ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನ ಹಲವೆಡೆ 40ಕ್ಕೂ ಹೆಚ್ಚು ರೌಡಿಶೀಟರ್’ಗಳ ಮನೆಗಳ ಮೇಲೆ CCB ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಪರಪ್ಪನ ಅಗ್ರಹಾರ, ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿನ ಮನೆಗಳಲ್ಲಿ ಹೆಚ್ಚಿನ ಪ್ರಮಾಣದ ಮಚ್ಚು, ಲಾಂಗ್ ಸೇರಿದಂತೆ ವಿವಿಧ ಬಗೆಯ ಮಾರಕಾಸ್ತ್ರಗಳು ಪತ್ತೆಯಾಗಿದ್ದು, ಸದ್ಯಕ್ಕೆ ಪೊಲೀಸರು ಅವುಗಳನ್ನು ವಶಕ್ಕೆ ಪಡೆದಿದ್ದಾರೆ. ಹೊಸವರ್ಷಾಚರಣೆ ಹಿನ್ನೆಲೆ ನಗರಾದ್ಯಂತ ಬಿಗಿ ಬಂದೋಬಸ್ತ್ ಮಾಡುವಲ್ಲಿ ಪೊಲೀಸ್ ಇಲಾಖೆಯು ಕಾರ್ಯಪ್ರವೃತ್ತವಾಗಿದೆ.
ಟೆಕ್ ಹಿನ್ನೆಲೆ ಇಲ್ಲದವರಿಗೂ ಕಾಗ್ನಿಜೆಂಟ್‌ನಲ್ಲಿ ಉದ್ಯೋಗ, ಐಐಎಂ ಬೆಂಗಳೂರು ಸೇರಿ 58 ಸಂಸ್ಥೆಗಳ ಪದವೀಧರರ ನೇಮಕ
ಬೆಂಗಳೂರು: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮತ್ತು ತಂತ್ರಜ್ಞಾನ ಸೇವೆ ಒದಗಿಸುವ ಜಾಗತಿಕ ಮಟ್ಟದ ಮುಂಚೂಣಿ ಸಂಸ್ಥೆ ಕಾಗ್ನಿಜೆಂಟ್ ಭಾರತದಲ್ಲಿ ತನ್ನ ಹೊಸ ಟ್ಯಾಲೆಂಟ್ ಆಕ್ಸಿಲರೇಟರ್ ಕಾರ್ಯಕ್ರಮವನ್ನು ಆರಂಭಿಸಿದೆ....








