ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಮತ್ತು ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆಯ ಸುತ್ತ ನಡೆಯುತ್ತಿರುವ ವಿದ್ಯಮಾನಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿವೆ. ಮೇಲ್ನೋಟಕ್ಕೆ ಪ್ರತಿಭಟನಾಕಾರರು ಗೆದ್ದಂತೆ ಕಂಡರೂ, ವಾಸ್ತವದಲ್ಲಿ ಇದು ಬಿಜೆಪಿಯ ಚಾಣಾಕ್ಷ ರಾಜತಾಂತ್ರಿಕ ಜಯ ಎಂದು ಕೋಟ್ಯಂತರ ನೆಟ್ಟಿಗರು ವಿಶ್ಲೇಷಿಸುತ್ತಿದ್ದಾರೆ. ಈ ಹೋರಾಟದ ಹಿಂದೆ ಅಡಗಿರುವ ರಾಜಕೀಯ ಸಂಚುಗಳನ್ನು ಬಯಲಿಗೆಳೆಯುತ್ತಿರುವ ಪೋಸ್ಟ್‌ಗಳು ಈಗ ವೈರಲ್ ಆಗುತ್ತಿವೆ.
ಹೋರಾಟದ ಹೆಸರಲ್ಲಿ ನಡೆದಿದ್ದು ಬರೀ ನಾಟಕ
ವಿದ್ಯಾರ್ಥಿಗಳ ಹಿತರಕ್ಷಣೆಯ ಹೆಸರಿನಲ್ಲಿ ನಡೆದ ಈ ಹೋರಾಟ ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ತಂತ್ರವಾಗಿತ್ತು ಎಂದು ಅನೇಕರು ಟೀಕಿಸಿದ್ದಾರೆ. ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾತ್ರಕ್ಕೆ ವಿರೋಧ ಪಕ್ಷಗಳು ಗೆದ್ದಂತಲ್ಲ. ಬದಲಿಗೆ, ದೇಶದ ಗಮನವನ್ನು ಮುಖ್ಯ ವಿಚಾರಗಳಿಂದ ಬೇರೆಡೆ ಸೆಳೆಯಲು ಪ್ರಯತ್ನಿಸಿದ ವಿರೋಧ ಪಕ್ಷಗಳು ಈಗ ತಾವೇ ತೋಡಿದ ಹಳ್ಳಕ್ಕೆ ಬಿದ್ದಿವೆ. ವಿದ್ಯಾರ್ಥಿಗಳ ಮುಗ್ಧತೆಯನ್ನು ಬಳಸಿಕೊಂಡು ರಾಜಕೀಯ ಲಾಭ ಪಡೆಯಲು ಯತ್ನಿಸಿದವರು ಈಗ ಮುಖಭಂಗ ಅನುಭವಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಅವರು 30 ದಿನಗಳ ಕಾಲ ಉಪವಾಸ ನಡೆಸಿ ದೇಹದ ತೂಕ ಇಳಿಸಿಕೊಂಡಿದ್ದರೂ, ಆರಂಭದಲ್ಲಿ ಅವರು ಶಿಕ್ಷಣ ಸಚಿವರ ರಾಜೀನಾಮೆ ಕೇಳಿರಲಿಲ್ಲ. ಆದರೆ, ವಿದ್ಯಾರ್ಥಿ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಾಗ ಏಕಾಏಕಿ ತಮ್ಮ ನಿಲುವು ಬದಲಿಸಿ ರಾಜೀನಾಮೆಗೆ ಆಗ್ರಹಿಸಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ದೆಹಲಿ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿ ಉಪಚಾರ ಮಾಡಿದ ನಂತರ ಅವರು ಸತ್ಯಾಗ್ರಹ ಕೈಬಿಟ್ಟಿರುವುದು ಮತ್ತು ಅವರ ನಂತರದ ಹೇಳಿಕೆಗಳು ಹೋರಾಟದ ಹಿಂದಿನ ಅಸಲಿ ಬಣ್ಣವನ್ನು ಬಯಲು ಮಾಡಿದೆ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
