ಕೋಲಾರ ನಗರದಿಂದ ಕೇವಲ 3 ಕಿಲೋಮೀಟರ್ ದೂರದಲ್ಲಿರುವ ಶತಶೃಂಗ ಪರ್ವತ ಶ್ರೇಣಿಯಲ್ಲಿ ನೆಲೆಸಿರುವ ಅಂತರಗಂಗೆ, ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದ ಪುಣ್ಯಕ್ಷೇತ್ರವಾಗಿದೆ. ಇಲ್ಲಿನ ಶ್ರೀ ಕಾಶೀವಿಶ್ವೇಶ್ವರಸ್ವಾಮಿ ದೇವಾಲಯವು ತನ್ನ ವಿಶಿಷ್ಟ ಇತಿಹಾಸ, ಪೌರಾಣಿಕ ಹಿನ್ನೆಲೆ ಮತ್ತು ನಿರಂತರವಾಗಿ ಹರಿಯುವ ಪವಿತ್ರ ಜಲಧಾರೆಯಿಂದ ಭಕ್ತರನ್ನು ಆಕರ್ಷಿಸುತ್ತದೆ.
ಇತಿಹಾಸದ ಹೆಜ್ಜೆಗುರುತುಗಳು:
ಅಂತರಗಂಗೆಯ ಇತಿಹಾಸವು ಪುರಾತನ ಕಾಲಕ್ಕೆ ಕರೆದೊಯ್ಯುತ್ತದೆ. ಈ ದೇವಾಲಯದ ಬಗ್ಗೆ ನಿಖರವಾದ ನಿರ್ಮಾಣ ಕಾಲದ ಬಗ್ಗೆ ಮಾಹಿತಿ ಇಲ್ಲದಿದ್ದರೂ, ಗಂಗರ ಕಾಲದಲ್ಲಿ ಈ ದೇವಾಲಯ ನಿರ್ಮಿತವಾಗಿದ್ದು, ನಂತರ ಹೊಯ್ಸಳರು ಮತ್ತು ವಿಜಯನಗರ ಅರಸರು ಇದನ್ನು ನವೀಕರಿಸಿದ್ದಾರೆ ಎಂದು ಹೇಳಲಾಗುತ್ತದೆ. ಇಲ್ಲಿನ ಬೆಟ್ಟವು ಪರಶುರಾಮ ಮತ್ತು ಜಮದಗ್ನಿ ಋಷಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಪೌರಾಣಿಕ ಕಥೆಗಳ ಪ್ರಕಾರ, ಪರಶುರಾಮನು ಕಾರ್ತವೀರ್ಯಾರ್ಜುನನನ್ನು ಕೊಂದ ನಂತರ, ಜಮದಗ್ನಿಯ ಸಾವು ಮತ್ತು ರೇಣುಕಾ ಮಾತೆಯ ಆತ್ಮಾಹುತಿ ಇದೇ ಬೆಟ್ಟದ ಮೇಲೆ ನಡೆಯಿತು. ಪರಶುರಾಮನು ಕ್ಷತ್ರಿಯರನ್ನು ನಿರ್ಮೂಲನ ಮಾಡುವ ಶಪಥವನ್ನು ಇದೇ ಬೆಟ್ಟದಲ್ಲಿ ಮಾಡಿದನು ಎಂಬ ನಂಬಿಕೆಯೂ ಇದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಮಹಿಮೆ ಮತ್ತು ಪವಾಡಗಳು:
ಅಂತರಗಂಗೆಯ ಪ್ರಮುಖ ಆಕರ್ಷಣೆ ಮತ್ತು ಮಹಿಮೆಯು ಇಲ್ಲಿನ ನಿರಂತರ ಜಲಧಾರೆಯಾಗಿದೆ. ಬಸವನ ಬಾಯಿಂದ ಹೊರಹರಿಯುವ ಈ ನೀರನ್ನು ಭಕ್ತರು ಪವಿತ್ರ ಗಂಗಾಜಲವೆಂದು ನಂಬುತ್ತಾರೆ. ವರ್ಷವಿಡೀ, ಬೇಸಿಗೆಯಲ್ಲೂ ಬತ್ತದೆ ಹರಿಯುವ ಈ ನೀರಿನ ಮೂಲ ಇಂದಿಗೂ ನಿಗೂಢವಾಗಿದೆ. ಈ ನೀರನ್ನು ಕುಡಿಯುವುದರಿಂದ ಅಥವಾ ಸ್ನಾನ ಮಾಡುವುದರಿಂದ ರೋಗಗಳು ಗುಣವಾಗುತ್ತವೆ ಮತ್ತು ಪಾಪಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಈ ಕಾರಣಕ್ಕಾಗಿಯೇ ಇದನ್ನು “ಅಂತರಗಂಗೆ” (ಅಂತರ್ಗತ ಗಂಗೆ) ಎಂದು ಕರೆಯಲಾಗುತ್ತದೆ.
ದೇವಾಲಯದ ಪ್ರಧಾನ ದೇವರು ಕಾಶಿ ವಿಶ್ವೇಶ್ವರಸ್ವಾಮಿ. ಮುಖ್ಯ ಶಿವಲಿಂಗದ ಜೊತೆಗೆ, ನಾಲ್ಕೈದು ಇತರ ಲಿಂಗಗಳು ಇಲ್ಲಿವೆ. ಬೆಟ್ಟದ ಮೇಲ್ಭಾಗದಿಂದ ಕೋಲಾರ ನಗರದ ಸುಂದರ ದೃಶ್ಯವನ್ನು ಸವಿಯಬಹುದು. ಇದೊಂದು ಧಾರ್ಮಿಕ ಕೇಂದ್ರ ಮಾತ್ರವಲ್ಲದೆ, ಚಾರಣ, ಕಲ್ಲು ಹತ್ತುವುದು ಮುಂತಾದ ಸಾಹಸಮಯ ಚಟುವಟಿಕೆಗಳಿಗೂ ಹೇಳಿ ಮಾಡಿಸಿದ ತಾಣವಾಗಿದೆ. ಬೆಟ್ಟದ ಸುತ್ತ ನೈಸರ್ಗಿಕವಾಗಿ ರೂಪುಗೊಂಡ ಗುಹೆಗಳು ಸಹ ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿವೆ.
ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಇಲ್ಲಿ ಲಕ್ಷದೀಪೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಸೇರಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದೀಪಾರಾಧನೆ ಮಾಡುತ್ತಾರೆ. ಕೋಲಾರ ಜಿಲ್ಲೆಯ ಹೆಮ್ಮೆಯ ಪ್ರತೀಕವಾಗಿರುವ ಅಂತರಗಂಗೆ ಶ್ರೀ ಕಾಶೀವಿಶ್ವೇಶ್ವರಸ್ವಾಮಿ ದೇವಾಲಯವು ಆಧ್ಯಾತ್ಮಿಕ ಶಕ್ತಿ, ಪೌರಾಣಿಕ ಹಿನ್ನೆಲೆ ಮತ್ತು ನೈಸರ್ಗಿಕ ಸೌಂದರ್ಯದ ಸಂಗಮವಾಗಿ ಕಂಗೊಳಿಸುತ್ತದೆ.








