ತಾನೊಬ್ಬ ಯುವ ವಿಜ್ಞಾನಿ ಅಂತ ರಾಜ್ಯದ ಹಾಗೂ ದೇಶದ ಜನರನ್ನು ಯಾಮಾರಿಸಿರುವ ಆರೋಪ ಎದುರಿಸುತ್ತಿರುವ ಹಾಗೂ ಇದೀಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುವ ಎಂ.ಎನ್. ಪ್ರತಾಪ @ ಡ್ರೋಣ್ ಪ್ರತಾಪನ ವಿರುದ್ಧ ಕೊನೆಗೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಡ್ರೋಣ್ ತಯಾರಿಕೆಯಲ್ಲಿ ಸಾಧನೆ ಮಾಡಿರುವುದಾಗಿ ವಂಚಿಸಿರುವ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತರೊಬ್ಬರು ಬೆಂಗಳೂರು ಮಹಾನಗರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಹಾಗೂ ಹಲವರಿಂದ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹಿಸಿ ವಂಚಿಸಿರುವ ಆರೋಪದ ಮೇಲೆ ಜೇಕಬ್ ಜಾರ್ಜ್ ಎಂಬುವವರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಈ ಹಿಂದೆ ನಿರುಪಯುಕ್ತ ವಸ್ತುಗಳಿಂದ ತಾನು ಡ್ರೋಣ್ ತಯಾರಿಸಿರುವುದಾಗಿ ಹೇಳಿಕೊಂಡು ಲಕ್ಷಾಂತರ ಜನರ ಮನಗೆದ್ದಿದ್ದ ಪ್ರತಾಪನ ಅಸಲೀ ಮುಖವೇ ಬೇರೆ ಎಂಬುವ ಚರ್ಚೆಗಳು ಇದೀಗ ವ್ಯಾಪಕವಾಗಿ ಕೇಳಿ ರ‍್ತಿದೆ. ಹೀಗೆ ಸುಳ್ಳಗಳ ಮೇಲೆ ಸುಳ್ಳುಗಳೇ ಹೇಳಿಕೊಂಡು ಕಲರ್ ಕಲರ್ ಕಾಗೆ ಹಾರಿಸಿ ಸುಳ್ಳುಗಳ ಅರಮನೆ ಕಟ್ಟಿದ್ದಾನೆ ಅಂತ ಹೇಳಲಾಗುತ್ತಿದ್ದು, ಪ್ರಸ್ತುತ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಇದು ಅಷ್ಟೇ ಅಲ್ಲದೆ ೮೭ ದೇಶ ಸುತ್ತಿದ್ದೇನೆ, ಗೋಲ್ಡ್ ಮೆಡಲ್ ಪಡೆದಿದ್ದೆ ಅಂತ ಹೇಳಿದ್ದೆಲ್ಲ ಶುದ್ಧ ಸುಳ್ಳು ಎಂದು ಹೇಳಲಾಗುತ್ತಿದ್ದು ಸದ್ಯಕ್ಕೆ ಟ್ರೋಲಿಗರ ಪಾಲಿಗೆ ಆಹಾರವಾಗಿದ್ದಾನೆ.








