ಇರಾನ್ ವಿಚಾರವಾಗಿ ಡೊನಾಲ್ಡ್ ಟ್ರಂಪ್ ಮತ್ತೆ ಪೋಪ್ ಲಿಯೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಇರಾನ್ ಕನಿಷ್ಠ 42,000 ನಿರಾಯುಧ ಪ್ರತಿಭಟನಾಕಾರರನ್ನು ಹತ್ಯೆ ಮಾಡಿದೆ ಎಂದು ಆರೋಪಿಸಿರುವ ಟ್ರಂಪ್, ಈ ಗಂಭೀರ ವಿಷಯವನ್ನು ಪೋಪ್ ಗಮನಿಸಬೇಕು ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇರಾನ್ ಬಳಿ ಪರಮಾಣು ಬಾಂಬ್ ಇರಬಾರದು ಎಂದು ಒತ್ತಾಯಿಸಿರುವ ಅವರು, ಈ ಬಗ್ಗೆ ಜಾಗತಿಕ ನಾಯಕರ ಜವಾಬ್ದಾರಿಯನ್ನೂ ಪ್ರಶ್ನಿಸಿದ್ದಾರೆ.
ಇದಕ್ಕೂ ಮುನ್ನ, ಎರಡು ದಿನಗಳ ಹಿಂದೆ ಕೂಡ ಟ್ರಂಪ್, ಪೋಪ್ ಲಿಯೋ ಅವರನ್ನು ಅಪರಾಧದ ವಿರುದ್ಧ ದುರ್ಬಲ ಹಾಗೂ ವಿದೇಶಾಂಗ ನೀತಿಯಲ್ಲಿ ಭಯಾನಕ ಎಂದು ತೀವ್ರವಾಗಿ ಟೀಕಿಸಿದ್ದರು.








