Newsbeat
Share on FacebookShare on TwitterShare on WhatsappShare on Telegram

‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ಧನ್ಯಾ ರಾಮ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಚೌಕಿದಾರ್ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿ ನಿನ್ನೆ ಚಿತ್ರಕ್ಕೆ ಕುಂಬಳಕಾಯಿ ಹೊಡೆಲಾಯಿತು‌. ಈ ವೇಳೆ ಇಡೀ ಚಿತ್ರತಂಡ ಭಾಗಿಯಾಗಿತ್ತು. ಬಳಿಕ ಸುದ್ದಿ ಗೋಷ್ಠಿಯಲ್ಲಿ ಚೌಕಿದಾರ್ ಕಲಾವಿದರು ತಮ್ಮ ಶೂಟಿಂಗ್ ಅನುಭವ ಹಂಚಿಕೊಂಡರು.

ನಾಯಕ ಪೃಥ್ವಿ ಅಂಬಾರ್ ಮಾತನಾಡಿ, ಈ ಚಿತ್ರದಿಂದ ಬಹಳಷ್ಟು ಕಲಿಯಲು ಸಿಕ್ಕಿದೆ. ನುರಿತ ನಿರ್ದೇಶಕರು ಇದ್ದಾಗ ಹೇಗೆ ಬೇಕು ಯಾವ ರೀತಿ ಬೇಕು ಅನ್ನೋದನ್ನು ಅವರು ಹೇಳಿಕೊಟ್ಟಿದ್ದಾರೆ. ಮನುಷ್ಯನ ಭಾವನೆಗಳನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಫ್ಯಾಮಿಲಿ ಎಮೋಷನ್ ತುಂಬಾ ಚೆನ್ನಾಗಿ ಅಳವಡಿಸಿದ್ದಾರೆ. ಸಾಯಿ ಸರ್ ಸೆಟ್ ನಲ್ಲಿ ಇದ್ದ ರೀತಿ. ನಮ್ಮಂತಹ ಕಲಾವಿದರಿಗೆ ಪುಸ್ತಕ ಇದ್ದಂತೆ. ನಿರ್ಮಾಪಕ ಜರ್ನಿ ನನಗೆ ಸ್ಫೂರ್ತಿ ಎಂದು ತಿಳಿಸಿದರು.

Related posts

guru raghavendra swami

Astro- ನಿಮಗೆ ರಾಯರ ದರ್ಶನಕ್ಕೆ ಅನುಗ್ರಹ ಸಿಕ್ಕಿಲ್ಲವೇ.. ಹಾಗಿದ್ದರೆ ಈ ಶ್ಲೋಕ ಹೇಳಿ ಸಾಕು..!!

July 26, 2026
jandu-kumar-commonwealth-games-para-powerlifting-success

ಎದೆತುಂಬಿ ಹೇಳಿರುವೆ…ಪ್ರೀತಿಯಿಂದ ಬರೆದಿರುವೆ… ಮನವಿಟ್ಟು ಓದಿ… ಇದು ನನ್ನ ಅಂತರಾಳದ ಮಾತು..!

