ADVERTISEMENT
Tuesday, August 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮನರಂಜನೆ

ಕಿಚ್ಚನ ಖದರ್ ಗೆದ್ದಿತಾ ಮಾರ್ಕ್ ಮ್ಯಾಕ್ಸ್ ಮೀರಿಸಿತಾ ಸುದೀಪ್ ಹೊಸ ಅವತಾರ ಹೇಗಿದೆ ಕಂಪ್ಲೀಟ್ ರಿಪೋರ್ಟ್

How is Sudeep's new avatar, who surpassed Mark Max, complete report?

Shwetha by Shwetha
December 26, 2025
in ಮನರಂಜನೆ, Cinema, Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ಕನ್ನಡ ಚಿತ್ರರಂಗದ ಹೆಮ್ಮೆಯ ಕಿರೀಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಮಾರ್ಕ್ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ನ್ಯಾಷನಲ್ ಸ್ಟಾರ್ ಪಟ್ಟಕ್ಕೇರುವ ಮುನ್ನವೇ ದಕ್ಷಿಣ ಭಾರತ ಸೇರಿದಂತೆ ಬಾಲಿವುಡ್ ಅಂಗಳದಲ್ಲೂ ತಮ್ಮ ಕೀರ್ತಿ ಪತಾಕೆ ಹಾರಿಸಿದವರು ಸುದೀಪ್. ಕೇವಲ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿ, ಗಾಯಕನಾಗಿ, ಕ್ರಿಕೆಟಿಗನಾಗಿ ಮತ್ತು ಟಿವಿ ಪರದೆಯ ಮೇಲಿನ ಅತ್ಯದ್ಭುತ ನಿರೂಪಕನಾಗಿ ಕನ್ನಡಿಗರ ಮನೆಮನ ಗೆದ್ದಿರುವ ಸುದೀಪ್, ಕಳೆದ ವರ್ಷ ಮ್ಯಾಕ್ಸ್ ಮೂಲಕ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದರು. ಇದೀಗ ಮಾರ್ಕ್ ಸರದಿ. ಹಾಗಾದರೆ ಈ ಮಾರ್ಕ್ ಪ್ರೇಕ್ಷಕರ ಮನಸ್ಸಿನ ಮೇಲೆ ಅಳಿಸಲಾರದ ಗುರುತು ಮೂಡಿಸುತ್ತಾ ಇಲ್ಲಿದೆ ಕಂಪ್ಲೀಟ್ ಸಿನಿಮಾದ ರಿಯಾಲಿಟಿ ಚೆಕ್.

36 ಗಂಟೆಯ ಕಥೆ ಏನು.?

Related posts

sports/ms-dhoni-rides-ktm-390-duke-in-chennai-

ಚೆನ್ನೈನಲ್ಲಿ ಹೈಸ್ಪೀಡ್ ಕೆಟಿಎಂ ಬೈಕ್ ಸವಾರಿ ಮಾಡಿದ ಧೋನಿ

August 4, 2026
auqib-nabi-life-story-kannada

Teamindia- ಹಿಮದ ನಾಡಿನ ಐಸ್‍ಮೆನ್..ಟೀಮ್ ಇಂಡಿಯಾದ  ಹೊಸ ಸ್ಪೀಡ್ ಗನ್. ಅವನ ಹೆಸರು..!

August 4, 2026

ಮಾರ್ಕ್ ಒಂದು ಪಕ್ಕಾ ಆಕ್ಷನ್ ಥ್ರಿಲ್ಲರ್. ಕಥೆ ತೆರೆದುಕೊಳ್ಳುವುದು ಅಮಾನತುಗೊಂಡಿರುವ ಖಡಕ್ ಪೊಲೀಸ್ ಅಧಿಕಾರಿ ಎಸ್‌ಪಿ ಅಜಯ್ ಮಾರ್ಕಂಡೇಯ (ಸುದೀಪ್) ನ ಸುತ್ತ. ಭ್ರಷ್ಟಾಚಾರದ ಕೂಪದಲ್ಲಿರುವ ರಾಜಕಾರಣಿ ಆದಿಕೇಶವ (ಶೈನ್ ಟಾಮ್ ಚಾಕೋ) ಎಂಬಾತನ ಸಾಮ್ರಾಜ್ಯವನ್ನು ಧ್ವಂಸ ಮಾಡಲು ನಾಯಕ ಪಣ ತೊಡುತ್ತಾನೆ. ಇತ್ತ ನಾಯಕ ಅಖಾಡಕ್ಕಿಳಿಯುತ್ತಿದ್ದಂತೆ ಅತ್ತ ಮಕ್ಕಳ ಅಪಹರಣವಾಗುತ್ತದೆ. ಇದರ ಜೊತೆಗೆ ಡ್ರಗ್ಸ್ ಮಾಫಿಯಾದ ಕರಾಳ ನೆರಳು ಕೂಡ ಚಾಚಿಕೊಳ್ಳುತ್ತದೆ. ರಾಜಕಾರಣ, ಕಿಡ್ನ್ಯಾಪ್ ಮತ್ತು ಡ್ರಗ್ಸ್ ಈ ಮೂರು ವಿಭಿನ್ನ ಪ್ರಕರಣಗಳಿಗೆ ಇರುವ ಲಿಂಕ್ ಏನು ಬರೋಬ್ಬರಿ 36 ಗಂಟೆಗಳಲ್ಲಿ ಅಜಯ್ ಮಾರ್ಕಂಡೇಯ ಈ ಸುಳುವನ್ನು ಭೇದಿಸಿ ವಿಜಯಶಾಲಿಯಾಗುತ್ತಾನಾ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ.

