ADVERTISEMENT
Thursday, August 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಐನೂರು ರೂಪಾಯಿಯಲ್ಲಿ ಬದುಕು ಕಟ್ಟಿದವ ಸಾವಿರ ಕೋಟಿಯ ಒಡೆಯನಾದ !

admin by admin
July 9, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಐನೂರು ರೂಪಾಯಿಯಲ್ಲಿ ಬದುಕು ಕಟ್ಟಿದವ ಸಾವಿರ ಕೋಟಿಯ ಒಡೆಯನಾದ !

ಮುಂಬೈ, ಜುಲೈ9: ಜೀವನದಲ್ಲಿ ನಾವು ಏನಾದರೂ ಸಾಧಿಸಬೇಕು ಎಂದು ಹೊರಟಾಗ ಬಹಳಷ್ಟು ಅಡೆತಡೆಗಳು, ನಮ್ಮನ್ನು ಮೇಲಕ್ಕೆ ಏರದಂತೆ ತಡೆಯುವ ಜನರು, ಅನೇಕ ಕಷ್ಟನಷ್ಟಗಳು ಎದುರಾಗುತ್ತದೆ. ಆದರೆ ಸಾಧಿಸಲೇ ಬೇಕು ಎನ್ನುವ ಮನಸ್ಥಿತಿಯೊಂದಿದ್ದರೆ, ನಮ್ಮ ಯಶಸ್ಸನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ‌
ತನ್ನ ಬದುಕಲ್ಲಿ ಎಲ್ಲವನ್ನೂ ಕಳೆದುಕೊಂಡು, ಪ್ರಾರಂಭದಿಂದಲೇ ತನ್ನ ಬದುಕನ್ನು ಆರಂಭಿಸಿದ ವ್ಯಕ್ತಿಯೊಬ್ಬರ ಕಥೆ ಇದು.
ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆ ಅವರ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿತು. ಎಲ್ಲವನ್ನೂ ಕಳೆದುಕೊಂಡು ಬರಿಕೈನಲ್ಲಿ ಬೀದಿಗೆ ಬಂದಿದ್ದ ಆತ ಇಂದು ವರ್ಷಕ್ಕೆ 1,000 ಕೋಟಿ ರೂ ಆದಾಯ ಗಳಿಸುವ ಸಂಸ್ಥೆಗಳ ಒಡೆಯ.

Related posts

world-elephant-day-vantara-conservation-initiative

ವಿಶ್ವ ಆನೆ ದಿನ: ವಂತಾರಾದ ಆನೆ ಸಂರಕ್ಷಣಾ ಅಭಿಯಾನ; ದೇಶ-ವಿದೇಶಗಳಲ್ಲಿ ಸೇವೆ ವಿಸ್ತರಣೆ

August 12, 2026
crossing-paths-documentary-samyukta-hornad-human-elephant-conflict-karnataka

ಕ್ರಾಸಿಂಗ್ ಪಾತ್ಸ್ (CROSSING PATHS): ಮಾನವ-ಆನೆ ಸಂಘರ್ಷದ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಯುಕ್ತಾ ಹೊರನಾಡು ನಿರ್ದೇಶನ

