ADVERTISEMENT
Sunday, February 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಮನೆಯೊಳಗೆ ದೇವರ ದೀಪ ಹೇಗಿರ ಬೇಕು?

admin by admin
February 15, 2026
in Astrology, Newsbeat, ಜ್ಯೋತಿಷ್ಯ
What should the God's lamp look like inside the house?

What should the God's lamp look like inside the house?

Share on FacebookShare on TwitterShare on WhatsappShare on Telegram

ಮನೆಯೊಳಗೆ ದೇವರ ದೀಪ ಹೇಗಿರ ಬೇಕು?

ನಾವು ದಿನ ನಿತ್ಯ ದೇವರಿಗೆ ದೀಪ ಇಟ್ಟು, ಭಕ್ತಿಯಿಂದ ದೇವರಿಗೆ ಕೈ ಮುಗಿಯುತ್ತೇವೆ. ನಮ್ಮನ್ನು ಕುತೂಹಲದಿಂದ ನೋಡಿ ಕಲಿಯುವ ಮಕ್ಕಳು’ ನಾವು ದೇವರಿಗೆ ದೀಪ ಯಾಕೆ ಇಡಬೇಕು?’ ಅದೊಂದು ದಿನ ನಮ್ಮನ್ನು ಕೇಳಿಯೇ ಬಿಡುತ್ತವೆ. ನೀವು ತಬ್ಬಿಬ್ಬುಗೊಳ್ಳುತ್ತಿರಿ.ಕೆಲವರು ‘ಇದು ನಮ್ಮ ಸಂಪ್ರದಾಯ ಮಗು, ಅಜ್ಜ ಇಡುತ್ತಿದ್ದರು ಆದನಂತರ ಅಪ್ಪ ಇಡುತ್ತಿದ್ದರು ಈಗ ನಾನು ಮುಂದೆ ನೀನು’ ಎನ್ನುತ್ತಾ ಮಗುವನ್ನು ಸಮಾಧಾನ ಪಡಿಸುತ್ತಾರೆ. ಮಗು ಸತ್ಯ ಎನ್ನುತ್ತಾ ನಂಬಿ ಬಿಡುತ್ತದೆ!!. ಆದರೆ ದೀಪ ಇಡುವ ಒಂದು ಮುಖ್ಯ ಕಾರಣ ಹೇಳುವ ಸಣ್ಣ ಪ್ರಯತ್ನ. ನೀವು ತಿಳಿದುಕೊಳ್ಳಿ ಮತ್ತು ನಿಮ್ಮವರೊಂದಿಗೂ ಹಂಚಿಕೊಳ್ಳಿ.

Related posts

ಮಾಲೆಗಾಂವ್ ಪಾಲಿಕೆಯಲ್ಲಿ ಗಾಂಧಿ ಅಂಬೇಡ್ಕರ್ ಬದಲು ಟಿಪ್ಪು ಫೋಟೋ ಬಿಜೆಪಿ ಆಕ್ರೋಶ:ಟಿಪ್ಪು ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಹಾಕಿದ್ರೆ ತಪ್ಪೇನು ಉಪಮೇಯರ್ ಪ್ರಶ್ನೆ

ಮಾಲೆಗಾಂವ್ ಪಾಲಿಕೆಯಲ್ಲಿ ಗಾಂಧಿ ಅಂಬೇಡ್ಕರ್ ಬದಲು ಟಿಪ್ಪು ಫೋಟೋ ಬಿಜೆಪಿ ಆಕ್ರೋಶ:ಟಿಪ್ಪು ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಹಾಕಿದ್ರೆ ತಪ್ಪೇನು ಉಪಮೇಯರ್ ಪ್ರಶ್ನೆ

February 15, 2026
ನನ್ನ ಮಾತನ್ನು ಬರೆದಿಟ್ಟುಕೊಳ್ಳಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಬರೋಬ್ಬರಿ 141 ಸ್ಥಾನ:2028ರ ಚುನಾವಣೆಗೆ ಈಗಲೇ ಭವಿಷ್ಯ ನುಡಿದ ಡಿಕೆ ಶಿವಕುಮಾರ್