July 26, 2026

ನಿರ್ದೇಶಕ‌ ಚಂದ್ರಶೇಖರ್ ಬಂಡಿಯಪ್ಪ ಮಾತನಾಡಿ, ನಾವು ನಿರ್ದೇಶಕರಾಗಿ ನಿರ್ಮಾಪಕರ ನಂಬಿಕೆ ಉಳಿಸಿಕೊಳ್ಳಬೇಕು. ನಿರ್ಮಾಪಕರಿಗೆ ಪ್ರೊಫೆಷನಲಿಸಂ ಇದೆ. ಇಡೀ ಕಲಾವಿದರು ಅತ್ಯದ್ಭುತವಾಗಿ ಅಭಿನಯಿಸಿದ್ದಾರೆ. ಮೇ ತಿಂಗಳ ಹಿಂದೆ ಮುಂದೆ ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್ ಮಾಡುತ್ತಿದ್ದೇವೆ. ಸಂಕ್ರಾಂತಿಗೆ ಟೀಸರ್ ರಿಲೀಸ್ ಮಾಡುತ್ತೇವೆ. ನಾಲ್ಕು ಹಾಡುಗಳಿವೆ. ಪ್ರತಿಯೊಬ್ಬ ಮನೆಯಲ್ಲಿಯೂ ಚೌಕಿದಾರ್ ಇರುತ್ತಾರೆ ಅವರ ಕಥೆಯನ್ನು ನಾವು ಹೇಳಿದ್ದೇವೆ. ಗ್ರಾಮಾಂತರ ಪ್ರದೇಶದಿಂದಲೇ ಚಿತ್ರ ಶುರುವಾಗುತ್ತದೆ. ಸಾಯಿ ಕುಮಾರ್ ಸರ್ ಹಾಗೂ ಪೃಥ್ವಿ ತಂದೆ ಮಗನಾಗಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಚಿತ್ರ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ನಾಯಕಿ ಧನ್ಯ ರಾಮ್ ಕುಮಾರ್ ಮಾತನಾಡಿ, ಚೌಕಿದಾರ್ ಶೂಟಿಂಗ್ ಮುಗಿದಿದೆ. ಈ ಚಿತ್ರದಲ್ಲಿ ಪಾತ್ರ ಸಿಕ್ಕಿರುವುದು ಖುಷಿ ಜೊತೆಗೆ ಹೆಮ್ಮೆ ಇದೆ. ಈ ಸಿನಿಮಾದಿಂದ ನನಗೆ ಕಲಿಯುವುದು ತುಂಬಾನೇ ಸಿಕ್ತು. ಜರ್ನಿ ಚಾಲೆಂಜಿಂಗ್ ಆಗಿತ್ತು. ಈ ಚಿತ್ರದ ಮೂಲಕ ಒಳ್ಳೆ ನಟಿಯಾಗಿ ಬಂದಿದ್ದೇನೆ ಎನಿಸಿತು. ಸಾಯಿಕುಮಾರ್ ಸರ್, ಧರ್ಮ ಸರ್, ಸುಧಾ ರಾಣಿ ಮೇಡಂ, ಶ್ವೇತಾ ಮೇಡಂ, ಪೃಥ್ವಿ ಇವರ ಜೊತೆ ಕೆಲಸ ಮಾಡಿರುವುದು ಖುಷಿಯಾಗಿದೆ. ನಿರ್ಮಾಪಕರು ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದರು.

ಹಿರಿಯ ನಟ ಸಾಯಿಕುಮಾರ್ ಮಾತನಾಡಿ, ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಇದೇ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆದಿದ್ದು , ಕುಂಬಳಕಾಯಿ ಕೂಡ ಇಲ್ಲೇ ಹೊಡೆಯಲಾಗಿದೆ. ಯಾವ ಸಿನಿಮಾಗೂ ಇದು ಆಗಿಲ್ಲ. ಮಹಾನ್ ಕಾಳಿ ಆಶೀರ್ವಾದ ನಮ್ಮ‌ ಚಿತ್ರಕ್ಕಿದೆ ಅನ್ನುವುದು ಗೊತ್ತಾಗುತ್ತಿದೆ. ಚೌಕಿದಾರ್ ಸಿನಿಮಾದಲ್ಲಿ ಒಂದೊಳ್ಳೆ ಕಲಾವಿದರು ಹಾಗೂ ತಂತ್ರಜ್ಞಾನರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಎಲ್ಲಾ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ. ಇದೊಂದು ಫ್ಯಾಮಿಲಿ ಡ್ರಾಮಾ, ಎಮೋಷನಲ್ ಡ್ರಾಮಾ. ತೆಲುಗಿನಲ್ಲಿ ಹ್ಯಾಟ್ರಿಕ್ ಕೊಟ್ಟೆ. ಸರಿಪೋದ ಶನಿವಾರ, ಲಕ್ಕಿ ಭಾಸ್ಕರ್ ನೂರು ಕೋಟಿ ಕೊಟ್ಟಿವೆ. ಮುಂದಿನ ವರ್ಷ ಕನ್ನಡದಲ್ಲಿ ಹ್ಯಾಟ್ರಿಕ್ ಆಗಲಿ ಎಂದು ತಿಳಿಸಿದರು.

ರಥಾವರ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ‘ಚೌಕಿದಾರ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ‘ಡೈಲಾಗ್ ಕಿಂಗ್’ ಸಾಯಿಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೃಥ್ವಿ ಅಂಬಾರ್, ಧನ್ಯಾ ರಾಮ್‌ಕುಮಾರ್ ಹಾಗೂ ಸಾಯಿಕುಮಾರ್ ಕಾಂಬಿನೇಷನ್ ಸಿನಿಪ್ರಿಯರಿಗೆ ಗಮನವನ್ನಂತೂ ಸೆಳೆದಿದೆ. ಶ್ವೇತಾ, ಸುಧಾರಾಣಿ, ಧರ್ಮ ಸೇರಿದಂತೆ ಮತ್ತಿತರ ತಾರಾಬಳಗ ಚಿತ್ರದಲ್ಲಿದೆ.