August 12, 2026


ನಿತಿನ್ ಷಾ ಮಹಾರಾಷ್ಟ್ರದ ಸಣ್ಣ ವ್ಯಾಪಾರ ಕುಟುಂಬದಲ್ಲಿ ಜನಿಸಿದ್ದರು. ಅಲ್ಲಿ ಅವರ ತಂದೆ ಅಗ್ನಿ ಶಾಮಕಗಳನ್ನು ಸ್ಥಳೀಯವಾಗಿ ಪೂರೈಸುವಂತ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಜೀವನವು ಚೆನ್ನಾಗಿ ನಡೆಯುತಿತ್ತು. ಚಿಕ್ಕಂದಿನಿಂದಲೇ ಚುರುಕುತನದಿಂದ ಕೂಡಿದ್ದ ನಿತಿನ್ ಶಾಲೆಯಿಂದ ಮನೆಗೆ ಹಿಂದಿರುಗಿದ ಮೇಲೆ ಏನನ್ನಾದರೂ ಮಾಡಲು ಯೋಚಿಸುತ್ತಿದ್ದರು ಮತ್ತು ಅವರು ಆಗಾಗ್ಗೆ ತನ್ನ ತಂದೆಯೊಂದಿಗೆ ಅಂಗಡಿಯಲ್ಲಿ ಸಮಯ ಕಳೆಯುತ್ತಿದ್ದರು
ನಿತಿನ್ ಕಾಲೇಜಿಗೆ ಸೇರಿದಾಗಲೂ ಈ ಅಭ್ಯಾಸವೇ ಮುಂದುವರೆಯಿತು. ಅವರು ತನ್ನ ಎಲ್ಲಾ ರಜಾದಿನಗಳನ್ನು ತನ್ನ ತಂದೆಯನ್ನು ಗಮನಿಸುತ್ತಾ ಮತ್ತು ವ್ಯಾಪಾರದ ತಂತ್ರಗಳನ್ನು ಕಲಿಯುತ್ತಾ ಕಳೆದರು. ಆದರೆ ಅವರು ಕಾಲೇಜು ಮುಗಿಸಿ ತನ್ನ ತಂದೆಯ ವ್ಯವಹಾರದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಪ್ರಾರಂಭಿಸುವ ಹೊತ್ತಿಗೆ ಅವರ ಬದುಕಲ್ಲಿ ಅಲ್ಲೋಲ ಕಲ್ಲೋಲವೇ ಉಂಟಾಯಿತು. ನಿತಿನ್ ಅವರ ಹಿರಿಯ ಸಹೋದರ ಮೋಸ ಮಾಡಿ ತಂದೆಯ ವ್ಯವಹಾರವನ್ನು ಸಂಪೂರ್ಣ ತನ್ನ ವಶಮಾಡಿ ಅವರನ್ನು ಮನೆ ಬಿಟ್ಟು ಓಡಿಸಿದ. ಮೆಕ್ಯಾನಿಕಲ್ ಎಂಜಿನಿಯರಿಂಗ್‌ ನಲ್ಲಿ ಡಿಪ್ಲೊಮಾ ಮುಗಿಸಿದ ನಂತರ ತಂದೆಯ ವ್ಯವಹಾರವನ್ನು ವಿಸ್ತರಿಸುವುದಾಗಿ ಕನಸು ಕಾಣುತ್ತಾ ಬೆಳೆದಿದ್ದ ನಿತಿನ್ ಗೆ ಆ ಸಮಯ ಬಂದಾಗ ಮನೆಯೂ ಸೇರಿದಂತೆ ಯಾವುದು ಇರಲಿಲ್ಲ.
ಅವರ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ, ಅವರು ಖಿನ್ನತೆಗೆ ಬಲಿಯಾಗುತ್ತಿದ್ದರು ಅಥವಾ ಜೀವನವನ್ನು ಎದುರಿಸಲು ಸಾಧ್ಯವಾಗದೇ ಬದುಕನ್ನೇ ಕೊನೆಗೊಳಿಸುತ್ತಿದ್ದರೋ ಎನೋ, ಆದರೆ ನಿತಿನ್ ತಾನು ‌ಕಂಡಿದ್ದ ಕನಸನ್ನು ನನಸಾಗಿಸುವ ಧೈರ್ಯವನ್ನು ಹೊಂದಿದ್ದರು. ಅವರು ತಮ್ಮ ಜೇಬನ್ನು ಪರಿಶೀಲಿಸಿದಾಗ ಅದರಲ್ಲಿ ಕೇವಲ 20 ರೂಪಾಯಿ ನೋಟು ಮಾತ್ರ ಇತ್ತು. ಇಷ್ಟು ಸಣ್ಣ ಮೊತ್ತದಿಂದ ತಾನು ಏನನ್ನಾದರೂ ಮಾಡಬಹುದೇ ಎಂದು ನಿತಿನ್ ಯೋಚಿಸಿದರು ಮತ್ತು ಸಂಕೋಚದಿಂದ, ಅವರ ಸ್ನೇಹಿತರನ್ನು ಸಂಪರ್ಕಿಸಿ ನಡೆದ ಘಟನೆಗಳನ್ನು ಅವರಿಗೆ ವಿವರಿಸಿದರು.
ನಿತಿನ್ ಸ್ನೇಹಿತರು ಅವರಿಗೆ ಆಗಿರುವ ಮೋಸವನ್ನು ತಿಳಿದು ಅವರ ಬೆಂಬಲಕ್ಕೆ ‌ನಿಂತರು. ಸ್ನೇಹಿತರಿಂದ 500ರೂ ಮೊತ್ತವನ್ನು ಪಡೆದ ನಿತಿನ್ ಅದರಲ್ಲಿ ಕೆಲವು ದಿನಗಳವರೆಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಂಡರು. ಬಳಿಕ ಅವರಿಗೆ ಮುಂಬೈನ ಆಟೋ ಗ್ಯಾರೇಜ್‌ನಲ್ಲಿ ಕೆಲಸವೊಂದು ಸಿಕ್ಕಿತು. ಅವರು ಆ ಕೆಲಸದಲ್ಲಿ ಸಿಗುತ್ತಿದ್ದ ಸಂಬಳದಲ್ಲಿ ಹಣವನ್ನು ಉಳಿಸಿ ತಮ್ಮದೇ ಆದ ಸ್ವಂತ ವ್ಯವಹಾರವನ್ನು ಪ್ರಾರಂಭಿಸುವ ಕುರಿತು ಯೋಚನೆ ಮಾಡಿದರು. ನಂತರ ಅವರು ತಮ್ಮ ತಂದೆ ಜೊತೆಗೆ ಕೆಲಸ ಮಾಡುವಾಗ ಪರಿಚಯವಿದ್ದ ವ್ಯಕ್ತಿಯೊಂದಿಗೆ ಮಾತುಕತೆ ನಡೆಸಿದರು. ಈ ವ್ಯಕ್ತಿಯು ಪರಮಾಣು ಇಂಧನ ಇಲಾಖೆಯಲ್ಲಿ ಹಿರಿಯ ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದರು ಮತ್ತು ನಿತಿನ್‌ಗೆ ತನ್ನ ಇಲಾಖೆಯಲ್ಲಿ ಅಗ್ನಿಶಾಮಕ ಯಂತ್ರಗಳ ನಿರ್ವಹಣಾ ಒಪ್ಪಂದವನ್ನು ಕೊಟ್ಟರು.


