ADVERTISEMENT
Sunday, August 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

FIFAWORLDCUP2026- ರಾಜನ ದೂರದೃಷ್ಟಿಯ ಯುಕ್ತಿ…! ಬಿಳಿ ಚಿನ್ನದ ಶಕ್ತಿ..! ಭಾರತಕ್ಕೆ ಪಾಠವಾಗಲಿದೆ ಮೊರಾಕ್ಕೋ ಫುಟ್‍ಬಾಲ್ ಕ್ರಾಂತಿ..!

admin by admin
July 6, 2026
in Newsbeat, Sports, ಕ್ರೀಡೆ
King Mohammed VI sent congratulations to Morocco’s national football team

King Mohammed VI sent congratulations to Morocco’s national football team

Share on FacebookShare on TwitterShare on WhatsappShare on Telegram

ಹಾಗಂತ… ಇದು ಖಂಡಿತವಾಗಿಯೂ ಫುಟ್‍ಬಾಲ್ ಜಗತ್ತಿನ ಕಾಲ್ಪನಿಕ ಕಥೆಯಂತೂ ಅಲ್ಲವೇ ಅಲ್ಲ. ಬದಲಾಗಿ ಮತ್ತೊಂದು ಸಣ್ಣ ದೇಶದ ಫುಟ್‍ಬಾಲ್ ಆಟದ ಮಹೋನ್ನತ ಪರ್ವದ ನೈಜ ಚಿತ್ರಣ. ಒಬ್ಬ ರಾಜನ ದೂರದೃಷ್ಟಿಯ ಯೋಜನೆ. ಒಂದು ಖಡಕ್ ರಾಜಾಜ್ಞೆಯ ರಣಕಹಳೆ. ಯುವ ಫುಟ್‍ಬಾಲ್ ಆಟಗಾರರ ಅದಮ್ಯ ಚೇತನ. ಕೇವಲ 17 ವರ್ಷಗಳಲ್ಲಿ ಇಡೀ ದೇಶದ ಫುಟ್‍ಬಾಲ್ ಆಟದ ಹಣೆಬರಹವನ್ನೇ ಬದಲಾಯಿಸಿದ ಅಭೂತಪೂರ್ವ ಸಾಧನೆ. ತನ್ನ ಮಣ್ಣಿನ ಸಂಪತ್ತು ಮೈದಾನದಲ್ಲಿ ಚಿನ್ನವಾಗಿ ಬೆಳೆದ ರೋಚಕ ಇತಿಹಾಸದ ಕಥಾಹಂದರ…!

ಹೌದು, ತುಕ್ಕು ಹಿಡಿದಿದ್ದ ತನ್ನ ದೇಶದ ಫುಟ್‍ಬಾಲ್ ಎಂಬ ಹಳೆಯ ಇಂಜಿನ್‍ಗೆ, ನೈಸರ್ಗಿಕ ಸಂಪತ್ತನ್ನೇ ಇಂಧನವಾಗಿಸಿಕೊಂಡು, ಜಾಗತಿಕ ಫುಟ್‍ಬಾಲ್‍ನಲ್ಲಿ ಮಿಂಚಿನಂತೆ ಸಂಚರಿಸುತ್ತಿರುವ ಒಂದು ದೇಶದ ಫುಟ್‍ಬಾಲ್ ಪಯಣದ ಯಶೋಗಾಥೆ ಇದು. ಆಫ್ರಿಕಾ ಮಣ್ಣಿನ ಫಲವತ್ತತೆ ಮತ್ತು ಅರಬ್ಬರ ಶಕ್ತಿ, ಯುಕ್ತಿಯಿಂದ ಇಡೀ ಫುಟ್‍ಬಾಲ್ ಜಗತ್ತೇ ತನ್ನತ್ತ ತಿರುಗಿನೋಡುವಂತೆ ಮಾಡಿದ್ಧ ಕ್ರಾಂತಿಕಾರಿ ರಾಷ್ಟ್ರದ ವಿಸ್ಮಯಕಾರಿ ಫುಟ್‍ಬಾಲ್ ಚರಿತ್ರೆ..!

Related posts

ನಾಗೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿದ್ದೇ ದೊಡ್ಡ ತಪ್ಪು: ನಾಗೇಂದ್ರರನ್ನು ಎರಡು ಬಾರಿ ಬಲಿಪಶು ಮಾಡಲಾಗಿದೆ- ಸ್ವಪಕ್ಷದ ನಿರ್ಧಾರದ ವಿರುದ್ಧವೇ ಗುಡುಗಿದ ಕೆ ಎನ್ ರಾಜಣ್ಣ

ನಾಗೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿದ್ದೇ ದೊಡ್ಡ ತಪ್ಪು: ನಾಗೇಂದ್ರರನ್ನು ಎರಡು ಬಾರಿ ಬಲಿಪಶು ಮಾಡಲಾಗಿದೆ- ಸ್ವಪಕ್ಷದ ನಿರ್ಧಾರದ ವಿರುದ್ಧವೇ ಗುಡುಗಿದ ಕೆ ಎನ್ ರಾಜಣ್ಣ

August 30, 2026
‘ವಂದೇ ಮಾತರಂ’ ಮೊದಲ ಎರಡು ಪ್ಯಾರಾಗಳಷ್ಟೇ ಹಾಡುತ್ತೇವೆ: ಬಿ.ಕೆ. ಹರಿಪ್ರಸಾದ್

ವಾಲ್ಮೀಕಿ ನಿಗಮ ಹಗರಣ: ‘ಬಿ. ನಾಗೇಂದ್ರರನ್ನು ಬಿಜೆಪಿ ಷಡ್ಯಂತ್ರದಿಂದ ಗುರಿಯಾಗಿಸಿದೆ’ ಎಂದ BK ಹರಿಪ್ರಸಾದ್

August 30, 2026

ಆ ದೇಶದ ಹೆಸರು ಮೊರಾಕ್ಕೋ..!

ಉತ್ತರ ಆಫ್ರಿಕಾ ಖಂಡದ ತುತ್ತ ತುದಿಯಲ್ಲಿರುವ ಸಣ್ಣ ಅರಬ್ ರಾಷ್ಟ್ರ. ಇತಿಹಾಸದ ಪುರಾವೆಗಳ ಪ್ರಕಾರ ಪ್ರಾಚೀನ ಮೊರಾಕ್ಕೋದಲ್ಲಿ ಬರ್ಬರ್ ಎಂಬ ಬುಡಕಟ್ಟು ಜನಾಂಗದವರು ವಾಸ ಮಾಡುತ್ತಿದ್ದರು. ಆದ್ರೆ ಏಳನೇ ಶತಮಾನದಲ್ಲಿ ಮೊರಾÀಕ್ಕೋ ಸಂಪೂರ್ಣವಾಗಿ ಅರಬ್ಬರ ವಶವಾಗಿತ್ತು. ಕಾಲಕ್ರಮೇಣ ಬರ್ಬರ್ ಜನಾಂಗದ ಬಹತೇಕರು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಅರಬ್ಬರ ಜೊತೆ ಒಂದಾಗಿ ಬೆರೆತು ಹೋದ್ರು. ಇಂದಿಗೂ ಮೊರಾÀಕ್ಕೋದಲ್ಲಿ ಅರಬ್ಬರು ಮತ್ತು ಬರ್ಬರ್À ಜನಾಂಗದವರು ಒಟ್ಟಾಗಿ ದೇಶದ ಶಕ್ತಿಯಾಗಿ ಜೀವನ ಸಾಗಿಸುತ್ತಿದ್ದಾರೆ.

ಗದ್ದುಗೆಯಿಂದ ಗುಲಾಮಗಿರಿ.. ಸ್ವಾತಂತ್ರ್ಯವಿದ್ರೂ ರಾಜನೇ ಸರ್ವಾಧಿಕಾರಿ..!

ಅಷ್ಟೇ ಅಲ್ಲ, ಒಂದು ಕಾಲದಲ್ಲಿ ಸ್ಪೇನ್ ದೇಶ ಕೂಡ ಅರಬ್ಬರ ಪಾಲಾಗಿತ್ತು. ಸುಮಾರು 800 ವರ್ಷಗಳ ಕಾಲ ಮೊರಾಕ್ಕೋದಲ್ಲಿದ್ದ ಅರಬ್ಬರು, ಸ್ಪೇನ್ ದೇಶದ ಮೇಲೆ ಆಕ್ರಮಣ ಮಾಡಿ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದರು. ಆದ್ರೆ ಬದಲಾದ ಕಾಲಚಕ್ರದಲ್ಲಿ ಸ್ಪೇನ್ ಮತ್ತು ಫ್ರಾನ್ಸ್ ದೇಶಗಳ ರಾಜರು ಒಟ್ಟಾಗಿ ಅರಬ್ಬರನ್ನು ಮತ್ತೆ ಮೊರಾಕ್ಕೋಗೆ ಓಡಿಸಿದ್ದರು. ಅಚ್ಚರಿ ಅಂದ್ರೆ ಸ್ಪೇನ್ ದೇಶವನ್ನು ಅಧೀನದಲ್ಲಿಟ್ಟುಕೊಂಡಿದ್ದ ಮೊರಾಕ್ಕೋ, 1912ರಿಂದ 1956ರವರೆಗೆ ಸ್ಪೇನ್ ದೇಶದ ಸಂಕೋಲೆಯಲ್ಲಿ ಬಂಧಿಯಾಗಿತ್ತು. ಆದ್ರೆ 1956ರಲ್ಲಿ ಸ್ವಾತಂತ್ರ್ಯ ಪಡೆದ ಮೊರಾಕ್ಕೋದಲ್ಲಿ ಪ್ರಧಾನ ಮಂತ್ರಿ, ಸಂಸತ್ತು ಎಲ್ಲವೂ ಇದೆ. ಆದ್ರೆ ಇಂದಿಗೂ ಮೊರಾಕ್ಕೋ ದೇಶದ ಸರ್ವಧಿಕಾರಿ ಮಾತ್ರ ರಾಜನೇ..!

ಫಿಫಾ ವಿಶ್ವಕಪ್‍ನಲ್ಲಿ ಮೊರಾಕ್ಕೋ ಫುಟ್‍ಬಾಲ್ ತಂಡ..!

ಅಂದ ಹಾಗೇ, ಫುಟ್‍ಬಾಲ್ ಮತ್ತು ಮೊರಾಕ್ಕೋಗೆ ಶತಮಾನಗಳ ಚರಿತ್ರೆ ಇದೆ. 19ನೇ ಶತಮಾನದಲ್ಲಿ ಫ್ರೆಂಚ್ ವಲಸಿಗರು ಮೊರಾಕ್ಕೋದಲ್ಲಿ ಫುಟ್‍ಬಾಲ್ ಆಟವನ್ನು ಪರಿಚಯಿಸಿದ್ರು. ಶೇಕಡಾ 55ರಷ್ಟು ಮಂದಿ ಇಂದಿಗೂ ಕಾಲ್ಚೆಂಡಿನ ಆಟವನ್ನು ಇಷ್ಟಪಟ್ಟು ಆಡುತ್ತಿದ್ದಾರೆ. 1956ರಲ್ಲಿ ಫಿಫಾದ ಮಾನ್ಯತೆ ಪಡೆದ್ರೂ, 1970ರಲ್ಲಿ ಮೊದಲ ಬಾರಿ ಫಿಫಾ ವಿಶ್ವಕಪ್‍ನಲ್ಲಿ ಆಡುವ ಅರ್ಹತೆ ಪಡೆದುಕೊಂಡಿತ್ತು. ನಂತರ 1986ರಲ್ಲಿ ಮತ್ತೆ ಅರ್ಹತೆ ಪಡೆದುಕೊಂಡು ಪ್ರೀ ಕ್ವಾರ್ಟರ್ ಫೈನಲ್‍ಗೂ ಪ್ರವೇಶಿಸಿತ್ತು. ಇನ್ನು, 1994 ಮತ್ತು 1998ರಲ್ಲಿ ಅರ್ಹತೆ ಪಡೆದ್ರೂ ಗ್ರೂಪ್ ಹಂತಕ್ಕೆ ಸೀಮಿತವಾಗಿತ್ತು. ಅಲ್ಲಿಂದ ಮೊರಾಕ್ಕೋ ಫುಟ್‍ಬಾಲ್ ಟೀಮ್ ಅಧಃಪತನದತ್ತ ಸಾಗಿತ್ತು. ಸುಮಾರು 20 ವರ್ಷಗಳ ಕಾಲ ಫಿಫಾ ವಿಶ್ವಕಪ್‍ಗೆ ಎಂಟ್ರಿಯನ್ನೇ ಪಡೆದುಕೊಂಡಿರಲಿಲ್ಲ. ಆದ್ರೆ 2018ರಿಂದ ಸತತವಾಗಿ ಮೂರು ಫಿಫಾ ವಿಶ್ವಕಪ್‍ನಲ್ಲಿ ಆಡುತ್ತಿದೆ. ಅಲ್ಲದೆ, ವಿಶ್ವದ ಬಲಿಷ್ಠ ತಂಡ ಎಂಬ ಹೆಗ್ಗುರುತ್ತನ್ನು ಮೂಡಿಸುತ್ತಿದೆ. ಅಷ್ಟೇ ಅಲ್ಲ, ಹಳೆಯ ದ್ವೇಷವನ್ನು ಮರೆತು ಸ್ಪೇನ್, ಪೋರ್ಚ್‍ಗಲ್ ಜೊತೆ ಸೇರಿಕೊಂಡು 2030ರ ಫಿಫಾ ವಿಶ್ವಕಪ್ ಅನ್ನು ಆಯೋಜನೆ ಮಾಡುತ್ತಿರುವ ರಾಷ್ಟ್ರವಾಗಿದೆ.

ಮೊರಾಕ್ಕೋ ಫುಟ್‍ಬಾಲ್ ಕ್ರಾಂತಿಗೆ ಮುನ್ನುಡಿ ಬರೆದ ರಾಜ..!

ಹಾಗಾದ್ರೆ ಮೊರಾಕ್ಕೋ ದೇಶದ ಈ ಫುಟ್‍ಬಾಲ್ ಕ್ರಾಂತಿಗೆ ಪ್ರಮುಖ ಕಾರಣೀಕರ್ತ ಯಾರು ..? ಈ ಪ್ರಶ್ನೆಗೆ ಒಂದೇ ಪದದ ಉತ್ತರ ಅಲ್ಲಿನ ರಾಜ ಆರನೇ ಮಹಮ್ಮದ್. ಕಳೆದ 400 ವರ್ಷಗಳಿಂದ ಮೊರಾಕ್ಕೋ ದೇಶವನ್ನು ಆರನೇ ಮಹಮ್ಮದ್ ವಂಶಸ್ಥರು ಆಳುತ್ತಿದ್ದಾರೆ. 1963ರಲ್ಲಿ ಜನಿಸಿದ್ದ ಆರನೇ ಮಹಮ್ಮದ್, ರಾಜಕೀಯ ಶಾಸ್ತ್ರ ಮತ್ತು ಕಾನೂನಿನಲ್ಲಿ ಪಿಎಚ್‍ಡಿ ಪದವಿಯನ್ನು ಪಡೆದುಕೊಂಡಿದ್ದಾನೆ. 1999ರಲ್ಲಿ ಈತನ ತಂದೆ ರಾಜ ಹಸನ್ ನಿಧನರಾದ ನಂತರ ಮೊರಾಕ್ಕೋ ದೇಶದ ರಾಜನಾಗಿ ಗದ್ದುಗೆ ಏರಿದ್ದಾನೆ. ವಿದ್ಯಾವಂತ ರಾಜನಾಗಿರುವ ಆರನೇ ಮಹಮ್ಮದ್, ಅಧಿಕಾರಕ್ಕೇರುತ್ತಿದ್ದಂತೆ ಬಡತನ ನಿರ್ಮೂಲನೆ ಮತ್ತು ಮಹಿಳಾ ಹಕ್ಕುಗಳಿಗಾಗಿ ಕ್ರಾಂತಿಕಾರಿ ಕಾನೂನುಗಳನ್ನು ಜಾರಿಗೆ ತಂದಿದ್ದ. ಆದ್ರೆ ಇತ್ತೀಚಿನದ ದಿನಗಳಲ್ಲಿ ಮಹಮ್ಮದ್ ಹೆಚ್ಚು ಪ್ರಸಿದ್ಧಿಪಡೆದಿರುವುದು ತನ್ನ ದೇಶದಲ್ಲಿ ಜಾರಿಗೆ ತಂದಿರುವ ಫುಟ್‍ಬಾಲ್ ಕ್ರಾಂತಿಯ ಆ ಒಂದು ರಾಜಾಜ್ಞೆಯಿಂದ.

ಮೊರಾಕ್ಕೋದಲ್ಲಿ ಸಂಚಲನ ಸೃಷ್ಟಿಸಿದ್ದ 6ನೇ ಮಹಮ್ಮದ್ ರಾಷ್ಟ್ರೀಯ ಫುಟ್‍ಬಾಲ್ ಅಕಾಡೆಮಿ..!

1998ರ ನಂತರ ಮೊರಾಕ್ಕೋದಲ್ಲಿ ಫುಟ್‍ಬಾಲ್ ಆಟ ಮಂಕಾಗಿತ್ತು. ದೇಶದ ಯುವ ಶಕ್ತಿ ದಾರಿ ತಪ್ಪುತ್ತಿರುವುದನ್ನು ಮನಗಂಡ ರಾಜ ಮಹಮ್ಮದ್, 2008ರಲ್ಲಿ ಇಡೀ ಸರ್ಕಾರಕ್ಕೆ ರಾಜಾಜ್ಞೆಯ ರಣಕಹಳೆಯನ್ನು ಮೊಳಗಿಸಿದ್ದ. ನಮ್ಮ ದೇಶದ ಯುವ ಶಕ್ತಿಯನ್ನು ಕ್ರೀಡೆಯ ಮೂಲಕ ಜಗತ್ತಿನ ಎದುರು ನಿಲ್ಲಿಸಬೇಕು. ದೇಶದ ಫುಟ್‍ಬಾಲ್ ಆಟದ ಮೂಲಸೌಕರ್ಯಗಳನ್ನು ವಿಶ್ವದರ್ಜೆಗೆ ಏರಿಸಬೇಕು. ಇದಕ್ಕಾಗಿಯೇ ಪ್ರತ್ಯೇಕ ಹಣವನ್ನು ಮೀಸಲಿಡಬೇಕು ಎಂದು ಸರ್ಕಾರಕ್ಕೆ ಸ್ಪಷ್ಟವಾದ ಆದೇಶ ನೀಡಿದ್ದ ರಾಜ ಆರನೇ ಮಹಮ್ಮದ್.

ಪರಿಣಾಮ 2009ರಲ್ಲಿ ಮೊರಾಕ್ಕೋ ರಾಜಧಾನಿ ರಬಾತ್‍ನಲ್ಲಿ ಆರನೇ ಮಹಮ್ಮದ್ ರಾಷ್ಟ್ರೀಯ ಫುಟ್‍ಬಾಲ್ ಅಕಾಡೆಮಿಯನ್ನು ಅಧಿಕೃತವಾಗಿ ಉದ್ಘಾಟನೆ ಮಾಡಲಾಗಿತ್ತು. ಸುಮಾರು 30ರಿಂದ 35 ಹೆಕ್ಟರ್ ಪ್ರದೇಶದಲ್ಲಿರುವ ಈ ಅಕಾಡೆಮಿಯು ಹೈಟೆಕ್ ಫುಟ್‍ಬಾಲ್ ಗ್ರಾಮವಾಗಿದೆ. 11ಕ್ಕೂ ಹೆಚ್ಚು ಮೈದಾನಗಳಿವೆ. ಆತ್ಯಾಧುನಿಕ ಸೌಲಭ್ಯಗಳು, ವಿದೇಶಿ ತರಬೇತುದಾರರು, ಶಿಕ್ಷಣ, ವೈದ್ಯಕೀಯ ಹೀಗೆ ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಅಕಾಡೆಮಿಯು ಮೊರಾಕ್ಕೋ ಫುಟ್‍ಬಾಲ್ ಆಟಗಾರರನ್ನು ತಯಾರು ಮಾಡುವ ಕೇಂದ್ರವಾಗಿದೆ. ಸದ್ಯದ ತಂಡದಲ್ಲಿರುವ ಬಹುತೇಕ ಆಟಗಾರರು ಇದೇ ಅಕಾಡೆಮಿಯಲ್ಲಿ ತರಬೇತಿ ಪಡೆದವರಾಗಿದ್ದಾರೆ. ಇದೀಗ ಮಹಮ್ಮದ್ ಫುಟ್‍ಬಾಲ್ ಅಕಾಡೆಮಿಯು ದೇಶದ ನಾನಾ ಭಾಗಗಳಿಗೂ ವಿಸ್ತಾರಗೊಂಡಿದೆ. ಈ ನಡುವೆ, ವಿದೇಶಿ ನೆಲದಲ್ಲಿ ವಾಸ ಮಾಡುತ್ತಿರುವ ಮೊರಾಕ್ಕೋ ಆಟಗಾರರಿಗೆ ತಮ್ಮ ದೇಶದಲ್ಲಿ ಆಡುವ ಅವಕಾಶವನ್ನು ನೀಡಲಾಗಿದೆ. ಹೀಗೆ ಮೊರಾಕ್ಕೋದಲ್ಲಿ ಈಗ ಫುಟ್‍ಬಾಲ್‍ನ ಗತವೈಭವ ಪುನರಾವರ್ತನೆಯಾಗಿದೆ.

ಫುಟ್‍ಬಾಲ್ ಜಗತ್ತಿನ ಬಲಿಷ್ಠ ತಂಡಗಳಿಗೆ ಸೆಡ್ಡು ಹೊಡೆದಿರುವ ಮೊರಾಕ್ಕೋ..!

ಸುಮಾರು 20 ವರ್ಷಗಳ ನಂತರ ಅಂದ್ರೆ 2018ರ ರಷ್ಯಾ ಫಿಫಾ ವಿಶ್ವಕಪ್‍ನಲ್ಲಿ ಮೊರಾಕ್ಕೋಗೆ ಆಡುವ ಅರ್ಹತೆ ಸಿಕ್ಕಿತ್ತು. ಕೇವಲ ಗುಂಪು ಹಂತಕ್ಕೆ ಸೀಮಿತವಾಗಿದ್ರೂ ಛಲ ಮತ್ತು ಹಠವನ್ನು ಬೀಡಲಿಲ್ಲ. ಪರಿಣಾಮ 2022ರ ಕತಾರ್ ಫಿಫಾ ವಿಶ್ವಕಪ್‍ನಲ್ಲಿ ರಾಜ ಮಹಮ್ಮದ್‍ನ ದೂರಗಾಮಿ ಚಿಂತನೆಗೆ ಅತ್ಯುತ್ತಮ ಫಲಿತಾಂಶವೇ ಸಿಕ್ಕಿತ್ತು. ನಿಜ, ಮೊರಾಕ್ಕೋ ತಂಡದ ಆಕ್ರಣಕಾರಿ ಹಾಗೂ ಹೊಂದಾಣಿಕೆಯ ಆಟಕ್ಕೆ ಇಡೀ ಫುಟ್‍ಬಾಲ್ ಜಗತ್ತೇ ಬೆರಗುಗೊಂಡಿತ್ತು. ಬೆಲ್ಜಿಯಂ, ಸ್ಪೇನ್, ಪೋರ್ಚ್‍ಗಲ್‍ನಂತಹ ತಂಡಗಳನ್ನು ಮಣ್ಣುಮುಕ್ಕಿಸಿದಾಗ ಫುಟ್‍ಬಾಲ್ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿದ್ದರು. ಸೆಮಿಫೈನಲ್‍ನಲ್ಲಿ ಫ್ರಾನ್ಸ್ ವಿರುದ್ದ ಸೋತ್ರೂ ಮೊರಾಕ್ಕೋ ಆಟಗಾರರು ವಿಶ್ವ ಫುಟ್‍ಬಾಲ್‍ನ ಎದುರು ತನ್ನ ತಾಕತ್ತು ಮತ್ತು ಸಾಮಥ್ರ್ಯ ಏನು ಎಂಬುದನ್ನು ಅನಾವರಣಗೊಳಿಸಿದ್ರು. ಇದೀಗ 2026ರ ವಿಶ್ವಕಪ್‍ನಲ್ಲೂ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು ಮತ್ತೆ ಫ್ರಾನ್ಸ್ ವಿರುದ್ದ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

ಮೊರಾಕ್ಕೋ ಫುಟ್‍ಬಾಲ್ ಮತ್ತು ಬಿಳಿ ಚಿನ್ನದ ರಹಸ್ಯ ಏನು..?

