ಕೊರೋನಾ ನಿರ್ಮೂಲನೆಗಾಗಿ ಈಗಗಾಗಲೇ ೨ನೇ ಹಂತದ ಬೆಂಗಳೂರು ಲಾಕ್ ಡೌನ್ ಮಾಡಿದ್ದು, 2ನೇ ದಿನವಾದ ಇಂದು ಸಹ ಬೆಂಗಳೂರು ಸ್ಥಬ್ಧವಾಗಿದೆ. ಸದಾ
ಜನಜಂಗುಳಿಯಿAದ ಕೂಡಿರುತ್ತಿದ್ದ ಮೆಜೆಸ್ಟಿಕ್ ಸ್ಯಾಟಿಲೈಟ್ ಸೇರಿ ಪ್ರಮುಖ ನಗರಗಳು ಇಂದು ಖಾಲಿ ಖಾಲಿಯಾಗಿವೆ. ಮತ್ತೊಂದೆಡೆ ಅನಾವಶ್ಯಕವಾಗಿ ಅಗತ್ಯ ಕಾರಣಗಳಿಲ್ಲದೆ ಓಡಾಟ ನಡೆಸುತ್ತಿರುವ ವಾಹನಸವಾರರನ್ನು ಪೊಲೀಸರು ತರಾಟೆಗೆ ತೆಗದುಕೊಂಡಿದ್ದಾರೆ. ಲಾಕ್ ಡೌನ್ ಸ್ಥಿತಿ ನಿಯಂತ್ರಣಕ್ಕೆ ಪಣ ತೊಟ್ಟಿರುವ ಪೊಲೀಸರುವ ಎಲ್ಲೆಡೆ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ತೀವ್ರಗೊಳಿಸಿದ್ದಾರೆ.
ವೈದ್ಯಕೀಯ ಸೇವೆ, ತರಕಾರಿ , ಆಹಾರ ಪದಾರ್ಥಗಳ ಸಾಗಾಣಿಕೆ ವಾಹನಗಳಿಗೆ ಹಾಗೂ ಇತರೇ ತುರ್ತು ಸೇವೆಗಳಿಗೆ ಎಂದಿನAತೆ ಅವಕಾಶ ಇದೆ. ದಿನೇ ದಿನೇ ರಾಜ್ಯ ಅದ್ರಲ್ಲೂ ಉದ್ಯಾನನಗರಿ ಬೆಂಗಳೂರಿನಲ್ಲಿ ಕೊರೊನಾ ಶರವೇಗದಲ್ಲಿ ಸಾವಿರಾರು ಜನರಿಗೆ ವ್ಯಾಪಿಸುತ್ತಿರುವು ಆತಂಕಕಾರಿ ಬೆಳವಣಿಗೆ. ಇದರ ನಡುವೆ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಹೀಗಾಗಿಯೇ ಕೊರೊನಾ ಚೈನ್ ಮುರಿಯಲು ಸರ್ಕಾರ ಲಾಕ್ ಡೌನ್ ಅಸ್ತç ಪ್ರಯೋಗಿಸಿದ್ದು, ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ.