ಈ ಎಲ್ಲಾ ಗದ್ದಲಗಳ ನಡುವೆ ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗಳನ್ನು ಮಂಡಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಜನಸಂಖ್ಯಾ ಆಧಾರದ ಮೇಲೆ ಕ್ಷೇತ್ರಗಳ ಪುನರ್ ವಿಂಗಡಣೆಯಾದರೆ ವಿರೋಧ ಪಕ್ಷಗಳು ಮುಂದಿನ 40 ವರ್ಷಗಳ ಕಾಲ ಅಧಿಕಾರಕ್ಕೆ ಬರುವುದು ಅಸಾಧ್ಯ ಎಂಬ ಸತ್ಯವನ್ನು ಮರೆತು ಹೋರಾಟದ ನೆಪದಲ್ಲಿ ಹುಂಬತನ ಪ್ರದರ್ಶಿಸಲಾಗುತ್ತಿದೆ. ಲೋಕಸಭೆಯಲ್ಲಿ ಈಗಾಗಲೇ 355 ಸಂಸದರ ಬಲ ಹೊಂದಿರುವ ಎನ್ ಡಿ ಎ ಮೈತ್ರಿಕೂಟಕ್ಕೆ ಆಮ್ ಆದ್ಮಿ ಪಾರ್ಟಿ, ಶಿವಸೇನೆ ಮತ್ತು ಟಿಎಂಸಿಯಂತಹ ಪಕ್ಷಗಳು ಕೂಡ ಪರೋಕ್ಷ ಬೆಂಬಲ ನೀಡುತ್ತಿವೆ. ಈ ಚಾಣಾಕ್ಷ ನೀತಿಯ ಮುಂದೆ ವಿರೋಧ ಪಕ್ಷಗಳ ಆಟ ನಡೆಯುವುದಿಲ್ಲ ಎಂಬುದು ಈಗ ಸ್ಪಷ್ಟವಾಗುತ್ತಿದೆ.
ಸಿಜೆಪಿ ಎಂಬ ಹೆಸರಿನಲ್ಲಿ ಕಾಕ್ರೋಚ್ ಪಾರ್ಟಿ ಕಟ್ಟಿದ ಅಭಿಜಿತ್ ದೀಪ್ಕೆ ಅವರ ಹಿನ್ನೆಲೆ ಮತ್ತು ಅವರಿಗೆ ಆರ್ಥಿಕ ನೆರವು ನೀಡುತ್ತಿರುವ ಶಕ್ತಿಗಳ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಪ್ರತಿಭಟನೆಯ ಹಾದಿ ತಪ್ಪಿಸಿ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿರುವವರ ಹಿಂದೆ ಇರುವ ಅತೀಂದ್ರಿಯ ಶಕ್ತಿಗಳು ಯಾವುವು ಎಂಬುದು ಒಂದೊಂದಾಗಿ ಬಹಿರಂಗವಾಗುತ್ತಿದೆ. ನೈಜ ವಿದ್ಯಾರ್ಥಿಗಳು ಸ್ವಾರ್ಥಿ ರಾಜಕಾರಣಿಗಳ ಕೈಗೊಂಬೆಯಾಗುತ್ತಿರುವುದು ವಿಷಾದನೀಯ ಎಂದು ಮರುಕ ವ್ಯಕ್ತಪಡಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಮೌನದ ಬಗ್ಗೆ ಟೀಕಿಸುತ್ತಿದ್ದವರಿಗೆ ಈಗ ಅವರ ಮೌನದ ಹಿಂದಿರುವ ಅಸಲಿ ತಾಕತ್ತು ಅರ್ಥವಾಗುತ್ತಿದೆ. ಪರೀಕ್ಷಾ ವ್ಯವಸ್ಥೆಯ ಸುಧಾರಣೆಗೆ ಈಗಾಗಲೇ ಹಲವು ಕ್ರಾಂತಿಕಾರಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಾದಿಬೀದಿಗಳಲ್ಲಿ ಕೂಗಾಡುತ್ತಿರುವವರು ಬಿಲ್ ಪಾಸ್ ಆಗುವ ಹೊತ್ತಿಗೆ ದಂಗಾಗಲಿದ್ದಾರೆ. ಬಿಜೆಪಿಯನ್ನು ಸೋಲಿಸಿದ್ದೇವೆ ಎಂದು ಬೀಗುತ್ತಿರುವವರು ವಾಸ್ತವದಲ್ಲಿ ಬಿಜೆಪಿಯ ಮುಂದಿನ ಮಾಸ್ಟರ್ ಪ್ಲಾನ್ ಗೆ ಬಲಿಯಾಗುತ್ತಿದ್ದಾರೆ ಎಂಬುದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ.








