ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ 2025 ನೇಮಕಾತಿಯಡಿಯಲ್ಲಿ ಎಂಜಿನಿಯರ್, ಅಸಿಸ್ಟಂಟ್ ಮತ್ತು ಕ್ಯಾಂಟೀನ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ
ಹುದ್ದೆಗಳ ವಿವರಗಳು
– ಸಂಸ್ಥೆಯ ಹೆಸರು: ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ (RRI)
– ಹುದ್ದೆಯ ಹೆಸರು: ಎಂಜಿನಿಯರ್ ‘C’, ಎಂಜಿನಿಯರ್ ಅಸಿಸ್ಟಂಟ್, ಸೈಂಟಿಫಿಕ್ ಅಸಿಸ್ಟಂಟ್, ಕ್ಯಾಂಟೀನ್ ಮ್ಯಾನೇಜರ್
– ಒಟ್ಟು ಹುದ್ದೆಗಳ ಸಂಖ್ಯೆ: 11
– ಉದ್ಯೋಗ ಸ್ಥಳ: ಬೆಂಗಳೂರು
– ಎಂಜಿನಿಯರ್ A (Electronics): 3 ಹುದ್ದೆಗಳು
– ಎಂಜಿನಿಯರ್ A (Photonics): 2 ಹುದ್ದೆಗಳು
– ಎಂಜಿನಿಯರಿಂಗ್ ಅಸಿಸ್ಟಂಟ್ C (ಸಿವಿಲ್): 1 ಹುದ್ದೆ
– ಅಸಿಸ್ಟಂಟ್: 4 ಹುದ್ದೆಗಳು
– ಅಸಿಸ್ಟಂಟ್ ಕ್ಯಾಂಟೀನ್ ಮ್ಯಾನೇಜರ್: 1 ಹುದ್ದೆ
ವಿದ್ಯಾರ್ಹತೆ ಮತ್ತು ಅನುಭವ
– ಎಂಜಿನಿಯರ್ A (Electronics): ಮೊದಲ ದರ್ಜೆಯ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಅಥವಾ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಮೊದಲ ದರ್ಜೆಯ MSc. ಎಲೆಕ್ಟ್ರಾನಿಕ್ ಸರ್ಕ್ಯೂಟ್ಸ್, RF/Microwave, FPGA ಜ್ಞಾನ ಇರಬೇಕು.
– ಎಂಜಿನಿಯರ್ A (Photonics): ಫೋಟೋನಿಕ್ಸ್ ವಿಷಯದಲ್ಲಿ ಬಿಇ ಅಥವಾ ಎಂಎಸ್ಸಿ. ಆಪ್ಟಿಕಲ್ ಉಪಕರಣ, ಲೇಸರ್ ಫಿಸಿಕ್ಸ್, ಫೈಬರ್ ಆಪ್ಟಿಕ್ಸ್ ಜ್ಞಾನ ಅಗತ್ಯ.
– ಎಂಜಿನಿಯರಿಂಗ್ ಅಸಿಸ್ಟಂಟ್ C (ಸಿವಿಲ್): ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ. ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಅನುಭವ ಬೇಕು.
– ಅಸಿಸ್ಟಂಟ್: ಯಾವುದೇ ವಿಷಯದಲ್ಲಿ ಪದವಿ, 3 ವರ್ಷಗಳ ಅನುಭವ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಹಾಗೂ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.
– ಅಸಿಸ್ಟಂಟ್ ಕ್ಯಾಂಟೀನ್ ಮ್ಯಾನೇಜರ್: ಹೋಟೆಲ್ ಮ್ಯಾನೇಜ್‌ಮೆಂಟ್ ನಲ್ಲಿ ಪದವಿ ಹಾಗೂ ಕನಿಷ್ಠ 5 ವರ್ಷಗಳ ಅನುಭವ. ಎಂಎಸ್ ವರ್ಡ್, ಎಕ್ಸೆಲ್, ಇಆರ್‌ಪಿ ಬಳಕೆಜ್ಞಾನ ಇರಬೇಕು.
ವಯೋಮಿತಿ
– ಎಂಜಿನಿಯರ್ A (Electronics / Photonics): ಗರಿಷ್ಠ 35 ವರ್ಷ
– ಎಂಜಿನಿಯರಿಂಗ್ ಅಸಿಸ್ಟಂಟ್ C ಮತ್ತು ಅಸಿಸ್ಟಂಟ್: ಗರಿಷ್ಠ 28 ವರ್ಷ
– ಅಸಿಸ್ಟಂಟ್ ಕ್ಯಾಂಟೀನ್ ಮ್ಯಾನೇಜರ್: ಗರಿಷ್ಠ 30 ವರ್ಷ
ವಿಭಿನ್ನ ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ದೊರೆಯುತ್ತದೆ.
ವೇತನ
– ಎಂಜಿನಿಯರ್ A: ವೇತನ ಶ್ರೇಣಿ 10 (7ನೇ ವೇತನ ಆಯೋಗದ ಪ್ರಕಾರ)
– ಎಂಜಿನಿಯರಿಂಗ್ ಅಸಿಸ್ಟಂಟ್ C: ವೇತನ ಶ್ರೇಣಿ 5
– ಅಸಿಸ್ಟಂಟ್: ವೇತನ ಶ್ರೇಣಿ 4
– ಅಸಿಸ್ಟಂಟ್ ಕ್ಯಾಂಟೀನ್ ಮ್ಯಾನೇಜರ್: ವೇತನ ಶ್ರೇಣಿ 6
ಅರ್ಜಿ ಶುಲ್ಕ
– ಸಾಮಾನ್ಯ / ಓಬಿಸಿ / ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ: ರೂ. 250/-
– ಎಸ್‌ಸಿ / ಎಸ್‌ಟಿ / ಮಹಿಳಾ / ಅಂಗವಿಕಲ ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ
ಆಯ್ಕೆ ವಿಧಾನ
– ಲೆವೆಲ್ 10 ಮತ್ತು ಮೇಲಿನ ಹುದ್ದೆಗಳಿಗೆ: ಆಬ್ಜೆಕ್ಟಿವ್ ಪರೀಕ್ಷೆ + ಸಬ್ಜೆಕ್ಟಿವ್ ಪರೀಕ್ಷೆ + ಸಂದರ್ಶನ
– ಇತರ ಹುದ್ದೆಗಳಿಗೆ: ಆಬ್ಜೆಕ್ಟಿವ್ ಪರೀಕ್ಷೆ + ಸ್ಕಿಲ್ ಪರೀಕ್ಷೆ
ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 07 ಏಪ್ರಿಲ್ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಮೇ 2025