‘ಚೌಕಿದಾರ್’ ಸಿನಿಮಾವನ್ನು ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ವಿದ್ಯಾದೇವಿ ನಿರ್ಮಾಣದಲ್ಲಿ ಸಾಥ್ ಕೊಡುತ್ತಿದ್ದಾರೆ. ಸಚಿನ್‌ ಬಸ್ರೂರು ಸಂಗೀತವಿದ್ರೆ, ವಿ. ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ, ಸಂತೋಷ್ ನಾಯಕ್ ಸಾಹಿತ್ಯ ಬರೆದಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣ, ರವಿ ವರ್ಮಾ ಸಾಹಸ ನಿರ್ದೇಶನ ಸಿನಿಮಾಗಿದೆ. ‘ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಲವರ್‌ ಬಾಯ್‌ ಆಗಿದ್ದ ಪೃಥ್ವಿ ಅಂಬಾರ್ ಮಾಸ್ ಲುಕ್ ಕೊಡಲಿದ್ದಾರೆ. ಪೃಥ್ವಿರಾಜ್ ಧಘಾರಿ ಸಹ ನಿರ್ದೇಶನದಲ್ಲಿ ಚೌಕಿದಾರ್ ಚಿತ್ರ ಮೂಡಿ ಬಂದಿದೆ.

ShareTweetSendShare
Join us on:

Related Posts

guru raghavendra swami

Astro- ನಿಮಗೆ ರಾಯರ ದರ್ಶನಕ್ಕೆ ಅನುಗ್ರಹ ಸಿಕ್ಕಿಲ್ಲವೇ.. ಹಾಗಿದ್ದರೆ ಈ ಶ್ಲೋಕ ಹೇಳಿ ಸಾಕು..!!

by admin
July 26, 2026
0

ನಿಮಗೆ ರಾಯರ ದರ್ಶನಕ್ಕೆ ಅನುಗ್ರಹ ಸಿಕ್ಕಿಲ್ಲವೇ.. ಹಾಗಿದ್ದರೆ ಈ ಶ್ಲೋಕ ಹೇಳಿ ಸಾಕು..!! ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿ - ಅದ್ಭುತ ಸ್ಥಳ ಪುರಾಣ ಓಂ...

jandu-kumar-commonwealth-games-para-powerlifting-success

ಎದೆತುಂಬಿ ಹೇಳಿರುವೆ…ಪ್ರೀತಿಯಿಂದ ಬರೆದಿರುವೆ… ಮನವಿಟ್ಟು ಓದಿ… ಇದು ನನ್ನ ಅಂತರಾಳದ ಮಾತು..!

by admin
July 26, 2026
0

ಎದೆತುಂಬಿ ಹೇಳಿರುವೆ...ಪ್ರೀತಿಯಿಂದ ಬರೆದಿರುವೆ... ಮನವಿಟ್ಟು ಓದಿ... ಇದು ನನ್ನ ಅಂತರಾಳದ ಮಾತು..! ಬಹುಶಃ ಅಂದು ನನಗೆ ನಾಲ್ಕೈದು ವರ್ಷ. ಎಲ್ಲ ಮಕ್ಕಳಂತೆ ಓಡಾಡಿಕೊಂಡು ನಾನು ಆಟವಾಡುತ್ತಿದ್ದೆ. ಆದ್ರೆ...

ಜಾಗತಿಕ ಸೆಲೆಬ್ರಿಟಿಗಳ ದಾಖಲೆ ಧೂಳೀಪಟ ಮಾಡಿದ ಪ್ರಧಾನಿ ಮೋದಿ- ಮಧ್ಯರಾತ್ರಿ ಸೃಷ್ಟಿಯಾಯ್ತು ಇತಿಹಾಸ: 30 ಕೋಟಿಗೂ ಹೆಚ್ಚು ವೀಕ್ಷಣೆ ಕಂಡು ಅಬ್ಬರಿಸಿದ ಯುವಜನರೊಂದಿಗೆ ಮೋದಿ ನೇರ ಸಂವಾದ ರೀಲ್

