ADVERTISEMENT
Friday, March 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಉಸಿರಾಡಲು ಕರ್ನಾಟಕ ಬೇಕು.. ಪ್ರೀತಿಸಲು ಕರುನಾಡಿನ ಹೃದಯ ಬೇಕು.. ಆದ್ರೆ RCBಯಲ್ಲಿ ಕನ್ನಡಿಗರಿಗೆ ಅವಕಾಶ ಯಾಕಿಲ್ಲ..?

admin by admin
December 18, 2025
in Newsbeat, Sports, ಕ್ರಿಕೆಟ್
We need Karnataka to breathe.. We need the heart of Karnataka to love.. But why aren't Kannadigas allowed in RCB..?

We need Karnataka to breathe.. We need the heart of Karnataka to love.. But why aren't Kannadigas allowed in RCB..?

Share on FacebookShare on TwitterShare on WhatsappShare on Telegram

ಈ ಸಲ ಕಪ್ ನಮ್ದೆ.. ಈ ಸಲ ಕಪ್ ನಮ್ದೆ..
ಕಳೆದ 17 ಐಪಿಎಲ್ ಟೂರ್ನಿಗಳಲ್ಲಿ ನಿರಾಸೆ ಅನುಭವಿಸಿದ್ರೂ RCB ಅಭಿಮಾನಿಗಳು ಆರ್‍ಸಿಬಿ ತಂಡದ ಮೇಲೆ ನಂಬಿಕೆ ಕಳೆದುಕೊಂಡಿರಲಿಲ್ಲ. ಕೊನೆಗೂ 18ನೇ ಐಪಿಎಲ್‍ನಲ್ಲಿ ಚಾಂಪಿಯನ್‍ಪಟ್ಟಕ್ಕೇರಿದಾಗ RCB ಅಭಿಮಾನಿಗಳ ಸಂತಸ, ಖುಷಿಗೆ ಪಾರವೇ ಇರಲಿಲ್ಲ.
ಆದ್ರೆ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಅಭಿಮಾನಿಗಳನ್ನು ಬಲಿಪಡೆದುಕೊಂಡಿರುವುದು RCBಗೆ ಮಾತ್ರವಲ್ಲ. ಬೆಂಗಳೂರು, ಚಿನ್ನಸ್ವಾಮಿ ಅಂಗಣಕ್ಕೂ ಕಪ್ಪುಚುಕ್ಕೆಯಾಗಿದೆ. ಪರಿಣಾಮ ಚಿನ್ನಸ್ವಾಮಿ ಮೈದಾನದಲ್ಲಿ ಈ ಬಾರಿ ಪಂದ್ಯಗಳು ನಡೆಯುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.
ಈ ನಡುವೆ 19ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಫ್ರಾಂಚೈಸಿಗಳು ಸಿದ್ಧಗೊಳ್ಳುತ್ತಿವೆ. ಈಗಾಗಲೇ ತಂಡಗಳು ರೆಡಿಯಾಗಿದ್ದು, ಅಭ್ಯಾಸಕ್ಕೆ ತಯಾರಿ ಕೂಡ ನಡೆಸುತ್ತಿವೆ. ಅನುಭವಿಗಳ ಜೊತೆಗೆ ಯುವ ಆಟಗಾರರಿಗೂ ಅವಕಾಶಗಳನ್ನು ಎಲ್ಲಾ ಫ್ರಾಂಚೈಸಿಗಳು ನೀಡಿವೆ.