ನನ್ನ ಮಾತನ್ನು ಬರೆದಿಟ್ಟುಕೊಳ್ಳಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಬರೋಬ್ಬರಿ 141 ಸ್ಥಾನ:2028ರ ಚುನಾವಣೆಗೆ ಈಗಲೇ ಭವಿಷ್ಯ ನುಡಿದ ಡಿಕೆ ಶಿವಕುಮಾರ್

February 15, 2026

ದೀಪ ಅನ್ನುವುದು ಬರೇ ಬೆಳಕಿಗಾಗಿ ಇಡುವುದಲ್ಲ. ಬದಲಿಗೆ ನಿಮ್ಮ ಪ್ರಾರ್ಥನೆ ಮತ್ತು ಹರಕೆಗನ್ನು ದೇವರಿಗೆ ತಲುಪಿಸುವ ವಾಹಕ. ದೀಪ ಅನ್ನುವುದು ಅಗ್ನಿಯಿಂದ ಪ್ರಜ್ವಲಿತವಾಗಿದೆ. ನಾವು ಮಾಡುವ ಯಾಗದ ಹವಿಸನ್ನು ಹೇಗೆ ಅಗ್ನಿಯು ಆಯ ದೇವತೆಗಳಿಗೆ ಕೊಂಡೊಯ್ದು ಒಪ್ಪಿಸುತ್ತದೋ ಅದೇ ತೆರನಾಗಿ ದೀಪವೂ ನಿಮ್ಮ ಪ್ರಾರ್ಥನೆಯನ್ನು ಭಗವಂತನ ಬಳಿಗೆ ಕೊಂಡೊಯ್ಯುವ ಸಾಧನವಾಗಿದೆ. ನೀವು ಯಾವ ದೇವರನ್ನು ಪ್ರಾರ್ಥನೆ ಮಾಡುತ್ತಿರೋ ಆ ಪ್ರಾರ್ಥನೆ ನಿಮ್ಮ ಆ ದೇವರ ಬಳಿ ತಲುಪಲು ದೀಪ ಒಂದು ಮಾಧ್ಯಮ. ಹಿಂದೊಮ್ಮೆ ನಾವು ಪ್ರಾರ್ಥನೆ ಮಾಡುವಾಗ ದೀಪ ನಂದಿ ಹೋದರೆ ಅಪಶಕುನ ಅನ್ನುತ್ತಿದ್ದರು.ಯಾಕೆಂದರೆ ನಿಮ್ಮ ಪ್ರಾರ್ಥನೆ ಸಂಕಲ್ಪದಲ್ಲಿ ದೋಷವಿದೆ ಅನ್ನುತ್ತಿದ್ದರು. ಆದ್ದರಿಂದ ಆತ್ಮ ಮತ್ತು ಪರಮಾತ್ಮನ ಮಧ್ಯೆ ಸಂಬಂಧ ಸೇತುವೆ ಒಂದು ಪುಟ್ಟ ದೀಪವಾಗಬಲ್ಲುದು.ನೀವು ನಿತ್ಯ ಮನೆಯಲ್ಲಿ ದೇವರಿಗೆ ಅಥವಾ ದೈವಗಳಿಗೆ ಕೈ ಮುಗಿಯುವಾಗ ಪುಟ್ಟ ದೀಪವೊಂದನ್ನು ಪ್ರಜ್ವಲಿಸುವ ಪರಿಪಾಟವನ್ನು ಇಟ್ಟುಕೊಳ್ಳಿ. ನಿಮ್ಮ ಪ್ರತಿ ಪ್ರಾರ್ಥನೆ ಮುಟ್ಟಬೇಕಾದ ಜಾಗವನ್ನು ತಟ್ಟುತ್ತದೆ. ಪ್ರಾರ್ಥನೆಗಳು ಫಲಿಸುತ್ತವೆ. ದೇವರಮತ್ತು ನಿಮ್ಮ ಸಂಬಂಧಗಳು ಹತ್ತಿರ ಮತ್ತು ಗಟ್ಟಿಯಾಗುತ್ತದೆ.ಕಾರಣಿಕಗಳು ಮಾತಾಡುತ್ತವೆ. ಇನ್ನು ಮಕ್ಕಳ ಜನ್ಮ ದಿನಾಚರಣೆಯ ಸಮಯದಲ್ಲಿ ಕ್ಯಾಂಡಲ್ ನಂದಿಸುವುದಕ್ಕಿಂತ ದೀಪ ಪ್ರಜ್ವಲಿಸುವುದು ತುಂಬಾ ಸೂಕ್ತವಾದ ಆಚರಣೆಯಾಗಿದೆ. ಉರಿಯುತ್ತಿರುವ ಪುಟ್ಟ ದೀಪ ನಿಮ್ಮ ಬಂಧುಗಳ ಹಾರೈಕೆಯನ್ನು ಭಗವಂತನ ಬಳಿಗೆ ಕೊಂಡೊಯ್ಯುತ್ತದೆ.ಯಾರಾದರೂ ಕೆಟ್ಟ ಹಾರೈಕೆಯನ್ನು ಮಾಡಿದರೆ ಅವನ್ನು ಅಲ್ಲೇ ಸುಟ್ಟು ಒಳ್ಳೆಯ ಆರೈಕೆಗಳನ್ನು ಮಾತ್ರ ದೇವರ ಪಾದತಳದಲ್ಲಿಡುವ ಗುಣ ಒಂದು ಪುಟ್ಟ ಹಣತೆಗಿದೆ

