ಬೆಂಗಳೂರಿನಲ್ಲಿ ಫೆಬ್ರವರಿ 13 ಮತ್ತು 14 ರಂದು ‘ಏರೋ ಇಂಡಿಯಾ 2025’ ಏರ್ ಶೋ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ, ಯಲಹಂಕ ಮತ್ತು ಅದರ ಸುತ್ತಮುತ್ತಲಿನ ಶಾಲಾ ಮತ್ತು ಕಾಲೇಜುಗಳಿಗೆ ಎರಡು ದಿನ ರಜೆ ಘೋಷಣೆ ಮಾಡಲಾಗಿದೆ. ಇದು ಏಷ್ಯಾದ ಅತಿ ದೊಡ್ಡ ಏರ್ ಶೋ ಆಗಿದ್ದು, ಯಲಹಂಕದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಈ ವೈಮಾನಿಕ ಪ್ರದರ್ಶನವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು, ಹೆಚ್ಚಿನ ಸುರಕ್ಷತೆ ವ್ಯವಸ್ಥೆ ಮತ್ತು ನಿರ್ವಹಣೆಯ ಅಗತ್ಯವಿರುತ್ತವೆ. ಈ ಹಿನ್ನೆಲೆಯಲ್ಲಿ, ಯಲಹಂಕ ಮತ್ತು ಅದರ ಸುತ್ತಮುತ್ತಲಿನ ಪ್ರಥಮ ದರ್ಜೆ ಶಾಲೆಗಳು, ಖಾಸಗಿ ಅನುದಾನಿತ ಶಾಲೆಗಳು ಹಾಗೂ ಕಾಲೇಜುಗಳಿಗೆ ಎರಡು ದಿನಗಳ ರಜೆ ಘೋಷಣೆಯಾಗಿದೆ
ಈ ‘ಏರೋ ಇಂಡಿಯಾ 2025′ ಏರ್ ಶೋ’ ಕ್ರೀಡಾ, ತಂತ್ರಜ್ಞಾನ ಹಾಗೂ ವೈಮಾನಿಕ ಕ್ಷೇತ್ರಗಳಲ್ಲಿ ಹೊಸ ತಂತ್ರಜ್ಞಾನಗಳ ಪ್ರದರ್ಶನದಾಗಿದ್ದು, ಭಾರತ ಹಾಗೂ ಇತರ ದೇಶಗಳಿಂದ ವಿಶೇಷ ವೈಮಾನಿಕ ತಂಡಗಳು ಭಾಗವಹಿಸಲಿವೆ.








