ಆಕಾಶ್ ಕುಮಾರ್ ಚೌಧರಿ.. ಈ ಋತುವಿನ ದೇಸಿ ಕ್ರಿಕೆಟ್‍ನ ಹೀರೋ. ಮೇಘಾಲಯದ ವೇಗಿ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಇತಿಹಾಸವನ್ನೇ ನಿರ್ಮಿಸಿದ್ದಾನೆ. ಒಂದೇ ಓವರ್‍ನಲ್ಲಿ ಸತತ ಸಿಕ್ಸರ್ ಸಿಡಿಸಿದ್ದ ದಾಖಲೆ ಸದ್ಯ ಭಾರತದಲ್ಲಿ ರವಿಶಾಸ್ತ್ರಿ ಹೆಸರಿನಲ್ಲಿದೆ. ಇದೀಗ ಆಕಾಶ್ ಕುಮಾರ್ ಚೌಧರಿ ಸತತ ಆರು ಸಿಕ್ಸರ್ ಸಿಡಿಸಿದ್ದಲ್ಲದೇ, ಸತತ ಎಂಟು ಎಸೆತಗಳಲ್ಲಿ ಎಂಟು ಸಿಕ್ಸರ್ ಸಿಡಿಸಿದ್ದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾನೆ.
ಕಳೆದ ಭಾನುವಾರ ಅರುಣಾಚಲ ಪ್ರದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಆಕಾಶ್ ಕುಮಾರ್ 11 ಎಸೆತಗಳಲ್ಲಿ 50 ರನ್ ದಾಖಲಿಸಿ ದೇಸಿ ಕ್ರಿಕೆಟ್‍ನಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾನೆ. ಈ ಹಿಂದೆ ದೇಸಿ ಕ್ರಿಕೆಟ್‍ನಲ್ಲಿ ವೆಸ್ಟ್ ಇಂಡೀಸ್‍ನ ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಮತ್ತು ಭಾರತದ ಪರ ರವಿಶಾಸ್ತ್ರಿ ದೇಸಿ ಕ್ರಿಕೆಟ್‍ನಲ್ಲಿ ಆರು ಎಸೆತಗಳಲ್ಲಿ ಸತತ ಆರು ಸಿಕ್ಸರ್‍ಗಳನ್ನು ಸಿಡಿಸಿದ್ದರು.
ಇದೀಗ ಆಕಾಶ್ ಕುಮಾರ್ ಚೌಧರಿ ಐಪಿಎಲ್‍ನತ್ತ ಚಿತ್ತವನ್ನಿಟ್ಟಿದ್ದಾನೆ. ಐಪಿಎಲ್‍ನ ಯಾವುದಾದ್ರೂ ಒಂದು ಫ್ರಾಂಚೈಸಿಯಲ್ಲಿ ಆಡುವ ಅವಕಾಶ ಸಿಗಬಹುದು ಎಂಬ ಆಶಾಭಾವನೆಯಲ್ಲಿದ್ದಾನೆ ಆಕಾಶ್ ಕುಮಾರ್
ಐಪಿಎಲ್‍ನಲ್ಲಿ ಆಡಿದ್ರೆ ನಿಮ್ಮ ಹೆಸರು ದಾಖಲಾಗುತ್ತದೆ. ಐಪಿಎಲ್‍ನಲ್ಲಿ ಆಡುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ಅದೇ ರೀತಿ ನನಗೂ ಐಪಿಎಲ್‍ನಲ್ಲಿ ಆಡಬೇಕು ಎಂಬ ಆಸೆ ಇದೆ ಎಂದು ಆಕಾಶ್ ಕುಮಾರ್ ಹೇಳಿಕೊಂಡಿದ್ದಾನೆ.
ಈಗಾಗಲೇ ನಾರ್ತ್‍ಈಸ್ಟ್‍ನಿಂದ ರಿಯಾನ್ ಪರಾಗ್ ಮಾತ್ರ ಐಪಿಎಲ್‍ನಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದಾನೆ. ಅಲ್ಲದೆ ಭಾರತ ತಂಡದಲ್ಲಿ ಅವಕಾಶ ಪಡೆದ ಮೊದಲ ನಾರ್ತ್ ಆಟಗಾರ. ಈಗಾಗಲೇ ರಿಯಾನ್ ಪರಾಗ್ 9 ಟಿ-20 ಪಂದ್ಯಗಳಲ್ಲಿ ಭಾರತದ ಪರ ಆಡಿದ್ದಾನೆ.
ನಾನು ದಾಖಲೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಬಿಹಾರ ವಿರುದ್ಧದ ಪಂದ್ಯದಲ್ಲೂ ನಾನು ನಾಲ್ಕು ಸಿಕ್ಸರ್‍ಗಳ ಸಹಾಯದಿಂದ 60 ರನ್ ಗಳಿಸಿದ್ದೇನೆ. ಅಂದ ಹಾಗೇ ನೆಟ್ಸ್‍ನಲ್ಲಿ ನಾನು ಬೀಸು ಹೊಡೆತಗಳ ಬಗ್ಗೆ ಗಮನ ಹರಿಸುತ್ತಿದ್ದೆ. ನಮ್ಮ ತಂಡ ಈಗ ಉತ್ತಮ ಸ್ಥಿತಿಯಲ್ಲಿದೆ. ನಾನು ಆಟದ ಕಡೆ ಹೆಚ್ಚಿನ ಗಮನಹರಿಸುತ್ತಿದ್ದೇನೆ. ಅದರಲ್ಲೂ ಬೀಸು ಹೊಡೆತದ ಕಡೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ. ಅಷ್ಟೇ ಅಲ್ಲ, ಪ್ರತಿಯೊಬ್ಬ ಕ್ರಿಕೆಟಿಗನಿಗೂ ಒತ್ತಡಗಳು ಇರುವುದು ಸಹಜ. ನನ್ನ ಗುರಿ ತಂಡಕ್ಕೆ ಉತ್ತಮ ಪ್ರದರ್ಶನ ನೀಡುವುದು. ತಂಡದ ಗೆಲುವಿಗೆ ಸಹಕರಿಸುವುದು ಎಂದು ಆಕಾಶ್ ಚೌಧರಿ ಹೇಳಿಕೊಂಡಿದ್ದಾನೆ.
ಒಟ್ಟಿನಲ್ಲಿ ಆಕಾಶ್ ಕುಮಾರ್ ಚೌಧರಿ ಮುಂದಿನ ಐಪಿಎಲ್‍ನಲ್ಲಿ ಫ್ರಾಂಚೈಸಿಗಳು ಕಣ್ಣೀಟ್ಟಿರುವುದಂತೂ ಸುಳ್ಳಲ್ಲ. ವೇಗದ ಬೌಲಿಂಗ್ ಜೊತೆ ಬ್ಯಾಟಿಂಗ್ ಆಲೌರೌಂಡರ್ ಆಗಿ ತಂಡಕ್ಕೆ ಆಧಾರವಾಗಬಹುದು. ಒಂದು ವೇಳೆ ಆಕಾಶ್ ಕುಮಾರ್ ಇದೇ ರೀತಿಯ ಪ್ರದರ್ಶನ ಮುಂದುವರಿದ್ರೆ, ಹಾರ್ದಿಕ್ ಪಾಂಡ್ಯನಿಗೆ ರಿಪ್ಲೇಸ್ ಆಗೋ ಅವಕಾಶವೂ ಇದೆ. ಯಾವೂದಕ್ಕೂ ಕಾದು ನೋಡೋಣ.
ಇಂದರ್‌ಜಿತ್ ಸಿಂಗ್ ಬಿಂದ್ರಾ : ಭಾರತೀಯ ಕ್ರಿಕೆಟ್‌ನ ಚಿತ್ರಣ ಬದಲಾಯಿಸಿದ ದಿಟ್ಟ ಆಡಳಿತಗಾರ..!
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅರ್ಥಾತ್ ಬಿಸಿಸಿಐ.. ಇವತ್ತು ವಿಶ್ವ ಕ್ರಿಕೆಟ್‍ನ ಕುಬೇರ. ಕೈ ಬೆರಳಿನಲ್ಲಿ ವಿಶ್ವ ಕ್ರಿಕೆಟ್ ಅನ್ನು ಆಳುತ್ತಿರುವ ಬಿಸಿಸಿಐ ಇಷ್ಟೊಂದು ಶ್ರೀಮಂತಗೊಳ್ಳಲು ಪ್ರಮುಖ...