ಮನೆಯೊಳಗೆ ದೇವರ ದೀಪ ಹೇಗಿರ ಬೇಕು?

ಇದೊಂದು ಮಹಾ ಜಿಜ್ಞಾಸೆಯ ವಿಷಯ ಆಗಿದೆ. ಒಬ್ಬೊಬ್ಬರು ಒಂದೊಂದು ತರಹ ಹೇಳಿ ತಲೆ ಕೆಡಿಸಿ ಬಿಡುತ್ತಾರೆ. ನಿಜವಾದ ತತ್ವಗಳು, ವಾಡಿಕೆಗಳೇನು? ಅನೇಕ ಜನ ದೂರದರ್ಶನ ವಾಹಿನಿಗಳ ಪಾಠಗಳಿಂದ ಏನೇನೋ ಮಾಡ ಹೋಗಿ ಕೊನೆಗೆ ಗೊಂದಲದಲ್ಲಿ ಬಿದ್ದಿದ್ದೂ ಇದೆ. ನಾವು ‘ತಸ್ಮತ್ ಶಾಸ್ತ್ರ ಪ್ರಮಾಣೇಶು’ ಎಂದಂತೆ ಶಾಸ್ತ್ರ ವಚನವನ್ನು ಮಾತ್ರ ಹೇಳ ಬಹುದಷ್ಟೆ.

ತಿಲ ತೈಲ (ಎಳ್ಳೆಣ್ಣೆ) ತೆಂಗಿನಎಣ್ಣೆ ಮತ್ತು ಘೃತ (ತುಪ್ಪ) ದೀಪಗಳು ಮನೆಯೊಳಗೆ ದೇವರ ಕೋಣೆಯಲ್ಲಿಡಲು ಯೋಗ್ಯ. ಇನ್ಯಾವುದೇ ತೈಲಗಳು ದೇವರಿಗೆ ಯೋಗ್ಯವಲ್ಲ. ತಿಲವು ಪಾಪಹರವಾದರೆ, ಘೃತವು ಮೋಕ್ಷದಾಯಕ. ತೆಂಗಿನ ಎಣ್ಣೆ ಸಾತ್ವಿಕ ವಾತಾವರಣವನ್ನು ಹೆಚ್ಚಿಸುತ್ತದೆ

ಒಂದು ಸ್ಥಂಬದಲ್ಲಿ ಒಂದೇ ದೀಪ ಉರಿಯ ಬೇಕು ಅಥವಾ ದೀಪ ನಮಸ್ಕಾರ, ಉದ್ಘಾಟನೆಗಳ ಸಂದರ್ಭಗಳಲ್ಲಿ ಐದು (ಅದಕ್ಕಿಂತ ಹೆಚ್ಚು) ದೀಪ ಒಂದೇ ಸ್ಥಂಭದಲ್ಲಿ ಉರಿಯ ಬೇಕು.
*ಎರಡು ದೀಪ ಒಂದೇ ಸ್ಥಂಭದಲ್ಲಿದ್ದರೆ ತೊಂದರೆ ಇಲ್ಲ ಆದರೆ
*ಮೂರು ಇದ್ದರೆ ಮರಣ ಸೂಚಕ.(ಒಂದೇ ಸ್ಥಂಭದಲ್ಲಿದ್ದರೆ)
*ನಾಲ್ಕು ಇದ್ದರೆ ಗೊಂದಲ.
*ಐದು ದೀಪಗಳು ಆರಾಧನೆಗೆ ಮಾತ್ರ.
ಇದರಲ್ಲಿ ಬತ್ತಿಗಳ ಪ್ರಮಾಣ:
*ಎರಡು ಬತ್ತಿ ದೇಹ ಮತ್ತು ಪ್ರಾಣಗಳ ಸಂಕೇತ.
*ಮೂರು ಬತ್ತಿ ತ್ರಿಶಕ್ತಿ ರೂಪ.
*ನಾಲ್ಕು ಬತ್ತಿಯು ಉತ್ತಮವಲ್ಲ.
*ಐದು ಬತ್ತಿಗಳು ಪಂಚಭೂತಗಳ ಸಂಕೇತ.
ಹಾಗಾಗಿ ನಾಲ್ಕು ಬತ್ತಿ ಬಿಟ್ಟು ಯಾವುದನ್ನೂ ಹಾಕ ಬಹುದು. ಆದರೂ ಎರಡು ಬತ್ತಿಯೇ ಮನಗಳಲ್ಲಿ ಶ್ರೇಷ್ಟ. ದೀಪ ಸ್ಥಂಭ, ದೀಪದ ಇಂಧನ ತೈಲವು ಮಲಿನ ಆಗಿರ ಬಾರದು.

ಕೀಟಾದಿಗಳು ಬಿದ್ದಿದ್ದರೆ ಅದನ್ನು ಶುಚಿಯಾಗಿಡ ಬೇಕು. ಎಳ್ಳೆಣ್ಣೆ ಮತ್ತು ತುಪ್ಪ ಮಿಶ್ರಣವಾಗಲೇ ಬಾರದು. ಕೈಯಲ್ಲಿ ಯಾವುದಾದರೂ ಬೇರೆ ತೈಲ ಇದ್ದರೆ ಇನ್ನೊಂದು ತೈಲ ಮುಟ್ಟ ಬೇಕಾದರೆ ಕೈಯ್ಯನ್ನು ಪ್ರಕ್ಷಾಳನ (ತೊಳೆದು) ಮಾಡಿಯೇ ಮುಟ್ಟ ಬೇಕು. ಅಂದರೆ ತುಪ್ಪದ ಕೈಯಲ್ಲಿ ಎಳ್ಳೆಣ್ಣೆ ಮುಟ್ಟ ಬಾರದು ಎಂದರ್ಥ.

