ADVERTISEMENT
Tuesday, September 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಗಾಂಧಿ ಹಂತಕ ಸಂಘಟನೆಯ ಶತಮಾನೋತ್ಸವ ದೇಶದ ದುರಂತ: RSS-ಮೋದಿ ವಿರುದ್ಧ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ

RSS-B.K. Hariprasad launches strong attack on Modi

Shwetha by Shwetha
October 3, 2025
in ರಾಜ್ಯ, Newsbeat, Politics, State, ರಾಜಕೀಯ
Karnataka Legislative Council Opposition Leader B K Hariprasad during the "Meet the Press" program at the Press Club, Bengaluru on Friday.  DH Photo/Mariya S Mattathil

Karnataka Legislative Council Opposition Leader B K Hariprasad during the "Meet the Press" program at the Press Club, Bengaluru on Friday. DH Photo/Mariya S Mattathil

Share on FacebookShare on TwitterShare on WhatsappShare on Telegram

ಬೆಂಗಳೂರು: “ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಹತ್ಯೆಗೈದ ಸಂಘಟನೆಯು ಶತಮಾನೋತ್ಸವ ಆಚರಿಸುತ್ತಿರುವುದು ಈ ದೇಶದ ಅತಿದೊಡ್ಡ ದುರಂತ. ಆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರೇ ಭಾಗವಹಿಸಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನ,” ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಗಾಂಧೀಜಿಯವರ 156ನೇ ಜನ್ಮದಿನಾಚರಣೆಯ ಅಂಗವಾಗಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸರಣಿ ಆರೋಪಗಳನ್ನು ಮಾಡಿದರು.

Related posts

ಬರ ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸ್ವಪಕ್ಷದ ವಿರುದ್ಧವೇ ತೊಡೆ ತಟ್ಟಿದ ಹಿರಿಯ ನಾಯಕ ಎಚ್ ಕೆ ಪಾಟೀಲ್ -ಲಜ್ಜೆಗೆಟ್ಟ ಸರ್ಕಾರಕ್ಕೆ ಸ್ವಪಕ್ಷದವರೇ ಉಗಿಯುತ್ತಿದ್ದಾರೆ ಎಂದ ಆರ್ ಅಶೋಕ್

ಬರ ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸ್ವಪಕ್ಷದ ವಿರುದ್ಧವೇ ತೊಡೆ ತಟ್ಟಿದ ಹಿರಿಯ ನಾಯಕ ಎಚ್ ಕೆ ಪಾಟೀಲ್ -ಲಜ್ಜೆಗೆಟ್ಟ ಸರ್ಕಾರಕ್ಕೆ ಸ್ವಪಕ್ಷದವರೇ ಉಗಿಯುತ್ತಿದ್ದಾರೆ ಎಂದ ಆರ್ ಅಶೋಕ್

September 22, 2026
ಲಂಚಕ್ಕೆ ಧರ್ಮದ ಹಣೆಪಟ್ಟಿ ಕಟ್ಟಿದ ಸಚಿವ ಶಿವಲಿಂಗೇಗೌಡರ ವಿರುದ್ಧ ರಾಜ್ಯಪಾಲರಿಗೆ ದೂರು: ಮಂತ್ರಿ ಸ್ಥಾನಕ್ಕೆ ಕುತ್ತು ತರುತ್ತಾ ಗೌರವದ ಉಡುಗೊರೆ ಹೇಳಿಕೆ

ಲಂಚಕ್ಕೆ ಧರ್ಮದ ಹಣೆಪಟ್ಟಿ ಕಟ್ಟಿದ ಸಚಿವ ಶಿವಲಿಂಗೇಗೌಡರ ವಿರುದ್ಧ ರಾಜ್ಯಪಾಲರಿಗೆ ದೂರು: ಮಂತ್ರಿ ಸ್ಥಾನಕ್ಕೆ ಕುತ್ತು ತರುತ್ತಾ ಗೌರವದ ಉಡುಗೊರೆ ಹೇಳಿಕೆ

September 22, 2026

‘ದೇಶದ ಮೊದಲ ಉಗ್ರಗಾಮಿ ಗೋಡ್ಸೆ’

ಸತ್ಯ, ಶಾಂತಿ ಮತ್ತು ಅಹಿಂಸೆಯ ಮೂಲಕ ಜಗತ್ತಿಗೇ ಮಾದರಿಯಾದ ಗಾಂಧೀಜಿಯವರನ್ನು ಕೊಂದಿದ್ದು ಆರ್‌ಎಸ್‌ಎಸ್ ಸಿದ್ಧಾಂತ. ಆ ಸಂಘಟನೆಯ ಕಾರ್ಯಕರ್ತ ನಾಥೂರಾಮ್ ಗೋಡ್ಸೆಯೇ ಈ ದೇಶದ ಮೊದಲ ಉಗ್ರಗಾಮಿ. ಸರ್ವೋದಯ ಮತ್ತು ಸದ್ಭಾವನೆಯ ತತ್ವಗಳಿಗೆ ವಿರುದ್ಧವಾಗಿ ದ್ವೇಷವನ್ನೇ ಬೋಧಿಸುವ ಸಂಘಟನೆಯ 100ನೇ ವರ್ಷದ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಹರಿಪ್ರಸಾದ್ ಕಿಡಿಕಾರಿದರು.

ಪಟೇಲರೇ ನಿಷೇಧಿಸಿದ್ದ ಸಂಘಟನೆ, ಬ್ರಿಟಿಷರ ಬೂಟು ನೆಕ್ಕಿದವರು

ಹರಿಪ್ರಸಾದ್ ತಮ್ಮ ವಾಗ್ದಾಳಿಯನ್ನು ಮುಂದುವರಿಸುತ್ತಾ, “ಗಾಂಧೀಜಿ ಹತ್ಯೆಯಲ್ಲಿ ಆರ್‌ಎಸ್‌ಎಸ್ ಪಾತ್ರವನ್ನು ಮನಗಂಡು ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೇ ಈ ಸಂಘಟನೆಯನ್ನು ನಿಷೇಧಿಸಿದ್ದರು. ಇತಿಹಾಸ ಹೀಗಿರುವಾಗ, ಅದೇ ಸಂಘಟನೆಯ ವೇದಿಕೆಯಲ್ಲಿ ಪ್ರಧಾನಿ ಕಾಣಿಸಿಕೊಳ್ಳುವುದು ರಾಷ್ಟ್ರಕ್ಕೆ ಮಾಡುವ ಅವಮಾನ,” ಎಂದರು.

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಆರ್‌ಎಸ್‌ಎಸ್ ಮತ್ತು ಸಾವರ್ಕರ್ ಬ್ರಿಟಿಷರ ಪರ ನಿಂತು ಅವರ ಬೂಟುಗಾಲನ್ನು ನೆಕ್ಕುತ್ತಿದ್ದರು. ಸಾವರ್ಕರ್ ಬ್ರಿಟಿಷರಿಂದಲೇ ಪೆನ್ಷನ್ ಪಡೆಯುತ್ತಿದ್ದರು. 1942ರ ಕ್ವಿಟ್ ಇಂಡಿಯಾ ಚಳವಳಿಯನ್ನು ವಿರೋಧಿಸಿದ ಇಂತಹ ದೇಶದ್ರೋಹಿ ಸಂಘಟನೆಯ ಸ್ಮರಣಾರ್ಥವಾಗಿ ಸ್ಮಾರಕ ನಾಣ್ಯಗಳನ್ನು ಹೊರತರುತ್ತಿರುವುದು ಲಕ್ಷಾಂತರ ಸ್ವಾತಂತ್ರ್ಯ ಯೋಧರ ಬಲಿದಾನಕ್ಕೆ ಮಾಡಿದ ಅಪಮಾನ, ಎಂದು ಆರೋಪಿಸಿದರು.

ಪ್ರಧಾನಿ ಮೋದಿ ದೇಶದ ಕ್ಷಮೆ ಯಾಚಿಸಬೇಕು

ಆರ್‌ಎಸ್‌ಎಸ್ ಶತಮಾನೋತ್ಸವದಲ್ಲಿ ಭಾಗವಹಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ಹರಿಪ್ರಸಾದ್ ಆಗ್ರಹಿಸಿದರು. “62 ವರ್ಷಗಳ ಕಾಲ ತಮ್ಮ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸದ, ಸಂವಿಧಾನವನ್ನು ಒಪ್ಪದ ಸಂಘಟನೆಯೊಂದಿಗೆ ಪ್ರಧಾನಿ ನಿಂತಿರುವುದು ಅವರಿಗೆ ಶೋಭೆ ತರುವುದಿಲ್ಲ. ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತಿ ರಾಜಕೀಯ ಮಾಡುವವರನ್ನು ಬೆಂಬಲಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕ,” ಎಂದರು.

ದ್ವೇಷ ಬಿತ್ತುವವರ ವಿರುದ್ಧ ಶಸ್ತ್ರ ಹಿಡಿಯಬೇಕಾದೀತು

ತಮ್ಮ ಮಾತಿನ ಆಕ್ರೋಶವನ್ನು ತೀವ್ರಗೊಳಿಸಿದ ಹರಿಪ್ರಸಾದ್, “ಆರ್‌ಎಸ್‌ಎಸ್ ದೇಶದಾದ್ಯಂತ ಶಸ್ತ್ರಾಸ್ತ್ರಗಳನ್ನು ಬಳಸಿ ದಂಗೆ, ಗಲಭೆ ಮತ್ತು ಕೊಲೆಗಳನ್ನು ಮಾಡಿಸಿದೆ. ದೇಶದಲ್ಲಿ ಹಿಂಸೆಯ ಬೀಜ ಬಿತ್ತಿದ ಇಂತಹ ಸಂಘಟನೆಯ ವಿರುದ್ಧವೇ ಜನರು ಶಸ್ತ್ರಾಸ್ತ್ರ ಹಿಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಇವರ ಚಟುವಟಿಕೆಗಳ ವಿರುದ್ಧ ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು,” ಎಂದು ಒತ್ತಾಯಿಸಿದರು.

ಇದೇ ವೇಳೆ, ಸಚಿವ ಸಂಪುಟದಲ್ಲಿ ಸ್ಥಾನಮಾನದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಅನಿಸಿಕೆಗಳು ಸಾಕಷ್ಟಿವೆ. ಬಿರಿಯಾನಿ ತಿನ್ನಬೇಕೆಂಬ ಆಸೆ, ಸದ್ಯಕ್ಕೆ ಚಿತ್ರಾನ್ನ ತಿಂದರೂ ಸಾಕು,” ಎಂದು ತಮ್ಮ ಅಸಮಾಧಾನವನ್ನು ವ್ಯಂಗ್ಯದ ಮೂಲಕ ಹೊರಹಾಕಿದರು.

ShareTweetSendShare
Join us on:

Related Posts

ಬರ ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸ್ವಪಕ್ಷದ ವಿರುದ್ಧವೇ ತೊಡೆ ತಟ್ಟಿದ ಹಿರಿಯ ನಾಯಕ ಎಚ್ ಕೆ ಪಾಟೀಲ್ -ಲಜ್ಜೆಗೆಟ್ಟ ಸರ್ಕಾರಕ್ಕೆ ಸ್ವಪಕ್ಷದವರೇ ಉಗಿಯುತ್ತಿದ್ದಾರೆ ಎಂದ ಆರ್ ಅಶೋಕ್

ಬರ ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸ್ವಪಕ್ಷದ ವಿರುದ್ಧವೇ ತೊಡೆ ತಟ್ಟಿದ ಹಿರಿಯ ನಾಯಕ ಎಚ್ ಕೆ ಪಾಟೀಲ್ -ಲಜ್ಜೆಗೆಟ್ಟ ಸರ್ಕಾರಕ್ಕೆ ಸ್ವಪಕ್ಷದವರೇ ಉಗಿಯುತ್ತಿದ್ದಾರೆ ಎಂದ ಆರ್ ಅಶೋಕ್

by Shwetha
September 22, 2026
0

ಗದಗ: ಕರಾವಳಿ ಭಾಗದಲ್ಲಿ ಸಂಪುಟ ಸಭೆ ನಡೆಸಿ ಜೈಕಾರ ಹಾಕಿಸಿಕೊಳ್ಳುತ್ತಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈಗ ಉತ್ತರ ಕರ್ನಾಟಕದ ಭಾಗದಿಂದ ಭಾರೀ ಆಘಾತ ಎದುರಾಗಿದೆ. ಗದಗ ತಾಲ್ಲೂಕನ್ನು...

ಲಂಚಕ್ಕೆ ಧರ್ಮದ ಹಣೆಪಟ್ಟಿ ಕಟ್ಟಿದ ಸಚಿವ ಶಿವಲಿಂಗೇಗೌಡರ ವಿರುದ್ಧ ರಾಜ್ಯಪಾಲರಿಗೆ ದೂರು: ಮಂತ್ರಿ ಸ್ಥಾನಕ್ಕೆ ಕುತ್ತು ತರುತ್ತಾ ಗೌರವದ ಉಡುಗೊರೆ ಹೇಳಿಕೆ

ಲಂಚಕ್ಕೆ ಧರ್ಮದ ಹಣೆಪಟ್ಟಿ ಕಟ್ಟಿದ ಸಚಿವ ಶಿವಲಿಂಗೇಗೌಡರ ವಿರುದ್ಧ ರಾಜ್ಯಪಾಲರಿಗೆ ದೂರು: ಮಂತ್ರಿ ಸ್ಥಾನಕ್ಕೆ ಕುತ್ತು ತರುತ್ತಾ ಗೌರವದ ಉಡುಗೊರೆ ಹೇಳಿಕೆ

by Shwetha
September 22, 2026
0

ಹಾಸನ: ಸಕಲೇಶಪುರದಲ್ಲಿ ನಡೆದ ಪ್ರಜಾಸೇವೆ ಸಭೆಯಲ್ಲಿ ಅಧಿಕಾರಿಗಳಿಗೆ ಗೌರವಯುತವಾಗಿ ಏನಾದರೂ ಕೊಡುವುದು ನಿಮ್ಮ ಧರ್ಮ ಎಂದು ಹೇಳಿಕೆ ನೀಡಿದ್ದ ಅಬಕಾರಿ ಸಚಿವ ಶಿವಲಿಂಗೇಗೌಡ ಅವರ ಸಂಕಷ್ಟ ಈಗ...

‘ಅಧಿಕಾರಿಗಳಿಗೆ ಗೌರವ ಕೊಡಿ, ಲಂಚ ನೀಡಬೇಡಿ’: ವೈರಲ್ ವಿಡಿಯೋ ವಿವಾದದ ಬಳಿಕ ಸಚಿವ ಶಿವಲಿಂಗೇಗೌಡ ಸ್ಪಷ್ಟನೆ

‘ಅಧಿಕಾರಿಗಳಿಗೆ ಗೌರವ ಕೊಡಿ, ಲಂಚ ನೀಡಬೇಡಿ’: ವೈರಲ್ ವಿಡಿಯೋ ವಿವಾದದ ಬಳಿಕ ಸಚಿವ ಶಿವಲಿಂಗೇಗೌಡ ಸ್ಪಷ್ಟನೆ

by Shwetha
September 22, 2026
0

ಅಬಕಾರಿ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರ ಹೇಳಿಕೆಯೊಂದು ಇದೀಗ ರಾಜಕೀಯ ವಲಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಸೆಪ್ಟೆಂಬರ್ 19ರಂದು ಸಕಲೇಶಪುರದಲ್ಲಿ ನಡೆದ...

ಶಾಲಾ ಮಕ್ಕಳಿಗೆ ಅ.3ರಿಂದ 19 ದಿನಗಳ ದಸರಾ ರಜೆ

ಶಾಲಾ ಮಕ್ಕಳಿಗೆ ಅ.3ರಿಂದ 19 ದಿನಗಳ ದಸರಾ ರಜೆ

by Shwetha
September 22, 2026
0

ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ 2026-27ನೇ ಶೈಕ್ಷಣಿಕ ಸಾಲಿನ ದಸರಾ ರಜೆಯ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ. ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ, ಅಕ್ಟೋಬರ್ 3ರಿಂದ ಅಕ್ಟೋಬರ್ 21ರವರೆಗೆ ಒಟ್ಟು...

ಸರ್ಕಾರ ದಿವಾಳಿಯಾಗಿದ್ದರೆ ನನ್ನ 10 ಎಕರೆ ಜಮೀನು ತಗೊಳ್ಳಿ: ಸಚಿವ ಬಾಲಕೃಷ್ಣ ಸವಾಲಿಗೆ ಹೆಚ್ ಡಿ ರೇವಣ್ಣ ಖಡಕ್ ಪ್ರತ್ಯುತ್ತರ

ಸರ್ಕಾರ ದಿವಾಳಿಯಾಗಿದ್ದರೆ ನನ್ನ 10 ಎಕರೆ ಜಮೀನು ತಗೊಳ್ಳಿ: ಸಚಿವ ಬಾಲಕೃಷ್ಣ ಸವಾಲಿಗೆ ಹೆಚ್ ಡಿ ರೇವಣ್ಣ ಖಡಕ್ ಪ್ರತ್ಯುತ್ತರ

by Shwetha
September 22, 2026
0

ಹಾಸನ: ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಜೆಡಿಎಸ್ ನಾಯಕ ಹೆಚ್ ಡಿ ರೇವಣ್ಣ ನಡುವಿನ ಜಮೀನು ಜಟಾಪಟಿ ಈಗ ತಾರಕಕ್ಕೇರಿದೆ. ಸಾಲಮನ್ನಾ ಮಾಡಲು ನೆಲಮಂಗಲದಲ್ಲಿರುವ ನಿಮ್ಮ ಜಮೀನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram