ಬೆಂಗಳೂರು : ಕೊರೊನಾ ಲಾಕ್ ಡೌನ್ ದೇಶದ ಆರ್ಥಿಕತೆಗೆ ಭಾರಿ ಹೊಡೆತ ನೀಡಿದೆ. ಇದೇ ಕೊರೊನಾ ಬಡ ಜನರ ಜೀವನವನ್ನು ಬೀದಿಗೆ ಬಂದು ನಿಲ್ಲಿಸಿದೆ. ಆದ್ರೆ ಪರಿಸರಕ್ಕೆ ಮಾತ್ರ ಹೆಮ್ಮಾರಿ ವೈರಸ್ ವರವಾಗಿ ಪರಿಣಮಿಸಿದೆ. ಹೌದು..! ಲಾಕ್ ಡೌನ್ ವೇಳೆ ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಕೆಲ ಆರೋಗ್ಯಕರ ಬದಲಾವಣೆಗಳಾಗಿವೆ. ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಲಾಕ್ ಡೌನ್ ಅವಧಿಯಲ್ಲಿ ತೀರಾ ಕಡಿಮೆಯಾಗಿದೆ.
ಆದ್ರೆ ಇದೀಗ ಅನ್ ಲಾಕ್ ಜಾರಿ ಬಳಿಕ ಮತ್ತೆ ನಗರದ ಕೆಲವು ಏರಿಯಾಗಳಲ್ಲಿ ಶಬ್ದ ಮಾಲಿನ್ಯ ಹೆಚ್ಚಳವಾದರೆ ಇನ್ನು ಕೆಲವೆಡೆ ನಗರದಲ್ಲಿ ಶಬ್ದ ಮಾಲಿನ್ಯ ಕಡಿಮೆಯಾಗಿರುವುದು ಕಂಡು ಬಂದಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಲಾಕ್ ಡೌನ್ ಅವಧಿ ಹಾಗೂ ಅನ್ ಲಾಕ್ ಜಾರಿ ದಿನಗಳಲ್ಲಿ ನಗರದಲ್ಲಿ ಉಂಟಾಗುತ್ತಿರುವ ಶಬ್ದ ಮಾಲಿನ್ಯ ಪ್ರಮಾಣದ ಬಗ್ಗೆ ಅಧ್ಯಯನ ನಡೆಸಿದೆ.
ಬೆಂಗಳೂರು ನಗರದ ಕೈಗಾರಿಕಾ ಪ್ರದೇಶ, ವಸತಿ ಪ್ರದೇಶ ಹಾಗೂ ಸೂಕ್ಷ್ಮಪ್ರದೇಶಗಳು ಅಧ್ಯಯನ ನಡೆಸಲಾಗಿದೆ. ಅನ್ ಲಾಕ್ ಅವಧಿಯಲ್ಲಿ ಕೆಲವು ಕಡೆ ಶಬ್ದ ಮಾಲಿನ್ಯ ಹೆಚ್ಚಾದರೆ ಇನ್ನೂ ಕೆಲವು ಕಡೆ ಮಾಲಿನ್ಯ ಕಡಿಮೆಯಾಗಿರುವುದು ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ.
ಅಧ್ಯಯನದ ಪ್ರಕಾರ, ವೈಟ್ ಫೀಲ್ಡ್ ಕೈಗಾರಿಕಾ ಪ್ರದೇಶದಲ್ಲಿ ಲಾಕ್ ಡೌನ್ ವೇಳೆ 59.3 ಡೆಸಿಬಲ್ ಇದ್ದ ಮಾಲಿನ್ಯ, ಸಡಿಲಿಕೆ ಬಳಿಕ 64.1 (8.1) ಏರಿಕೆಯಾಗಿದೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 57.1ರಷ್ಟಿದ್ದ ಮಾಲಿನ್ಯ ಇದೀಗ 63.3ಕ್ಕೆ ಏರಿದೆ. ಚರ್ಚ್ ಸ್ಟ್ರೀಟ್ ರಸ್ತೆ 58.3 ಜಾಗದಲ್ಲಿ 63.2 ಬಂದಿದೆ. ಯಶವಂತಪುರ 65ರಷ್ಟಿದ್ದ ಶಬ್ದ ಮಾಲಿನ್ಯ 69.2 ಹೆಚ್ಚಳವಾಗಿದೆ.
ಇನ್ನು ದೊಮ್ಮಲೂರಿನಲ್ಲಿ ಲಾಕ್ ಡೌನ್ ವೇಳೆ 59.1ರಷ್ಟಿದ್ದ ಮಾಲಿನ್ಯ ಈಗ 63.9ರಷ್ಟಾಗಿದೆ. ಮೈಸೂರು ರೋಡ್ 51.9 ರಷ್ಟಿದ್ದ ಶಬ್ದದ ಡೆಸಿಬಲ್ 55.5ಕ್ಕೆ ಬಂದು ನಿಂತಿದೆ.








