ಇಡೀ ವಿಶ್ವವನ್ನೇ ಹೆಮ್ಮಾರಿಯಂತೆ ಕಾಡುತ್ತಿರುವ ಕೊರೊನಾದಿಂದ ಜನಪ್ರತಿನಿಧಿಗಳು ಬಾಲಿವುಡ್, ಚಿತ್ರಂರಗವೂ ಹೊರತಾಗಿಲ್ಲ. ಇತ್ತೀಚೆಗೆ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಹಾಗೂ ಅವರ ಪುತ್ರಿ ಆರಾಧ್ಯಾಗೂ ಕೊರೊನಾ ಪಾಸಿಟಿವ್ ಬಮದಿದ್ದು, ಈ ಸುದ್ದಿ ಇಡೀ ದೇಶ ವ್ಯಾಪ್ತಿ ತೀವ್ರ ಚರ್ಚೆಯಾಗಿತ್ತು. ಅಲ್ದೇ ಈ ಸುದ್ದಿ ಅವರ ಅಭಿಮಾನಿಗಳನ್ನ ಆತಂಕಕ್ಕೆ ದೂಡಿತ್ತು. ಇದೀಗ ಅಮಿತಾಬ್ ಹಾಗೂ ಅಭಿಷೇಕ್ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿಗಳು ಸಿಕ್ಕಿದೆ. 
ಅಮಿತಾಬ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ 26 ಮಂದಿಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದೃಷ್ಟವಸಾತ್ ಅವರೆಲ್ಲರೂ ಸೋಂಕು ಮುಕ್ತರಾಗಿದ್ದಾರೆ. ಐಶ್ವರ್ಯಾ ಹಾಗೂ ಪುತ್ರಿ ಆರಾಧ್ಯಗೆ ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೂ ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್ಗ ಅವರಿಗೆ ಆಸ್ಪತ್ರೆಯಲ್ಲೇ ಕೆಲ ಕಾಲ ಇರುವಂತೆ ವೈದ್ಯರು ಸೂಚಿಸಿದ್ದು, ಅಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ. ಸ್ವತಃ ಅಭಿಷೇಕ್ ಅವರೇ ಈ ಕುರಿತಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.