ಆ ಒಪ್ಪಂದವು ನಿತಿನ್‌ ಬದುಕಲ್ಲಿ ಬದಲಾವಣೆಗೆ ಕಾರಣವಾಯಿತು. ಮೊದಲ ನಿಯೋಜನೆಯ ಯಶಸ್ಸಿನಿಂದ ನಿರಾಳರಾದ ಅವರು ಸಹಾಯಕರಾಗಿ ಮೂರು ಜನರನ್ನು ನೇಮಿಸಿಕೊಂಡರು. ಆ ಸಮಯದಲ್ಲಿ ಬಹಳ ಕಡಿಮೆ ಉಪಕರಣಗಳನ್ನು ಅವರು ಹೊಂದಿದ್ದ ಕಾರಣ ಸಂಪನ್ಮೂಲಗಳ ಕೊರತೆಯನ್ನು ಎದುರಾದರೂ ಅದನ್ನು ತನ್ನ ಬುದ್ಧಿವಂತಿಕೆಯಿಂದ ಸರಿದೂಗಿಸುವಲ್ಲಿ‌ ಸಫಲರಾದ ಅವರು ಅಲ್ಲಿಂದ ಹಿಂತಿರುಗಿ ನೋಡಲಿಲ್ಲ. ಕೆಲವೇ ತಿಂಗಳಲ್ಲಿ ಅವರು ಅಗ್ನಿಶಾಮಕ ಉತ್ಪಾದನಾ ಉದ್ಯಮಕ್ಕೆ ಜಾಗವನ್ನು ಖರೀದಿಸಿ ಅಡಿಪಾಯ ಹಾಕಿದರು.
ಹಲವಾರು ಸಣ್ಣ ಕಾರ್ಯಯೋಜನೆಯ ನಂತರ ನಿತಿನ್ ಕಂಪನಿಯು 1986 ರಲ್ಲಿ ಒಎನ್‌ಜಿಸಿಯ ನಿರ್ವಹಣೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಒಂದು ಒಪ್ಪಂದವು ನಿತಿನ್‌ರ ಕಂಪನಿಯ ಮಹತ್ವದ ತಿರುವಿಗೆ ಕಾರಣವಾಯಿತು.
1986 ರ ಅಂತ್ಯದ ವೇಳೆಗೆ ಕಂಪನಿಯು 7 ಕೋಟಿ ರೂ.ಗಳ ವಹಿವಾಟಿನ ಗಡಿ ದಾಟಿತು‌ ಮತ್ತು 1987 ರಲ್ಲಿ ನಿತಿನ್ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದರು. ಗುಜರಾತ್‌ನ ಉಮರ್‌ಗಾಂವ್‌ನಲ್ಲಿ 1 ಕೋಟಿ ರೂ ಮತ್ತು 25 ಉದ್ಯೋಗಿಗಳ ಹೂಡಿಕೆಯೊಂದಿಗೆ ಹೊಸ ಘಟಕವನ್ನು ಸ್ಥಾಪಿಸಿದರು. ಇದು ಅವರ ಬಹಳ ದಿಟ್ಟ ಕ್ರಮವಾಗಿತ್ತು ಏಕೆಂದರೆ ಮುಂಬೈನಲ್ಲಿ ಅವರ ಘಟಕವು ಅವರ ಹಲವಾರು ಸ್ಪರ್ಧಿಗಳಿಗಿಂತ ಇನ್ನೂ ಸಣ್ಣ ಮಟ್ಟದಲ್ಲಿ‌ ಇತ್ತು.


ನಿತಿನ್ ತನ್ನ ವ್ಯವಹಾರದಲ್ಲಿ ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಂಡರು ಮತ್ತು ಅದನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋದರು. ಮತ್ತೊಂದು ಪ್ರಮುಖ ಸಾಧನೆಯಲ್ಲಿ, ಅವರು 1988 ರಲ್ಲಿ ಗೋವಾದಲ್ಲಿ ತಮ್ಮ ಮೂರನೇ ಘಟಕವನ್ನು ತೆರೆದರು ಮತ್ತು ನಿರ್ವಹಣಾ ಒಪ್ಪಂದಗಳ ಜೊತೆಗೆ ಸಲಕರಣೆಗಳ ವಿನ್ಯಾಸ ಮತ್ತು ಉತ್ಪಾದನಾ ಸೇವೆಗಳನ್ನು ಸೇರಿಸಿದರು. 1989 ರಲ್ಲಿ, ಬ್ರಿಟಿಷ್ ಕಂಪನಿ ಅಪೊಲೊ ಫೈರ್ ಡಿಟೆಕ್ಟರ್ಸ್ ನಿತಿನ್ ಅವರೊಂದಿಗೆ ಕೈಜೋಡಿಸಿತು. ನಂತರ ಜೂನ್ 2007 ರಲ್ಲಿ 65 ಕೋಟಿ ರೂ.ಯ ಐಪಿಒ ಪ್ರಾರಂಭಿಸಿತು.‌
2008, ಅವರ ಸಹೋದರ ಸಂಸ್ಥೆ ನಿತಿನ್ ವೆಂಚರ್ಸ್ ಯುಎಇಯಿಂದ ಕಂಪನಿಯಲ್ಲಿ ಷೇರುಗಳನ್ನು ಖರೀದಿಸಲು ಪ್ರಾರಂಭಿಸಿತು ಮತ್ತು 2010 ರ ಹೊತ್ತಿಗೆ ಅವರು ಅದನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡರು. ಈ ಕ್ರಮವು ಅಬುಧಾಬಿ, ದುಬೈ ಮತ್ತು ಶಾರ್ಜಾದಲ್ಲಿ ಅಗ್ನಿ ಸುರಕ್ಷತಾ ಸಾಧನಗಳೊಂದಿಗೆ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ನಿತಿನ್ ಗೆ ಸಹಾಯ ಮಾಡಿತು. ಇತ್ತೀಚೆಗೆ, ಅವರು ಮತ್ತೊಂದು ಸಾಹಸೋದ್ಯಮ ಕಂಪನಿಯನ್ನು ಪ್ರಾರಂಭಿಸಿದ್ದಾರೆ, ಅದರ ಮೂಲಕ ಅವರು ಯುರೋಪಿಯನ್ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿದ್ದಾರೆ.
ಇಂದು, ಈ ಕಂಪನಿಯು ಜಡ ಅನಿಲಗಳು, ರಾಸಾಯನಿಕ ಅನಿಲಗಳು, ನೀರು ಮತ್ತು ಎಲ್ಲಾ ರೀತಿಯ ಅಗ್ನಿ ಸುರಕ್ಷತಾ ಉತ್ಪನ್ನಗಳನ್ನು ನಿರ್ವಹಿಸುವ ವಿಶ್ವದ ಏಕೈಕ ಕಂಪನಿಯಾಗಿದೆ. ಕೇವಲ 500 ರೂ.ಗಳಿಂದ ತನ್ನ ಬದುಕನ್ನು ಪ್ರಾರಂಭಿಸಿದ ನಿತಿನ್ ಅವರ ಕಂಪನಿಯು ಇಂದು ವಾರ್ಷಿಕ 1,000 ಕೋಟಿ ರೂ ಆದಾಯ ಗಳಿಸುತ್ತಿದೆ.

Tags: fire-productionindiaindustryInspiremumbainithinshah
ShareTweetSendShare
Join us on:

Related Posts

world-elephant-day-vantara-conservation-initiative

ವಿಶ್ವ ಆನೆ ದಿನ: ವಂತಾರಾದ ಆನೆ ಸಂರಕ್ಷಣಾ ಅಭಿಯಾನ; ದೇಶ-ವಿದೇಶಗಳಲ್ಲಿ ಸೇವೆ ವಿಸ್ತರಣೆ

by admin
August 12, 2026
0

ವಿಶ್ವ ಆನೆ ದಿನ: ವಂತಾರಾದ ಆನೆ ಸಂರಕ್ಷಣಾ ಅಭಿಯಾನ; ದೇಶ-ವಿದೇಶಗಳಲ್ಲಿ ಸೇವೆ ವಿಸ್ತರಣೆ   ಜಾಮ್‌ನಗರ, ಆಗಸ್ಟ್ 12: ವಿಶ್ವ ಆನೆ ದಿನದ ಸಂದರ್ಭದಲ್ಲಿ ಅನಂತ್ ಅಂಬಾನಿ ಆರಂಭಿಸಿದ ವಂತಾರಾ ಸಂಸ್ಥೆಯು ಆನೆಗಳ ಸಂರಕ್ಷಣೆ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದಂತೆ ವಿವಿಧ ಉಪಕ್ರಮಗಳನ್ನು ಹಂಚಿಕೊಂಡಿದೆ. ಆನೆಗಳ ಆರೈಕೆ, ಮಾವುತರಿಗೆ ತರಬೇತಿ, ಸಂರಕ್ಷಣೆಗೆ ಸಂಬಂಧಿಸಿದ ಜ್ಞಾನ ವಿನಿಮಯ ಹಾಗೂ ಮಾನವ-ಆನೆ ಸಂಘರ್ಷವನ್ನು ಕಡಿಮೆ ಮಾಡುವುದಕ್ಕೆ ವಂತಾರಾ ಭಾರತದ ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಕಾರ್ಯ ನಿರ್ವಹಿಸುತ್ತಿದೆ.  ವಂತಾರಾದಲ್ಲಿ ಸದ್ಯಕ್ಕೆ 260ಕ್ಕೂ ಹೆಚ್ಚು ಏಷ್ಯನ್ ಆನೆಗಳನ್ನು ಆರೈಕೆ ಮಾಡಲಾಗುತ್ತಿದೆ. ಇದು 'ಗೌರಿ'ಯಿಂದ ಆರಂಭವಾಗಿತ್ತು, ಇದನ್ನು ಅನಂತ್ ಅಂಬಾನಿ ಮೊದಲು ರಕ್ಷಿಸಿದ್ದರು. ಇದರ ನಂತರ ಆನೆಗಳಿಗೆ ವಿಶೇಷ ಆರೈಕೆ ಮತ್ತು ಗೌರವಯುತ ಜೀವನವನ್ನು ಖಚಿತಪಡಿಸುವ ನಿಟ್ಟಿನಲ್ಲಿ ಈ ಹೆಜ್ಜೆಯು ನಿರಂತರವಾಗಿ ಮುಂದುವರಿದಿದೆ.  ಅನಂತ್ ಅಂಬಾನಿ ಅವರು ಮಾತನಾಡಿ, "ಆನೆಗಳು ನನ್ನ ಹೃದಯದಲ್ಲಿ ಮತ್ತು ವಂತಾರಾದ ಪಯಣದಲ್ಲಿ ಸದಾ ವಿಶೇಷ ಸ್ಥಾನವನ್ನು ಹೊಂದಿವೆ. ಪ್ರತಿ ಆನೆಗೂ ತನ್ನದೇ ಆದ ಕಥೆಯಿದೆ ಮತ್ತು ಪ್ರತಿ ರಕ್ಷಣೆಯು ಅವುಗಳ ಆರೈಕೆಯ ಜವಾಬ್ದಾರಿಯ ಅರಿವನ್ನು ಮೂಡಿಸುತ್ತದೆ. ಗೌರಿಯ ರಕ್ಷಣೆಯಿಂದ ಆರಂಭವಾದ ಈ ಪಯಣ ಈಗ ಆನೆಗಳ ಕಲ್ಯಾಣ, ಅವುಗಳನ್ನು ಆರೈಕೆ ಮಾಡುವವರಿಗೆ ಬೆಂಬಲ, ಜ್ಞಾನ ಹಂಚಿಕೆ ಮತ್ತು ಭಾರತ ಹಾಗೂ ವಿಶ್ವದಾದ್ಯಂತ ಸಂರಕ್ಷಣಾ ಪ್ರಯತ್ನಗಳವರೆಗೆ ತಲುಪಿದೆ. ವಿಶ್ವ ಆನೆ ದಿನದಂದು ಈ ಅದ್ಭುತ ಜೀವಿಗಳನ್ನು ಗೌರವಿಸುತ್ತಾ ಅವುಗಳ ಉತ್ತಮ ಭವಿಷ್ಯಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ನಮ್ಮ ಬದ್ಧತೆಯನ್ನು ಮತ್ತೊಮ್ಮೆ ಹೇಳುತ್ತೇವೆ," ಎಂದರು.   ಜೈಪುರದ ಆನೆ ಗ್ರಾಮದಲ್ಲಿ ವಿಶೇಷ ಸೌಲಭ್ಯಗಳು  ರಾಜಸ್ಥಾನ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವ ಸಂಜಯ್ ಶರ್ಮಾ ಅವರು ವಿಶ್ವ ಆನೆ ದಿನದ ಸಂದರ್ಭದಲ್ಲಿ ಜೈಪುರ್ ಆನೆ ಗ್ರಾಮದಲ್ಲಿ ಆನೆಗಳ ಆರೈಕೆ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ವಂತಾರಾದೊಂದಿಗೆ ಸಹಕಾರ ನೀಡುವುದಾಗಿ ಘೋಷಿಸಿದ್ದಾರೆ. ಇದರಡಿಯಲ್ಲಿ ಆಧುನಿಕ ಆನೆ ಚಿಕಿತ್ಸಾ ಮತ್ತು ಆರೈಕೆ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು. ಇದರಲ್ಲಿ ಆಸ್ಪತ್ರೆ, ಪೋಷಕಾಂಶ ಕೇಂದ್ರ ಮತ್ತು ಜಲಚಿಕಿತ್ಸಾ (ಹೈಡ್ರೋಥೆರಪಿ) ಸೌಲಭ್ಯಗಳು ಸೇರಿವೆ. ವಯಸ್ಸಿನಲ್ಲಿ ಹಿರಿಯ ಆನೆಗಳಿಗಾಗಿ ಪ್ರತ್ಯೇಕ ನಿವೃತ್ತಿ ಮತ್ತು ಆರೈಕೆ ಕೇಂದ್ರವನ್ನೂ ನಿರ್ಮಿಸಲಾಗುವುದು.  ದೇಶದ ನಾಲ್ಕು ರಾಜ್ಯಗಳಲ್ಲಿ ಆನೆ ಕಲ್ಯಾಣ ಕಾರ್ಯಕ್ರಮ  ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರ ಮತ್ತು ಅಂಡಮಾನ್-ನಿಕೋಬಾರ್ ದ್ವೀಪ ಸಮೂಹಗಳಲ್ಲಿ ರಾಜ್ಯ ಅರಣ್ಯ ಇಲಾಖೆಗಳೊಂದಿಗೆ ಕೈಜೋಡಿಸಿ ವಂತಾರಾ ಆನೆ ಕಲ್ಯಾಣ ಔಟ್‌ರೀಚ್ ಕಾರ್ಯಕ್ರಮವನ್ನು ಪೂರ್ಣಗೊಳಿಸಿದೆ. ಇದರ ಅಡಿಯಲ್ಲಿ 182 ಆನೆಗಳು ಮತ್ತು 242 ಮಾವುತರನ್ನು ಒಳಗೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಆನೆಗಳ ಆರೋಗ್ಯ, ಮಾನವೀಯ ರೀತಿಯಲ್ಲಿ ಆರೈಕೆ, ಪ್ರಥಮ ಚಿಕಿತ್ಸೆ ಮತ್ತು ಅತ್ಯುತ್ತಮ ನಿರ್ವಹಣೆಗೆ ಸಂಬಂಧಿಸಿದ ತರಬೇತಿಗಳನ್ನು ನೀಡಲಾಗಿದೆ. ಪಶುವೈದ್ಯಕೀಯ ಹಾಗೂ ಕಲ್ಯಾಣ ಕಿಟ್‌ಗಳೊಂದಿಗೆ ಪೌಷ್ಟಿಕಾಂಶದ ಬೆಂಬಲವನ್ನೂ ಒದಗಿಸಲಾಗಿದೆ.   