ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಹಾಮಾರಿ ಅಟ್ಟಹಾಸ ಮುಂದುವರೆದಿದ್ದು, ಬಿಬಿಎಂಪಿಯ ಇಬ್ಬರು ಅಧಿಕಾರಿಗಳನ್ನು ಬಲಿ ಪಡೆದಿದೆ. ಇದರಿಂದ ಎರಡೇ ದಿನಗಳಲ್ಲಿ ಬಿಬಿಎಂಪಿಯ ನಾಲ್ವರು ಅಧಿಕಾರಿಗಳನ್ನು ಹೆಮ್ಮಾರಿ ಉಸಿರು ಚೆಲ್ಲಿಸಿದೆ.
ಮಹಾಲಕ್ಷ್ಮೀಪುರ ಅಸೆಂಬ್ಲಿ ಕ್ಷೇತ್ರದ ಎಕ್ಸಿಕ್ಯೂಟಿವ್ ಎಂಜಿನಿಯರ್ ಕಚೇರಿ ಮ್ಯಾನೇಜರ್ ವ್ಯವಸ್ಥಾಪಕರಾಗಿದ್ದ ಆರ್.ವಿಶ್ವನಾಥ್ (52) ಹಾಗೂ ಗೋವಿಂದರಾಜನಗರ ಕ್ಷೇತ್ರದ ಕಂದಾಯ ಅಧಿಕಾರಿ ಕಚೇರಿ ಮ್ಯಾನೇಜರ್ ಬಿ.ಕೆ. ಶೈಲೇಶ್ (58) ಮೃತಪಟ್ಟಿದ್ದಾರೆ.
ಯಲಹಂಕ ಹಳೆಪಟ್ಟಣ ಉಪ ವಿಭಾಗದ ಕಂದಾಯ ಮೌಲ್ಯಮಾಪಕ ನಟರಾಜ್ (58) ಹಾಗೂ ಚಾಮರಾಜಪೇಟೆ ಉಪವಿಭಾಗದ ಕಂದಾಯ ಮೌಲ್ಯಮಾಪಕ ತಿಮ್ಮಯ್ಯ (54) ಅವರು ಕೋವಿಡ್ನಿಂದಾಗಿ ಮಂಗಳವಾರ ಮೃತಪಟ್ಟಿದ್ದರು. ವಿಶ್ವನಾಥ್ ಅವರು ಹೃದಯಾಘಾತದಿಂದ ಬ ಮೃತಪಟ್ಟಿದ್ದಾರೆ. ಮೃತದೇಹವನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಅವರಿಗೂ ಸೋಂಕು ಇದ್ದುದು ಗೊತ್ತಾಗಿದೆ.
ವಿಶ್ವನಾಥ್ ಅವರು 1997ರಲ್ಲಿ ದ್ವಿತೀಯ ದರ್ಜೆ ಗುಮಾಸ್ತರಾಗಿ ಬಿಬಿಎಂಪಿಗೆ ಸೇರಿದ್ದರು. 2017ರಲ್ಲಿ ವ್ಯವಸ್ಥಾಪಕರಾಗಿ ಬಡ್ತಿ ಹೊಂದಿದ್ದರು. ವಿಶ್ವನಾಥ್ ಒಂದು ವಾರದಿಂದ ಈಚೆಗೆ ಕೆಲಸಕ್ಕೆ ಬಂದಿರಲಿಲ್ಲ. ಬುಧವಾರ ಬೆಳಿಗ್ಗೆ 9.30 ಸುಮಾರಿಗೆ ಅವರಿಗೆ ಹೃದಯಾಘಾತವಾಗಿತ್ತು. ಕೋವಿಡ್ ಪರೀಕ್ಷೆ ಮಾಡಿಸಿದಾಗ ಅವರಿಗೆ ಸೋಂಕು ಇದ್ದುದು ದೃಡಪಟ್ಟಿದೆ.
ಅದೇ ರೀತಿ ಗೋವಿಂದರಾಜನಗರದ ಶೈಲೇಶ್ ಕೂಡ ಕಳೆದ ಬುಧವಾರದ ಬಳಿಕ ಕಚೇರಿಗೆ ಬಂದಿರಲಿಲ್ಲ. ಅವರಿಗೆ ಪಾಶ್ರ್ವವಾಯುವಿನಿಂದಾಗಿ ಎಡಗೈ ಮತ್ತು ಎಡಗಾಲು ಅಷ್ಟಾಗಿ ಸ್ವಾಧೀನ ಇರಲಿಲ್ಲ. ರಕ್ತದೊತ್ತಡ ಹಾಗೂ ಮಧುಮೇಹ ಸಮಸ್ಯೆಯೂ ಇತ್ತು ಎಂದು ಆಪ್ತ ಮೂಲಗಳು ತಿಳಿಸಿವೆ. ಶೈಲೇಶ್ ಬುಧವಾರ ಮೈ ಹುಷಾರಿಲ್ಲ ಎಂದು ಕಚೇರಿಯಿಂದ ಬೇಗನೇ ಹೊರಟರು. ಮರು ದಿನ ಅವರಿಗೆ ಜ್ವರ ಇರುವುದಾಗಿ ಅವರ ಮನೆಯವರು ಕರೆ ಮಾಡಿ ತಿಳಿಸಿದ್ದರು. ಅನಾರೋಗ್ಯ ಉಲ್ಬಣಿಸಿದ್ದರಿಂದ ಅವರನ್ನು ಶನಿವಾರ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿತ್ತು. ಆಸ್ಪತ್ರೆಗೆ ದಾಖಲಿಸುವವರೆಗೂ ಶೈಲೇಶ್ ಅವರಿಗೆ ಕೊರೋನಾ ಸೋಂಕು ಇರುವುದು ಗೊತ್ತಿರಲಿಲ್ಲ. ಅಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.
Astro – ಜ್ಯೋತಿಷ್ಯದಲ್ಲಿ ಮನುಷ್ಯರನ್ನು ಮೂರು ಗಣಗಳಾಗಿ ವಿಂಗಡಿಸಿದ್ದಾರೆ ದೇವ ಗಣ, ಮನುಷ್ಯ ಗಣ ಮತ್ತು ರಾಕ್ಷಸ ಗಣ.
ಮನುಷ್ಯನ ಜನ್ಮ ನಕ್ಷತ್ರದ ಆಧಾರದ ಮೇಲೆ ಗಣಗಳು ನಿರ್ಧಾರವಾಗಿರುತ್ತದೆ. 27 ನಕ್ಷತ್ರಗಳನ್ನು ಮೂರು ಗಣಗಳಾಗಿ ವಿಂಗಡಿಸಿದರೆ ಒಂದೊಂದು ಗಣಗಳು ಒಂಬತ್ತು ನಕ್ಷತ್ರಗಳಲ್ಲಿ ವಿಂಗಡಣೆ ಆಗುತ್ತದೆ. ನಿಮ್ಮ ಜನ್ಮ...








