ಗ್ಯಾಸ್ ಸಿಲಿಂಡರ್ ಬಳಸುವ ಪ್ರತಿಯೊಬ್ಬ ಗ್ರಾಹಕರು ಈಗಲೇ ಎಚ್ಚೆತ್ತುಕೊಳ್ಳಬೇಕಾದ ಸಮಯ ಬಂದಿದೆ. ಕೇಂದ್ರ ಸರ್ಕಾರವು ಎಲ್ಪಿಜಿ ಬಳಕೆದಾರರಿಗೆ ಜೂನ್ 30ರ ಅಂತಿಮ ಗಡುವನ್ನು ನೀಡಿದ್ದು, ಈ ಅವಧಿಯೊಳಗೆ ಆಧಾರ್ ಇ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ ನಿಮ್ಮ ಗ್ಯಾಸ್ ಸಪ್ಲೈ ಸ್ಥಗಿತಗೊಳ್ಳಲಿದೆ. ಇಂಡೇನ್, ಭಾರತ್ ಗ್ಯಾಸ್ ಮತ್ತು ಹೆಚ್ಪಿ ಗ್ಯಾಸ್ ಕಂಪನಿಗಳು ಈ ಕುರಿತು ಈಗಾಗಲೇ ಅಧಿಕೃತ ಪ್ರಕಟಣೆ ಹೊರಡಿಸಿವೆ.
ಯಾರಿಗೆ ಇದು ಕಡ್ಡಾಯ ಮತ್ತು ಯಾಕಾಗಿ
ನಕಲಿ ಗ್ಯಾಸ್ ಕನೆಕ್ಷನ್ಗಳಿಗೆ ಬ್ರೇಕ್ ಹಾಕಲು ಮತ್ತು ಸರ್ಕಾರದ ಸಬ್ಸಿಡಿ ಹಣ ನೇರವಾಗಿ ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪುವಂತೆ ಮಾಡಲು ಈ ಇ ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ. ಮುಖ್ಯವಾಗಿ ಪ್ರಧಾನ ಮಂತ್ರಿ ಉಜ್ಜಲ ಯೋಜನೆಯ ಅಡಿಯಲ್ಲಿ ಸಿಲಿಂಡರ್ ಪಡೆಯುತ್ತಿರುವವರು ಮತ್ತು ಈವರೆಗೆ ಒಮ್ಮೆಯೂ ಆಧಾರ್ ದೃಢೀಕರಣ ಮಾಡಿಸದ ಸಾಮಾನ್ಯ ಗ್ರಾಹಕರು ಜೂನ್ 30ರ ಒಳಗಾಗಿ ಈ ಪ್ರಕ್ರಿಯೆ ಮುಗಿಸಬೇಕು. ಒಂದು ವೇಳೆ ತಪ್ಪಿದರೆ ನಿಮ್ಮ ಸಿಲಿಂಡರ್ ಬುಕಿಂಗ್ ಅನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಲಾಗುತ್ತದೆ.
ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಕೆವೈಸಿ ಮಾಡುವ ವಿಧಾನ
ಗ್ಯಾಸ್ ಏಜೆನ್ಸಿಗಳ ಮುಂದೆ ಗಂಟೆಗಟ್ಟಲೆ ಕ್ಯೂ ನಿಲ್ಲುವ ತಲೆನೋವು ಈಗ ಗ್ರಾಹಕರಿಗಿಲ್ಲ. ನಿಮ್ಮ ಸ್ಮಾರ್ಟ್ಫೋನ್ ಮೂಲಕವೇ ಕೇವಲ ಎರಡು ನಿಮಿಷದಲ್ಲಿ ಈ ಕೆಲಸ ಮುಗಿಸಬಹುದು.
1. ನಿಮ್ಮ ಗ್ಯಾಸ್ ಕಂಪನಿಯ ಅಧಿಕೃತ ಆಪ್ (ಇಂಡೇನ್ ಆಯಿಲ್ ಒನ್, ಹಲೋ ಬಿಪಿಸಿಎಲ್ ಅಥವಾ ಹೆಚ್ಪಿ ಪೇ) ಡೌನ್ಲೋಡ್ ಮಾಡಿ.
2. ಇದರೊಂದಿಗೆ ಆಧಾರ್ ಫೇಸ್ ಆಪ್ ಕೂಡ ನಿಮ್ಮ ಫೋನ್ನಲ್ಲಿ ಇರಲಿ.
3. ಆಪ್ನಲ್ಲಿ ಲಾಗಿನ್ ಆಗಿ ಎಲ್ಪಿಜಿ ಸರ್ವಿಸ್ ವಿಭಾಗದಲ್ಲಿ ಲಿಂಕ್ ಆಧಾರ್ ಆಯ್ಕೆ ಮಾಡಿ.
4. ನಿಮ್ಮ ಮುಖದ ಗುರುತು (Face Authentication) ನೀಡುವ ಮೂಲಕ ತಕ್ಷಣವೇ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಒಂದು ವೇಳೆ ಆನ್ಲೈನ್ನಲ್ಲಿ ಮಾಡಲು ಸಾಧ್ಯವಾಗದಿದ್ದರೆ, ಆಧಾರ್ ಕಾರ್ಡ್ ಮತ್ತು ಗ್ಯಾಸ್ ಪಾಸ್ಬುಕ್ ಹಿಡಿದು ನಿಮ್ಮ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಬಯೋಮೆಟ್ರಿಕ್ ನೀಡುವ ಮೂಲಕ ಉಚಿತವಾಗಿ ಈ ಕೆಲಸ ಮಾಡಿಸಿಕೊಳ್ಳಬಹುದು.
ಒಂದು ಮನೆಗೆ ಒಂದೇ ಗ್ಯಾಸ್ ಸಂಪರ್ಕ ನಿಯಮ ಜಾರಿ
ಕೇಂದ್ರ ಸರ್ಕಾರವು ಕೇವಲ ಕೆವೈಸಿ ಮಾತ್ರವಲ್ಲದೆ ಒಂದು ಮನೆಗೆ ಒಂದು ಕನೆಕ್ಷನ್ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿ ಮಾಡುತ್ತಿದೆ. ಮನೆಯಲ್ಲಿ ಈಗಾಗಲೇ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಸಂಪರ್ಕ ಹೊಂದಿರುವವರು ತಮ್ಮ ಎಲ್ಪಿಜಿ ಸಿಲಿಂಡರ್ ಕನೆಕ್ಷನ್ ಅನ್ನು ಸರೆಂಡರ್ ಮಾಡಬೇಕಾಗುತ್ತದೆ. ಜೂನ್ ತಿಂಗಳ ಕೊನೆಯ ವಾರದಲ್ಲಿ ಸರ್ವರ್ ಬಿಝಿ ಬರುವ ಸಾಧ್ಯತೆ ಹೆಚ್ಚಿರುವುದರಿಂದ, ಕೊನೆಯ ದಿನದವರೆಗೆ ಕಾಯದೆ ಇಂದೇ ನಿಮ್ಮ ಇ ಕೆವೈಸಿ ಸ್ಟೇಟಸ್ ಪರಿಶೀಲಿಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಉತ್ತಮ. ನಿಮ್ಮ ಸಬ್ಸಿಡಿ ಹಣ ಮತ್ತು ಗ್ಯಾಸ್ ಕನೆಕ್ಷನ್ ಸುರಕ್ಷಿತವಾಗಿರಲು ಈ ಕೂಡಲೇ ಈ ಕೆಲಸ ಮಾಡಿ.