ದೇವರ ದೀಪವನ್ನು ದೇವರ ಬಲ ಭಾಗದಲ್ಲಿಡ ಬೇಕು. (ಒಂದೇ ದೀಪ ಇಡುವುದಿದ್ದರೆ ಮಾತ್ರ. ಎರಡಿದ್ದರೆ ಎಡ ಬಲಗಳಲ್ಲಿ ಇಡ ಬಹುದು)
ಮನೆಯ ದೇವರಿಗೆ ಎರಡು ದೀಪಗಳು ತುಂಬಾ ಉತ್ತಮ
ದೀಪದ ಮುಖ ಯಾವಾಗಲೂ ನಮ್ಮ ಅಂದರೆ ಪೂಜಿಸುವವರ ಕಡೆಗೆ, ಪೂರ್ವಾಭಿಮುಖ, ಉತ್ತರಾಭಿಮುಖ ಅಥವಾ ದೇವರ ಕಡೆ ಸ್ವಲ್ಪ ವಾಲುವಂತೆಯೂ ಇಡ ಬಹುದು. ಇದು ಶಾಸ್ತ್ರೋಕ್ತವಾದ ದೀಪ ಲಕ್ಷಣ…

*ನಂದಾದೀಪ:

ದಿನವಿಡಿ ನಂದಿ ಹೋಗದೆ ದೇವರ ಕೋಣೆಯಲ್ಲಿ ಬೆಳಗುವ ದೀಪವೇ ನoದಾದೀಪ. “ನoದ” ಎಂದರೆ “ಭಗವಂತ” (ಆನಂದೋ ನಂದನೋ ನಂದಃ ವಿಷ್ಣುಸಹಸ್ರನಾಮ) ನಂದಯತಿ ಭಕ್ತಾನ್ ಇತಿನಂದಃ. ನಂದಾದೀಪವು ಮನಸ್ಸಿಗೆ ಆನಂದವನ್ನು ತರುತ್ತದೆ.
ದೀಪವನ್ನು ಹಚ್ಚಿ ಮಾಡಿದ ಭಜನೆ, ಜಪ-ಪಾರಾಯಣ, ಸ್ತೋತ್ರಗಳು, ದೇವರಲ್ಲಿ ನಾವು ಮನಸ್ಪೂರ್ವಕವಾಗಿ ಮಾಡಿದ ಸರ್ವ ನಿವೇದನೆಗಳನ್ನು ಪರಮಾತ್ಮನ ಪದತಲಕ್ಕೆ ಕೊಂಡು ಹೋಗುವ ಶಕ್ತಿ ದೀಪಕ್ಕೆ ಇದೆ

ಸಂಧ್ಯಾಕಾಲದಲ್ಲಿ ದೇವರ ಮುಂದೆ ಹಚ್ಚಿದ ದೀಪವು ಎಷ್ಟು ಹೊತ್ತು ಉರಿಯುತ್ತದೆಯೋ ಅಷ್ಟು ಸಾತ್ವಿಕವಾದ ದೈವಿಕ ಲಹರಿಗಳು ಮನೆಯಲ್ಲಿ ಪಸರಿಸುತ್ತಾ ಮನಸ್ಸಿಗೆ ಆನಂದವನ್ನು ಮನೆಯಲ್ಲಿ ಸಾತ್ವಿಕ ವಾತಾವರಣವನ್ನು ತರುತ್ತವೆ. ದೀಪ ಬೆಳಗುತ್ತಿರುವ ಮನೆಯಲ್ಲಿ ಅಲಕ್ಷ್ಮಿಯು ಸುಳಿಯಲಾರಳು. ದಾರಿದ್ರ್ಯವು ಬರಲಾರದು. ಲಕ್ಷ್ಮೀದೇವಿಯ ಸನ್ನಿಧಾನ ದೀಪದಲ್ಲಿ ಇರುವುದರಿಂದ ದೀಪಕ್ಕೆ ಅರಶಿನ ಕುಂಕುಮ ಹೂಗಳಿಂದ ಅಲಂಕರಿಸುತ್ತೇವೆ. ದೀಪವನ್ನು ಸಾಧ್ಯವಾದಷ್ಟು ಒಂದೇ ರೀತಿಯಲ್ಲಿ ಇರುವಂತೆ ಚಿಕ್ಕದಾಗಿ ಇಡುವುದು ಉತ್ತಮ.

ದೀಪಕ್ಕೆ ವಿಶೇಷ ಕಳೆ ಇದೆ. ದೀಪಕ್ಕೆ ಅತಿ ವಿಶಿಷ್ಟ ಲಕ್ಷಣವಿದೆ, ಈ ದೀಪಗಳ ಸುತ್ತ ಪ್ರಭೆಯಿದೆ, ಪ್ರಕಾಶವಿದೆ, ಶಾಖವಿದೆ. ಒಂಥರಾ ಆಹ್ಲಾದಕರ ಸುವಾಸನೆಯಿದೆ. ಬೆಳಗುವ ದೀಪ ನೋಡಿದಾಗ ಮನಸ್ಸು ತುಂಬಾ ಲವಲವಿಕೆ ತುಂಬಿಕೊಳ್ಳುತ್ತದೆ, ನೀಲಾಂಜನವನ್ನು ನೋಡಿದಾಗ ನಮ್ಮಲ್ಲಿ ವಿಶಿಷ್ಟ ಅನುಭೂತಿ ಉಂಟಾಗುತ್ತದೆ. ದೀಪ ಎಲ್ಲಿದೆಯೋ ಅಲ್ಲಿ ಅಂಧಕಾರ ಕರಗುತ್ತದೆ, ಕ್ರಿಮಿ ಕೀಟಗಳು ಆವಾಸವಾಗಿರುವ ಕತ್ತಲ ಜಾಗ ಬೆಳಕಿನಿಂದ ಪ್ರಜ್ವಲಿಸಿದಾಗ ಅವುಗಳು ದೂರ ಸರಿದುಹೋಗಿ ನಮ್ಮ ಆವಾಸಕ್ಕೆ ಅನುಕೂಲವಾಗುತ್ತದೆ. ದೀಪವು ಮನದ ಕ್ಲೇಶವನ್ನು ಕಳೆಯುತ್ತದೆ, ಸರಿಯಾಗಿ ದಿಟ್ಟಿಸಿ ನೋಡಿ – ತುಪ್ಪದ ದೀಪದ ಬಣ್ಣವೇ ದೀಪಗಳಲ್ಲಿ ವಿಶಿಷ್ಟ! ಬೆಳ್ಳಿಯ ಹಣತೆಯಲ್ಲಿ ತುಪ್ಪವನ್ನು ಹಾಕಿ, ಶುದ್ಧ ಹತ್ತಿಯ ಬತ್ತಿಯಿಂದ ದೀಪ ಬೆಳಗಿದರೆ ಅದರ ಸಲ್ಲಕ್ಷಣ ನಮಗೆ ತರುವ ಸಂತಸ ಬಹಳ. ದೀಪವನ್ನು ಮಣ್ಣ ಹಣತೆಯಲ್ಲೂ ಬೆಳಗಬಹುದು. ಜ್ಞಾನಕ್ಕೂ ದೀಪಕ್ಕೂ ಇರುವ ಸಾಮಾನ್ಯತೆ ಎಂದರೆ ದೀಪ ಕತ್ತಲೆಯನ್ನು ಓಡಿಸುತ್ತದೆ ಹೇಗೋ ಹಾಗೆ ಓದು-ಜ್ಞಾನಾರ್ಜನೆ ನಮ್ಮ ಮನದ ಕತ್ತಲೆಯನ್ನು ಓಡಿಸುತ್ತದೆ. ಅದಕ್ಕೇ –
ತಮಸೋಮಾ ಜ್ಯೋತಿರ್ಗಮಯ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಆಧ್ಯಾತ್ಮ ಬಂಧುಗಳೇ…
ಮನೆ, ಮಠ,ಮಂದಿರಗಳಲ್ಲಿ ದೈವಿಕ ಕಾರ್ಯಗಳಲ್ಲಿ ರಾಮಾಯಣ,ಮಹಾಭಾರತ ಭಾಗವತ ಪುರಾಣ,ಗರುಡ ಪುರಾಣ ಮೊದಲಾದ ಅಷ್ಟಾದಶ ಪುರಾಣಗಳ ಪಾರಾಯಣ ಮತ್ತು ಪ್ರವಚನ
ಜಪ ತಪ ಹೋಮ ಅನುಷ್ಠಾನ ಗಳನ್ನು……
ವಿವಾಹಕ್ಕೆ ಸಂಬಂಧಪಟ್ಟ ಮೇಳಾ ಮೇಳಿ
ಮುಹೂರ್ತ ನಿರ್ಣಯ ಮೊದಲಾದ
ಜಾತಕ ವಿಮರ್ಶೆ ….ಪ್ರಶ್ನೆ ಚಿಂತನೆಯನ್ನು
ಯೋಗ್ಯತಾನುಸಾರ ಸರಳ ಮತ್ತು ಶ್ರದ್ಧೆಯಿಂದ ನಡೆಸಿಕೊಡಲಾಗುತ್ತದೆ
ಆಸಕ್ತ ಭಗವದ್ಭಕ್ತರು ಸಂಪರ್ಕಿಸಬಹುದು.

Source: What should the God's lamp look like inside the house?
Via: What should the God's lamp look like inside the house?
Tags: #kannadaastrologybengalurukannadanewskarnatakamangaluru
ShareTweetSendShare
Join us on:

Related Posts

ಮಾಲೆಗಾಂವ್ ಪಾಲಿಕೆಯಲ್ಲಿ ಗಾಂಧಿ ಅಂಬೇಡ್ಕರ್ ಬದಲು ಟಿಪ್ಪು ಫೋಟೋ ಬಿಜೆಪಿ ಆಕ್ರೋಶ:ಟಿಪ್ಪು ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಹಾಕಿದ್ರೆ ತಪ್ಪೇನು ಉಪಮೇಯರ್ ಪ್ರಶ್ನೆ

ಮಾಲೆಗಾಂವ್ ಪಾಲಿಕೆಯಲ್ಲಿ ಗಾಂಧಿ ಅಂಬೇಡ್ಕರ್ ಬದಲು ಟಿಪ್ಪು ಫೋಟೋ ಬಿಜೆಪಿ ಆಕ್ರೋಶ:ಟಿಪ್ಪು ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಹಾಕಿದ್ರೆ ತಪ್ಪೇನು ಉಪಮೇಯರ್ ಪ್ರಶ್ನೆ

by Shwetha
February 15, 2026
0

ಮಹಾರಾಷ್ಟ್ರದ ಮಾಲೆಗಾಂವ್ ಮಹಾನಗರ ಪಾಲಿಕೆಯಲ್ಲಿ ತೀವ್ರ ಸ್ವರೂಪದ ರಾಜಕೀಯ ವಿವಾದವೊಂದು ಭುಗಿಲೆದ್ದಿದೆ. ಮಹಾನಗರ ಪಾಲಿಕೆಯ ಉಪಮೇಯರ್ ಅವರ ಅಧಿಕೃತ ಕೊಠಡಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಸಂವಿಧಾನ...

ನನ್ನ ಮಾತನ್ನು ಬರೆದಿಟ್ಟುಕೊಳ್ಳಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಬರೋಬ್ಬರಿ 141 ಸ್ಥಾನ:2028ರ ಚುನಾವಣೆಗೆ ಈಗಲೇ ಭವಿಷ್ಯ ನುಡಿದ ಡಿಕೆ ಶಿವಕುಮಾರ್

ನನ್ನ ಮಾತನ್ನು ಬರೆದಿಟ್ಟುಕೊಳ್ಳಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಬರೋಬ್ಬರಿ 141 ಸ್ಥಾನ:2028ರ ಚುನಾವಣೆಗೆ ಈಗಲೇ ಭವಿಷ್ಯ ನುಡಿದ ಡಿಕೆ ಶಿವಕುಮಾರ್

by Shwetha
February 15, 2026
0

ಹಾವೇರಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಲೆ ದಿನೇ ದಿನೇ ಹೆಚ್ಚುತ್ತಿದ್ದು, ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬರೋಬ್ಬರಿ 141 ಸ್ಥಾನಗಳನ್ನು ಗೆಲ್ಲಲಿದೆ ಎಂದು ಉಪಮುಖ್ಯಮಂತ್ರಿ...

ನನ್ನ ಅಜೆಂಡಾ ಸಿಎಂ ಕುರ್ಚಿಯಲ್ಲ, ಭ್ರಷ್ಟ ಸರ್ಕಾರ ಕಿತ್ತೊಗೆಯುವುದೇ ಗುರಿ: ಸಿಎಂ ಯಾರು ಎಂಬ ಚರ್ಚೆಯೇ ಅಪ್ರಬುದ್ಧತೆ ಎಚ್‌ಡಿಕೆ

ನನ್ನ ಅಜೆಂಡಾ ಸಿಎಂ ಕುರ್ಚಿಯಲ್ಲ, ಭ್ರಷ್ಟ ಸರ್ಕಾರ ಕಿತ್ತೊಗೆಯುವುದೇ ಗುರಿ: ಸಿಎಂ ಯಾರು ಎಂಬ ಚರ್ಚೆಯೇ ಅಪ್ರಬುದ್ಧತೆ ಎಚ್‌ಡಿಕೆ

by Shwetha
February 15, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ 2028ರ ವಿಧಾನಸಭಾ ಚುನಾವಣೆಯ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಚರ್ಚೆ ಈಗಲೇ ಕಾವೇರುತ್ತಿದೆ. ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸಿಎಂ ಆಗಲು...

ರಾಜ್ಯದ ಜನತೆಗೆ ಬಂಪರ್ ಸುದ್ದಿ: ಫೆಬ್ರವರಿಯಿಂದಲೇ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ, ಅನರ್ಹ ಕಾರ್ಡ್‌ಗಳಿಗೆ ಕತ್ತರಿ ಗ್ಯಾರಂಟಿ!

ರಾಜ್ಯದ ಜನತೆಗೆ ಬಂಪರ್ ಸುದ್ದಿ: ಫೆಬ್ರವರಿಯಿಂದಲೇ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ, ಅನರ್ಹ ಕಾರ್ಡ್‌ಗಳಿಗೆ ಕತ್ತರಿ ಗ್ಯಾರಂಟಿ!

by Shwetha
February 15, 2026
0

ಬೆಂಗಳೂರು: ರಾಜ್ಯದಲ್ಲಿ ಹೊಸ ಪಡಿತರ ಚೀಟಿಗಾಗಿ (Ration Card) ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಲಕ್ಷಾಂತರ ಕುಟುಂಬಗಳಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಕಳೆದ ಕೆಲವು ಸಮಯದಿಂದ...

ದೆಹಲಿಯಿಂದ ಡಿಕೆಶಿ ವಾಪಸ್ ಬಂದ್ರು, ಮುನ್ನೆಲೆಗೆ ಬಂದ  ಕೋಡಿಶ್ರೀಗಳ ಭವಿಷ್ಯ! ಬಜೆಟ್ ಬೆನ್ನಲ್ಲೇ ರಾಜ್ಯದಲ್ಲಿ ಆಪರೇಷನ್ ಹಸ್ತಾಂತರ ಫಿಕ್ಸ್?

ದೆಹಲಿಯಿಂದ ಡಿಕೆಶಿ ವಾಪಸ್ ಬಂದ್ರು, ಮುನ್ನೆಲೆಗೆ ಬಂದ ಕೋಡಿಶ್ರೀಗಳ ಭವಿಷ್ಯ! ಬಜೆಟ್ ಬೆನ್ನಲ್ಲೇ ರಾಜ್ಯದಲ್ಲಿ ಆಪರೇಷನ್ ಹಸ್ತಾಂತರ ಫಿಕ್ಸ್?

by Shwetha
February 15, 2026
0

ಕರ್ನಾಟಕದ ರಾಜಕೀಯ ಅಖಾಡದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಕಳೆದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2026ನೇ ಸಾಲಿನ ರಾಜ್ಯ ಬಜೆಟ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram