“ರೆಬೆಲ್ ಸ್ಟಾರ್” ಪ್ರಭಾಸ್, ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಫಸ್ಟ್ ಲುಕ್ ಬಿಡುಗಡೆ..!
“
ರೆಬೆಲ್ ಸ್ಟಾರ್” ಪ್ರಭಾಸ್, ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ರೆಸ್ಪಾನ್ಸ್ ಗಳಿಸಿದೆ. ಬಾಹುಬಲಿ, ಸಾಹೋ ಚಿತ್ರಗಳ ಭರ್ಜರಿ ಯಶಸ್ಸಿನ ನಂತರ ಪ್ರಭಾಸ್‌ರ ಮುಂದಿನ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆಯಿತ್ತು. ಇದೀಗ ರಾಧೆ ಶ್ಯಾಮ್ ಮೂಲಕ ಪ್ರಭಾಸ್ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಯುವಿ ಕ್ರಿಯೇಷನ್ಸ್ ಮತ್ತು ಗೋಪಿಕೃಷ್ಣ ಮೂವೀಸ್ ಬ್ಯಾನರ್ನಲ್ಲಿ ಬರ್ತಿರೋ ʻ
ರಾಧೆ ಶ್ಯಾಮ್ʼ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಈ ಸಿನಿಮಾ 70% ಚಿತ್ರೀಕರಣವನ್ನು ಮುಗಿಸಿದ್ದು, ಚಿತ್ರದ ಒಂದು ಭಾಗವನ್ನು ವಿದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಕೋವಿಡ್ -19 ಬಿಕ್ಕಟ್ಟು ಕೊನೆಗೊಂಡ ನಂತರ ಈ ಚಿತ್ರೀಕರಣ ಮುಂದುವರೆಸಲಾಗುವುದು ಎಂದು ಚಿತ್ರ ತಂಡ ತಿಳಿಸಿದೆ.. ರಾಧೆ ಶ್ಯಾಮ್ ಚಿತ್ರಕ್ಕೆ ರಾಧಾ ಕೃಷ್ಣಕುಮಾರ್ ನಿರ್ದೇಶಕರು. ವಂಶಿ, ಪ್ರಮೋದ್ ಮತ್ತು ಪ್ರಸೀಡಾ ಇದನ್ನು ನಿರ್ಮಾಪಕರು.
ರಾಧಾ ಕೃಷ್ಣ ತಮ್ಮ ನಿರ್ದೇಶನದ ಕೌಶಲ್ಯವನ್ನು ‘ಜಿಲ್’ ಮೂಲಕ ಪ್ರದರ್ಶಿಸಿದ್ದರು. ಅನನ್ಯ ಪ್ರೇಮಕಥೆ ಎಂದು ಹೇಳಲಾಗುವ ‘ರಾಧೆ ಶ್ಯಾಮ್’ ಚಿತ್ರಕ್ಕೆ ಪ್ರಭಾಸ್ ಮತ್ತು ರಾಧಾ ಕೃಷ್ಣ ಒಟ್ಟಾಗಿದ್ದಾರೆ. ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ.
ಪ್ರಭಾಸ್ ಮತ್ತು ಪೂಜಾ ಹೆಗ್ಡೆ ‘ರಾಧೆ ಶ್ಯಾಮ್’ ಗಾಗಿ ಜೋಡಿಯಾಗುತ್ತಿದ್ದಾರೆ ಮತ್ತು ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಕಂಡುಬರುವಂತೆ ಅವರ ಕೆಮಿಸ್ಟ್ರಿ ತುಂಬಾ ಚೆನ್ನಾಗಿ ಕಾಣುತ್ತದೆ. ಪೂಜಾ ಹೆಗ್ಡೆ ಪೋಸ್ಟರ್‌ನಲ್ಲಿ ಭರ್ಜರಿಯಾಗಿ ಕಾಣಿಸುತ್ತಾರೆ.
ಪೋಸ್ಟರ್‌ನಲ್ಲಿ ಬಾರ್ಬಿ ಡಾಲ್ ನೃತ್ಯ ಭಂಗಿಯಲ್ಲಿ ಪ್ರಭಾಸ್ ಮತ್ತು ಪೂಜಾ ಕಾಣಿಸಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ ಕೆಂಪು ಬಣ್ಣದ ಸಾಗರವಿದೆ ಮತ್ತು ಪೂಜಾ ಹೆಗ್ಡೆ ಅವರ ಉಡುಪಿನಿಂದಲೂ ಇದನ್ನು ಅನುಕರಿಸಲಾಗುತ್ತದೆ, ಇದು ರಾಧಾ ಕೃಷ್ಣ ಕುಮಾರ್ ಅವರ ಸೃಜನಶೀಲತೆಯನ್ನ ತೋರಿಸುತ್ತದೆ.
ಮಹಿಳೆಯರಿಗೆ ತಿಂಗಳಿಗೆ ₹25,000 ಯೋಜನೆ ಇಲ್ಲ: PIB ಫ್ಯಾಕ್ಟ್ ಚೆಕ್ ಸ್ಪಷ್ಟನೆ
ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಮನೆಯಿಂದ ಕೆಲಸ ಮಾಡುವ ಯೋಜನೆ ತಂದಿದ್ದು, ತಿಂಗಳಿಗೆ ₹25,000 ಸಂಬಳ ನೀಡಲಿದೆ ಎಂಬ ಸಂದೇಶ ವೈರಲ್ ಆಗುತ್ತಿದೆ. ಆದರೆ ಈ...