ಜಾಗತಿಕ ಸೆಲೆಬ್ರಿಟಿಗಳ ದಾಖಲೆ ಧೂಳೀಪಟ ಮಾಡಿದ ಪ್ರಧಾನಿ ಮೋದಿ- ಮಧ್ಯರಾತ್ರಿ ಸೃಷ್ಟಿಯಾಯ್ತು ಇತಿಹಾಸ: 30 ಕೋಟಿಗೂ ಹೆಚ್ಚು ವೀಕ್ಷಣೆ ಕಂಡು ಅಬ್ಬರಿಸಿದ ಯುವಜನರೊಂದಿಗೆ ಮೋದಿ ನೇರ ಸಂವಾದ ರೀಲ್

by Shwetha
July 26, 2026
0

ನವದೆಹಲಿ: ದೇಶದಲ್ಲಿ ನೀಟ್ ಪರೀಕ್ಷಾ ಅಕ್ರಮ ಮತ್ತು ಪೇಪರ್ ಲೀಕ್ ವಿವಾದಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಅಕ್ಷರಶಃ ವಿಶ್ವ ದಾಖಲೆ ನಿರ್ಮಿಸಿದ್ದಾರೆ....

ಹೊಸ ಪೀಳಿಗೆ ಪ್ರಶ್ನೆ ಕೇಳುತ್ತಿದೆ, ನಾವು ಉತ್ತರಿಸಲೇಬೇಕು- ಈಗಿನದ್ದು ಕಣ್ಮುಚ್ಚಿ ಪಾಲಿಸುವ ಕಾಲವಲ್ಲ, ತರ್ಕಕ್ಕೆ ಉತ್ತರಿಸುವ ಕಾಲ: ಯುವ ಪೀಳಿಗೆಯ ಪರ ನಿಂತರೆ ಆರ್ ಎಸ್ ಎಸ್ ಮುಖ್ಯಸ್ಥ?

ಹೊಸ ಪೀಳಿಗೆ ಪ್ರಶ್ನೆ ಕೇಳುತ್ತಿದೆ, ನಾವು ಉತ್ತರಿಸಲೇಬೇಕು- ಈಗಿನದ್ದು ಕಣ್ಮುಚ್ಚಿ ಪಾಲಿಸುವ ಕಾಲವಲ್ಲ, ತರ್ಕಕ್ಕೆ ಉತ್ತರಿಸುವ ಕಾಲ: ಯುವ ಪೀಳಿಗೆಯ ಪರ ನಿಂತರೆ ಆರ್ ಎಸ್ ಎಸ್ ಮುಖ್ಯಸ್ಥ?

by Shwetha
July 26, 2026
0

ನವದೆಹಲಿ: ದೇಶಾದ್ಯಂತ ನೀಟ್ ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಯುವಕರು ಸಿಜೆಪಿ ಅಥವಾ ಕಾಕ್ರೋಚ್ ಜನತಾ ಪಾರ್ಟಿ ಹೆಸರಿನಲ್ಲಿ ತೀವ್ರ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ,...

ಪ್ರಶ್ನೆ ಕೇಳಿದ ಕೂಡಲೇ ನಾನು ಹಿಂದೂ ವಿರೋಧಿಯಲ್ಲ- ನಮಗೆ ಇರದ ಧೈರ್ಯ ಇಂದಿನ ವಿದ್ಯಾರ್ಥಿಗಳಿಗಿದೆ: ನೀಟ್ ಅಕ್ರಮದ ವಿರುದ್ಧ ಗುಡುಗಿದ ಕಾಂತಾರ ಲೀಲಾ

ಪ್ರಶ್ನೆ ಕೇಳಿದ ಕೂಡಲೇ ನಾನು ಹಿಂದೂ ವಿರೋಧಿಯಲ್ಲ- ನಮಗೆ ಇರದ ಧೈರ್ಯ ಇಂದಿನ ವಿದ್ಯಾರ್ಥಿಗಳಿಗಿದೆ: ನೀಟ್ ಅಕ್ರಮದ ವಿರುದ್ಧ ಗುಡುಗಿದ ಕಾಂತಾರ ಲೀಲಾ

by Shwetha
July 26, 2026
0

ಬೆಂಗಳೂರು: ದೇಶಾದ್ಯಂತ ಸಂಚಲನ ಮೂಡಿಸಿರುವ ನೀಟ್ ಪರೀಕ್ಷಾ ಅಕ್ರಮ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಯ ಬಗ್ಗೆ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಅತ್ಯಂತ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram