ADVERTISEMENT
Sunday, May 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಸಾ ರಾ ಗೋವಿಂದು ಅಣ್ಣಾವ್ರ ಹೆಸರು ಕೆಡಿಸುತ್ತಿದ್ದಾರೆ ನಟ ಚೇತನ್ ಅಹಿಂಸಾ ಕಿಡಿ: ಮನೆ ಮುತ್ತಿಗೆ ಹಾಕಿದವರ ವಿರುದ್ಧ ಪೊಲೀಸ್ ದೂರು ದಾಖಲು

Shwetha by Shwetha
May 3, 2026
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಬೆಂಗಳೂರು: ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಮತ್ತು ಕನ್ನಡ ಪರ ಸಂಘಟನೆಗಳ ನಡುವಿನ ಸಂಘರ್ಷ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವರನಟ ಡಾ. ರಾಜ್ ಕುಮಾರ್ ಅವರ ಸ್ಮಾರಕದ ಜಾಗಕ್ಕೆ ಸಂಬಂಧಿಸಿದಂತೆ ಚೇತನ್ ನೀಡಿದ್ದ ಹೇಳಿಕೆ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಅದರ ಬೆನ್ನಲ್ಲೇ ಈಗ ಕಾನೂನು ಸಮರ ಆರಂಭವಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ಚೇತನ್ ಅವರ ಪೋಸ್ಟ್ ಗೆ ಆಕ್ರೋಶ ವ್ಯಕ್ತಪಡಿಸಿ ಅವರ ಮನೆಗೆ ಮುತ್ತಿಗೆ ಹಾಕಿದ್ದ ಸಾ ರಾ ಗೋವಿಂದು ಮತ್ತು ಅವರ ತಂಡದ ವಿರುದ್ಧ ಚೇತನ್ ಈಗ ಅಧಿಕೃತವಾಗಿ ದೂರು ನೀಡಿದ್ದಾರೆ. ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಚೇತನ್, ತಮ್ಮ ಮನೆಗೆ ಅಕ್ರಮವಾಗಿ ನುಗ್ಗಿ ದಾಂಧಲೆ ನಡೆಸಿದವರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

Related posts

ಜನಸಾಮಾನ್ಯರ ಜೇಬಿಗೆ ಭಾರಿ ಕತ್ತರಿ ಅಡುಗೆ ಎಣ್ಣೆ ದರ ಗಗನಕ್ಕೆ ಬೆಲೆ ಏರಿಕೆಯ ಬಿಸಿಗೆ ಹೈರಾಣಾದ ಸಾರ್ವಜನಿಕರು

ಜನಸಾಮಾನ್ಯರ ಜೇಬಿಗೆ ಭಾರಿ ಕತ್ತರಿ ಅಡುಗೆ ಎಣ್ಣೆ ದರ ಗಗನಕ್ಕೆ ಬೆಲೆ ಏರಿಕೆಯ ಬಿಸಿಗೆ ಹೈರಾಣಾದ ಸಾರ್ವಜನಿಕರು

May 3, 2026
ಯುದ್ಧ ಮತ್ತೆ ಆರಂಭವಾಗಬಹುದು: ಇರಾನ್ ಎಚ್ಚರಿಕೆ

ಯುದ್ಧ ಮತ್ತೆ ಆರಂಭವಾಗಬಹುದು: ಇರಾನ್ ಎಚ್ಚರಿಕೆ

May 3, 2026

ದೂರು ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಚೇತನ್, ಸಾ ರಾ ಗೋವಿಂದು ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಾ ರಾ ಗೋವಿಂದು ಅವರು ಡಾ. ರಾಜ್ ಕುಮಾರ್ ಅವರ ಹೆಸರು ಕೆಡಿಸುತ್ತಿದ್ದಾರೆ. ಅವರಿಗೆ ಅಣ್ಣಾವ್ರ ಅಭಿಮಾನಿ ಎಂದು ಹೇಳಿಕೊಳ್ಳುವ ಯಾವುದೇ ಯೋಗ್ಯತೆ ಇಲ್ಲ. ಚಿತ್ರರಂಗದಲ್ಲಿ ದಬ್ಬಾಳಿಕೆ ಮತ್ತು ಗೂಂಡಾಗಿರಿ ನಡೆಸುತ್ತಾ ಎಲ್ಲರನ್ನೂ ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಘಟನೆಯ ದಿನ ಸಾ ರಾ ಗೋವಿಂದು, ಶಿವರಾಮೇಗೌಡ ಮತ್ತು ಶಿವಕುಮಾರ್ ನಾಯ್ಕ್ ನೇತೃತ್ವದಲ್ಲಿ ಗುಂಪೊಂದು ಮನೆ ಬಳಿ ಬಂದು ಅಶ್ಲೀಲ ಪದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದೆ ಎಂದು ಚೇತನ್ ದೂರಿದ್ದಾರೆ. ಈ ಹಿಂದೆ ಲಂಕೇಶ್ ಪತ್ರಿಕೆ ಕಚೇರಿಗೆ ನುಗ್ಗಿ ಹಲ್ಲೆ ಮಾಡಿದ್ದ ಉದಾಹರಣೆಯನ್ನು ನೀಡಿದ ಚೇತನ್, ಇವರ ಇತಿಹಾಸವೇ ಇಂತಹ ದೌರ್ಜನ್ಯಗಳಿಂದ ಕೂಡಿದೆ. ಪೊಲೀಸರ ಮುಂದೆಯೇ ಇವರು ದಾದಾಗಿರಿ ನಡೆಸಿದ್ದಾರೆ ಎಂದು ಗುಡುಗಿದ್ದಾರೆ.

ಸದ್ಯ ಪೊಲೀಸರು ದೂರಿನ ಅಕ್ನಾಲೆಜ್ ಮೆಂಟ್ ನೀಡಿದ್ದು, ಕಾನೂನು ತಜ್ಞರ ಸಲಹೆ ಪಡೆದು ಎಫ್ಐಆರ್ ದಾಖಲಿಸುವ ಬಗ್ಗೆ ನಿರ್ಧಾರ ಮಾಡಲಿದ್ದಾರೆ. ಇದರ ಜೊತೆಗೆ ಸಾ ರಾ ಗೋವಿಂದು ಅವರು ದಲಿತರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದ ಬಗ್ಗೆಯೂ ಸಂಘಟನೆಗಳ ಜೊತೆಗೂಡಿ ಹೋರಾಟ ಮುಂದುವರಿಸುವುದಾಗಿ ಚೇತನ್ ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆಯಿಂದಾಗಿ ಕನ್ನಡ ಚಿತ್ರರಂಗ ಮತ್ತು ಸಾಮಾಜಿಕ ವಲಯದಲ್ಲಿ ಪರ ವಿರೋಧದ ಚರ್ಚೆಗಳು ಮತ್ತಷ್ಟು ತೀವ್ರಗೊಂಡಿವೆ.

ShareTweetSendShare
Join us on:

Related Posts

ಜನಸಾಮಾನ್ಯರ ಜೇಬಿಗೆ ಭಾರಿ ಕತ್ತರಿ ಅಡುಗೆ ಎಣ್ಣೆ ದರ ಗಗನಕ್ಕೆ ಬೆಲೆ ಏರಿಕೆಯ ಬಿಸಿಗೆ ಹೈರಾಣಾದ ಸಾರ್ವಜನಿಕರು

ಜನಸಾಮಾನ್ಯರ ಜೇಬಿಗೆ ಭಾರಿ ಕತ್ತರಿ ಅಡುಗೆ ಎಣ್ಣೆ ದರ ಗಗನಕ್ಕೆ ಬೆಲೆ ಏರಿಕೆಯ ಬಿಸಿಗೆ ಹೈರಾಣಾದ ಸಾರ್ವಜನಿಕರು

by Shwetha
May 3, 2026
0

ರಾಜ್ಯದ ಜನಸಾಮಾನ್ಯರಿಗೆ ಈಗ ಬೆಲೆ ಏರಿಕೆಯ ಬಿಸಿ ಜೋರಾಗಿ ತಟ್ಟುತ್ತಿದೆ. ಈಗಾಗಲೇ ಅಡುಗೆ ಅನಿಲ ಮತ್ತು ತರಕಾರಿಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಈಗ ಅಡುಗೆ ಎಣ್ಣೆಯ...

ಯುದ್ಧ ಮತ್ತೆ ಆರಂಭವಾಗಬಹುದು: ಇರಾನ್ ಎಚ್ಚರಿಕೆ

ಯುದ್ಧ ಮತ್ತೆ ಆರಂಭವಾಗಬಹುದು: ಇರಾನ್ ಎಚ್ಚರಿಕೆ

by Shwetha
May 3, 2026
0

ಅಮೆರಿಕದೊಂದಿಗೆ ಯುದ್ಧ ಮತ್ತೆ ಆರಂಭವಾಗುವ ಸಾಧ್ಯತೆ ಇದೆ ಎಂದು ಇರಾನ್‌ನ ಹಿರಿಯ ಮಿಲಿಟರಿ ಅಧಿಕಾರಿ ಆಸಾದಿ ಎಚ್ಚರಿಕೆ ನೀಡಿದ್ದಾರೆ. ಅವರ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಯಾವುದೇ ಒಪ್ಪಂದಗಳಿಗೆ...

ಬೆಂಗಳೂರು ಹೋಟೆಲ್ ಬೆಲೆ ಏರಿಕೆ: ಗ್ರಾಹಕರಿಗೆ ಮತ್ತಷ್ಟು ಹೊರೆ

ಬೆಂಗಳೂರು ಹೋಟೆಲ್ ಬೆಲೆ ಏರಿಕೆ: ಗ್ರಾಹಕರಿಗೆ ಮತ್ತಷ್ಟು ಹೊರೆ

by Shwetha
May 3, 2026
0

ಬೆಂಗಳೂರು ನಗರದ ಹೋಟೆಲ್‌ಗಳಲ್ಲಿ ಊಟ ಮಾಡುವವರಿಗೆ ಇದೀಗ ಮತ್ತಷ್ಟು ಖರ್ಚು ಎದುರಾಗಲಿದೆ. ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯಲ್ಲಿ ಭಾರೀ ಏರಿಕೆಯಾದ ಹಿನ್ನೆಲೆಯಲ್ಲಿ, ಹೋಟೆಲ್ ಮಾಲೀಕರು ತಮ್ಮ ಮೆನು...

ದಿವಾಳಿ ಹಂತ ತಲುಪುತ್ತಿವೆಯೇ ಗ್ಯಾರಂಟಿ ಜಾರಿ ರಾಜ್ಯಗಳು? ಕೇಂದ್ರದಿಂದ ಬೊಕ್ಕಸ ಬರಿದಾಗುತ್ತಿರುವ ಬಗ್ಗೆ ಸಿಕ್ಕಿತು ಬಿಗ್ ವಾರ್ನಿಂಗ್

ದಿವಾಳಿ ಹಂತ ತಲುಪುತ್ತಿವೆಯೇ ಗ್ಯಾರಂಟಿ ಜಾರಿ ರಾಜ್ಯಗಳು? ಕೇಂದ್ರದಿಂದ ಬೊಕ್ಕಸ ಬರಿದಾಗುತ್ತಿರುವ ಬಗ್ಗೆ ಸಿಕ್ಕಿತು ಬಿಗ್ ವಾರ್ನಿಂಗ್

by Shwetha
May 3, 2026
0

ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿರುವ ಉಚಿತ ಗ್ಯಾರಂಟಿ ಯೋಜನೆಗಳು ಹಾಗೂ ಅವುಗಳಿಂದ ಉಂಟಾಗುತ್ತಿರುವ ಆರ್ಥಿಕ ಹೊರೆಯ ಬಗ್ಗೆ ಕೇಂದ್ರ ಸರ್ಕಾರ ಈಗ ಅತ್ಯಂತ...

ನನಗೆ KPCC ಅಧ್ಯಕ್ಷರಾಗುವ ಅವಕಾಶ ಬಂದಿತ್ತು: ಎಂ.ಬಿ. ಪಾಟೀಲ್

ನನಗೆ KPCC ಅಧ್ಯಕ್ಷರಾಗುವ ಅವಕಾಶ ಬಂದಿತ್ತು: ಎಂ.ಬಿ. ಪಾಟೀಲ್

by Shwetha
May 3, 2026
0

ಸಚಿವ ಎಮ್. ಬಿ. ಪಾಟೀಲ್ ಅವರು ತಮ್ಮ ರಾಜಕೀಯ ಜೀವನದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ತಮಗೆ ಎರಡು ಬಾರಿ KPCC ಅಧ್ಯಕ್ಷ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram