ADVERTISEMENT
Thursday, July 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಮಿಸ್ಟರ್ ಡಿ ಕೆ ಶಿವಕುಮಾರ್ ನಾನು ನಿಮ್ಮನ್ನ ಸಿಎಂ ಅಂತ ಕರೆಯಲ್ಲ: ನಾನು ಆಕಸ್ಮಿಕ ಸಿಎಂ ಆದ್ರೂ ಏಜೆಂಟ್ ಇಟ್ಟುಕೊಂಡಿರಲಿಲ್ಲ. ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಯುತ್ತಿದೆಯೇ?-ಡಿಕೆಶಿಗೆ ಮಿಸ್ಟರ್ ಎಂದು ಸಂಬೋಧಿಸಿ ಕೆಣಕಿದ ಕುಮಾರಣ್ಣ

Shwetha by Shwetha
July 16, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಯ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಈ ಯೋಜನೆಯ ಸುತ್ತ ಸೃಷ್ಟಿಯಾಗಿರುವ ವಿವಾದವೀಗ ಬಹಿರಂಗ ವಾಗ್ಯುದ್ಧಕ್ಕೆ ಕಾರಣವಾಗಿದೆ. ಇಂದು ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ನಡೆಸಿದ ಸುದ್ದಿಗೋಷ್ಠಿಗೆ ಪ್ರತಿಯಾಗಿ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಡಿಕೆಶಿ ವಿರುದ್ಧ ಕೆಂಡಕಾರಿದ್ದಾರೆ.

ನಾನು ನಿಮ್ಮನ್ನ ಸಿಎಂ ಎಂದು ಕರೆಯಲ್ಲ

Related posts

ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ: ಕಾವೇರಿ ಸಭೆಯಲ್ಲಿ ಕರ್ನಾಟಕದ ವಾದ

ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ: ಕಾವೇರಿ ಸಭೆಯಲ್ಲಿ ಕರ್ನಾಟಕದ ವಾದ

July 16, 2026
ಇಂದಿನ ಸಚಿವ ಸಂಪುಟ ಸಭೆ ದಿಢೀರ್ ಮುಂದೂಡಿಕೆ

ಇಂದಿನ ಸಚಿವ ಸಂಪುಟ ಸಭೆ ದಿಢೀರ್ ಮುಂದೂಡಿಕೆ

July 16, 2026

ಸುದ್ದಿಗೋಷ್ಠಿಯ ಆರಂಭದಲ್ಲೇ ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದ ಹೆಚ್ ಡಿ ಕುಮಾರಸ್ವಾಮಿ, ಮಿಸ್ಟರ್ ಡಿಕೆ ಶಿವಕುಮಾರ್, ನಾನು ನಿಮ್ಮನ್ನ ಮುಖ್ಯಮಂತ್ರಿ ಅಂತ ಹೇಳಲ್ಲ ಎಂದು ಏಕವಚನದಲ್ಲೇ ತಿರುಗೇಟು ನೀಡಿದ್ದಾರೆ. ಬಿಡದಿ ಟೌನ್‌ಶಿಪ್ ಯೋಜನೆ ಬಗ್ಗೆ ಸತ್ಯಾಸತ್ಯತೆಗಳನ್ನು ಮುಚ್ಚಿಟ್ಟು ಜನರ ಹಾದಿ ತಪ್ಪಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಏಜೆಂಟ್ ಗಳನ್ನ ಇಟ್ಟುಕೊಂಡಿರಲಿಲ್ಲ

2006ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಐದು ಟೌನ್‌ಶಿಪ್‌ಗಳನ್ನು ಮಾಡಬೇಕು ಎಂದು ನಿರ್ಧಾರ ಮಾಡಿದ್ದು ನಿಜ. ಆದರೆ ನಾನು ನಿಮ್ಮಂತೆ ಯಾವುದೇ ಏಜೆಂಟ್ ಮೂಲಕ ಕೆಲಸ ಮಾಡಿಲ್ಲ. ಬೆಂಗಳೂರಿನ ರಿಂಗ್ ರೋಡ್ ಮತ್ತು ಟೌನ್‌ಶಿಪ್‌ಗಳ ಮೂಲ ಕನಸುಗಾರ ನಾನೇ. ಆದರೆ ಇಂದು ನೀವು ಮಾಡುತ್ತಿರುವುದು ಅಭಿವೃದ್ಧಿಯಲ್ಲ, ಬದಲಾಗಿ ರೈತರನ್ನು ಸಂಕಷ್ಟಕ್ಕೆ ತಳ್ಳುವ ಕೆಲಸ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಬಿಡದಿ ಟೌನ್‌ಶಿಪ್ ಪಿತಾಮಹ ನಾನಲ್ಲ ಎಂದು ಹೇಳುವ ಮೂಲಕ ಡಿಕೆಶಿ ಅವರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಸತ್ಯ ಶೋಧನಾ ವರದಿ ಜನರ ಮುಂದಿರಲಿ

ಡಿಕೆ ಶಿವಕುಮಾರ್ ಅವರ ಸುದ್ದಿಗೋಷ್ಠಿಯಲ್ಲಿ ಅವರ ಮುಖದಲ್ಲಿ ಪಾಪ ಪ್ರಜ್ಞೆ ಎದ್ದು ಕಾಣುತ್ತಿತ್ತು. ರೈತರ ಬಳಿ ಅಧಿಕಾರಿಗಳನ್ನು ನೇರವಾಗಿ ಕಳುಹಿಸುತ್ತಿರುವುದರ ಹಿಂದೆ ದೊಡ್ಡ ಹುನ್ನಾರವಿದೆ. ಸುದ್ದಿಗೋಷ್ಠಿಯಲ್ಲಿ ಸಚಿವ ಎಂಬಿ ಪಾಟೀಲ್ ಇದ್ದರು, ಆದರೆ ಹೆಚ್ ಕೆ ಪಾಟೀಲ್ ಅವರನ್ನು ಯಾಕೆ ಪಕ್ಕದಲ್ಲಿ ಕುರಿಸಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದ ಹೆಚ್ ಡಿ ಕೆ, ಅಂದಿನ ಸಭೆಯ ಸತ್ಯ ಶೋಧನಾ ವರದಿಯನ್ನು ಕೂಡಲೇ ಜನರ ಮುಂದೆ ಇಡುವಂತೆ ಸವಾಲು ಹಾಕಿದ್ದಾರೆ.

ಬ್ರಾಂಡ್ ಬೆಂಗಳೂರು ಹೆಸರಿನಲ್ಲಿ ಬಿಡದಿ ರೈತರನ್ನು ಬಲಿ ಕೊಡಲು ಸರ್ಕಾರ ಮುಂದಾಗಿದೆ. ತಾವು ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದರೂ ರಾಜ್ಯದ ಹಿತದೃಷ್ಟಿಯಿಂದ ಯೋಜನೆಗಳನ್ನು ರೂಪಿಸಿದ್ದೆ. ಆದರೆ ಇಂದು ಕೇವಲ ರಿಯಲ್ ಎಸ್ಟೇಟ್ ಲಾಭಕ್ಕಾಗಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದ್ದಾರೆ. ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ರೈತರ ಹಿತ ಕಾಯಲು ಜೆಡಿಎಸ್ ಯಾವುದೇ ಹೋರಾಟಕ್ಕೂ ಸಿದ್ಧವಿದೆ ಎಂದು ಅವರು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.

ShareTweetSendShare
Join us on:

Related Posts

ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ: ಕಾವೇರಿ ಸಭೆಯಲ್ಲಿ ಕರ್ನಾಟಕದ ವಾದ

ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ: ಕಾವೇರಿ ಸಭೆಯಲ್ಲಿ ಕರ್ನಾಟಕದ ವಾದ

by Shwetha
July 16, 2026
0

ಕಾವೇರಿ ನೀರು ನಿರ್ವಹಣಾ ಸಮಿತಿ (CWRC) ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು, ಪ್ರಸ್ತುತ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ತಮ್ಮ ವಾದ ಮಂಡಿಸಿದ್ದಾರೆ. ಅಧಿಕಾರಿಗಳ...

ಇಂದಿನ ಸಚಿವ ಸಂಪುಟ ಸಭೆ ದಿಢೀರ್ ಮುಂದೂಡಿಕೆ

ಇಂದಿನ ಸಚಿವ ಸಂಪುಟ ಸಭೆ ದಿಢೀರ್ ಮುಂದೂಡಿಕೆ

by Shwetha
July 16, 2026
0

ಕರ್ನಾಟಕ ಸರ್ಕಾರದ ಇಂದು (16-07-2026) ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ಮುಂದೂಡಲಾಗಿದೆ. ಈ ಕುರಿತು ಸರ್ಕಾರದ ಸಚಿವಾಲಯದ ಸಂಪುಟ ಶಾಖೆ ಅಧಿಕೃತ ಸೂಚನೆ ಹೊರಡಿಸಿದೆ. ಮೂಲ ವೇಳಾಪಟ್ಟಿಯಂತೆ,...

ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಖೈದಿಗಳು ಸಿನಿಮೀಯ ರೀತಿಯಲ್ಲಿ ಪರಾರಿ- ಜೈಲನ್ನು ಅತಿಥಿ ಗೃಹ ಮಾಡಿದ್ದು ಬಿಜೆಪಿ ಸರ್ಕಾರ: ಬಿಜೆಪಿಯವರೇ ಅಂದು 8 ಖೈದಿಗಳು ಓಡಿಹೋಗಿದ್ದು ಮರೆತರೆ? ಹಳೇ ಇತಿಹಾಸ ಬಿಚ್ಚಿಟ್ಟು ತಿರುಗೇಟು ನೀಡಿದ ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಖೈದಿಗಳು ಸಿನಿಮೀಯ ರೀತಿಯಲ್ಲಿ ಪರಾರಿ- ಜೈಲನ್ನು ಅತಿಥಿ ಗೃಹ ಮಾಡಿದ್ದು ಬಿಜೆಪಿ ಸರ್ಕಾರ: ಬಿಜೆಪಿಯವರೇ ಅಂದು 8 ಖೈದಿಗಳು ಓಡಿಹೋಗಿದ್ದು ಮರೆತರೆ? ಹಳೇ ಇತಿಹಾಸ ಬಿಚ್ಚಿಟ್ಟು ತಿರುಗೇಟು ನೀಡಿದ ಸಚಿವ ಪ್ರಿಯಾಂಕ್ ಖರ್ಗೆ

by Shwetha
July 16, 2026
0

ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದಿಂದ ಮೂವರು ಖೈದಿಗಳು ಸಿನಿಮೀಯ ರೀತಿಯಲ್ಲಿ ಪರಾರಿಯಾದ ಘಟನೆಯನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಪ್ರಕರಣದಲ್ಲಿ ಭದ್ರತಾ ಲೋಪ ಮತ್ತು...

ದಿನ ಭವಿಷ್ಯ (07-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (16-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
July 16, 2026
0

ದಿನ ಭವಿಷ್ಯ 16-07-2026 ಮೇಷ ರಾಶಿ ಇಂದು ನಿಮಗೆ ಅತ್ಯಂತ ಶುಭದಾಯಕವಾದ ದಿನವಾಗಿದೆ. ನಿಮ್ಮ ಆಲೋಚನೆಗಳಲ್ಲಿ ಸಕಾರಾತ್ಮಕತೆ ತುಂಬಿರುತ್ತದೆ. ಉದ್ಯೋಗ ಮತ್ತು ವ್ಯಾಪಾರ: ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಮೇಲಧಿಕಾರಿಗಳಿಂದ...

Argentina celebrate reaching back-to-back final

fifaworldcup 2026- ಇಂಗ್ಲೆಂಡ್ ಕನಸನ್ನು ಭಗ್ನಗೊಳಿಸಿದ ಮೆಸ್ಸಿ..! ಕ್ಲೈಮ್ಯಾಕ್ಸ್ ಫೈಟ್‍ನಲ್ಲಿ ಗೆದ್ದ ಅರ್ಜೆಂಟಿನಾ ಫೈನಲ್‍ಗೆ ಎಂಟ್ರಿ..!

by admin
July 16, 2026
0

ಗೆಟ್‍ರೆಡಿ..! ಜುಲೈ 20, 2026..! ಫಿಫಾ ವಿಶ್ವಕಪ್‍ನ ಸೂಪರ್ ಸಂಡೆಯ ಅಲ್ಟಿಮೇಟ್ ಫೈನಲ್ ಮ್ಯಾಚ್..! ಇಂತಹ ಪಂದ್ಯ ಈ ಹಿಂದೆ ಬಂದಿಲ್ಲ. ಮುಂದೆ ಬರುತ್ತೋ ಇಲ್ವೋ ಅನ್ನೋದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram