ಪ್ರತಿಷ್ಠಿತ ಲಾ ಲೀಗ್ ಪ್ರಶಸ್ತಿ ಗೆದ್ದುಕೊಂಡ ರಿಯಲ್ ಮ್ಯಾಡ್ರಿಡ್
ರಿಯಲ್ ಮ್ಯಾಡ್ರಿಡ್ ಫುಟ್‍ಬಾಲ್ ಕ್ಲಬ್ ತಂಡ ಪ್ರತಿಷ್ಠಿತ ಲಾ ಲೀಗ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. 2017ರ ನಂತರ ಅಂದ್ರೆ ಮೂರು ವರ್ಷಗಳ ಬಳಿಕ ರಿಯಲ್ ಮ್ಯಾಡ್ರಿಡ್ ತಂಡ ಪ್ರತಿಷ್ಠಿತ ಟ್ರೋಫಿ ಪಡೆಯಲು ಯಶಸ್ವಿಯಾಯ್ತು. ಕ್ರಿಸ್ಟಿಯಾನೊ ರೊನಾಲ್ಡೊ ರಿಯಲ್ ಮ್ಯಾಡ್ರಿಡ್ ತಂಡವನ್ನು ಬಿಟ್ಟ ಬಳಿಕ ಇದೇ ಮೊದಲ ಬಾರಿ ಲಾ ಲೀಗಾ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಜಿನೆದಿನ್ ಜಿದಾನೆ ಹುಡುಗರು ಪಂದ್ಯದಲ್ಲಿ ಅದ್ಭುತ ಪ್ರದರ್ಶನವನ್ನೇ ನೀಡಿದ್ದರು.
ರಿಯಲ್ ಮ್ಯಾಡ್ರಿಡ್ ತಂಡ 2-1ರಿಂದ ವಿಲ್ಲಾರ್‍ರಿಯಲ್ ತಂಡವನ್ನು ಪರಾಭವಗೊಳಿಸಿತ್ತು. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತ್ತು. ರಿಯಲ್ ಮ್ಯಾಡ್ರಿಡ್ ತಂಡ 37 ಪಂದ್ಯಗಳಲ್ಲಿ ಒಟ್ಟು 86 ಅಂಕಗಳನ್ನು ಪಡೆದುಕೊಂಡು ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. 37 ಪಂದ್ಯಗಳಲ್ಲಿ 79 ಅಂಕಗಳನ್ನು ಪಡೆದುಕೊಂಡಿರುವ ಬಾರ್ಸಿಲೋನಾ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಇನ್ನು ತಂಡದ ಮ್ಯಾನೇಜರ್ ಜಿನೆದಿನ್ ಜಿದಾನೆಯ ಸಂತಸಕ್ಕೆ ಪಾರವೇ ಇಲ್ಲ. ಮೂರು ವರ್ಷಗಳ ಬಳಿಕ ಲಾ ಲೀಗ್ ಪ್ರಶಸ್ತಿ ಗೆದ್ದುಕೊಂಡಿರುವುದು ಚಾಂಪಿಯನ್ಸ್ ಲೀಗ್ ಗೆದ್ದಿರುವುದಕ್ಕಿಂತ ಹೆಚ್ಚು ಖುಷಿ ನೀಡಿದೆ. ಕಳೆದ ಮೂರು ವರ್ಷಗಳ ಬಳಿಕ ಲಾ ಲೀಗ್ ಪ್ರಶಸ್ತಿಯನ್ನು ಗೆದ್ದಿದ್ದೇವೆ ಎಂದು ಹೇಳಿದ್ದಾರೆ.
ಪ್ರೇಕ್ಷಕರಿಲ್ಲದೆ ಆಲ್ಫೆಡೋ ಡಿ ಸ್ಟೆಫಾನೊ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಿಯಲ್ ಮ್ಯಾಡ್ರಿಡ್ ತಂಡ ಹೊಂದಾಣಿಕೆಯ ಆಟದ ಜೊತೆ ಅದ್ಭುತ ಆಟವನ್ನಾಡಿತ್ತು. ರಿಯಲ್ ಮ್ಯಾಡ್ರಿಡ್ ತಂಡ ಕರೀಮ್ ಬೆನ್‍ಝೆಮಾ ಅವರು 20 ಮತ್ತು 21ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡದ ಗೆಲುವಿನ ರೂವಾರಿಯಾದ್ರು. ಈ ಮೂಲಕ ರಿಯಲ್ ಮ್ಯಾಡ್ರಿಡ್ ತಂಡ ತಂಡ ಸ್ಪೇನ್ ಲೀಗ್‍ನ ಪ್ರಶಸ್ತಿಗಳ ಸಂಖ್ಯೆಯನ್ನು 34ಕ್ಕೇರಿಸಿಕೊಂಡಿತ್ತು. ಕಳೆದ ಜೂನ್ ನಲ್ಲಿ ಸ್ಪೇನಿಸ್ ಫುಟ್‍ಬಾಲ್ ಲೀಗ್ ಶುರುವಾಗಿತ್ತು.
ಶುರುವಾದ ಹತ್ತೂ ಪಂದ್ಯಗಳಲ್ಲೂ ರಿಯಲ್ ಮ್ಯಾಡ್ರಿಡ್ ಜಯ ಸಾಧಿಸಿದೆ.
ಇದೊಂದು ವಿಚಿತ್ರ ಹಾಗೂ ಭಿನ್ನ ಋತುವಾಗಿತ್ತು. ಆದ್ರೆ ನಮ್ಮ ಗುರಿ ಸ್ಪಷ್ಟವಾಗಿತ್ತು. ಲೀಗ್ ಮತ್ತೆ ಶುರುವಾದಾಗ ನಾವು ಸ್ಪಷ್ಟ ನಿರ್ಧಾರದೊಂದಿಗೆ ಕಣಕ್ಕಿಳಿದ್ದೇವು. ನಾವು ಪ್ರತಿಯೊಂದು ಪಂದ್ಯಗಳನ್ನು ಗೆಲ್ಲುವ ಗುರಿಯನ್ನಿಟ್ಟಿಕೊಂಡಿದ್ದೇವು. ಇದಕ್ಕೆ ಕಾರಣ ನಮ್ಮ ಕಠಿಣ ಶ್ರಮ. ಜಿನೆದಿನ್ ಜಿದಾನೆ ನಮ್ಮಗೆ ಪ್ರಮುಖವಾಗಿದ್ದರು. ಅವರು ನಮ್ಮ ತಂಡದ ನಾವಿಕನಾಗಿದ್ದರು. ಅವರು ಒಬ್ಬ ಅದ್ಭುತ ಕೋಚ್. ಇದು ನನ್ನ ಪಾಲಿಗೆ ಐದನೇ ಲಾ ಲೀಗ್ ಟ್ರೋಫಿ ಎಂದು ರಿಯಲ್ ಮ್ಯಾಡ್ರಿಡ್ ತಂಡದ ನಾಯಕ ಸೆರ್ಗಿಯೊ ರಾಮೋಸ್ ಹೇಳಿದ್ದಾರೆ.