ಸಹಜವಾಗಿಯೇ ಈ ಬಾರಿಯೂRCB ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಹಾಲಿ ಚಾಂಪಿಯನ್ ಎಂಬ ಬೀಗಿನಿಂದಲೇ RCB ಕೂಡ ಕಣಕ್ಕಿಳಿಯಲಿದೆ. ಆದ್ರೆ ನಮ್ಮ ಕರುನಾಡಿನ RCB ಅಭಿಮಾನಿಗಳು ಈಗ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ.
ನಿಜ, RCB ಅಂದ್ರೆ ವಿರಾಟ್ ಕೊಹ್ಲಿ.. ವಿರಾಟ್ ಕೊಹ್ಲಿ ಅಂದ್ರೆ RCB..ಈ ಅಭಿಮಾನ.. ಪ್ರೀತಿ..ಇರಲಿ. ಇದು ತಪ್ಪು ಅಂತ ಹೇಳ್ತಿಲ್ಲ. ಇದಕ್ಕೆ ಅಪಸ್ವರವನ್ನು ವ್ಯಕ್ತಪಡಿಸೋದೂ ಇಲ್ಲ. ಇದು ಅವರವರ ಇಷ್ಟ.. ಅಭಿಮಾನಿಗಳ ಪ್ರೀತಿ, ಅಭಿಮಾನವನ್ನು ಪ್ರಶ್ನೆ ಕೂಡ ಮಾಡಲ್ಲ.
ಆದ್ರೆ ಪ್ರಶ್ನೆ ಅದಲ್ಲ. ನಾವು ಅಂದ್ರೆ ಕರ್ನಾಟಕದವರು, ಕನ್ನಡಿಗರು, ಬೆಂಗಳೂರಿನವರು ಯಾಕೆ ಆರ್‍ಸಿಬಿ ತಂಡವನ್ನು ಬೆಂಬಲಿಸಬೇಕು ಅನ್ನೋದು ಒಂದು ಪ್ರಶ್ನೆಯಾದ್ರೆ, ಕೇವಲ ವಿರಾಟ್‍ಗೋಸ್ಕರ ನಾವು RCBಗೆ ಜೈ ಅನ್ನಬೇಕಾ ಅನ್ನೋದು ಇನ್ನೊಂದು ಪ್ರಶ್ನೆ.
RCB ಮ್ಯಾನೇಜ್‍ಮೆಂಟ್‍ಗೆ ಕನ್ನಡಿಗರ ಪ್ರೀತಿ ಬೇಕು..ಕರ್ನಾಟಕದ ಬಲ ಬೇಕು.. ಕನ್ನಡದ ಅಭಿಮಾನಿಗಳು ಬೇಕು. ನಮ್ಮ ಬೆಂಗಳೂರಿನ ಹೆಸರು ಬೇಕು. RCB ಪಂದ್ಯಗಳನ್ನು ಕನ್ನಡಿಗರು ನೋಡಬೇಕು. RCB ತಂಡಕ್ಕೆ ಜೈಕಾರ ಹಾಕಬೇಕು. RCB ತಂಡಕ್ಕೆ ಸಪೋರ್ಟ್ ಮಾಡಬೇಕು. ಹೀಗೆ ಎಲ್ಲವೂ ಓಕೆ.. ಆದ್ರೆ ಕರ್ನಾಟಕದ ಆಟಗಾರರು ಮಾತ್ರ ಬೇಡ ಏಕೆ..? ಇದು ಎಷ್ಟರ ಮಟ್ಟಿಗೆ ಸರಿ..?
ಸದ್ಯ RCB ತಂಡದಲ್ಲಿರುವ ಏಕೈಕ ಆಟಗಾರ ಅಂದ್ರೆ ಅದು ದೇವದತ್ತ್ ಪಡಿಕ್ಕಲ್. ಆದ್ರೆ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ತಾರಾ ಅನ್ನೋದು ಕೂಡ ಅನುಮಾನದಲ್ಲಿದೆ. ಅದನ್ನು ಬಿಟ್ರೆ, ಮ್ಯಾನೇಜ್‍ಮೆಂಟ್, ಕೋಚಿಂಗ್ ಸ್ಟಾಫ್‍ನಲ್ಲೂ ಕನ್ನಡಿಗರೇ ಇಲ್ಲ. ಅದು ಬೇಡ. ಕನಿಷ್ಠ ಒಬ್ಬನೇ ಒಬ್ಬ ಯುವ ಆಟಗಾರನಿಗಾದ್ರೂ ಅವಕಾಶ ನೀಡಬಹುದಿತ್ತು. ಯಾಕಂದ್ರೆ, ಕರ್ನಾಟಕದ ಯಶ್‍ರಾಜ್‍ಪೂಂಜ ಮತ್ತು ಪ್ರವೀಣ್ ದುಬೆಯವರನ್ನು ಕ್ರಮವಾಗಿ ರಾಜಸ್ತಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್‍ನವರು ಖರೀದಿ ಮಾಡಿದ್ದರು. ಆದ್ರೆ RCBಗೆ ಮಾತ್ರ ಈ ಆಟಗಾರರು ಕೂಡ ಬೇಡ. ಕನ್ನಡಿಗರು ಅಂದ್ರೆ ಇಷ್ಟೊಂದು ಅಸಡ್ಡೆ ಯಾಕೆ..? ಕಳೆದ 18 ವರ್ಷಗಳಿಂದ RCB, ಕರ್ನಾಟಕದ ಸ್ಥಳೀಯ ಪ್ರತಿಭೆಗಳಿಗೆ ಎಷ್ಟು ಅವಕಾಶ ನೀಡಿದೆ..? ಎಷ್ಟು ಮಂದಿ ಕರ್ನಾಟಕದ ಆಟಗಾರರನ್ನು ಬೆಳೆಸಿದೆ..?
ಬಹುಶಃ RCB ಮ್ಯಾನೇಜ್‍ಮೆಂಟ್ ವಿಜಯ್ ಮಲ್ಯ ಅವರ ಕೈತಪ್ಪಿದ್ದ ಬಳಿಕ ಕನ್ನಡಿಗರಿಗೆ ಅವಕಾಶವೇ ಇಲ್ಲ. ಐಪಿಎಲ್‍ನ ಆರಂಭದ ವರ್ಷಗಳಲ್ಲಿ ಕನ್ನಡಿಗರೇ ಹೆಚ್ಚು RCB ತಂಡದಲ್ಲಿ ಕಾಣಿಸಿಕೊಂಡಿದ್ದರು. ಆದ್ರೆ ಯಾವಾಗ ವಿಜಯ್ ಮಲ್ಯ RCBಗೆ ಕೈಕೊಟ್ರೂ RCB ಮ್ಯಾನೇಜ್‍ಮೆಂಟ್ ಕರ್ನಾಟಕದ ಪ್ರತಿಭೆಗಳನ್ನು ಕಸದಿಂದ ಕಡೆ ಮಾಡುತ್ತಿದೆ ಎಂಬುದು ಸುಳ್ಳಲ್ಲ. ಯಾಕಂದ್ರೆ ಬೇರೆ ಬೇರೆ ಫ್ರಾಂಚೈಸಿಗಳು ಕರ್ನಾಟಕದ ಆಟಗಾರರ ಮೇಲೆ ಒಲವು ತೋರುತ್ತಿರುವಾಗ ಆರ್‍ಸಿಬಿ ಮ್ಯಾನೇಜ್‍ಮೆಂಟ್‍ಗೆ ಆಸಕ್ತಿ ಯಾಕಿಲ್ಲ ?
ಇನ್ನು, ಕಳೆದ ವರ್ಷ ಅಂದ್ರೆ 18 ವರ್ಷಗಳ ಬಳಿಕ ಚೊಚ್ಚಲ ಬಾರಿ ಐಪಿಎಲ್ ಟ್ರೋಫಿ ಗೆದ್ದಾಗ ಇಡೀ ಕರುನಾಡೇ ಸಂತಸಪಟ್ಟಿತ್ತು. ಅಷ್ಟೇ ಯಾಕೆ.. ಆಡಳಿತ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ತಂಡವೇ ಗೆದ್ದಂತೆ ಸಂಭ್ರಮಿಸಿದ್ರು. ಅಷ್ಟೇ ಅಲ್ಲ, ರಾಜ್ಯ ಸರ್ಕಾರವೇ ಶಕ್ತಿ ಸೌಧದ ಎದುರು RCB ಆಟಗಾರರನ್ನು ಗೌರವಿಸಿತ್ತು. ಬಳಿಕ ಚಿನ್ನಸ್ವಾಮಿ ಅಂಗಣದಲ್ಲಿ ನಡೆದಿದ್ದ RCB ವಿಜಯೋತ್ಸವದಲ್ಲಿ 11 ಮಂದಿ ಕಾಲ್ತುಳಿತಕ್ಕೆ ಬಲಿಯಾಗಿದ್ದರು . ಆದ್ರೆ RCB ಮ್ಯಾನೇಜ್‍ಮೆಂಟ್ ಮತ್ತು ಆಟಗಾರರು ಅಭಿಮಾನಿಗಳ ಜೀವಕ್ಕೆ ಬೆಲೆಯನ್ನೇ ನೀಡಲಿಲ್ಲ. ಕನಿಷ್ಠ ಪಕ್ಷ ಸಾವಿಗಿಡಾಗಿದ್ದ 11 ಮಂದಿಯ ಕುಟುಂಬಕ್ಕೆ ಯಾರು ಎಷ್ಟು ಪರಿಹಾರ ನೀಡಿದ್ರೂ ಎಂಬುದು ಗೊತ್ತಿಲ್ಲ. ಇನ್ನೊಂದೆಡೆ, ನಮ್ಮ ಬೆಂಗಳೂರಿನ ಹೆಮ್ಮೆಯ ಪ್ರತೀಕ ಚಿನ್ನಸ್ವಾಮಿ ಮೈದಾನದಲ್ಲಿ ಅಂತಾರಾಷ್ಟ್ರೀಯ ಪಂದ್ಯವನ್ನೇ ಸ್ಥಗಿತಗೊಳಿಸಿದ್ದ ಕುಖ್ಯಾತಿ ಅಂದಿನ ಕೆಎಸ್‍ಸಿಎ, RCB ಮ್ಯಾನೇಜ್‍ಮೆಂಟ್‍ಗೆ ಅಂಟಿಕೊಂಡಿದೆ.
ಇದೀಗ RCBಯನ್ನು ಬೆಂಬಲಿಸೋದು ಒಂದೇ ಒಂದು ಕಾರಣಕ್ಕೆ. ಅದು ವಿರಾಟ್ ಕೊಹ್ಲಿಗಾಗಿ. ಹಾಗೇ RCB ಒಂದು ಖಾಸಗಿ ಟೀಮ್. ಅವರಿಗೆ ಇಷ್ಟಬಂದ ಆಟಗಾರರನ್ನು ಆಯ್ಕೆ ಮಾಡೋದು ಅವರ ಇಷ್ಟ. ಆದ್ರೆ ಒಂದು ನೆನಪಿಟ್ಟುಕೊಳ್ಳಬೇಕು. ಕರ್ನಾಟಕದ ಆಟಗಾರರು ಇಲ್ಲದೆ ಇದ್ರೂ RCB ಅಭಿಮಾನಿಗಳು ತನು- ಮನ – ಧನದಿಂದ ಸಹಕರಿಸಿದ್ದಾರೆ ಎಂಬುದನ್ನು RCB ಮ್ಯಾನೇಜ್‍ಮೆಂಟ್ ಅರಿತುಕೊಳ್ಳಬೇಕು.
ಕೊನೆಯದಾಗಿ RCB ಇವತ್ತು ಐಪಿಎಲ್‍ನ ಅತ್ಯಂತ ಜನಪ್ರಿಯ ತಂಡವಾಗಿರಬಹುದು..ಹಾಗಂತ ಇದು ಕೇವಲ ಕೊಹ್ಲಿ ಅಥವಾ RCBಯ ಸ್ಟಾರ್ ಆಟಗಾರರಿಂದ ಆಗಿದ್ದಲ್ಲ. ಅದಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದು ಈ ಹಿಂದೆ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆಯಂತಹ ಆಟಗಾರರು. ಜೊತೆಗೆ ಕರ್ನಾಟಕ, ಕನ್ನಡಿಗರು, ಬೆಂಗಳೂರು ಎಂಬ ಬ್ರ್ಯಾಂಡ್‍ಗಳು ಎಂಬುದನ್ನು RCB ಮ್ಯಾನೇಜ್‍ಮೆಂಟ್ ಮರೆಯಬಾರದು.
ಇನ್ನು, ನಾವು ಇವತ್ತು ವಿಜಯ್ ಮಲ್ಯನನ್ನು ಮೋಸಗಾರ ಅಂತ ಕರೆಯಬಹುದು. ಆದ್ರೆ RCB ಎಂಬ ಬ್ರ್ಯಾಂಡ್‍ನ ಹಿಂದಿನ ಮಾಸ್ಟರ್ ಮೈಂಡ್ ಮಲ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಅವತ್ತು ಅಷ್ಟೆಲ್ಲಾ ಶೋಕಿ, ಪ್ರಚಾರ, ದುಡ್ಡು ಖರ್ಚು ಮಾಡದೇ ಇರುತ್ತಿದ್ರೆ RCB ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ.
ಒಟ್ಟಿನಲ್ಲಿ RCB ಮ್ಯಾನೇಜ್‍ಮೆಂಟ್‍ಗೆ ಒಂದಲ್ಲ ಒಂದು ದಿನ ಜ್ಞಾನೋದಯವಾಗುತ್ತದೆ. ಇನ್ನು, ಎಷ್ಟು ವರ್ಷ ವಿರಾಟ್ ಕೊಹ್ಲಿ ಹೆಸರನ್ನಿಟ್ಟುಕೊಂಡು ಬ್ರ್ಯಾಂಡ್ ಬಿಲ್ಡ್ ಮಾಡುತ್ತೆ ಅನ್ನೋದನ್ನು ನೋಡೋಣ. ಇಲ್ಲಿಯವರೆಗೆ RCB ಮ್ಯಾನೇಜ್‍ಮೆಂಟ್‍ನ ಮುಖದಲ್ಲಿ ಮಂದಹಾಸ ಇರಬಹುದು. ಆದ್ರೆ ಉಸಿರಾಡಲು ಕರ್ನಾಟಕ ಬೇಕು.. ಪ್ರೀತಿಸಲು ಅಭಿಮಾನಿಗಳ ಹೃದಯಬೇಕು. ಎದೆತಟ್ಟಿ ಮಾತನಾಡಲು ನಮ್ಮ ಬೆಂಗಳೂರು ಎಂಬ ಬ್ರ್ಯಾಂಡ್ ಬೇಕು. ಇದನ್ನು RCB ಮ್ಯಾನೇಜ್‍ಮೆಂಟ್ ಮರೆಯಬಾರದು.

ಸನತ್ ರೈ

Related posts

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

March 20, 2026
ಇಸ್ರೇಲ್ ದಾಳಿಗೆ ಬ್ರೇಕ್ ಹಾಕಿದ ಟ್ರಂಪ್ : ಇರಾನ್ ಪ್ರತೀಕಾರಕ್ಕೆ ಬೆದರಿದ ಗಲ್ಫ್ ರಾಷ್ಟ್ರಗಳು

ಇಸ್ರೇಲ್ ದಾಳಿಗೆ ಬ್ರೇಕ್ ಹಾಕಿದ ಟ್ರಂಪ್ : ಇರಾನ್ ಪ್ರತೀಕಾರಕ್ಕೆ ಬೆದರಿದ ಗಲ್ಫ್ ರಾಷ್ಟ್ರಗಳು

March 20, 2026
Source: We need Karnataka to breathe.. We need the heart of Karnataka to love.. But why aren't Kannadigas allowed in RCB..?
Via: We need Karnataka to breathe.. We need the heart of Karnataka to love.. But why aren't Kannadigas allowed in RCB..?
Tags: #cmSiddaramaiah#dcmdkshivakumar#ipl2026#nammabengaluru#rcbfans#saakshatvkarnatakaRCB
ShareTweetSendShare
Join us on:

Related Posts

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

by Shwetha
March 20, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಮತ್ತು ಅಧಿಕಾರ ಹಸ್ತಾಂತರದ ಚರ್ಚೆಗಳು ಗರಿಗೆದರಿವೆ. ಕರ್ನಾಟಕದಲ್ಲಿ ಪ್ರಭಾವಿ ಸಿಎಂ ಇದ್ದಾರೆ, ಸದ್ಯಕ್ಕೆ ಸಿಎಂ ಹುದ್ದೆ ಖಾಲಿ...

ಇಸ್ರೇಲ್ ದಾಳಿಗೆ ಬ್ರೇಕ್ ಹಾಕಿದ ಟ್ರಂಪ್ : ಇರಾನ್ ಪ್ರತೀಕಾರಕ್ಕೆ ಬೆದರಿದ ಗಲ್ಫ್ ರಾಷ್ಟ್ರಗಳು

ಇಸ್ರೇಲ್ ದಾಳಿಗೆ ಬ್ರೇಕ್ ಹಾಕಿದ ಟ್ರಂಪ್ : ಇರಾನ್ ಪ್ರತೀಕಾರಕ್ಕೆ ಬೆದರಿದ ಗಲ್ಫ್ ರಾಷ್ಟ್ರಗಳು

by Shwetha
March 20, 2026
0

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ನೇರ ಕಾದಾಟವು ತೈಲ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಿದ್ದು,...

ಭಾರತದ ಪ್ರಮುಖ ನಾಯಕರ ಹತ್ಯೆ ಮತ್ತು 3ನೇ ಮಹಾಯುದ್ಧದ ಕಾರ್ಮೋಡ: ಸಂತ ಬಾಳು ಮಾಮಾರ ಆಘಾತಕಾರಿ ಭವಿಷ್ಯವಾಣಿ!

ಭಾರತದ ಪ್ರಮುಖ ನಾಯಕರ ಹತ್ಯೆ ಮತ್ತು 3ನೇ ಮಹಾಯುದ್ಧದ ಕಾರ್ಮೋಡ: ಸಂತ ಬಾಳು ಮಾಮಾರ ಆಘಾತಕಾರಿ ಭವಿಷ್ಯವಾಣಿ!

by Shwetha
March 20, 2026
0

ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಭಾಗದ ಲಕ್ಷಾಂತರ ಭಕ್ತರ ಆರಾಧ್ಯ ದೈವ, ಪವಾಡ ಪುರುಷ ಸಂತ ಬಾಳು ಮಾಮಾ ಅವರ ಭವಿಷ್ಯವಾಣಿಯೊಂದು ಇದೀಗ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಕುರಿ...

ರಾತ್ರಿ ಗ್ಯಾಸ್ ಖಾಲಿಯಾಯ್ತಾ? ಚಿಂತೆ ಬೇಡ: ನಿಮ್ಮ ಪಕ್ಕದ ಎಟಿಎಂ ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಕ್ಷಣಾರ್ಧದಲ್ಲಿ ಸಿಲಿಂಡರ್ ಪಡೆಯಿರಿ

ರಾತ್ರಿ ಗ್ಯಾಸ್ ಖಾಲಿಯಾಯ್ತಾ? ಚಿಂತೆ ಬೇಡ: ನಿಮ್ಮ ಪಕ್ಕದ ಎಟಿಎಂ ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಕ್ಷಣಾರ್ಧದಲ್ಲಿ ಸಿಲಿಂಡರ್ ಪಡೆಯಿರಿ

by Shwetha
March 20, 2026
0

ಅಡುಗೆ ಅನಿಲ ಸಿಲಿಂಡರ್ ಬುಕ್ಕಿಂಗ್ ಮಾಡಿ, ಡೆಲಿವರಿ ಬಾಯ್ ಬರುವವರೆಗೆ ಕಾಯುವ ದಿನಗಳಿಗೆ ಇನ್ನೇನು ಕಾಲ ಕೂಡಿದೆ. ದೇಶದ ಇಂಧನ ಕ್ಷೇತ್ರದ ದೈತ್ಯ ಸಂಸ್ಥೆಯಾದ ಭಾರತ್ ಪೆಟ್ರೋಲಿಯಂ...

ಭಾರತೀಯ ಚಿತ್ರರಂಗದಲ್ಲಿ ಧುರಂಧರ್ ಹವಾ ರಣವೀರ್ ಅಬ್ಬರಕ್ಕೆ ಫಿದಾ ಆದ ತಾರೆಯರು

ಭಾರತೀಯ ಚಿತ್ರರಂಗದಲ್ಲಿ ಧುರಂಧರ್ ಹವಾ ರಣವೀರ್ ಅಬ್ಬರಕ್ಕೆ ಫಿದಾ ಆದ ತಾರೆಯರು

by Shwetha
March 20, 2026
0

ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ಅವರ ಬಹುನಿರೀಕ್ಷಿತ ಸಿನಿಮಾ ಧುರಂಧರ್: ದಿ ರಿವೆಂಜ್ ಅಂತಿಮವಾಗಿ ಬೆಳ್ಳಿತೆರೆಗೆ ಅಪ್ಪಳಿಸಿದೆ. ಸಿನಿಮಾ ಪ್ರೇಮಿಗಳ ದೀರ್ಘಕಾಲದ ಕಾಯುವಿಕೆಗೆ ಮಾರ್ಚ್ 19...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram