ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ರಾಷ್ಟ್ರಮಟ್ಟದಲ್ಲಿ ಮಹತ್ವದ 9 ಪ್ರಶಸ್ತಿಗಳನ್ನು ಪಡೆದು ತನ್ನ ಸಾಧನೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸೇವಾ ದಕ್ಷತೆ, ನಾವೀನ್ಯತೆ, ಮತ್ತು ಗ್ರಾಹಕ ಸ್ನೇಹಿ ಉಪಕ್ರಮಗಳಿಗೆ ನೀಡಲ್ಪಟ್ಟ ಈ ಪ್ರಶಸ್ತಿಗಳು ಕೆಎಸ್ಆರ್ಟಿಸಿಯ ಗುಣಮಟ್ಟದ ಸೇವೆಗಳ ಸಂಕೇತವಾಗಿದೆ.
ಪ್ರಶಸ್ತಿಗಳ ವಿವರ:
1. ಅಶ್ವಮೇಧ ಕ್ಲಾಸಿಕ್ ಬಸ್ : ಕೆಎಸ್ಆರ್ಟಿಸಿಯ ಅಶ್ವಮೇಧ ಕ್ಲಾಸಿಕ್ ಬಸ್ಸುಗಳನ್ನು ಪರಿಚಯಿಸಿದ್ದಕ್ಕೆ ಪರಿಣಾಮಕಾರಿ ಸಾರ್ವಜನಿಕ ಸಂಪರ್ಕ ಉಪಕ್ರಮ ಪ್ರಶಸ್ತಿ ಲಭಿಸಿದೆ.
2. ಕಾರ್ಪೊರೇಟ್ ಸಂವಹನ ಮತ್ತು ನಿರ್ವಹಣೆ:
ಅತ್ಯುತ್ತಮ ಕಾರ್ಪೊರೇಟ್ ಸಂವಹನ ಹಾಗೂ ನಿರ್ವಹಣೆಯ ಮಾನದಂಡಗಳನ್ನು ಕಾಯ್ದುಕೊಂಡಿರುವುದಕ್ಕಾಗಿ ಈ ಪ್ರಶಸ್ತಿಯನ್ನು ಪಡೆದಿದೆ.
3. ಆಗ್ನೇಯ ಭಾರತದ ಶ್ರೇಷ್ಠ ಬ್ರಾಂಡ್:
ವರ್ಷದ ಅತ್ಯುತ್ತಮ ಬ್ರಾಂಡ್ ಪ್ರಶಸ್ತಿಯನ್ನು ಪಡೆದು ತನ್ನ ಮಾರ್ಕೆಟಿಂಗ್ ಕೌಶಲ್ಯದ ಸಾಧನೆಯನ್ನು ಗುರುತಿಸಿಕೊಂಡಿದೆ.
4. ಅಂಬಾರಿ ಉತ್ಸವ:
ಅಂಬಾರಿ ಉತ್ಸವಕ್ಕೆ ಅತ್ಯುತ್ತಮ ಬ್ರಾಂಡ್ ಅನುಭವ ಪ್ರಶಸ್ತಿಯನ್ನು ನೀಡಿ, ಪ್ರವಾಸೋದ್ಯಮಕ್ಕೆ ನೀಡಿದ ಕೊಡುಗೆ ಗುರುತಿಸಲಾಗಿದೆ.
5. ಪಲ್ಲಕ್ಕಿ ಬಸ್:
ಪಲ್ಲಕ್ಕಿ ಬಸ್ ಸೇವೆಗೆ ಅತ್ಯುತ್ತಮ ಗ್ರಾಹಕ ಸ್ವೀಕೃತಿ ಪ್ರಶಸ್ತಿಯನ್ನು ನೀಡಿ, ಗ್ರಾಮೀಣ ಹಾಗೂ ನಗರ ಬಸ್ ಸೇವೆಗಳಲ್ಲಿ ಹೊಸ ಹೆಜ್ಜೆಯನ್ನು ಮುನ್ನಡೆಸಿದೆ.
ಹಲವು ನವೀನ ತಂತ್ರಜ್ಞಾನ, ಸುಸಜ್ಜಿತ ಸೇವೆಗಳು, ಮತ್ತು ಗ್ರಾಹಕ ಸ್ನೇಹಿ ಪ್ರಯತ್ನಗಳಿಂದಾಗಿ ಉಳಿದ ನಾಲ್ಕು ವಿಭಿನ್ನ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪಡೆದಿದೆ. KSRTC ತನ್ನ ಸೇವಾ ಕಾರ್ಯಕ್ಷಮತೆ ಮತ್ತು ಗುಣಮಟ್ಟದಿಂದ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.