ಅಭಿನಯ ಚಕ್ರವರ್ತಿಯ ಒನ್ ಮ್ಯಾನ್ ಶೋ

ಮಾರ್ಕ್ ಸಿನಿಮಾ ನೋಡುಗರಿಗೆ ಇಷ್ಟವಾಗಲು ಪ್ರಮುಖ ಕಾರಣವೇ ಸುದೀಪ್. ಇದು ಅಕ್ಷರಶಃ ಕಿಚ್ಚನ ಒನ್ ಮ್ಯಾನ್ ಶೋ ಎನ್ನಬಹುದು. ತೆರೆಯ ಮೇಲೆ ಸುದೀಪ್ ಕಾಣಿಸಿಕೊಳ್ಳುವ ರೀತಿ, ಅವರ ಖದರ್, ಸ್ಟೈಲ್, ಆ ಕಿಲ್ಲರ್ ಸ್ಮೈಲ್ ಅಭಿಮಾನಿಗಳಿಗೆ ಹಬ್ಬದ ಊಟವಿದ್ದಂತೆ. ಪೊಲೀಸ್ ಅಧಿಕಾರಿಯ ಖಡಕ್ ಲುಕ್ ನಲ್ಲಿ ಸುದೀಪ್ ಅಬ್ಬರಿಸಿದ್ದಾರೆ. ಇಡೀ ಸಿನಿಮಾವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಸಾಗುವ ಸುದೀಪ್, ತಾನೇಕೆ ಅಭಿನಯ ಚಕ್ರವರ್ತಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಸಿನಿಮಾದ ಪ್ರಮುಖ ಪ್ಲಸ್ ಪಾಯಿಂಟ್ ಎಂದರೆ ಅದರ ವೇಗ. ಮ್ಯಾಕ್ಸ್ ಚಿತ್ರದಂತೆಯೇ ಮಾರ್ಕ್ ಕೂಡ ಜೆಟ್ ವೇಗದಲ್ಲಿ ಸಾಗುತ್ತದೆ. ಸಿನಿಮಾದಲ್ಲಿ ಬರುವ ಎರಡು ರಾತ್ರಿ ಮತ್ತು ಒಂದು ಹಗಲು ಕಳೆಯುವುದು ಪ್ರೇಕ್ಷಕರಿಗೆ ಗೊತ್ತೇ ಆಗುವುದಿಲ್ಲ. ಶೇಖರ್ ಚಂದ್ರ ಅವರ ಕ್ಯಾಮೆರಾ ಕೈಚಳಕ ಅದ್ಭುತವಾಗಿದ್ದು, ಪ್ರತಿ ಫ್ರೇಮ್ ಕೂಡ ಶ್ರೀಮಂತವಾಗಿ ಮೂಡಿಬಂದಿದೆ. ಕಲಾ ನಿರ್ದೇಶಕ ಶಿವಕುಮಾರ್ ಅವರು ಸೃಷ್ಟಿಸಿದ ರಾ ಫೀಲ್ ಚಿತ್ರದ ತೂಕ ಹೆಚ್ಚಿಸಿದೆ. ಇನ್ನು ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ರೋಮಾಂಚನಕಾರಿಯಾಗಿದೆ. ನವೀನ್ ಚಂದ್ರ, ವಿಕ್ರಾಂತ್, ಗುರು ಸೋಮಸುಂದರಂ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದ್ದು, ಎಲ್ಲರೂ ಸಿಕ್ಕ ಅವಕಾಶದಲ್ಲಿ ಅಚ್ಚುಕಟ್ಟಾಗಿ ನಟಿಸಿದ್ದಾರೆ.