ಮಕ್ಕಳಲ್ಲಿ ಆನೆಗಳ ಬಗ್ಗೆ ಸಂವೇದನೆಯನ್ನು ಹೆಚ್ಚಿಸಲು ವಂತಾರಾ 'ಮೈ ಫ್ರೆಂಡ್ ಲೀಲಾವತಿ' ಸಾಮಾಜಿಕ ಜಾಲತಾಣ ಅಭಿಯಾನವನ್ನೂ ಆರಂಭಿಸಿದೆ. ಇದರ ಮೂಲಕ 'ಲೀಲಾವತಿ' ಹೆಸರಿನ ಹೆಣ್ಣಾನೆಯ ಕಥೆಯ ಮೂಲಕ ಮಕ್ಕಳಿಗೆ ದಯೆ, ಕರುಣೆ ಮತ್ತು ಪ್ರಾಣಿಗಳ ಗೌರವದ ಸಂದೇಶವನ್ನು ಸಾರಲಾಗುತ್ತಿದೆ.   ಮಾನವ-ಆನೆ ಸಂಘರ್ಷ, ಜಾಗತಿಕ ಸಹಕಾರ  ಮಾನವ ಆನೆ ಸಂಘರ್ಷವನ್ನು ಕಡಿಮೆ ಮಾಡಲು ವಂತಾರಾ ಎಲಿಫೆಂಟ್ ಪ್ರೊಟೆಕ್ಷನ್ ಇನಿಷಿಯೇಟಿವ್ (EPI) ಫೌಂಡೇಷನ್‌ಗೂ ಅನುದಾನ ನೀಡುತ್ತಿದೆ. ಇದರ ಮೂಲಕ ಏಷ್ಯಾ ಮತ್ತು ಆಫ್ರಿಕಾದ ಆನೆಗಳಿರುವ ದೇಶಗಳ ತಜ್ಞರು, ಸಂರಕ್ಷಣೆ ಮಾಡುವವರು ಮತ್ತು ಯುವಕರನ್ನು 2027ರ ಮಾರ್ಚ್‌ನಲ್ಲಿ ಬ್ಯಾಂಕಾಕ್‌ನಲ್ಲಿ ನಡೆಯುವ ಜಾಗತಿಕ ಸಮ್ಮೇಳನಗಳಲ್ಲಿ ಭಾಗವಹಿಸಲು ಬೆಂಬಲ ನೀಡಲಾಗುತ್ತದೆ. ಇದರೊಂದಿಗೆ ಇಪಿಐ ಯೂಥ್ ಅಂಬಾಸಿಡರ್ಸ್ ಪ್ರೋಗ್ರಾಂ ಅನ್ನು ಮೊದಲ ಬಾರಿಗೆ ಭಾರತಕ್ಕೂ ವಿಸ್ತರಿಸಲು ಸಹಾಯ ಮಾಡಲಾಗುವುದು.   ವಂತಾರಾದ ಪ್ರಕಾರ, ತಳಮಟ್ಟದಲ್ಲಿ ಮಾನವ-ಆನೆ ಸಂಘರ್ಷದ ಘಟನೆಗಳನ್ನು ಎದುರಿಸಲು ಕ್ಷಿಪ್ರವಾಗಿ ಪ್ರತಿಕ್ರಿಯೆ ನೀಡುವ ಪಶುವೈದ್ಯಕೀಯ ತಂಡಗಳು, ಥರ್ಮಲ್ ಡ್ರೋನ್ ಕಣ್ಗಾವಲು ಮತ್ತು ಸಮುದಾಯ ಜಾಗೃತಿ ಕಾರ್ಯಕ್ರಮಗಳನ್ನು ಬಳಸಿಕೊಳ್ಳಲಾಗುತ್ತಿದೆ. ಗಾಯಗೊಂಡ ಆನೆಗಳಿಗೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ನೆರವು ನೀಡುವುದರ ಜೊತೆಗೆ ಮಾನವರು ಮತ್ತು ಆನೆಗಳ ನಡುವೆ ದೀರ್ಘಕಾಲದ ಉತ್ತಮ ಸಹ-ಅಸ್ತಿತ್ವವನ್ನು ಉತ್ತೇಜಿಸುವುದು ಈ ಪ್ರಯತ್ನಗಳ ಮುಖ್ಯ ಉದ್ದೇಶವಾಗಿದೆ.  

crossing-paths-documentary-samyukta-hornad-human-elephant-conflict-karnataka

ಕ್ರಾಸಿಂಗ್ ಪಾತ್ಸ್ (CROSSING PATHS): ಮಾನವ-ಆನೆ ಸಂಘರ್ಷದ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಯುಕ್ತಾ ಹೊರನಾಡು ನಿರ್ದೇಶನ

by admin
August 12, 2026
0

'ವಿಶ್ವ ಆನೆಗಳ ದಿನ'ದಂದು ಅನಾವರಣಗೊಳ್ಳುತ್ತಿರುವ 'ಕ್ರಾಸಿಂಗ್ ಪಾತ್ಸ್' ಸಾಕ್ಷ್ಯಚಿತ್ರದ ಮೂಲಕ ನಟಿ ಸಂಯುಕ್ತಾ ಹೊರನಾಡು ಅವರು ಪ್ರಥಮ ಬಾರಿಗೆ ನಿರ್ದೇಶಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಈ ಸಾಕ್ಷ್ಯಚಿತ್ರವು ತೀವ್ರಗೊಳ್ಳುತ್ತಿರುವ...

second-case-of-seetharam-amazon-prime-streaming-record-250-million-minutes

ಅಮೆಜಾನ್ ಪ್ರೈಮ್‌ನಲ್ಲಿ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಐತಿಹಾಸಿಕ ಸಾಧನೆ: 25 ಕೋಟಿಗೂ ಅಧಿಕ ಸ್ಟ್ರೀಮಿಂಗ್ ನಿಮಿಷಗಳ ದಾಖಲೆ!

by admin
August 12, 2026
0

ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರಸಿದ್ದ ಕಂಟೆಂಟ್ ಆಧಾರಿತ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಕನ್ನಡದ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' (Second Case of Seetharam)...

varamahalakshmi-vrata-mantra-for-wealth-and-prosperity

ವರಮಹಾಲಕ್ಷ್ಮಿ ವ್ರತ ದಿನದಂದು ಒಂದು ಮನಇಚ್ಚಾ ಪದ 8 ಬಾರಿ ಹೇಳಿದರೆ ಅಷ್ಟ ಐಶ್ವರ್ಯ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ.

by admin
August 12, 2026
0

ಮನೆಗೆ ಅಷ್ಟ ಐಶ್ವರ್ಯ ತರುವ ಮಂತ್ರ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್ ನಿಮ್ಮ...

depuy-synthes-ralc-bangalore-orthopedic-training-center

ಮೂಳೆ ಶಸ್ತ್ರಚಿಕಿತ್ಸಾ ವಲಯದಲ್ಲಿ ಹೊಸ ಮೈಲಿಗಲ್ಲು, ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅತ್ಯಾಧುನಿಕ ತರಬೇತಿ ಕೇಂದ್ರ

by admin
August 12, 2026
0

ಬೆಂಗಳೂರು: ಮೂಳೆ ಚಿಕಿತ್ಸಾ ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ 'ಡಿಪ್ಯೂ ಸಿಂಥೆಸ್' ಸಂಸ್ಥೆಯು, ಬೆಂಗಳೂರಿನ ಪ್ರತಿಷ್ಠಿತ 'ರಾಮಯ್ಯ ಅಡ್ವಾನ್ಸ್ಡ್ ಲರ್ನಿಂಗ್ ಸೆಂಟರ್' (ಆರ್‌ಎಎಲ್‌ಸಿ) ಜೊತೆ ಮಹತ್ವದ ಒಪ್ಪಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram