ಬಲೂಚಿಸ್ತಾನದ ಪ್ರತ್ಯೇಕವಾದಿ ನಾಯಕರು ಬಲೂಚಿಸ್ತಾನ ಪ್ರಾಂತ್ಯವನ್ನು ಸ್ವತಂತ್ರ ರಾಷ್ಟ್ರವಾಗಿ ಘೋಷಿಸಿದ್ದಾರೆ. ಈ ಹೊಸ ರಾಷ್ಟ್ರವನ್ನು ರಿಪಬ್ಲಿಕ್ ಸ್ಟೇಟ್ ಆಫ್ ಬಲೂಚಿಸ್ತಾನ ಎಂದು ನಾಮಕರಣ ಮಾಡಲಾಗಿದೆ. ಪ್ರತ್ಯೇಕವಾದಿಗಳು ತಮ್ಮ ಸ್ವಾತಂತ್ರ್ಯವನ್ನು ಘೋಷಿಸಿ, ಈ ರಾಷ್ಟ್ರದ ಅಂತಾರಾಷ್ಟ್ರೀಯ ಮಾನ್ಯತೆಗಾಗಿ ತಕ್ಷಣವೇ ವಿಶ್ವಸಂಸ್ಥೆಗೆ ಮನವಿ ಮಾಡಿದ್ದು, ಮಾನ್ಯತೆ ಪಡೆಯುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.
ಪಾಕಿಸ್ತಾನದ ವಿರುದ್ಧ ಕಟು ಸಂದೇಶ
ಬಲೂಚಿಸ್ತಾನದ ಪ್ರತ್ಯೇಕವಾದಿಗಳು, ಪಾಕಿಸ್ತಾನದ ಆಳ್ವಿಕೆಯಲ್ಲಿ ಇರುವ ಬಲೂಚಿಸ್ತಾನ ಭಾಗದಿಂದ ಪಾಕಿಸ್ತಾನ ಸೈನಿಕರು ಹಾಗೂ ಅಧಿಕಾರಿಗಳು ತಕ್ಷಣದ ನಿರ್ಗಮನಕ್ಕಾಗಿ ಎಚ್ಚರಿಕೆ ನೀಡಿದ್ದಾರೆ. ಈ ಕ್ರಮವು ಬಲೂಚಿಸ್ತಾನನ ಸ್ವಾತಂತ್ರ್ಯ ಕೋರಿಕೆಗೆ ಹಾಗೂ ದಾಳಿಗಳನ್ನು ತಡೆಯಲು ಸೂಕ್ತವಾದ ಹೆಜ್ಜೆ ಆಗಿದೆ.
ದಿಲ್ಲಿಯಲ್ಲಿ ರಾಯಭಾರಿ ಕಚೇರಿ ಪ್ರಾರಂಭ
ಈ ಹೊಸ ರಾಜ್ಯವು ದಿಲ್ಲಿಯಲ್ಲಿ ಬಲೂಚಿಸ್ತಾನ ರಾಯಭಾರಿ ಕಚೇರಿ ಪ್ರಾರಂಭಿಸಲು ನಿರ್ಧರಿಸಿದೆ. ಇದು ಬಲೂಚಿಸ್ತಾನ ಸರ್ಕಾರಕ್ಕೆ ದೇಶದ ಉನ್ನತ ಅಧಿಕಾರಿಗಳೊಂದಿಗೆ ನೇರ ಸಂಪರ್ಕವನ್ನು ಕಲ್ಪಿಸುವುದಾಗಿ, ಪ್ರತ್ಯೇಕವಾದಿಗಳು ತಿಳಿಸಿದ್ದಾರೆ.
ಬಲೂಚಿಸ್ತಾನವು ಹಲವು ದಶಕಗಳಿಂದ ಪಾಕಿಸ್ತಾನದಿಂದ ಪ್ರತ್ಯೇಕವಾಗಿ ಜೀವನದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದೆ.
ಈ ಸ್ವಾತಂತ್ರ್ಯ ಘೋಷಣೆಯು ಹಲವಾರು ದೇಶಗಳಲ್ಲಿ ವಿವಾದವನ್ನು ಮೂಡಿಸಬಹುದು, ಆದರೆ ಬಲೂಚಿಸ್ತಾನ ಜನತೆಗೆ ತಮ್ಮ ಧಾರ್ಮಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಇದು ಹೊಸ ಒಂದು ಅಧ್ಯಾಯವನ್ನು ಪ್ರಾರಂಭಿಸಿದೆ.