ಅಂದಹಾಗೇ, ಹಸಿರು ಹುಲ್ಲಿನ ಫುಟ್‍ಬಾಲ್ ಅಂಗಣದಲ್ಲಿ ಮೊರಾಕ್ಕೋ ಆಟಗಾರರ ಪ್ರತಿಭೆ, ಸಾಮಥ್ರ್ಯದ ಹಿಂದೆ ಯಾರು ಊಹಿಸದ ರಹಸ್ಯವೊಂದು ಅಡಗಿದೆ. ಸುಂಟರಗಾಳಿಯಂತಹ ಆಕ್ರಮಣಕಾರಿ ಆಟದ ಹಿಂದೆ ಬರೀ ಪರಿಶ್ರಮ ಮಾತ್ರವಲ್ಲ. ಅದರ ಹಿಂದೆ ಜಾಗತಿಕ ಆರ್ಥಿಕ ಮತ್ತು ರಾಜಕೀಯವನ್ನು ನಿಯಂತ್ರಿಸುವ ಬಿಳಿ ಚಿನ್ನದ ಹಣದ ಬಲವಿದೆ. ಅದುವೇ ಮೊರಾಕ್ಕೋ ದೇಶದ ಮಣ್ಣಿನ ಆಳದಲ್ಲಿ ಅಡಗಿರುವ ಆಗಾಧವಾದ ಫಾಸ್ಪೇಟ್ (ರಂಜಕ) ಸಂಪತ್ತು.

ಮೊರಾಕ್ಕೋ ಫುಟ್‍ಬಾಲ್ ಕ್ರಾಂತಿಗೆ ಪೌಷ್ಠಿಕತೆಯನ್ನು ನೀಡಿದ್ದ ಒಸಿಪಿ ಗ್ರೂಪ್‍ನ ರಸಗೊಬ್ಬರ..!

ಆರನೇ ಮಹಮ್ಮದ್ ರಾಜನ ಕ್ರಾಂತಿಕಾರಿ ಫುಟ್‍ಬಾಲ್ ಯೋಜನೆಗೆ ಮೊರಾಕ್ಕೋ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಇದೀಗ 6ನೇ ಮಹಮ್ಮದ್ ರಾಷ್ಟ್ರೀಯ ಫುಟ್‍ಬಾಲ್ ಅಕಾಡೆಮಿಗೆ ಹಣಕಾಸಿನ ನೆರವು ನೀಡುತ್ತಿರುವುದು ಆಫೀಸ್ ಚೆರಿಫಿಯೆ ಡೆಸ್ ಫಾಸ್ಪೇಟೆಸ್ ಕಂಪೆನಿ.(ಒಸಿಪಿ ಗ್ರೂಪ್). ಭಾರತೀಯ ರೂಪಾಯಿ ಮೌಲ್ಯದ ಪ್ರಕಾರ ಸುಮಾರು 540 ಕೋಟಿಗೂ ಅಧಿಕ ಹಣವನ್ನು ಒಸಿಪಿ ಗ್ರೂಪ್ ಮೊರಾಕ್ಕೋ ಫುಟ್‍ಬಾಲ್ ಕ್ರಾಂತಿಗೆ ಧಾರೆ ಎರೆದಿದೆ. ಅಷ್ಟೇ ಅಲ್ಲ, 2026ರ ವಿಶ್ವಕಪ್ ಹಾಗೂ 2030ರ ವಿಶ್ವಕಪ್ ಆಯೋಜನೆಗೂ ಒಸಿಪಿ ಗ್ರೂಪ್ ನೀರಿನಂತೆ ಹಣವನ್ನು ವೆಚ್ಚ ಮಾಡುತ್ತಿದೆ. ವಿಶ್ವದ ಅತೀ ದೊಡ್ಡ ಫಾಸ್ಪೇಟ್ ಗೊಬ್ಬರ ಉತ್ಪಾದಕ ಮತ್ತು ರಫ್ತುದಾರ ಸಂಸ್ಥೆಯಾಗಿರುವ ಒಸಿಪಿಯಲ್ಲಿ, 20ಸಾವಿರಕ್ಕಿಂತಲೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಇನ್ನೊಂದೆಡೆ ಮೊರಾಕ್ಕೋ ದೇಶದ ನೂರಾರು ಪ್ರತಿಭಾವಂತ ಫುಟ್‍ಬಾಲ್ ಆಟಗಾರರಿಗೆ ನವಚೈತನ್ಯವನ್ನು ತುಂಬುತ್ತಿದೆ.

ಭಾರತಕ್ಕೆ ಪಾಠವಾಗಲಿದೆ ಮೊರಾಕ್ಕೋ ಫುಟ್‍ಬಾಲ್ ಕ್ರಾಂತಿ..!

ಒಂದಂತೂ ಸತ್ಯ.. ಮೊರಾಕ್ಕೋ ಫುಟ್‍ಬಾಲ್ ಕ್ರಾಂತಿ ಭಾರತಕ್ಕೆ ಪಾಠವಾಗಲಿದೆ. ಕೇವಲ ಪ್ರತಿಷ್ಠೆಗಾಗಿ ರಾಷ್ಟ್ರೀಯ ಮತ್ತು ರಾಜ್ಯ ಫುಟ್‍ಬಾಲ್ ಸಂಸ್ಥೆಗಳನ್ನು ಕಪಿಮುಷ್ಠಿಯಲ್ಲಿಟ್ಟುಕೊಂಡಿರುವ ಮಹಾನಾಯಕರಿಗೆ ಮೊರಾಕ್ಕೋ ಫುಟ್‍ಬಾಲ್ ಕ್ರಾಂತಿ ಅರ್ಥವಾಗಲ್ಲ ಬಿಡಿ. ಯಾಕಂದ್ರೆ ಅಂತಹ ದೂರದೃಷ್ಟಿಯ ಚಿಂತನೆ, ಕಾರ್ಯರೂಪಕ್ಕೆ ತರುವ ಮನಸ್ಸು ನಮ್ಮವರಿಗಿಲ್ಲ. ಆದ್ರೆ, 6ನೇ ಮಹಮ್ಮದ್ ನಂತಹ ಒಬ್ಬ ರಾಜನ ಚಿಂತನೆ, ಸ್ಪಷ್ಟವಾದ ಗುರಿ, ನಿಖರವಾದ ಯೋಜನೆ.. ದೇಶದ ಹಿತವನ್ನು ಕಾಯುವ ಸಂಸ್ಥೆಗಳು, ಮಣ್ಣಿನ ಮಕ್ಕಳ ಹಠ-ಛಲವಿದ್ದಾಗ ಅಸಾಧ್ಯವಾದದ್ದು ಸಾಧ್ಯ ಅನ್ನೋದಕ್ಕೆ ಮೊರಾಕ್ಕೋ ಫುಟ್‍ಬಾಲ್ ಕ್ರಾಂತಿಯೇ ಅದ್ಭುತ ನಿದರ್ಶನ.

ಮಣ್ಣಿನ ಅಡಿಯಲ್ಲಿರುವ ಫಾಸ್ಪೇಟ್ ರಸಗೊಬ್ಬರ ಕೃಷಿ ಭೂಮಿಗೆ ಜೀವ ನೀಡಿ ಅನ್ನದಾತನ ಹೊಟ್ಟೆ ತುಂಬಿಸುತ್ತದೆ. ಹಾಗೇ ಮೊರಾಕ್ಕೋದ ಒಸಿಪಿ ಕಂಪೆನಿಯು ಫಾಸ್ಪೇಟ್ ಎಂಬ ವೈಟ್ ಗೋಲ್ಡ್‍ನ ಹಣ, ಮೊರಾಕ್ಕೋ ಯುವಕರ ಕಾಲಿಗೆ ಶಕ್ತಿ ತುಂಬುತ್ತಿದೆ. ಕೇವಲ 17-18 ವರ್ಷಗಳ ಹಿಂದೆ ರಾಜಮನೆತನದ ದರ್ಬಾರಿನಲ್ಲಿ ಮೊಳಗಿದ ಒಂದು ರಾಜಾಜ್ಞೆ, ಇಂದು ಹಸಿರು ಹುಲ್ಲಿನ ಅಂಗಣದಲ್ಲಿ ಮೊರಾಕ್ಕೋದ ಅಟ್ಲಾಸ್ ಸಿಂಹಗಳ ಘರ್ಜನೆಗೆ ಇಡೀ ಫುಟ್‍ಬಾಲ್ ಜಗತ್ತೇ ಒಂದು ಕ್ಷಣ ತಿರುಗಿ ನೋಡುತ್ತಿದೆ. ಅದುವೇ ಮೊರಾಕ್ಕೋದ ಫುಟ್‍ಬಾಲ್ ಕ್ರಾಂತಿ..!

ಸನತ್ ರೈ

#MoroccoFootball #FootballRevolution #MoroccanFootball #AtlasLions #FifaWorldCup #WorldCup2026 #FootballHistory #SportsStory. #KingMohammedVI #OCPGroup #WhiteGold #PhosphatePower #FootballInspiration #SportsInspiration #FootballStoryKannada  #saakshatv #sanathrai @followers @highlight

ShareTweetSendShare
Join us on:

Related Posts

ನಾಗೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿದ್ದೇ ದೊಡ್ಡ ತಪ್ಪು: ನಾಗೇಂದ್ರರನ್ನು ಎರಡು ಬಾರಿ ಬಲಿಪಶು ಮಾಡಲಾಗಿದೆ- ಸ್ವಪಕ್ಷದ ನಿರ್ಧಾರದ ವಿರುದ್ಧವೇ ಗುಡುಗಿದ ಕೆ ಎನ್ ರಾಜಣ್ಣ

ನಾಗೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿದ್ದೇ ದೊಡ್ಡ ತಪ್ಪು: ನಾಗೇಂದ್ರರನ್ನು ಎರಡು ಬಾರಿ ಬಲಿಪಶು ಮಾಡಲಾಗಿದೆ- ಸ್ವಪಕ್ಷದ ನಿರ್ಧಾರದ ವಿರುದ್ಧವೇ ಗುಡುಗಿದ ಕೆ ಎನ್ ರಾಜಣ್ಣ

by Shwetha
August 30, 2026
0

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಕಿಚ್ಚು ರಾಜ್ಯ ರಾಜಕಾರಣದಲ್ಲಿ ಇನ್ನೂ ಆರಿಲ್ಲ. ಇದರ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ಅವರು ಎರಡನೇ...

‘ವಂದೇ ಮಾತರಂ’ ಮೊದಲ ಎರಡು ಪ್ಯಾರಾಗಳಷ್ಟೇ ಹಾಡುತ್ತೇವೆ: ಬಿ.ಕೆ. ಹರಿಪ್ರಸಾದ್

ವಾಲ್ಮೀಕಿ ನಿಗಮ ಹಗರಣ: ‘ಬಿ. ನಾಗೇಂದ್ರರನ್ನು ಬಿಜೆಪಿ ಷಡ್ಯಂತ್ರದಿಂದ ಗುರಿಯಾಗಿಸಿದೆ’ ಎಂದ BK ಹರಿಪ್ರಸಾದ್

by Shwetha
August 30, 2026
0

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ವಿಚಾರ ಇದೀಗ ರಾಜ್ಯ...

ಟಾಟಾ ಸನ್ಸ್–SP ಗ್ರೂಪ್ ಉದ್ವಿಗ್ನತೆ ಅಂತಿಮ ಹಂತಕ್ಕೆ?; 18.4% ಪಾಲು ಮಾರಾಟಕ್ಕೆ ಮಾತುಕತೆ

ಟಾಟಾ ಸನ್ಸ್–SP ಗ್ರೂಪ್ ಉದ್ವಿಗ್ನತೆ ಅಂತಿಮ ಹಂತಕ್ಕೆ?; 18.4% ಪಾಲು ಮಾರಾಟಕ್ಕೆ ಮಾತುಕತೆ

by Shwetha
August 30, 2026
0

ಭಾರತೀಯ ಕಾರ್ಪೊರೇಟ್ ವಲಯದಲ್ಲಿ ದಶಕಗಳಿಂದ ಕುತೂಹಲ ಮೂಡಿಸಿರುವ ಟಾಟಾ ಸನ್ಸ್ ಮತ್ತು ಶಾಪೂರ್ಜಿ ಪಲ್ಲೊಂಜಿ (SP) ಗ್ರೂಪ್ ನಡುವಿನ ಸಂಬಂಧದ ಬಿಕ್ಕಟ್ಟು ಇದೀಗ ಮತ್ತೊಂದು ಪ್ರಮುಖ ಹಂತ...

ಮೋದಿ ಸರ್ಕಾರದ ಒತ್ತಡದಿಂದ ಸೋನಿಯಾ ಗಾಂಧಿ ಆತ್ಮಕಥೆ ಪುಸ್ತಕ ಪ್ರಕಟಣೆಗೆ ತಡೆ? ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆ ಎಂದ ಕಾಂಗ್ರೆಸ್

ಮೋದಿ ಸರ್ಕಾರದ ಒತ್ತಡದಿಂದ ಸೋನಿಯಾ ಗಾಂಧಿ ಆತ್ಮಕಥೆ ಪುಸ್ತಕ ಪ್ರಕಟಣೆಗೆ ತಡೆ? ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆ ಎಂದ ಕಾಂಗ್ರೆಸ್

by Shwetha
August 30, 2026
0

ಯುಪಿಎ ಅಧ್ಯಕ್ಷೆ ಹಾಗೂ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಜೀವನ ಪಯಣವನ್ನು ಅನಾವರಣಗೊಳಿಸುವ Belonging: A Journey of Love ಎಂಬ ಆತ್ಮಚರಿತ್ರೆ ಈಗ...

ಬ್ರಿಟಿಷರಿಗೇ ಹೆದರದ ನಮಗೆ ಈ ಬಿಜೆಪಿಗರು ಯಾವ ಪುಟ್ಗೋಸಿ? ಬಿಜೆಪಿ ಒಂದು ನಾಟಕ ಕಂಪನಿ, ಇವರ ಪಾದಯಾತ್ರೆ ಗಣಿ ಲೂಟಿಕೋರರ ಪಶ್ಚಾತ್ತಾಪ ಯಾತ್ರೆ: ಶಿವರಾಜ್ ತಂಗಡಗಿ ವ್ಯಂಗ್ಯ

ಬ್ರಿಟಿಷರಿಗೇ ಹೆದರದ ನಮಗೆ ಈ ಬಿಜೆಪಿಗರು ಯಾವ ಪುಟ್ಗೋಸಿ? ಬಿಜೆಪಿ ಒಂದು ನಾಟಕ ಕಂಪನಿ, ಇವರ ಪಾದಯಾತ್ರೆ ಗಣಿ ಲೂಟಿಕೋರರ ಪಶ್ಚಾತ್ತಾಪ ಯಾತ್ರೆ: ಶಿವರಾಜ್ ತಂಗಡಗಿ ವ್ಯಂಗ್ಯ

by Shwetha
August 30, 2026
0

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರ ಬೆನ್ನಿಗೆ ನಿಂತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಬಿಜೆಪಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram