ಬೆಂಗಳೂರಿನಲ್ಲಿ 40 ವರ್ಷದ ವ್ಯಕ್ತಿಯಲ್ಲಿ ಶಂಕಿತ ಮಂಕಿಪಾಕ್ಸ್ ಸೋಂಕು ಪತ್ತೆಯಾಗಿದೆ. ಈ ವ್ಯಕ್ತಿ ದುಬೈಗೆ ಪ್ರವಾಸ ನಡೆಸಿದ ಹಿನ್ನೆಲೆಯುಳ್ಳವರು, ಇದೀಗ ಹದಗೆಟ್ಟ ಆರೋಗ್ಯದ ಕಾರಣದಿಂದಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೈದ್ಯರು ಪ್ರಸ್ತುತ ಈ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿರುವುದರ ಜೊತೆಗೆ, ಶಂಕಿತ ಮಂಕಿಪಾಕ್ಸ್ ಬಗ್ಗೆ ದೃಢೀಕರಣ ಪಡೆಯಲು ಹೆಚ್ಚಿನ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) 2024ರ ಆಗಸ್ಟ್‌ನಲ್ಲಿ ಮಂಕಿಪಾಕ್ಸ್ ಅನ್ನು ‘ಅಂತರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ’ ಎಂದು ಘೋಷಿಸಿತ್ತು. ಈ ಘೋಷಣೆಯ ನಂತರ, ದೇಶಾದ್ಯಾಂತ ಮಂಕಿಪಾಕ್ಸ್ ಪ್ರಕರಣಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ವಿಶ್ವಾದ್ಯಾಂತವೂ ಮಂಕಿಪಾಕ್ಸ್ ಸೋಂಕಿನ ಬಗ್ಗೆ ಬಹಳ ಹೆಚ್ಚಿನ ಜಾಗೃತಿ ಮೂಡಿಸಿದ್ದು, ಹೆಚ್ಚು ಮಟ್ಟದಲ್ಲಿ ಸೋಂಕು ಹರಡುವುದನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಬೆಂಗಳೂರು ಸಾರ್ವಜನಿಕರಿಗೆ ಎಚ್ಚರಿಕೆ
ನಗರದ ಆರೋಗ್ಯ ಇಲಾಖೆಯು ಸಾರ್ವಜನಿಕರಿಗೆ ಯಾವುದೇ ಶಂಕಿತ ಲಕ್ಷಣಗಳನ್ನು ಕಾಣಿಸಿದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಿ ವೈದ್ಯಕೀಯ ಸಲಹೆಗಳನ್ನು ಪಡೆಯುವಂತೆ ಸೂಚಿಸಿದೆ.








