ಇಂದು ರಾಜ್ಯಾದ್ಯಾಂತ ಹೊಸದಾಗಿ 4016 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಇನ್ನೂ ಇಂದು ಕೊರೊನಾ ಮರಣ ಮೃದಂಗಕ್ಕೆ ರಾಜ್ಯದಲ್ಲಿ ಒಟ್ಟು 104 ಮಂದಿ ಬಲಿಯಾಗಿದ್ದು, ಒಟ್ಟು ಮರಣದ ಪ್ರಮಾಣ ಶೇ2.01ರಷ್ಟಿದೆ. ಇನ್ನೂ ಇಲ್ಲಿಯವರೆಗೂ ಒಟ್ಟು ರಾಜ್ಯದಲ್ಲಿರುವ ಸಕ್ರಿಯ ಕೇಸ್ ಗಳು 30,655.. ಇಂದು ಗುಣಮುಖರಾದವರ ಸಂಖ್ಯೆಯಲ್ಲೂ ಏರಿಕೆಯಾಗಿದ್ದು, 1263 ಮಂದಿ ಗುಣಮುಖರಾಗಿ ಡಿಶ್ಚಾರ್ಜ್ ಆಗಿದ್ದಾರೆ. ಈ ಮೂಲಕ ಸೋಂಕಿತರ ಚೇತರಿಕೆಯಾದ ಪ್ರಮಾಣ ಶೇ 38.37 ದಾಖಲಾಗಿದೆ. ಇಂದು ನಡೆಸಲಾದ ಕೊರೊನಾ ವೈದ್ಯಕೀಯ ಪರೀಕ್ಷೆ ಸಂಖ್ಯೆ 23451.. ಈ ಮೂಲಕ ಒಟ್ಟು ಪರೀಕ್ಷೆಗೆ ಒಳಪಟ್ಟವರ ಸಂಖ್ಯೆ 925477 ಆಗಿದೆ.
ಇನ್ನೂ ಕೇವಲ ಬೆಂಗಳೂರಿನಲ್ಲಿ ಸೋಂಕಿತರ ಪ್ರಮಾಣ ನೋಡಿದರೆ ಒಂದೇ ದಿನ 2344ಕೇಸ್ ಗಳು ದಾಖಲಾಗಿದ್ದು, 70 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಮರಣದ ಪ್ರಮಾಣ ಕೇವಲ ಬೆಂಗಳೂರಲ್ಲೇ 2.೦೦ % ಆಗಿದೆ. ಇನ್ನೂ ಒಟ್ಟು ಸಕಲ್ರಿಯ ಕೇಸ್ ಗಳು 18828 ಇದ್ರೆ, ಇಂದು ಆಸ್ಪತ್ರೆಗಳಿಂದ ಒಟ್ಟು ೪೯೭ ಮಂದಿ ಡಿಶ್ಚಾರ್ಜ್ ಆಗಿದ್ದಾರೆ. ಈ ಮೂಲಕ ಚೇತರಿಕೆ ಪ್ರಮಾಣ 23.54% ಆಗಿದೆ.








