ಬಾಲಿವುಡ್‌ನ ಡೇರಿಂಗ್ ನಟಿ ಕಂಗನಾ ರಣಾವತ್ ಸದಾ ಒಂದಿಲ್ಲ ಒಂದು ವಿಚಾರಕ್ಕೆ ಸುದ್ದಿ ಆಗ್ತಾನೇ ರ‍್ತಾರೆ. ಇದೀಗ ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ವಿಚಾರವಾಗಿ ಕಂಗನಾ ನೀಡಿರುವ ಹೇಳಿಕೆ ಬಿಟೌನ್ನಲ್ಲಿ ಅಷ್ಟೇ ಅಲ್ಲದೇ ಇಡೀ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸುಶಾಂತ್ ಸಿಂಗ್ ಅವರ ಸಾವಿನ ಸುತ್ತ ಹಲವಾರು ಅನುಮಾನಗಳು ಇರುವ ಬೆನ್ನಲ್ಲೇ ಬಾಲಿವುಡ್‌ನಲ್ಲಿ ನೆಪೋಟಿಸಮ್ ಆರೋಪಗಳು ಕೇಳಿ ಬಂದಿವೆ. ಸುಶಾಂತ್ ಆತ್ಮಹತ್ಯೆ ಹಿಂದೆ ಹಲವು ಬಾಲಿವುಡ್ ಸೆಲಬ್ರೆಟಿಗಳ ಕೈವಾಡವಿದೆ ಎಂಬುವ ಆರೋಪ ಒಂದು ಕಡೆಯಾದ್ರೇ ಅವರದ್ದು ಕೊಲೆ ಎನ್ನುವ ಮಾತುಗಳು ಚರ್ಚೆಯಲ್ಲಿವೆ. ಕಂಗನಾ ಸಹ ಈ ವಿಚಾರವಾಗಿ ಮಾತನಾಡಿದ್ದು, ಸುಶಾಂತ್ರದ್ದು ಕೊಲೆ ಎಂದು ಆರೋಪಿಸಿದ್ರು.
ಅದಕ್ಕೂ ಮೇಲಾಗಿ ಬಾಲಿವುಡ್‌ನ ‘ಮೂವಿ ಮಾಫಿಯಾ’ ಹಾಗೂ ಕೆಲ ಮಾಧ್ಯಮಗಳೇ ಕಾರಣ ಎಂದಿದ್ರು. ಆದ್ರೇ ಕಂಗನಾ ಸುಳ್ಳು ಹೇಳ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದು ಇದಕ್ಕೆ ಕಂಗನಾ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಹೌದು, ಈ ಕುರಿತಾಗಿ ಮಾತನಾಡಿರುವ ಕಂಗನಾ ನನ್ನ ಆರೋಪ ಸುಳ್ಳಾದರೆ ಪದ್ಮ ಶ್ರೀ ಪ್ರಶಸ್ತಿ ಸರ್ಕಾರಕ್ಕೆ ಹಿಂತಿರುಗಿಸುತ್ತೇನೆ ಎಂದು ಸವಾಲ್ ಹಾಕಿದ್ದಾರೆ. ಮಾಧ್ಯಮಗಳ ಮೇಲೂ ಕಿಡಿಕಾರಿರುವ ಕಂಗನಾ, ಕೆಲ ಬಾಲಿವುಡ್‌ನ ದೊಡ್ಡ ಮಂದಿ ಕೆಲವು ಮಾಧ್ಯಮಗಳನ್ನ ಸಾಕಿಕೊಂಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಇನ್ನೂ ಸುಶಾಂತ್‌ರದ್ದು ಆತ್ಮಹತ್ಯೆ ಅಲ್ಲಾ ಯೋಜಿತ ಕೊಲೆ ಎಂದು ಗಟ್ಟಿ ವಾದ ಮಾಡಿದ್ದಾರೆ
ಮೆಡಿಕಲ್ ಸ್ಟೊರ್ ಗಳಲ್ಲೇ ಸಿಗಲಿದೆ ಹೋಂ ಐಸೋಲೇಷನ್ ಕಿಟ್..! 







