ದಕ್ಷಿಣ ಕನ್ನಡ ಜಿಲ್ಲೆಯಿಂದ ಮಹೇಶ್ ಶೆಟ್ಟಿ ತಿಮರೋಡಿಯನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಒಂದು ವರ್ಷದ ಅವಧಿಗೆ ಗಡಿಪಾರು ಮಾಡುವಂತೆ ಪುತ್ತೂರು ಸಹಾಯಕ ಆಯುಕ್ತರು ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ದೊಡ್ಡ ತಿರುವು ನೀಡಿದೆ. ತಿಮರೋಡಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆಗೈದ ನ್ಯಾಯಪೀಠ, ಗಡಿಪಾರು ಆದೇಶವನ್ನು ರದ್ದುಪಡಿಸಿದೆ.
ನ್ಯಾಯಾಲಯ ತಿಮರೋಡಿ ಪರ ನೀಡಲಾದ ವಾದಗಳನ್ನು ಪರಿಗಣಿಸಿ, ಪ್ರಕರಣದ ಎಲ್ಲಾ ಅಂಶಗಳನ್ನು ಪುನಃ ಪರಿಶೀಲಿಸಿ ಹೊಸದಾಗಿ ಸೂಕ್ತ ಆದೇಶ ಹೊರಡಿಸುವಂತೆ 2ನೇ ಪ್ರತಿವಾದಿಯಾಗಿರುವ ಪುತ್ತೂರು ಸಹಾಯಕ ಆಯುಕ್ತರಿಗೆ ನಿರ್ದೇಶನ ನೀಡಿದೆ.
ಈ ತೀರ್ಪಿನಿಂದ ತಿಮರೋಡಿ ಅವರಿಗೆ ಸದ್ಯಕ್ಕೆ ರಿಲೀಫ್ ಸಿಕ್ಕಿದ್ದು, ಇದೀಗ ಮುಂದಿನ ಕ್ರಮ ಪುತ್ತೂರು ಸಹಾಯಕ ಆಯುಕ್ತರ ಹೊಸ ವಿಚಾರಣೆ ಮತ್ತು ಆದೇಶದ ಮೇಲೆ ಅವಲಂಬಿತವಾಗಿದೆ.








