ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)ದ ವಿರುದ್ಧ ತೀವ್ರ ಪ್ರಹಾರ ನಡೆಸಿದ್ದು, ಮುಂಬರುವ ದಿನಗಳಲ್ಲಿ ರಾಜಕೀಯ ಭಾರೀ ಚರ್ಚೆಗೆ ಕಾರಣವಾಗಲಿದೆ. ಅವರು ನೀಡಿರುವ ಹೇಳಿಕೆಯಲ್ಲಿ, ಆರೆಸ್ಸೆಸ್ ನಿಷೇಧವನ್ನು ಹಿಂದಕ್ಕೆ ತೆಗೆದುಕೊಂಡದ್ದೇ ದೊಡ್ಡ ತಪ್ಪು ಆಗಿದ್ದು, ಇದನ್ನು ಮುಂದಿನ ಬಾರಿ ಸರಿಪಡಿಸಬೇಕು ಎಂದು ಹೇಳಿದ್ದಾರೆ..
ಇದಕ್ಕೂ ಮುಂಚೆ ಎರಡು ಮೂರು ಬಾರಿ ಆರೆಸ್ಸೆಸ್ ನಿಷೇಧಿತವಾಗಿತ್ತು. ಆಗ ಅವರು ನಮಗೆ ‘ನಾವು ದೇಶದ್ರೋಹಿ ಚಟುವಟಿಕೆ ಮಾಡಲ್ಲ ಅಂತ ಕೈಕಾಲು ಹಿಡಿದ್ರು. ಆದರೆ ಈಗ ಅವರ ನಿಜ ಸ್ವರೂಪ ಹೊರಬಂದಿದೆ. ಇಂದು ದೇಶದ ಒಳಸಂಚುಗಳು, ಸಮುದಾಯಗಳ ಮಧ್ಯೆ ದ್ವೇಷ ಹರಡುವ ಕೆಲಸಗಳು, ಇವೆಲ್ಲವೂ ಆರೆಸ್ಸೆಸ್ ಸಂಪರ್ಕ ಹೊಂದಿವೆ ಅನ್ನೋದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.
ನಾವು ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ಆರೆಸ್ಸೆಸ್ ಸಿದ್ಧಾಂತಗಳಿಗೆ ವಿರೋಧಿಯಾಗಿದ್ದೇವೆ. ಅವರು ಪ್ರತಿನಿತ್ಯ ಜನರ ಮನಸ್ಸಿನಲ್ಲಿ ಹೆದರಿಕೆ, ವಿಭಜನೆ, ಹಾಗೂ ಭ್ರಮೆ ಸೃಷ್ಟಿಸುತ್ತಿದ್ದಾರೆ. ನಾವು ಇದನ್ನು ಪ್ರಜಾಪ್ರಭುತ್ವಕ್ಕೆ ಧಕ್ಕೆ ಎನಿಸೋದು ಎಂದು ನೋಡುತ್ತಿದ್ದೇವೆ. ಮುಂದಿನ ಬಾರಿ ಕೇಂದ್ರದಲ್ಲಿ ನಮ್ಮ ಸರಕಾರ ಬಂದರೆ, ನಾವು ಈ ನಿಷೇಧದ ಬಗ್ಗೆ ಗಂಭೀರವಾಗಿ ಪರಿಗಣಿಸೋಣ ಎಂದು ಹೇಳಿದರು..
ಪ್ರಿಯಾಂಕ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.








