ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿಯಲ್ಲಿ ನಡೆದ CT ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣದ ಸವಾಲು ಒಡ್ಡಿದ ಕೆಲವೇ ವಾರಗಳಲ್ಲಿ ಅವರ ಕಾರು ಅಪಘಾತಕ್ಕೀಡಾಗಿದ್ದು, ಇದು ಬಹಳಷ್ಟು ಚರ್ಚೆಗಳನ್ನು ಹುಟ್ಟುಹಾಕುತ್ತಿದೆ. ಅಪ್ಪಿತಪ್ಪಿಯೂ ಧಾರ್ಮಿಕ ವಿಷಯಗಳನ್ನು ಮತ್ತು ದೇವರ ಹೆಸರನ್ನು ವಿವಾದಗಳಿಗೆ ಎಳೆಯುವುದಕ್ಕೆ ಬಹುಮಂದಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಅಪಘಾತವನ್ನು ಧಾರ್ಮಿಕ ವಿಚಾರಗಳೊಂದಿಗೆ ಸಂಪರ್ಕಿಸುವುದು ಕೇವಲ ಅಂದಾಜು ಮತ್ತು ಪ್ರತ್ಯಕ್ಷ ಕಾರಣಗಳಿಲ್ಲದ ಚರ್ಚೆಯಾಗಿದೆ. ಇದನ್ನು ಕಾಕತಾಳೀಯ ಅಂಶವೆಂದು ಪರಿಗಣಿಸಬೇಕು ಎಂಬುದಾಗಿ ಸಾಮಾಜಿಕ ತಜ್ಞರು ಹೇಳಿದ್ದಾರೆ.
ಸಿಟಿ ರವಿ ಟ್ವೀಟ್:
ಹೆಬ್ಬಾಳ್ಳರ್ ಅವರ ಅಪಘಾತದ ಬೆನ್ನಲ್ಲೇ BJP MLC ಸಿಟಿ ರವಿ ಟ್ವಿಟ್ ಮಾಡಿದ್ದು, ‘ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಮತ್ತು ಅವರ ಸಹೋದರ ಶೀಘ್ರ ಗುಣಮುಖರಾಗಲಿ’ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಅವರು ತಮ್ಮ ಟ್ವಿಟ್ನಲ್ಲಿ ಘಟನೆಯ ಬಗ್ಗೆ ಹೆಚ್ಚು ಚರ್ಚೆ ಮಾಡದೆ ಮಾನವೀಯ ಧೋರಣೆ ಮೆರೆದಿದ್ದಾರೆ.








