ADVERTISEMENT
Thursday, July 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

CWG – 2026 ಕಾಮನ್‍ವೆಲ್ತ್ ಗೇಮ್ಸ್ – ನೀರಜ್ ವರ್ಸಸ್ ನದೀಮ್… ಯಾರ ಕೊರಳಿಗೆ ಚಿನ್ನ. ?

admin by admin
July 30, 2026
in Newsbeat, Sports, ಕ್ರೀಡೆ
neeraj-chopra-vs-arshad-nadeem-commonwealth-games-2026-javelin

neeraj-chopra-vs-arshad-nadeem-commonwealth-games-2026-javelin

Share on FacebookShare on TwitterShare on WhatsappShare on Telegram

ಅದು ಯಾವ ಕ್ರೀಡೆಯೇ ಆಗಿರಲಿ. ಭಾರತ ಮತ್ತು ಪಾಕಿಸ್ತಾನ ಅಂದ್ರೆ ಆ ಸ್ಪರ್ಧೆಯ ರೋಚಕತೆಯೇ ಬೇರೆ. ಇಲ್ಲಿ ಸೋಲು – ಗೆಲುವಿನ ಫಲಿತಾಂಶಕ್ಕಿಂತ ದೇಶಾಭಿಮಾನದ ಪ್ರತಿಷ್ಠೆಯೇ ಮೇಳೈಸುತ್ತದೆ. ಹಾಗಾಗಿ ನೆರೆಹೊರೆಯವರ ನಡುವಿನ ಜಿದ್ದಾಜಿದ್ದಿನ ಸ್ಪರ್ಧೆ ಇಡೀ ಜಗತ್ತಿನ ಗಮನ ಸೆಳೆಯುತ್ತದೆ.

ಇದೀಗ ಕಾಮನ್‍ವೆಲ್ತ್ ಗೇಮ್ಸ್ ಅಖಾಡದ ಜಾವೆಲಿನ್ ಸ್ಪರ್ಧೆಯನ್ನು ಕೋಟಿ ಕಂಗಳು ಕಾತರದಿಂದ ಕಾಯುತ್ತಿವೆ. ಅದಕ್ಕೆ ಕಾರಣ ಭಾರತದ ನೀರಜ್ ಚೋಪ್ರಾ ಮತ್ತು ಪಾಕಿಸ್ತಾನದ ಅರ್ಷದ್ ನದೀಮ್ ಕಣದಲ್ಲಿರುವುದು.

Related posts

ಜನನ-ಮರಣ ನೋಂದಣಿ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆ

ಜನನ-ಮರಣ ನೋಂದಣಿ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆ

July 30, 2026
ತತ್ಕಾಲ್ ಟಿಕೆಟ್ ಬುಕ್ಕಿಂಗ್‌ಗೆ ಹೊಸ ನಿಯಮ; ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ

ತತ್ಕಾಲ್ ಟಿಕೆಟ್ ಬುಕ್ಕಿಂಗ್‌ಗೆ ಹೊಸ ನಿಯಮ; ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ

July 30, 2026

2018ರ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ 86.47 ಮೀಟರ್ ದೂರ ಎಸೆದ ನೀರಜ್ ಚಿನ್ನ ಗೆದ್ದಿಕೊಂಡಿದ್ರೆ, ನದೀಮ್ 76.02 ಮೀಟರ್ ದೂರ ಎಸೆದು ನಿರಾಸೆ ಅನುಭವಿಸಿದ್ದ

ಬಳಿಕ 2022ರ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಗಾಯದ ಸಮಸ್ಯೆಯಿಂದ ಚೋಪ್ರಾ ಸ್ಪರ್ಧೆ ಮಾಡಿರಲಿಲ್ಲ. ಆದ್ರೆ ಅರ್ಷದ್ ನದೀಮ್ 90.18 ಮೀಟರ್ ದೂರ ಎಸೆದು ಬಂಗಾರ ಗೆದ್ದುಕೊಂಡಿದ್ದ.

ಇದೀಗ ಕಾಮನ್‍ವೆಲ್ತ್ ಅಖಾಡದಲ್ಲಿ ಮತ್ತೆ ಇಬ್ಬರು ಕಣದಲ್ಲಿದ್ದಾರೆ.ವಿಶ್ವದ ಶ್ರೇಷ್ಠ ಈಟಿ ಎಸೆತಗಾರರ ನಡುವಿನ ಸ್ಪರ್ಧೆಯಲ್ಲಿ ಯಾರು ಗೆಲ್ಲಬಹುದು..?

ಈ ಹಿಂದಿನ ಅಂಕಿ ಅಂಶಗಳ ಪ್ರಕಾರ ಇಬ್ಬರು ಕೂಡ ಸಮಬಲದ ಹೋರಾಟವನ್ನೇ ನೀಡಿದ್ದಾರೆ. ವೈಯಕ್ತಿಕ ದಾಖಲೆಯ ಪ್ರಕಾರ ನದೀಮ್ ಒಂದು ಹೆಜ್ಜೆ ಮುಂದಿದ್ದಾನೆ. ಆದ್ರೆ ಸ್ಥಿರ ಪ್ರದರ್ಶನ ನೀಡದಿರುವುದು ಆತನ ವೀಕ್‍ನೆಸ್. ಆದ್ರೂ ಪ್ರಮುಖ ಸ್ಪರ್ಧೆಗಳಲ್ಲಿ ಒಂದು ಶ್ರೇಷ್ಠ ಎಸೆತದಿಂದ ಸ್ಪರ್ಧೆಯ ಫಲಿತಾಂಶವನ್ನೇ ಬುಡಮೇಲು ಮಾಡ್ತಾನೆ. ವೈಯಕ್ತಿಕ ಶ್ರೇಷ್ಠ ಸಾಧನೆ 92.97 ಮೀಟರ್.

ಆದ್ರೆ ಚೋಪ್ರಾ ಹಾಗಲ್ಲ. ಸ್ಥಿರ ಪ್ರದರ್ಶನ ನೀಡುತ್ತಿರುವುದು ಪ್ಲಸ್ ಪಾಯಿಂಟ್. 2025ರ ದೋಹಾ ಡೈಮಂಡ್ ಲೀಗ್‍ನಲ್ಲಿ 90.23 ದೂರ ಎಸೆದಿರುವುದು ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ನೀರಜ್ ಚೋಪ್ರಾ ಸಾಧನೆ-
2018 ಕಾಮನ್‍ವೆಲ್ತ್ ಗೇಮ್ಸ್ – ಚಿನ್ನ
2020- ಟೋಕಿಯೊ ಒಲಿಂಪಿಕ್ಸ್ -ಚಿನ್ನ
2023- ವಿಶ್ವ ಚಾಂಪಿಯನ್‍ಷಿಪ್ – ಚಿನ್ನ
2024- ಪ್ಯಾರಿಸ್ ಒಲಿಂಪಿಕ್ಸ್ – ಬೆಳ್ಳಿ

ಅರ್ಷದ್ ನದೀಮ್ ಸಾಧನೆ
2022 ಕಾಮನ್‍ವೆಲ್ತ್ ಗೇಮ್ಸ್ – ಚಿನ್ನ
2023- ವಿಶ್ವ ಚಾಂಪಿಯನ್‍ಷಿಪ್ – ಬೆಳ್ಳಿ
2024- ಪ್ಯಾರಿಸ್ ಒಲಿಂಪಿಕ್ಸ್ – ಚಿನ್ನ

ಆದ್ರೆ 2025ರ ವಿಶ್ವ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಇಬ್ಬರು ಕೂಡ ನಿರೀಕ್ಷಿತ ಫಲಿತಾಂಶ ನೀಡಿಲ್ಲ. ನೀರಜ್ 84.03 ಮೀಟರ್ ದೂರ ಎಸೆದು 8ನೇ ಸ್ಥಾನ ಪಡೆದಿದ್ರೆ, ನದೀಮ್‍ಗೆ 10ನೇ ಸ್ಥಾನ .

ಇದೀಗ ಇಬ್ಬರು ಸಮಬಲದ ಸ್ಪರ್ಧಿಗಳ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ. ಅರ್ಹತಾ ಸುತ್ತು ಇಂದಿನಿಂದ ಆರಂಭವಾಗಲಿದೆ. ಫೈನಲ್ ಆಗಸ್ಟ್ 1ರಂದು ನಡೆಯಲಿದೆ.

ಹಾಗಾದ್ರೆ ಯಾರು ಗೆಲ್ಲಬಹುದು.. ? ಆದ್ರೆ ಇಲ್ಲಿ ಹಳೆಯ ದಾಖಲೆಗಳು, ಅಂಕಿ ಅಂಶಗಳು ಲೆಕ್ಕಕ್ಕೆ ಬರಲ್ಲ. ಆ ದಿನ, ಆ ಕ್ಷಣದ ನಿಖರವಾದ ಒಂದೇ ಒಂದು ಎಸೆತ ಅಷ್ಟೇ..!
ಆಲ್ ದಿ ಬೆಸ್ಟ್..!

ಸನತ್ ರೈ

 

Tags: #NeerajChopra #ArshadNadeem #CWG2026 #IndiaVsPakistan #JavelinThrow #GoldenBoy #NeerajVsArshad #Athletics #SanathRaiArticles #IndPakRivalry #Glasgow2026 #saakshatv #JavelinRivalry
ShareTweetSendShare
Join us on:

Related Posts

ಜನನ-ಮರಣ ನೋಂದಣಿ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆ

ಜನನ-ಮರಣ ನೋಂದಣಿ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆ

by Shwetha
July 30, 2026
0

ದೇಶದಲ್ಲಿ ಜನನ ಮತ್ತು ಮರಣಗಳ ನೋಂದಣಿ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ವಿಶ್ವಾಸಾರ್ಹಗೊಳಿಸುವ ಉದ್ದೇಶದಿಂದ 'ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಮಸೂದೆ–2026' ಅನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ....

ತತ್ಕಾಲ್ ಟಿಕೆಟ್ ಬುಕ್ಕಿಂಗ್‌ಗೆ ಹೊಸ ನಿಯಮ; ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ

ತತ್ಕಾಲ್ ಟಿಕೆಟ್ ಬುಕ್ಕಿಂಗ್‌ಗೆ ಹೊಸ ನಿಯಮ; ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ

by Shwetha
July 30, 2026
0

ಭಾರತೀಯ ರೈಲ್ವೆ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸುವ ಉದ್ದೇಶದಿಂದ ಹೊಸ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ. ಆಗಸ್ಟ್ 1ರಿಂದ ದೇಶದಾದ್ಯಂತ ರೈಲ್ವೆ ನಿಲ್ದಾಣಗಳ ಮೀಸಲಾತಿ...

ಆಳುವವರು ಮೂರ್ಖರು, ಯುವಕರ ಮಾತು ಕೇಳಲ್ಲ: ಅಮಿತ್ ಶಾ ನನ್ನೆದುರು ನಿಲ್ಲಲು ನಡುಗುತ್ತಾರೆ -ಲೋಕಸಭೆಯಲ್ಲಿ ಮೋದಿ  ಸರ್ಕಾರವನ್ನು ಬೆಂಡೆತ್ತಿದ ರಾಹುಲ್ ಗಾಂಧಿ.

ಆಳುವವರು ಮೂರ್ಖರು, ಯುವಕರ ಮಾತು ಕೇಳಲ್ಲ: ಅಮಿತ್ ಶಾ ನನ್ನೆದುರು ನಿಲ್ಲಲು ನಡುಗುತ್ತಾರೆ -ಲೋಕಸಭೆಯಲ್ಲಿ ಮೋದಿ ಸರ್ಕಾರವನ್ನು ಬೆಂಡೆತ್ತಿದ ರಾಹುಲ್ ಗಾಂಧಿ.

by Shwetha
July 30, 2026
0

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಜಂತರ್ ಮಂತರ್ ಬಳಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿ ಚಾರ್ಜ್ ವಿಚಾರ ಇದೀಗ ಸಂಸತ್ತಿನಲ್ಲಿ ಭಾರೀ ಕೋಲಾಹಲಕ್ಕೆ...

ನಿನ್ನ ವಯಸ್ಸಿಗೆ ನಾನು ಎರಡು ರಾಷ್ಟ್ರ ಪ್ರಶಸ್ತಿ ಪಡೆದಿದ್ದೆ: ನೀಟ್ ಪ್ರತಿಭಟನಾಕಾರ ಸೌರವ್ ದಾಸ್ ಗೆ ಸಂಸದೆ ಕಂಗನಾ ರಣಾವತ್ ಖಡಕ್ ತಿರುಗೇಟು

ನಿನ್ನ ವಯಸ್ಸಿಗೆ ನಾನು ಎರಡು ರಾಷ್ಟ್ರ ಪ್ರಶಸ್ತಿ ಪಡೆದಿದ್ದೆ: ನೀಟ್ ಪ್ರತಿಭಟನಾಕಾರ ಸೌರವ್ ದಾಸ್ ಗೆ ಸಂಸದೆ ಕಂಗನಾ ರಣಾವತ್ ಖಡಕ್ ತಿರುಗೇಟು

by Shwetha
July 30, 2026
0

ನವದೆಹಲಿ: ಬಾಲಿವುಡ್ ನಟಿ ಹಾಗೂ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಸಂಸದೆ ಕಂಗನಾ ರಣಾವತ್ ಮತ್ತು ಯುವ ಹೋರಾಟಗಾರ ಸೌರವ್ ದಾಸ್ ನಡುವಿನ ವಾಕ್ಸಮರ ಇದೀಗ...

ಅತ್ಯಾಚಾರಿಗಳ ಪರ ನಿಂತ ಜೋಶಿ ಶಿಕ್ಷಣ ಸಚಿವರಾಗಿದ್ದು ಕನ್ನಡಿಗರು ತಲೆತಗ್ಗಿಸುವ ವಿಚಾರ: ಪ್ರಲ್ಹಾದ ಜೋಶಿ ವಿರುದ್ಧ ಸಿದ್ಧರಾಮಯ್ಯ ತೀವ್ರ ವಾಗ್ದಾಳಿ

ಅತ್ಯಾಚಾರಿಗಳ ಪರ ನಿಂತ ಜೋಶಿ ಶಿಕ್ಷಣ ಸಚಿವರಾಗಿದ್ದು ಕನ್ನಡಿಗರು ತಲೆತಗ್ಗಿಸುವ ವಿಚಾರ: ಪ್ರಲ್ಹಾದ ಜೋಶಿ ವಿರುದ್ಧ ಸಿದ್ಧರಾಮಯ್ಯ ತೀವ್ರ ವಾಗ್ದಾಳಿ

by Shwetha
July 30, 2026
0

ಬೆಂಗಳೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದು, ಆ ಸ್ಥಾನಕ್ಕೆ ಕನ್ನಡಿಗ ಹಾಗೂ ಸಂಸದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram