ADVERTISEMENT
Saturday, June 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಡಿಕೆಶಿ ಸರ್ಕಾರಕ್ಕೆ ಸ್ವಪಕ್ಷವೇ ಬದ್ಧ ವೈರಿ, ಟ್ರಬಲ್ ಶೂಟರ್ ಗೆ ಕೈ ಪಾಳೆಯದಲ್ಲೇ ಟ್ರಬಲ್ : ಇದು ಶಾಶ್ವತ ಮುಖ್ಯಮಂತ್ರಿಯ ಪ್ರಭಾವಳಿ ಎಫೆಕ್ಟ್..!?

Shwetha by Shwetha
June 6, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಹೊಸ ಸಂಚಲನ ಸೃಷ್ಟಿಯಾಗಿದೆ. ಡಿ.ಕೆ. ಶಿವಕುಮಾರ್ ಸಾರಥ್ಯದ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈಗ ಬಹಿರಂಗವಾಗುತ್ತಿದೆ. ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರು ನಡೆಸುತ್ತಿರುವ ಹಠ, ರಾಜೀನಾಮೆ ಬೆದರಿಕೆ ಮತ್ತು ಹೈಕಮಾಂಡ್ ನಡೆಸುತ್ತಿರುವ ಮನವೊಲಿಕೆಯ ಪ್ರಹಸನಗಳು ಸದ್ಯದ ರಾಜಕೀಯ ಹೈಲೈಟ್ಸ್ ಆಗಿವೆ.

ಹಿರಿಯರಿಗೆ ಸಚಿವ ಸ್ಥಾನದ ದಾಹ ತೀರಲ್ವಾ?

Related posts

ಸಿಲಿಕಾನ್ ಸಿಟಿಯ ಸಿಂಹಾಸನಕ್ಕಾಗಿ ಸಚಿವರ ಮಹಾಯುದ್ಧ: ಬೆಂಗಳೂರು ನಗರಾಭಿವೃದ್ಧಿ ಖಾತೆಗೇಕೆ ಇಷ್ಟೊಂದು ಕ್ರೇಜ್?

ಸಿಲಿಕಾನ್ ಸಿಟಿಯ ಸಿಂಹಾಸನಕ್ಕಾಗಿ ಸಚಿವರ ಮಹಾಯುದ್ಧ: ಬೆಂಗಳೂರು ನಗರಾಭಿವೃದ್ಧಿ ಖಾತೆಗೇಕೆ ಇಷ್ಟೊಂದು ಕ್ರೇಜ್?

June 6, 2026
ಅಧಿಕಾರ ಹಂಚಿಕೆಯಲ್ಲಿ ಜಾತಿ ಲೆಕ್ಕಾಚಾರ: ಅರ್ಹತೆ ಮತ್ತು ಪಕ್ಷನಿಷ್ಠೆಗಿಂತ ಸಮುದಾಯಕ್ಕೇ ಆದ್ಯತೆಯೇ? ; ದಿನೇಶ್ ಗುಂಡೂರಾವ್ ತಬಸ್ಸುಮ್ ರಾವ್ ಪೋಸ್ಟ್ ಹಿಂದಿನ ಮರ್ಮವೇನು?

ಅಧಿಕಾರ ಹಂಚಿಕೆಯಲ್ಲಿ ಜಾತಿ ಲೆಕ್ಕಾಚಾರ: ಅರ್ಹತೆ ಮತ್ತು ಪಕ್ಷನಿಷ್ಠೆಗಿಂತ ಸಮುದಾಯಕ್ಕೇ ಆದ್ಯತೆಯೇ? ; ದಿನೇಶ್ ಗುಂಡೂರಾವ್ ತಬಸ್ಸುಮ್ ರಾವ್ ಪೋಸ್ಟ್ ಹಿಂದಿನ ಮರ್ಮವೇನು?

June 6, 2026

ರಾಜ್ಯ ಕಾಂಗ್ರೆಸ್ ನಲ್ಲಿ ಈಗ ಕೇಳಿ ಬರುತ್ತಿರುವ ಅತಿದೊಡ್ಡ ಪ್ರಶ್ನೆ ಎಂದರೆ ಈ ಹಿರಿಯ ಶಾಸಕರಿಗೆ ಎಷ್ಟೇ ಬಾರಿ ಮಂತ್ರಿಯಾದರೂ ತೃಪ್ತಿ ಇಲ್ವಾ ಎಂಬುದು. ಅನೇಕ ಬಾರಿ ಅಧಿಕಾರ ಅನುಭವಿಸಿದರೂ ಮತ್ತೆ ಸಚಿವ ಸ್ಥಾನ ಬೇಕೆಂದು ಹಠ ಹಿಡಿಯುತ್ತಿರುವುದು ಪಕ್ಷದ ಶಿಸ್ತಿಗೆ ಧಕ್ಕೆ ತರುತ್ತಿದೆ. ಒಂದು ವೇಳೆ ಇವರಿಗೆ ಸಚಿವ ಸ್ಥಾನ ಬೇಡ ಎಂದಾದಲ್ಲಿ, ಆ ಸ್ಥಾನಗಳನ್ನು ಹೊಸಬರಿಗೆ ಅಥವಾ ಯುವ ಶಾಸಕರಿಗೆ ಬಿಟ್ಟುಕೊಟ್ಟು ಮಾರ್ಗದರ್ಶಕರಾಗಿ ಇರಬಾರದೇ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅಸಮಾಧಾನ ಹೊಂದಿರುವವರು ಶಾಸಕರಾಗಿಯೇ ಮುಂದುವರಿಯಲಿ, ಅದನ್ನು ಬಿಟ್ಟು ಅಧಿಕಾರಕ್ಕಾಗಿ ಸರ್ಕಾರಕ್ಕೆ ಮುಜುಗರ ತರುವುದು ಸರಿಯಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಪಕ್ಷ ಬಿಡುವ ಧೈರ್ಯ ಯಾರಿಗೂ ಇಲ್ಲ

ಈಗ ನಡೆಯುತ್ತಿರುವ ರಾಜೀನಾಮೆ ಬೆದರಿಕೆ ಕೇವಲ ಒಂದು ನಾಟಕ ಎನ್ನಲಾಗುತ್ತಿದೆ. ಏಕೆಂದರೆ, ಈಗಿನ ಪರಿಸ್ಥಿತಿಯಲ್ಲಿ ಯಾರೂ ಕೂಡ ಪಕ್ಷ ಬಿಡುವ ಸಾಹಸ ಮಾಡುವುದಿಲ್ಲ. ಪಕ್ಷ ಬಿಟ್ಟರೆ ಮುಂದಿನ ದಿನಗಳಲ್ಲಿ ಅಧಿಕಾರವೂ ಸಿಗಲ್ಲ ಮತ್ತು ಮತ್ತೆ ಶಾಸಕರಾಗಿ ಆಯ್ಕೆಯಾಗುವುದು ಎಷ್ಟು ಕಷ್ಟ ಎಂಬ ಅರಿವು ಎಲ್ಲರಿಗೂ ಇದೆ. ಹೀಗಾಗಿಯೇ ಈ ಹಿರಿಯ ಶಾಸಕರು ಕೇವಲ ಬೆದರಿಕೆ ತಂತ್ರ ಬಳಸಿ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ರೀತಿಯ ನಾಟಕೀಯ ಪ್ರಹಸನಗಳನ್ನು ಬಿಟ್ಟು ಉತ್ತಮ ಆಡಳಿತ ನೀಡುವತ್ತ ಗಮನ ಹರಿಸುವುದು ಉತ್ತಮ.

ಜನ ಸಾಮಾನ್ಯರ ಸಮಸ್ಯೆ ಮುಖ್ಯವಾಗಲಿ

ಸೀನಿಯರ್ ಮತ್ತು ಜೂನಿಯರ್ ಎಂಬ ಅಹಂಕಾರವನ್ನು ಬದಿಗಿಟ್ಟು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜವಾಬ್ದಾರಿ ಆಡಳಿತ ಪಕ್ಷದ ಮೇಲಿದೆ. ಹಾಲಿ ಮುಖ್ಯಮಂತ್ರಿಗಳು ಹಿಂದಿನವರಂತಲ್ಲ, ಅವರ ಕಾರ್ಯವೈಖರಿ ಭಿನ್ನವಾಗಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಸಂಪುಟದಲ್ಲಿ ಬಹುತೇಕ ಸಚಿವರು ಸಿದ್ದರಾಮಯ್ಯನವರ ಬೆಂಬಲಿಗರಾಗಿದ್ದಾರೆ. ಅಂದ ಮೇಲೆ ಡಿ.ಕೆ. ಶಿವಕುಮಾರ್ ಅವರಿಗೆ ಆಡಳಿತ ನಡೆಸುವುದು ಅಂದುಕೊಂಡಷ್ಟು ಸುಲಭವಿಲ್ಲ. ಸಿದ್ದರಾಮಯ್ಯನವರ ಪ್ರಭಾವಳಿ ಮತ್ತು ಅವರ ಬೆಂಬಲಿಗರ ಹಿಡಿತವು ಟ್ರಬಲ್ ಶೂಟರ್ ಎಂದೇ ಹೆಸರಾದ ಡಿ.ಕೆ. ಶಿವಕುಮಾರ್ ಅವರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

ವಿರೋಧ ಪಕ್ಷಕ್ಕಿಂತ ಸ್ವಪಕ್ಷೀಯರೇ ಸವಾಲು

ರಾಜ್ಯದಲ್ಲಿ ಬಿಜೆಪಿ ಅಥವಾ ಜೆಡಿಎಸ್ ಪಕ್ಷಗಳು ಡಿ.ಕೆ. ಶಿವಕುಮಾರ್ ಅವರಿಗೆ ಅಷ್ಟಾಗಿ ತೊಂದರೆ ಕೊಡುತ್ತಿಲ್ಲ. ಬದಲಾಗಿ ಅವರದೇ ಪಕ್ಷದ ಶಾಸಕರು ಮತ್ತು ಸಚಿವರು ವಿರೋಧ ಪಕ್ಷದಂತೆ ವರ್ತಿಸುತ್ತಿರುವುದು ವಿಪರ್ಯಾಸ. ಶಾಶ್ವತ ಮುಖ್ಯಮಂತ್ರಿ ಎಂಬ ವರ್ಚಸ್ಸು ಹೊಂದಿರುವವರ ಪ್ರಭಾವದಿಂದ ಹೊರಬಂದು, ಸ್ವಪಕ್ಷದ ಶಾಸಕರನ್ನು ನಿಭಾಯಿಸುವುದು ಡಿ.ಕೆ. ಶಿವಕುಮಾರ್ ಅವರಿಗೆ ಈಗ ಬೆಟ್ಟದಂತಹ ಸವಾಲಾಗಿದೆ.

ಒಟ್ಟಿನಲ್ಲಿ ಕರ್ನಾಟಕ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಈ ಒಳಜಗಳಗಳು ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗಬಾರದು ಎಂಬುದೇ ಜನರ ಆಶಯ

ಸನತ್ ರೈ

ShareTweetSendShare
Join us on:

Related Posts

ಸಿಲಿಕಾನ್ ಸಿಟಿಯ ಸಿಂಹಾಸನಕ್ಕಾಗಿ ಸಚಿವರ ಮಹಾಯುದ್ಧ: ಬೆಂಗಳೂರು ನಗರಾಭಿವೃದ್ಧಿ ಖಾತೆಗೇಕೆ ಇಷ್ಟೊಂದು ಕ್ರೇಜ್?

ಸಿಲಿಕಾನ್ ಸಿಟಿಯ ಸಿಂಹಾಸನಕ್ಕಾಗಿ ಸಚಿವರ ಮಹಾಯುದ್ಧ: ಬೆಂಗಳೂರು ನಗರಾಭಿವೃದ್ಧಿ ಖಾತೆಗೇಕೆ ಇಷ್ಟೊಂದು ಕ್ರೇಜ್?

by Shwetha
June 6, 2026
0

ಕರ್ನಾಟಕ ರಾಜಕಾರಣದಲ್ಲಿ ಸಚಿವ ಸಂಪುಟ ರಚನೆಯಾದಾಗಲೆಲ್ಲಾ ಹೈಕೋರ್ಟ್‌ನಿಂದ ಹೈಕಮಾಂಡ್ ವರೆಗೆ ಸದ್ದು ಮಾಡುವ ಏಕೈಕ ವಿಷಯವೆಂದರೆ ಅದು ಬೆಂಗಳೂರು ನಗರಾಭಿವೃದ್ಧಿ ಖಾತೆ. ಈ ಇಲಾಖೆಯನ್ನು ಪಡೆಯಲು ಹಿರಿಯ...

ಅಧಿಕಾರ ಹಂಚಿಕೆಯಲ್ಲಿ ಜಾತಿ ಲೆಕ್ಕಾಚಾರ: ಅರ್ಹತೆ ಮತ್ತು ಪಕ್ಷನಿಷ್ಠೆಗಿಂತ ಸಮುದಾಯಕ್ಕೇ ಆದ್ಯತೆಯೇ? ; ದಿನೇಶ್ ಗುಂಡೂರಾವ್ ತಬಸ್ಸುಮ್ ರಾವ್ ಪೋಸ್ಟ್ ಹಿಂದಿನ ಮರ್ಮವೇನು?

ಅಧಿಕಾರ ಹಂಚಿಕೆಯಲ್ಲಿ ಜಾತಿ ಲೆಕ್ಕಾಚಾರ: ಅರ್ಹತೆ ಮತ್ತು ಪಕ್ಷನಿಷ್ಠೆಗಿಂತ ಸಮುದಾಯಕ್ಕೇ ಆದ್ಯತೆಯೇ? ; ದಿನೇಶ್ ಗುಂಡೂರಾವ್ ತಬಸ್ಸುಮ್ ರಾವ್ ಪೋಸ್ಟ್ ಹಿಂದಿನ ಮರ್ಮವೇನು?

by Shwetha
June 6, 2026
0

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರು ಜವಾಬ್ದಾರಿ ವಹಿಸಿಕೊಂಡ ಬೆನ್ನಲ್ಲೇ ಆಂತರಿಕ ಅಸಮಾಧಾನದ ಜ್ವಾಲಾಮುಖಿ ಸ್ಫೋಟಗೊಂಡಿದೆ. ಆಡಳಿತದ ಚುಕ್ಕಾಣಿ...

ದಿನ ಭವಿಷ್ಯ (25-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (06-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
June 6, 2026
0

ದಿನ ಭವಿಷ್ಯ : 06-06-2026 ಮೇಷ ರಾಶಿ ವೃತ್ತಿ ಮತ್ತು ಹಣಕಾಸು: ಕೆಲಸದ ಸ್ಥಳದಲ್ಲಿ ನಿಮ್ಮ ನಾಯಕತ್ವದ ಗುಣಗಳು ಪ್ರಶಂಸೆಗೆ ಒಳಗಾಗಲಿವೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ...

ಹೈಕಮಾಂಡ್ ತೀರ್ಮಾನವೇ ಅಂತಿಮ ಶಾಸನ: ಗುಡ್ ಅಥವಾ ಬ್ಯಾಡ್ ಚಾಯ್ಸ್ ಪ್ರಶ್ನೆಯೇ ಇಲ್ಲ ಎಂದ ಕೆ ಎನ್ ರಾಜಣ್ಣ

ಹೈಕಮಾಂಡ್ ತೀರ್ಮಾನವೇ ಅಂತಿಮ ಶಾಸನ: ಗುಡ್ ಅಥವಾ ಬ್ಯಾಡ್ ಚಾಯ್ಸ್ ಪ್ರಶ್ನೆಯೇ ಇಲ್ಲ ಎಂದ ಕೆ ಎನ್ ರಾಜಣ್ಣ

by Shwetha
June 5, 2026
0

ಬೆಂಗಳೂರು: ರಾಜ್ಯ ರಾಜಕಾರಣದ ಇತ್ತೀಚಿನ ಮಹತ್ವದ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ ಎನ್ ರಾಜಣ್ಣ ಅವರು, ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು...

ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ

ಯಾರೂ ಮತದಾನದ ಹಕ್ಕು ಕಳೆದುಕೊಳ್ಳಬಾರದು: ಸಿಎಂ ಡಿಕೆ ಶಿವಕುಮಾರ್

by Shwetha
June 5, 2026
0

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ವೇಳೆ ಯಾವುದೇ ಅರ್ಹ ಪ್ರಜೆಯೂ ತನ್ನ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram