ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ದ್ವೇಷಪೂರಿತ ಗುಂಪು ದಾಳಿಯಲ್ಲಿ ಹತ್ಯೆಯಾದ ಅಶ್ರಫ್ ಪ್ರಕರಣ ರಾಜ್ಯದಾದ್ಯಂತ ಆಕ್ರೋಶ ಮೂಡಿಸಿತ್ತು. ಇದೀಗ ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರವು ₹15 ಲಕ್ಷ ಪರಿಹಾರವನ್ನು ನೀಡಿದೆ
ಸಚಿವರು ಹಾಗೂ ಸ್ಪೀಕರ್ ಭೇಟಿ ನೀಡಿ ಪರಿಹಾರ ವಿತರಣೆ
ಅಶ್ರಫ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಿರುವ ನಗರಾಭಿವೃದ್ಧಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್, ಅವರ ಜೊತೆಗೆ AICC ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಾಂಗ್ರೆಸ್ ಹಿರಿಯ ನಾಯಕರು ಕೂಡ ಉಪಸ್ಥಿತರಿದ್ದರು.
AICC ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಸಲಹೆಯಂತೆ ಈ ಭೇಟಿ ಹಾಗೂ ಪರಿಹಾರ ವಿತರಣೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಕುಟುಂಬದೊಂದಿಗೆ ಸಮಾಲೋಚನೆ
ಹತ್ಯೆಯಾದ ಅಶ್ರಫ್ ಕುಟುಂಬದ ಸದಸ್ಯರೊಂದಿಗೆ ನಾಯಕರು ವೈಯಕ್ತಿಕವಾಗಿ ಚರ್ಚೆ ನಡೆಸಿದ್ದು, ಸರ್ಕಾರ ಹಾಗೂ ಪಕ್ಷ ಅತೀವ ಸಂತಾಪ ವ್ಯಕ್ತಪಡಿಸಿದೆ. ಕುಟುಂಬಕ್ಕೆ ಅಗತ್ಯವಾದ ಇನ್ನಿತರೆ ನೆರವುಗಳನ್ನು ಸರ್ಕಾರದಿಂದ ಒದಗಿಸಲು ನಾಯಕರು ಭರವಸೆ ನೀಡಿದ್ದಾರೆ.








