ಬೆಂಗಳೂರು: ಮಾಹಾಮಾರಿ ಕೊರೊನಾ ಸೋಂಕು ಹರಡಿರುವ ವಿಚಾರದಲ್ಲಿ ಆರೋಗ್ಯ ತಜ್ಞರು ನೀಡಿದ ವರದಿ ಬೆಂಗಳೂರನ್ನು ಬೆಚ್ಚಿ ಬೀಳಿಸುತ್ತಿದೆ. ನಗರದಲ್ಲಿ ಎರಡೂವರೆ ಲಕ್ಷದಿಂದ 3 ಲಕ್ಷ ಮಂದಿ ಕೊರೊನಾ ಹರಡಿರುವ ಸಾಧ್ಯತೆ ಇದೆ ಎಂಬ ಆಘಾತಕಾರಿ ಸಂಗತಿಯನ್ನು ತಜ್ಞರು ನೀಡಿದ್ದಾರೆ. ಈ ಅಂಕಿ ಸಂಖ್ಯೆಯನ್ನು ನೋಡಿದೆರೆ ಬೆಂಗಳೂರು ಡೇಂಜರ್…ಡೇಂಜರ್ನತ್ತ ಸಾಗುತ್ತಿರುವುದದು ಸ್ಪಷ್ಟವಾಗಿದೆ.
ಹೌದು, ಸದ್ಯ ಬೆಂಗಳೂರಿನಲ್ಲಿ 20 ಸಾವಿರ ಮಂದಿಗೆ ಕೊರೊನಾ ಪಾಸಿಟಿವೆ ಬಂದಿದೆ. ಆದರೆ, ವಾಸ್ತವದಲ್ಲಿ ಅರೋಗ್ಯ ಇಲಾಖೆ ತಜ್ಞರು ಅಂದಾಜು ಪ್ರಕಾರ 2.5 ಲಕ್ಷದಿಂದ 3 ಲಕ್ಷ ಮಂದಿಗೆ ಸೋಂಕು ಹರಿಡುವ ಸಾಧ್ಯತೆ ಇದೆ ಎಂದು ಲೆಕ್ಕಾಚಾರ ಹಾಕಿದ್ದಾರೆ.
ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ 2-3 ತಿಂಗಳಲ್ಲಿ ಬೆಂಗಳೂರಿನಲ್ಲಿ 10 ಲಕ್ಷಕ್ಕೆ ಈ ಸಂಖ್ಯೆ ತಲುಪುವ ಅಪಾಯವಿದೆ ಎನ್ನಲಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಎಚ್ಚೆತ್ತುಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಸೋಂಕು ಹರಡಲು ಕಾರಣ.. ಲೆಕ್ಕಾಚಾರ ಹೇಗೆ..?
1. ಬೆಂಗಳೂರಿನ ಜನಸಂಖ್ಯೆಗೆ ಹೋಲಿಕೆ ಮಾಡಿದಾಗ ಒಬ್ಬರಿಂದ 10ರಿಂದ 15 ಮಂದಿಗೆ ಸೋಂಕು ಹರಡಿರುವ ಸಾಧ್ಯತೆ.
2. ಸರಿಯಾದ ರೀತಿಯಲ್ಲಿ ಕೊರೊನಾ ಟೆಸ್ಟ್ ಮಾಡದೇ ಇರುವುದು
3. ರ್ಯಾಂಡಮ್ ಟೆಸ್ಟ್ ಮಾಡಲು ವಿಳಂಬ
4. ಸೋಂಕಿನ ಲಕ್ಷಣ ಇರುವವರಿಗೆ ಹೋಂ ಕ್ವಾರಂಟೈನ್ ಮಾಡದೇ ಇರುವುದು
5. ಪ್ರಯೋಗಾಲಯದ ವರದಿ ಬರುವ ಮುನ್ನವೇ ಅತ ಊರೆಲ್ಲಾ ಓಡಾಡಿರುವ ಸಾಧ್ಯತೆ
6. ಸೋಂಕಿನ ಮೂಲ ಪತ್ತೆ ಹಚ್ಚುವಲ್ಲಿ ವಿಫಲವಾಗಿರುವುದು
7. ಸೋಂಕಿತರಿಂದ ನೆರೆ ಹೊರೆಯವರಿಗೂ ವೈರಸ್ ಹರಡಿರುವ ಸಾಧ್ಯತೆ..
8. ಸೋಂಕು ತಡೆಗೆ ಜನರ ನಿರ್ಲಕ್ಷ್ಯ
9. ಮಾಸ್ಕ್ ಹಾಕದೇ ಬೇಕಾಬಿಟ್ಟಿ ಓಡಾಟ








