ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ತಮ್ಮ ಹೇಳಿಕೆಯಿಂದ ಸುದ್ದಿಯಾಗಿದ್ದಾರೆ. ಈ ಬಾರಿ ಅವರು ತಂತ್ರಜ್ಞಾನ ವಿಶ್ವದ ದೈತ್ಯ ಕಂಪನಿ ಆಪಲ್ ಮತ್ತು ಅದರ ಭಾರತದಲ್ಲಿ ಹೂಡಿಕೆಗೆ ಸಂಬಂಧಿಸಿದ ನಿರ್ಧಾರವನ್ನು ಟಾರ್ಗೆಟ್ ಮಾಡಿದ್ದಾರೆ. ಟ್ರಂಪ್ ಅವರು ಭಾರತದಲ್ಲಿ ಆಪಲ್ ಫ್ಯಾಕ್ಟರಿ ಸ್ಥಾಪನೆಗೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಆಪಲ್ ಫ್ಯಾಕ್ಟರಿ ತೆರೆಯುವುದು ನನಗೆ ಇಷ್ಟ ಇಲ್ಲ, ಎಂದು ಅವರು ಕತಾರ್ನಲ್ಲಿ ನಡೆದ ಒಂದು ವಿಶೇಷ ಸಮಾರಂಭದಲ್ಲಿ ಹೇಳಿಕೆ ನೀಡಿದ್ದಾರೆ.
ಆಪಲ್ ಸಿಇಒ ಟಿಮ್ ಕುಕ್ ನನ್ನ ಸ್ನೇಹಿತ. ಆದರೆ ಈ ವಿಚಾರದಲ್ಲಿ ನನಗೆ ಅವರ ಜೊತೆ ಸಣ್ಣ ಸಮಸ್ಯೆಯಿದೆ. ಆಪಲ್ ವರ್ಷಕ್ಕೆ 500 ಬಿಲಿಯನ್ ಡಾಲರ್ ಗಳಿಸುತ್ತಿದೆ. ಇಂಥ ದೊಡ್ಡ ಕಂಪನಿ ಭಾರತದಲ್ಲಿ ಫ್ಯಾಕ್ಟರಿ ನಿರ್ಮಿಸುತ್ತಿರುವುದು ನನ್ನಿಗೆ ಆಶ್ಚರ್ಯವಾಗಿದೆ ಎಂದು ಹೇಳಿದ್ದಾರೆ.
ಟ್ರಂಪ್ ಯಾಕೆ ವಿರೋಧಿಸುತ್ತಿದ್ದಾರೆ?
ಟ್ರಂಪ್ ಅವರು ತಮ್ಮ ಹೇಳಿಕೆಯಲ್ಲಿ ಭಾರತದ ಆಮದು ಸುಂಕಗಳನ್ನು (import tariffs) ಉಲ್ಲೇಖಿಸಿದ್ದಾರೆ.
ಭಾರತ ಹೆಚ್ಚು ಸುಂಕ ವಿಧಿಸುವ ದೇಶಗಳಲ್ಲಿ ಒಂದು. ಅಲ್ಲಿ ಉತ್ಪಾದನೆ ಮಾಡಿದ ಸರಕುಗಳನ್ನು ವಿಶ್ವದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಕಷ್ಟ. ಇದು ಆಪಲ್ ಕಂಪನಿಗೆ, ಅಮೆರಿಕದ ಆರ್ಥಿಕತೆಗೆ ನಷ್ಟವಾಗಬಹುದು, ಎಂದು ಅವರ ಅಭಿಪ್ರಾಯ.
ಟ್ರಂಪ್ ಅವರ ಅಧ್ಯಕ್ಷೀಯ ಅವಧಿಯಲ್ಲಿ ‘ಅಮೆರಿಕ ಫಸ್ಟ್’ ಎಂಬ ಧೋರಣೆಯೊಂದಿಗೆ ಅವರು ಬಹಳಷ್ಟು ಕಂಪನಿಗಳನ್ನು ದೇಶೀಯ ಉತ್ಪಾದನೆಗೆ ಪ್ರೋತ್ಸಾಹಿಸುತ್ತಿದ್ದರು. ಅವರು ವಿದೇಶಿ ನಾಡುಗಳಲ್ಲಿ ಉದ್ಯೋಗ ಸೃಷ್ಟಿ ಆಗದಂತೆ, ಅದರ ಬದಲು ಆ ಉದ್ಯೋಗಗಳು ಅಮೆರಿಕದೊಳಗೆ ಉಳಿಯಲಿ ಎಂಬ ನಿಲುವಿನಲ್ಲಿ ನಿಂತಿದ್ದರು.
ಆಪಲ್ ಮತ್ತು ಭಾರತ – ಬೆಳೆದ ಬಾಂಧವ್ಯ
ಇದಕ್ಕೆ ವಿರುದ್ಧವಾಗಿ, ಆಪಲ್ ಇತ್ತೀಚೆಗೆ ಭಾರತದಲ್ಲಿ ಹೂಡಿಕೆಗೆ ತೀವ್ರ ಆಸಕ್ತಿ ತೋರಿಸುತ್ತಿದೆ. ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ನಲ್ಲಿ ಆಪಲ್ ಪ್ರೊಡಕ್ಷನ್ ಯೂನಿಟ್ಗಳು ಸ್ಥಾಪನೆಗೊಂಡಿವೆ. ಟಿಮ್ ಕುಕ್ ಕೂಡಾ ಭಾರತದ ಮಾರುಕಟ್ಟೆಯನ್ನು ಮುಂದಿನ ದೊಡ್ಡ ಗ್ರಾಹಕರ ತಾಣವೆಂದು ಪರಿಗಣಿಸುತ್ತಿದ್ದಾರೆ.