ಎಡವಿದ್ದೆಲ್ಲಿ ಮ್ಯಾಕ್ಸ್ ಹ್ಯಾಂಗೋವರ್ ಕಾಡುತ್ತಾ

ಮ್ಯಾಕ್ಸ್ ಸಿನಿಮಾ ಬಂದು ಒಂದು ವರ್ಷದ ಬಳಿಕ ಮಾರ್ಕ್ ಬಂದಿದೆ. ಆದರೆ ನಿರ್ದೇಶಕ ವಿಜಯ ಕಾರ್ತಿಕೇಯ ಅವರು ಮ್ಯಾಕ್ಸ್ ನಲ್ಲಿ ತೋರಿಸಿದ ಜಾದೂವನ್ನು ಇಲ್ಲಿ ಸ್ವಲ್ಪ ಮಿಸ್ ಮಾಡಿಕೊಂಡಿದ್ದಾರೆ ಎನಿಸುತ್ತದೆ. ಸುದೀಪ್ ಅಭಿಮಾನಿಗಳನ್ನು ರಂಜಿಸುವ ಭರದಲ್ಲಿ ಎಮೋಷನಲ್ ಕಂಟೆಂಟ್ ಕಡೆಗಣಿಸಿದ್ದಾರೆ. ಸಿನಿಮಾದಲ್ಲಿ ಭಾವನಾತ್ಮಕ ಅಂಶಗಳ ಕೊರತೆ ಎದ್ದು ಕಾಣುತ್ತದೆ. ಅಲ್ಲದೆ ಕೆಲವು ಕಡೆ ಲಾಜಿಕ್ ಹುಡುಕಲು ಹೋದರೆ ನಿರಾಸೆಯಾಗಬಹುದು.

ಖಳನಾಯಕನ ಕೊರತೆ ನೀಗಿತೇ

ಮ್ಯಾಕ್ಸ್ ಸಿನಿಮಾದಲ್ಲಿ ಪ್ರಬಲ ವಿಲನ್ ಇಲ್ಲ ಎಂಬ ಕೊರತೆ ಇತ್ತು. ಅದನ್ನು ಮಾರ್ಕ್ ನಲ್ಲಿ ಸರಿಪಡಿಸಲಾಗಿದೆ ಎಂದು ಸುದೀಪ್ ಹೇಳಿದ್ದರು. ಆದರೆ ತೆರೆಯ ಮೇಲೆ ನೋಡುವಾಗ ಆ ಮಾತು ಹುಸಿಯೆನಿಸುತ್ತದೆ. ಇಲ್ಲಿಯೂ ಖಳನಾಯಕನ ಪಾತ್ರ ಅಷ್ಟೊಂದು ಗಟ್ಟಿಯಾಗಿಲ್ಲ. ಇನ್ನು ತಮಿಳು ನಟ ಯೋಗಿ ಬಾಬು ಅವರ ಕಾಮಿಡಿ ಕನ್ನಡದ ನೇಟಿವಿಟಿಗೆ ಒಗ್ಗುವುದಿಲ್ಲ. ಅವರ ಡಬ್ಬಿಂಗ್ ಧ್ವನಿ ಪ್ರೇಕ್ಷಕರಿಗೆ ಕಚಗುಳಿ ಇಡುವಲ್ಲಿ ವಿಫಲವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕಥೆ ಬೇರೆಯಾಗಿದ್ದರೂ, ಮಾರ್ಕ್ ನೋಡುವಾಗ ಆಗಾಗ ಮ್ಯಾಕ್ಸ್ ನೆನಪಾಗುವುದು ಸುಳ್ಳಲ್ಲ.

ಫೈನಲ್ ವರ್ಡಿಕ್ಟ್

ನೀವು ಸುದೀಪ್ ಅವರ ಕಟ್ಟಾ ಅಭಿಮಾನಿಯಾಗಿದ್ದರೆ ಮಾರ್ಕ್ ನಿಮಗೆ ರಸದೌತಣ ನೀಡುತ್ತದೆ. ಯಾವುದೇ ಲಾಜಿಕ್ ಹುಡುಕದೆ, ಕೇವಲ ಮನರಂಜನೆಗಾಗಿ ಸಿನಿಮಾ ನೋಡುವುದಾದರೆ ಇದೊಂದು ಪಕ್ಕಾ ಪೈಸಾ ವಸೂಲ್ ಚಿತ್ರ. ಆದರೆ ಮ್ಯಾಕ್ಸ್ ಚಿತ್ರವನ್ನು ತಲೆಯಲ್ಲಿಟ್ಟುಕೊಂಡು ಹೋಲಿಕೆ ಮಾಡಲು ಹೋದರೆ ಸ್ವಲ್ಪ ನಿರಾಸೆಯಾಗಬಹುದು. ಒಟ್ಟಾರೆಯಾಗಿ ಕಿಚ್ಚನ ಖದರ್ ಗಾಗಿ ಮಾರ್ಕ್ ಒಮ್ಮೆ ನೋಡಲೇಬೇಕಾದ ಸಿನಿಮಾ.

ShareTweetSendShare
Join us on:

Related Posts

sports/ms-dhoni-rides-ktm-390-duke-in-chennai-

ಚೆನ್ನೈನಲ್ಲಿ ಹೈಸ್ಪೀಡ್ ಕೆಟಿಎಂ ಬೈಕ್ ಸವಾರಿ ಮಾಡಿದ ಧೋನಿ

by admin
August 4, 2026
0

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು, ಮದ್ರಾಸ್ ಇಂಟರ್ ನ್ಯಾಷನಲ್ ಸಕ್ರ್ಯೂಟ್‍ನಲ್ಲಿ ಕೆಟಿಎಂ 390 ಡ್ಯೂಕ್ ಬೈಕ್ ಸವಾರಿ ಮಾಡುವ ಮೂಲಕ ಗಮನ...

auqib-nabi-life-story-kannada

Teamindia- ಹಿಮದ ನಾಡಿನ ಐಸ್‍ಮೆನ್..ಟೀಮ್ ಇಂಡಿಯಾದ  ಹೊಸ ಸ್ಪೀಡ್ ಗನ್. ಅವನ ಹೆಸರು..!

by admin
August 4, 2026
0

ಅವನು ಗುರಿ ಹೊಡೆಯುವ ಸ್ನೈಪರ್. ಬುಲೆಟ್ ವೇಗದಲ್ಲಿ ಬೌಲಿಂಗ್ ಮಾಡುವ ಸ್ಟ್ರೈಕರ್. ನಿರಂತರವಾಗಿ ಬೌಲ್ ಮಾಡುವ ಬೌಲಿಂಗ್ ಮೆಷಿನ್. ದಣಿವರಿಯದ ಐರಾನ್ ಮ್ಯಾನ್. ವಿಕೆಟ್ ಪಡೆಯುವ ಹಂಟರ್,...

ಎಲ್ಲಾ ಹೋಟೆಲ್‌ಗಳಲ್ಲಿ ಬಿಸಿ ನೀರು ಕಡ್ಡಾಯಕ್ಕೆ ಆರೋಗ್ಯ ಇಲಾಖೆ ಸಜ್ಜು

ಎಲ್ಲಾ ಹೋಟೆಲ್‌ಗಳಲ್ಲಿ ಬಿಸಿ ನೀರು ಕಡ್ಡಾಯಕ್ಕೆ ಆರೋಗ್ಯ ಇಲಾಖೆ ಸಜ್ಜು

by Shwetha
August 4, 2026
0

ರಾಜ್ಯದ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಆರೋಗ್ಯ ಇಲಾಖೆ ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾಗಿದೆ. ಶಾಲೆಗಳ ಸುತ್ತಮುತ್ತ ಜಂಕ್ ಫುಡ್ ಮಾರಾಟಕ್ಕೆ ನಿರ್ಬಂಧ ಹೇರಿದ ಬಳಿಕ, ಇದೀಗ ರಾಜ್ಯದ...

ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನದ ಕಿಚ್ಚು: ತನ್ವೀರ್ ಸೇಠ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರಿಂದ ಬೀದಿಗಿಳಿದು ಪ್ರತಿಭಟನೆ

ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನದ ಕಿಚ್ಚು: ತನ್ವೀರ್ ಸೇಠ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರಿಂದ ಬೀದಿಗಿಳಿದು ಪ್ರತಿಭಟನೆ

by Shwetha
August 4, 2026
0

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಹಿರಿಯ ಶಾಸಕರಿಗೆ ಮಂತ್ರಿಗಿರಿ ಕೈತಪ್ಪಿದ್ದರಿಂದ ರಾಜ್ಯದ ವಿವಿಧೆಡೆ...

ಕಾವೇರಿ ವಿವಾದ: ನೀರು ಬಿಡುಗಡೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು

ಕಾವೇರಿ ವಿವಾದ: ನೀರು ಬಿಡುಗಡೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು

by Shwetha
August 4, 2026
0

ಕಾವೇರಿ ನದಿ ನೀರು ಹಂಚಿಕೆ ವಿವಾದ ಮತ್ತೊಮ್ಮೆ ತೀವ್ರಗೊಂಡಿದ್ದು, ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಜುಲೈ 30ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA)...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram