ಜಪಾನ್ ಸಮುದ್ರದಲ್ಲಿ ನಿಷೇಧಕ್ಕೆ ಒಳಗಾಗಿರುವ ಡೈಮಂಡ್ ಪ್ರಿನ್ಸೆಸ್ ಹಡಗನ್ನು ಕೊರೋನಾ ಬಹುತೇಕ ಆವರಿಸಿದೆ. ಬೃಹತ್ ಪ್ರವಾಸಿ ಹಡಗಿನಲ್ಲಿ ವಿವಿಧ ದೇಶಗಳ ಪ್ರಜೆಗಳು ಸೇರಿದಂತೆ ೧೩೮ ಭಾರತೀಯರು ಇದ್ದಾರೆ. ಈಗಾಗಲೇ ಇಬ್ಬರು ಭಾರತೀಯರಿಗೆ ಸೋಂಕು ತಗುಲಿದ್ದು, ಉಳಿದವರನ್ನು ಏರ್ ಲಿಫ್ಟ್ ಮಾಡಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ತಿಳಿಸಿದೆ. ವಿದೇಶಾಂಗ ಇಲಾಖೆ ತಿಳಿಸಿರುವಂತೆ ಈಗಾಗಲೇ ಏರ್ ಲಿಫ್ಟ್ ಗಾಗಿ ವಿಶೇಷ ವಿಮಾನ ಕಳಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದಿದೆ. ಆದರೆ ಈಗಾಗಲೇ ಸೋಂಕಿಗೆ ಒಳಗಾಗಿರುವ ಭಾರತ ಮೂಲದ ಪ್ರವಾಸಿಗರನ್ನು ಏನು ಮಾಡುತ್ತಾರೆ ಎಂಬುದನ್ನು ತಿಳಿಸಿಲ್ಲ.
ನಿಮ್ಮ ದಾನ ಬೇಡ, ವಿನಾಶಕ್ಕೆ ಪರಿಹಾರ ನೀಡಿ: ನಮಗೆ ನ್ಯಾಯ ಬೇಕು ಭಾರತದ ವಿರುದ್ಧ ಸಿಡಿದೆದ್ದ ನೇಪಾಳ
ಕಾಠ್ಮಂಡು: ಇತ್ತೀಚಿನ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ನಲುಗಿ ಹೋಗಿರುವ ನೇಪಾಳ, ಇದೀಗ ಜಗತ್ತಿನ ಬಲಿಷ್ಠ ರಾಷ್ಟ್ರಗಳ ವಿರುದ್ಧ ತಿರುಗಿಬಿದ್ದಿದೆ. ಸಾವಿರಾರು ಜೀವಗಳನ್ನು ಬಲಿಪಡೆದ ಈ ನೈಸರ್ಗಿಕ...








